ಪುರಾತನ ಈಜಿಪ್ಟ್‌ನ (Egypt) ಸಮಾಧಿಗಳು ಪ್ರಪಂಚದ ಕೌತುಕಗಳಲ್ಲಿ ಒಂದೆನಿಸಿದೆ ಅಂತೆಯೇ ಈ ಸಮಾಧಿಗಳ ಸುತ್ತ ಅನೇಕ ರೋಚಕ ಕಥೆಗಳು ಹೆಣೆದುಕೊಂಡಿವೆ. ಈ ಸಮಾಧಿಯೊಳಗೆ ಏನಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅನೇಕ ಪುರಾತತ್ತ್ವಜ್ಞರು ಮತ್ತು ಈಜಿಪ್ಟ್ಶಾಸ್ತ್ರಜ್ಞರ ಜೀವಮಾನದ ಕನಸಾಗಿದೆ. ಆದರೆ ಡಿಸ್ಕವರಿ ಚಾನೆಲ್‌ನಲ್ಲಿ (Channel) ಮಮ್ಮೀಸ್ ಅನ್‌ವ್ರಾಪ್ಡ್ ಕಾರ್ಯಕ್ರಮದ ನಿರೂಪಕರಾಗಿ ಕೆಲಸ ಮಾಡುವ ರಾಮಿ ರೋಮಾನಿ ಮಾತ್ರ ತಮಗಾದ ವಿಲಕ್ಷಣ ಅನುಭವದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬೈಬಲ್‌ನ ಪ್ರಾಚೀನ ಫೇರೋ ಆಗಿರುವ ಅಖೆನಾಟೆನ್ ಎಂದೇ ನಂಬಿದ್ದ ಮಮ್ಮಿ ( Mummy) ಗುರುತಿಸುವ ಕಾರ್ಯವನ್ನು ರೋಮಾನಿ ನಿರ್ವಹಿಸಿದರು.
ಆದರೆ ಸಮಾಧಿಯೊಳಗೆ ಅವರು ಅನ್ವೇಷಿಸಿದ್ದು ಹಾಗೂ ಅವರು ಸಾಗಿದ ಪ್ರಯಾಣ ಮಾತ್ರ ದುಃಸ್ವಪ್ನವಾಗಿ ಅವರನ್ನು ಕಾಡಿದ್ದು ರಕ್ತ ಕಾರುವ ಮೂಲಕ ಹಾಗೂ ಭ್ರಮೆಗೊಳಗಾಗುವ ಅನಿಸಿಕೆಯಿಂದ ಬಳಲಿದರು ಎಂಬ ಸ್ವಯಂ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ರೋಮಾನಿ ಹಂಚಿಕೊಂಡ ಅನುಭವ ಹೇಗಿತ್ತು?
ದಿ ಜೋರ್ಡಾನ್ ಹಾರ್ಬಿಂಗರ್ ಶೋನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ ರೋಮಾನಿ ನನ್ನ ಜೀವನದಲ್ಲಿನ ಕೆಲವೊಂದು ಹಂತಗಳಲ್ಲಿ ನಾನು ಶಾಪಕ್ಕೆ ಗುರಿಯಾಗಿದ್ದಿದೆ ಎಂಬ ಆ ದಿನದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಈಜಿಪ್ಟ್‌ನಲ್ಲಿ ಅಮರ್ನಾದ ಸಮಾಧಿಯಲ್ಲಿದ್ದಾಗ ತಮಗಾದ ವಿಶೇಷ ಅನುಭವಗಳನ್ನು ಹಂಚಿಕೊಂಡ ರೋಮಾನಿ, ಅಮರ್ನಾ ಸಮಾಧಿಗೆ ಹೆಚ್ಚು ಜನರು ಭೇಟಿ ನೀಡುವುದಿಲ್ಲ.
ಇದನ್ನೂ ಓದಿ: ಸ್ಕೈಡೈವಿಂಗ್ ಮಾಡುತ್ತಲೇ ಮೇಕಪ್ ಮಾಡಿಕೊಂಡ ಮಹಿಳೆ, ಅಬ್ಬಬ್ಬಾ ಈಕೆಯದ್ದು ಅಂತಿಂಥಾ ಸಾಹಸವಲ್ಲ!
ಅದಾಗ್ಯೂ ನಾನು ಅಲ್ಲಿಗೆ ಭೇಟಿ ನೀಡಿದ್ದು ಅಖೆನಾಟೆನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಎಂಬ ವಿಷಯ ತಿಳಿಸಿದ್ದಾರೆ. ಅಂತೆಯೇ 600 ವರ್ಷಗಳಿಂದ ಮುಚ್ಚಿದ್ದ ಸಮಾಧಿಯೊಳಕ್ಕೆ ನಾನು ಪ್ರವೇಶಿಸಿದೆ ಎಂದು ರೋಮಾನಿ ತಿಳಿಸಿದ್ದಾರೆ.
ಸಮಾಧಿಯೊಳಗಿನ ಅನುಭವ ಬಿಚ್ಚಿಟ್ಟ ನಿರೂಪಕ
ರೋಮಾನಿ ತಾವು ಓದಿಕೊಂಡಿದ್ದ ಹಾಗೂ ತಿಳಿದುಕೊಂಡಿದ್ದ ವಿವರಗಳಿಂದಾಗಿ ಈ ಸಮಾಧಿಯ ಬಗೆಗೆ ಹೆಚ್ಚು ಉತ್ಸುಕರಾಗಿದ್ದರು. ಸಮಾಧಿಯನ್ನು ಕಾವಲು ಕಾಯುತ್ತಿದ್ದ ಗಾರ್ಡ್ ಕೀ ಕಳೆದುಕೊಂಡಿದ್ದರಿಂದ ಬೀಗ ಒಡೆದು ರೋಮಾನಿ ಒಳ ಪ್ರವೇಶಿಸಿದರು ಎಂಬುದಾಗಿ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಲಾಕ್ ಅನ್ನು ಮುರಿಯುತ್ತಿದ್ದಂತೆಯೇ, ಒಂದು ಸೆಕೆಂಡ್ ತಾಳಿ ನನಗೆ ಬಾಗಿಲನ್ನು ತಟ್ಟಬೇಕಿದೆ ಎಂದು ಗಾರ್ಡ್ ರೋಮಾನಿಗೆ ತಿಳಿಸುತ್ತಾರೆ. ಒಳಗಡೆ ಹಾವು ಇರುವುದಾಗಿ ಗಾರ್ಡ್ ಅವರಿಗೆ ಮಾಹಿತಿ ನೀಡುತ್ತಾರೆ.
ಇದರ ಜೊತೆಗೆ ಹಾವುಗಳು ಬುಸುಗುಡುತ್ತಿರುವ ಹಾಗೂ ಸುತ್ತಲೂ ತೆವಳುತ್ತಿರುವ ಸದ್ದು ರೋಮಾನಿಗೆ ಅಲ್ಲಿಂದಲೇ ಕೇಳಿ ಬರುತ್ತಿತ್ತು ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಚಿತ್ರೀಕರಣ ಆರಂಭಿಸುತ್ತಿದ್ದಂತೆ ಉಸಿರುಗಟ್ಟಿದ ಅನುಭವಕ್ಕೆ ಒಳಗಾದ ರೋಮಾನಿ
ರೋಮಾನಿ ಸಮಾಧಿಯೊಳಗೆ ಚಿತ್ರೀಕರಣ ಆರಂಭಿಸಿದೊಡನೆ ಉಸಿರುಗಟ್ಟಿದ ಅನುಭವ ಉಂಟಾಯಿತು ಎಂದು ತಿಳಿಸಿದ್ದಾರೆ. ಸಮಾಧಿಯ ಒಳಗೆ ಬಾವಲಿಗಳು ತುಂಬಿಹೋಗಿದ್ದವು ಹಾಗೂ ಮೂಗಿಗೆ ರಾಚುವ ಕಟುವಾಸನೆ ಹರಡಿತ್ತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Goa Trip ಹೋದಾಗ ಈ ಪ್ಲೇಸ್ಗಳಿಗೆ ಹೋಗಲೇ ಬೇಕು, ಚೀಪ್ ಆ್ಯಂಡ್ ಬೆಸ್ಟ್ ಜಾಗಗಳಿವು!
ಸಮಾಧಿಯಿಂದ ಹೊರಕ್ಕೆ ಬರುತ್ತಿದ್ದಂತೆ ಅವರು ಅನಾರೋಗ್ಯಕ್ಕೆ ಒಳಗಾದರು ಹಾಗೂ ಬಾವಲಿಗಳ ಮೂತ್ರದ ವಾಸನೆ ಹಾಗೂ ಹಾವುಗಳ ಉಪಸ್ಥಿತಿ ಅಮೋನಿಯದ ಕಟು ವಾಸನೆಯನ್ನು ಅನುಭವಿಸಬೇಕಾಯಿತು ಎಂದು ತಿಳಿಸುತ್ತಾರೆ.
ತಮಗಾದ ವಿಭಿನ್ನ ಅನುಭವ ಹಂಚಿಕೊಂಡ ಈಜಿಪ್ಟ್ ಶಾಸ್ತ್ರಜ್ಞ
ತಮಗಾದ ಪರಿಸ್ಥಿತಿಯನ್ನು ವಿವರಿಸುವ ರೋಮಾನಿ, ನಿಮ್ಮ ದೇಹ ಈ ಪರಿಸ್ಥಿತಿಯಿಂದ ಹೊರಬರುವಂತೆ ತಿಳಿಸುತ್ತದೆ ಅಂತೆಯೇ ಅಪಾಯದ ಸೂಚನೆಯನ್ನು ನೀಡುತ್ತದೆ ಎಂಬ ಅನುಭವವನ್ನು ಹಂಚಿಕೊಂಡಿದ್ದಾರೆ.
ಆದರೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಲೇ ನಾನು ಚಿತ್ರೀಕರಣ ಮುಂದುವರಿಸಿದೆ ಎಂದು ರೊಮಾನಿ ತಿಳಿಸುತ್ತಾರೆ. ಹಾವು ಹಾಗೂ ಬಾವಲಿಗಳ ನಡುವೆಯೇ ವಿಭಿನ್ನ ಅನುಭವಕ್ಕೆ ನಾನು ಒಳಗಾದೆ ಬಹುಶಃ ಇದು ಮಮ್ಮಿಯ ಶಾಪವೂ ಆಗಿರಬಹುದು ಎಂದು ಈಜಿಪ್ಟ್ ಶಾಸ್ತ್ರಜ್ಞರು ತಿಳಿಸುತ್ತಾರೆ.
ಬದುಕುಳಿದದ್ದೇ ಒಂದು ಪವಾಡ
ಚಿತ್ರೀಕರಣ ಮುಗಿದ ಒಂದು ದಿನದ ನಂತರ ನಾನು ಆಸ್ಪತ್ರೆಯ ಹಾಸಿಗೆಯ ಮೇಲೆ ಭಯಂಕರ ಸ್ಥಿತಿಯಲ್ಲಿದ್ದೆ ಎಂಬ ಆ ಸನ್ನಿವೇಶವನ್ನು ರೊಮಾನಿ ವಿವರಿಸುತ್ತಾರೆ.
q
ನನಗೆ 107 ಡಿಗ್ರಿ (Farenheit) ಜ್ವರ ಬಂದಿತ್ತು ಹಾಗೂ ನಾನು ರಕ್ತ ವಾಂತಿ ಮಾಡುತ್ತಿದ್ದೆ. ನಾನು ಒಂದು ರೀತಿಯ ಭ್ರಮೆಗೆ ಒಳಗಾಗಿದ್ದೆ ಹಾಗೂ ನನ್ನ ಪತ್ನಿ ಕೂಡ ನನ್ನ ಸ್ಥಿತಿ ನೋಡಿ ಭಯಭೀತಳಾಗಿದ್ದಳು, ಒಟ್ಟಿನಲ್ಲಿ ನಾನು ಹೇಗೆ ಬದುಕುಳಿದೆ ಎಂಬುದೇ ನನಗೆ ತಿಳಿದಿಲ್ಲ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ