• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ಇರುವೆಗಳು ಮಣ್ಣಿನ ಆಳದಲ್ಲಿ ಶಕ್ತಿಶಾಲಿ ಸುರಂಗಗಳನ್ನು ಹೇಗೆ ನಿರ್ಮಿಸುತ್ತವೆ ಗೊತ್ತಾ?

ಇರುವೆಗಳು ಮಣ್ಣಿನ ಆಳದಲ್ಲಿ ಶಕ್ತಿಶಾಲಿ ಸುರಂಗಗಳನ್ನು ಹೇಗೆ ನಿರ್ಮಿಸುತ್ತವೆ ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Ant Soil Tunnel: ಇರುವೆಗಳು ತಮ್ಮ ಗೂಡು ಕಟ್ಟುವ ಶೈಲಿಯು ಪ್ರಭಾವಶಾಲಿಯಾದ ವಾಸ್ತುಶಿಲ್ಪದಿಂದ ಪ್ರಭಾವಿತಗೊಂಡಂತಿದ್ದು ಈ ರಚನೆಗಳನ್ನು ಎಕ್ಸರೇ ಮೂಲಕ ಸ್ಕ್ಯಾನ್ ಮಾಡಲಾಗಿದೆ.

  • Share this:

ಶಿಸ್ತಿಗೆ ಹೆಸರಾಗಿರುವ ಇರುವೆಗಳ ಗುಂಪು ಒಗ್ಗಟ್ಟಿನ ಪಾಠವನ್ನು ಮನುಕುಲಕ್ಕೆ ಸಾರಿ ಹೇಳುತ್ತದೆ. ಈಗ ಇದೇ ಇರುವೆಗಳ ಸಮೂಹಗಳ ಮೇಲೆ ಸಂಶೋಧನೆ ನಡೆಸಲಾಗಿದ್ದು ಇವುಗಳು ಮಣ್ಣಿನ ಆಳಕ್ಕೆ ಇಳಿದು ಮಣ್ಣನ್ನು ಅಗೆದು ತಮ್ಮ ಜೀವನಕ್ಕೆ ಬೇಕಾದ ನೆಲೆ ಕಂಡುಕೊಳ್ಳುತ್ತವೆ. ಮಣ್ಣಿನ ಆಳದಲ್ಲಿ ಇರುವೆಗಳು ಕೊರೆಯುವ ಸುರಂಗ ಆಕಾರದ ಗೂಡು ಹಲವಾರು ಜೀವಿಗಳಿಗೆ ಆವಾಸ ಸ್ಥಾನವಾಗಿದೆ. ಹಾವುಗಳು ಕೂಡ ಹೀಗೆ ಇರುವೆಗಳು ಕಟ್ಟಿದ ಗೂಡಿನಲ್ಲೇ ವಾಸಿಸುತ್ತವೆ ಎಂದೂ ಹೇಳಲಾಗುತ್ತದೆ. ಮಣ್ಣಿನಾಳದಲ್ಲಿ ಇರುವೆಗಳ ತಂಡ ನಿರ್ಮಿಸುವ ಇರುವೆಗಳ ಸುರಂಗ ಅತ್ಯಂತ ಬಲಶಾಲಿ ಹಾಗೂ ಹಲವಾರು ದಶಕಗಳವರೆಗೆ ನಾಶವಾಗದೇ ಉಳಿದುಕೊಳ್ಳಬಹುದು ಎಂಬುದನ್ನು ಇತ್ತೀಚಿನ ಸಂಶೋಧನೆಗಳಿಂದ ಅನ್ವೇಷಿಸಲಾಗಿದೆ.


ಕ್ಯಾಲಿಫೋರ್ನಿಯಾದ ಟೆಕ್ನಾಲಜಿ ವಿಶ್ವವಿದ್ಯಾನಿಲಯದ ಜೋಸ್ ಆಂಡ್ರೇಡ್ ಹಾಗೂ ಸಹೋದ್ಯೋಗಿಗಳು 500 ಮಿಲಿಲೀಟರ್‌ಗಳಷ್ಟು ಮಣ್ಣು ಹಿಡಿದಿಡುವ ಒಂದು ಕಂಟೈನರ್‌ನಲ್ಲಿ 15 ಹಾರ್ವೆಸ್ಟ್ ಇರುವೆಗಳನ್ನು ತುಂಬಿಸಿ ಅವುಗಳಿಗೆ ಸಣ್ಣ ಗೂಡು ನಿರ್ಮಿಸಿದರು. ಪ್ರತಿಯೊಂದು ಇರುವೆಯ ಹಾಗೂ ಮಣ್ಣಿನ ಪ್ರತಿ ಕಣವನ್ನು 20 ಗಂಟೆಗಳಿಗಾಗಿ ಪ್ರತಿ 10 ನಿಮಿಷಗಳ ಕಾಲ ಹೆಚ್ಚು ರೆಸಲ್ಯೂಶನ್‌ನ ಎಕ್ಸರೇ ಮೂಲಕ ಸೆರೆಹಿಡಿಯಲಾಯಿತು.


ಇರುವೆಗಳು ತಮ್ಮ ಗೂಡು ಕಟ್ಟುವ ಶೈಲಿಯು ಪ್ರಭಾವಶಾಲಿಯಾದ ವಾಸ್ತುಶಿಲ್ಪದಿಂದ ಪ್ರಭಾವಿತಗೊಂಡಂತಿದ್ದು ಈ ರಚನೆಗಳನ್ನು ಎಕ್ಸರೇ ಮೂಲಕ ಸ್ಕ್ಯಾನ್ ಮಾಡಲಾಗಿದೆ. ಈ ಎಕ್ಸರೇಯಲ್ಲಿ ಕಂಡುಬಂದ ಕೆಲವೊಂದು ಸಂಶೋಧನಾ ಅಂಶಗಳು ಇರುವೆಗಳ ಗೂಡು ಕಟ್ಟುವ ಶೈಲಿಯನ್ನು ವಿವರಿಸಿವೆ. ಇರುವೆಗಳು ರಚಿಸುವ ಮಣ್ಣಿನ ಗೂಡು ಅಥವಾ ಸುರಂಗಗಳ ಆಕಾರ ಹಾಗೂ ಯಾವುದನ್ನು ಬಳಸಿ ಇವುಗಳು ಗೂಡು ಕಟ್ಟುತ್ತವೆ ಎಂಬುದನ್ನು ಎಕ್ಸರೇ ಅನ್ವೇಷಣೆಯಲ್ಲಿ ತಿಳಿದುಕೊಳ್ಳಲಾಗಿದೆ.


ಸುರಂಗಗಳ ಸಾಮರ್ಥ್ಯದ ಶಕ್ತಿ ತಿಳಿದುಕೊಳ್ಳಲು ಅಧ್ಯಯನ ತಂಡವು ಎಕ್ಸರೇ ಸ್ಕ್ಯಾನ್‌ಗಳನ್ನು ಬಳಸಿಕೊಂಡು ಕಂಪ್ಯೂಟರ್ ಮಾದರಿಗಳನ್ನು ರಚಿಸಿದೆ. ಈ ಮಾದರಿಯಲ್ಲಿ ಪ್ರತಿ ಕಣದ ಗಾತ್ರ, ಆಕಾರ ಮತ್ತು ದೃಷ್ಟಿಕೋನವನ್ನು ಮರುಸೃಷ್ಟಿಸಲಾಯಿತು ಹಾಗೂ ಗುರುತ್ವಾಕರ್ಷಣೆ, ಘರ್ಷಣೆ ಮತ್ತು ಒಗ್ಗಟ್ಟು ಸೇರಿದಂತೆ ಪ್ರತಿಯೊಂದು ಕಣದ ದಿಕ್ಕು ಮತ್ತು ಶಕ್ತಿಯ ಗಾತ್ರವನ್ನು ಲೆಕ್ಕಾಚಾರ ಮಾಡಬಹುದು ಎಂಬುದನ್ನು ಈ ಸಂಶೋಧನೆ ಕಂಡುಕೊಂಡಿದೆ.


ಇದನ್ನೂ ಓದಿ: ಹೈವೇಯಲ್ಲಿ XUV500 ಮಾತ್ರವಲ್ಲ, ಹುಲಿಗಳೂ ಓಡಾಡುತ್ತವೆ: ಆನಂದ್ ಮಹೀಂದ್ರಾ ವಿಡಿಯೋ ವೈರಲ್

ಸುರಂಗ ಅಗೆಯುವ ಸಮಯದಲ್ಲಿ ಮಣ್ಣಿನೊಳಗಿನ ಶಕ್ತಿಗಳು ಸುರಂಗದ ಅಕ್ಷದ ಸುತ್ತಲೂ ಸುತ್ತುತ್ತವೆ ಎಂಬುದಾಗಿ ಅಧ್ಯಯನಗಳು ಮಾಹಿತಿ ನೀಡಿವೆ. ಮಣ್ಣಿನಲ್ಲಿರುವ ಕಮಾನುಗಳು ಅಥವಾ ಆರ್ಕ್‌ಗಳು ಕಣಗಳ ಹೊರೆ ಕಡಿಮೆ ಮಾಡುತ್ತವೆ. ಈ ಜಾಗದಲ್ಲಿ ಇರುವೆಗಳು ಸುರಂಗಗಳನ್ನು ತೋಡುತ್ತವೆ. ಈ ಆರ್ಕ್‌ಗಳೇ ಮಣ್ಣಿನಲ್ಲಿ ಇರುವೆಗಳು ತೋಡುವ ಸುರಂಗಗಳಿಗೆ ಶಕ್ತಿಯನ್ನು ಒದಗಿಸುತ್ತವೆ. ಹಾಗೂ ಇರುವೆಗಳ ಸುರಂಗವು ಹೆಚ್ಚು ಸಮಯ ಬಾಳಿಕೆ ಬರುವಂತೆ ಮಾಡುತ್ತವೆ.


ಇರುವೆಗಳು ಸಾಮಾನ್ಯವಾಗಿ ನೇರವಾದ ಸುರಂಗಗಳನ್ನು ಮಣ್ಣಿನಲ್ಲಿ ಕೊರೆಯುತ್ತವೆ. 40 ಡಿಗ್ರಿಗಳಷ್ಟಿರುವ ನೈಸರ್ಗಿಕ ದಿಬ್ಬಗಳನ್ನು ಇರುವೆಗಳು ಕೊರೆಯುತ್ತವೆ. ಮೇಲ್ಭಾಗದಲ್ಲಿ ಸಂರಕ್ಷಣಾ ಕಮಾನುಗಳನ್ನು ರಚಿಸಲು ಇರುವೆಗಳು ಸರಿಯಾದ ಮಣ್ಣಿನ ಕಣಗಳನ್ನು ಬಳಸುತ್ತವೆ. ಸರಳವಾದ ವಿಧಾನಗಳ ಮೂಲಕ ಇರುವೆಗಳು ತಮ್ಮ ಗೂಡುಗಳನ್ನು ಮಣ್ಣಿನ ಆಳದಲ್ಲಿ ನಿರ್ಮಿಸುತ್ತವೆ.




ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.


 

top videos
    First published: