ಇರುವೆಗಳಿಂದ ಮಳೆ ಬರುತ್ತಾ, ಬರಲ್ವಾ ಎಂದು ತಿಳಿಯಬಹುದು: ಕುತೂಹಲಕಾರಿ ವಿಡಿಯೋ!

ಮಳೆ ಬರುವ ಮೊದಲೇ ಪ್ರಕೃತಿಯಿಂದ ಗ್ರಹಿಸಿಕೊಳ್ಳುವ ಇರುವೆಗಳು ತಮ್ಮ ಗೂಡನ್ನು ದೃಢವಾಗಿ ಕಟ್ಟಿಕೊಳ್ಳಲು ಆರಂಭಿಸುತ್ತವೆ. ಮೋಡಗಳು ತಿಳಿಯಾಗಿದ್ದರು ಯಾವಾಗ ಮಳೆಯಾಗುತ್ತೆ ಎಂಬುವುದು ಇರುವೆಗಳಿಗೆ ತಿಳಿಯುತ್ತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತದಲ್ಲಿ ಮಳೆ ಎಂಬುವುದು ಕೃಷಿಯೊಂದಿಗೆ ಆಡುವ ಜೂಜಾಟ ಎಂದು ತಜ್ಞರು ಹೇಳುತ್ತಾರೆ. ದೇಶದಲ್ಲಿ ಬಹುತೇಕ ಮಳೆಯನ್ನೇ ಅಲಂಭಿಸಿ ವ್ಯವಸಾಯ ಮಾಡಲಾಗುತ್ತೆ. ಮಳೆ ಕೈ ಕೊಟ್ಟರೆ ರೈತನ ಶ್ರಮವೆಲ್ಲಾ ಮಣ್ಣು ಪಾಲು. ದೊಡ್ಡ ದೊಡ್ಡ ಹವಾಮಾನ ತಜ್ಞರೂ ಮಳೆಯನ್ನು ಅಂದಾಜಿಸುವಲ್ಲಿ ಎಷ್ಟೋ ಬಾರಿ ಸೋಲುತ್ತಾರೆ. ಪ್ರಕೃತಿಯನ್ನು ಶೇ.100ರಷ್ಟು ಅಂದಾಜಿಸಬಲ್ಲೆ ಅಂದುಕೊಳ್ಳುವುದು ಮನುಷ್ಯನ ಮೂರ್ಖತನವಾದಿತು. ಪ್ರಕೃತಿ ಎಲ್ಲಾ ಅಂದಾಜುಗಳನ್ನು ಮೀರಿರುವಂತಹದ್ದು. ಆದರೆ ಪ್ರಕೃತಿ ಅಷ್ಟೇ ಧಾರಾಳ ಕೂಡ. ಅದನ್ನು ಅರಿತಷ್ಟೂ ಮನು ಕುಲಕ್ಕೆ ಕ್ಷೇಮ.

ಪ್ರಕೃತಿ ನಮಗಾಗಿ ನೀಡಿರುವ ಅದ್ಭುತ ಸೂಚನೆಗಳಲ್ಲಿ ಇದು ಒಂದು. ಇರುವೆಗಳು ನಿರ್ದಿಷ್ಟ ಪ್ರದೇಶದಲ್ಲಿ ಮಳೆಯಾಗುತ್ತಾ ಇಲ್ಲವಾ ಎಂದು ಸೂಚಿಸಬಲ್ಲಷ್ಟು ಬುದ್ಧಿಶಾಲಿಗಳು. ಇರುವೆಗಳ ವರ್ತನೆಯನ್ನು ಗಮನಿಸುವಷ್ಟು ಜಾಣ್ಮೆ ನಮ್ಮಲ್ಲಿರಬೇಕಷ್ಟೇ. ಅರೆ ಎಲ್ಲಿಯ ಮೋಡ, ಎಲ್ಲಿಯ ಮಳೆ.. ಎಲ್ಲಿ ತ್ರುಣ ಮಾತ್ರದ ಇರುವೆಗಳು ಅಂತ ಮೂಗು ಮುರಿಯುವ ಮುನ್ನ ಮುಂದೆ ಓದಿ.

ಸಿಹಿ ಪದಾರ್ಥಗಳಿಗೆ ಮುತ್ತಿಕೊಳ್ಳುವ, ಸಿಕ್ಕರೆ ಕಚ್ಚಿ ಸಿಟ್ಟು ತರಿಸುವ ಇರುವೆಗಳಿಂದ ನಮಗೆ ಲಾಭವಿದೆ. ಇರುವೆಗಳ ಗೊದ್ದ (ಇರುವೆಗಳ ಗೂಡು) ಕಟ್ಟಿರುವುದನ್ನು ಕಂಡೊಡನೆ ಹಾಳು ಮಾಡುವವರೇ ಹೆಚ್ಚು. ಆದರೆ ಇರುವೆಗಳ ಗೂಡನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಳೆಯ ಬಗ್ಗೆ ಭವಿಷ್ಯ ನುಡಿಯಬಹುದು. ಹಲವು ಸಂಶೋಧನೆಗಳಲ್ಲಿ ಇದು ಸಾಬೀತಾಗಿದೆ. ಒಂದು ವೇಳೆ ಇರುವೆಗಳು ತಮ್ಮ ಗೂಡನ್ನು ಸಾಧಾರಣಕ್ಕಿಂತ ಎತ್ತರದಲ್ಲಿ, ಮಣ್ಣಿನ ಜೊತೆ ಬೇರೆ ವಸ್ತುಗಳನ್ನೂ ಸೇರಿಸಿ ನಿರ್ಮಿಸಿದ್ದರೆ ಮಳೆಯ ಮುನ್ಸೂಚನೆ ಇದೆ ಎಂದು ಅರ್ಥ. ಜೋರು ಮಳೆಯಾದರೂ ತಮ್ಮ ಗೂಡುಗಳು ಕೊಚ್ಚಿ ಹೋಗದಂತೆ ಇರುವೆಗಳು ಗೂಡುಗಳನ್ನು ಕಟ್ಟಿರುತ್ತವೆ.

ಮಳೆ ಬರುವ ಮೊದಲೇ ಪ್ರಕೃತಿಯಿಂದ ಗ್ರಹಿಸಿಕೊಳ್ಳುವ ಇರುವೆಗಳು ತಮ್ಮ ಗೂಡನ್ನು ದೃಢವಾಗಿ ಕಟ್ಟಿಕೊಳ್ಳಲು ಆರಂಭಿಸುತ್ತವೆ. ಮೋಡಗಳು ತಿಳಿಯಾಗಿದ್ದರು ಯಾವಾಗ ಮಳೆಯಾಗುತ್ತೆ ಎಂಬುವುದು ಇರುವೆಗಳಿಗೆ ತಿಳಿಯುತ್ತೆ. ಕೂಡಲೇ ಕಾರ್ಯ ಪ್ರವೃತರಾಗುವ ಇರುವೆಗಳು ಗೂಡನ್ನು ಎತ್ತರವಾಗಿ ಕಟ್ಟಿಕೊಳ್ಳಲು ಮುಂದಾಗುತ್ತವೆ. ಮಳೆಯ ನಿರೀಕ್ಷೆಯಲ್ಲಿರುವ ರೈತರು ಹಿಂದಿನ ಕಾಲದಲ್ಲಿ ಇರುವೆಗಳ ಗೂಡನ್ನು ಗಮನಿಸುತ್ತಿದ್ದರಂತೆ.

ಇದನ್ನೂ ಓದಿ:ಮನೆಯಲ್ಲಿ ನಿಗೂಢ ಚಲನವಲನ.. ಹಿಡನ್ ಕ್ಯಾಮರಾ ಅಳವಡಿಸಿದ ಯುವಕನಿಗೆ ಕಾದಿತ್ತು ಶಾಕ್!

ಇರುವೆಗಳ ಗೂಡನ್ನು ಆಧರಿಸಿ ಮಳೆಯ ಬಗ್ಗೆ ಹಿಂದಿನ ಕಾಲದವರು ತಿಳಿದುಕೊಳ್ಳುತ್ತಿದ್ದರಂತೆ. ಪ್ರಪಂಚದಲ್ಲಿ 1,600ಕ್ಕೂ ಹೆಚ್ಚು ಪ್ರಬೇಧದ ಇರುವೆಗಳಿದ್ದು ಅದರಲ್ಲಿ ಕೆಲ ಜಾತಿಯ ಇರುವೆಗಳಿಗೆ ಮಳೆಯ ಮುನ್ಸೂಚನೆಯನ್ನು ಕಂಡು ಹಿಡಿಯುವ ಸಾಮರ್ಥ್ಯವಿದೆ. ಇರುವೆಗಳ ವರ್ತನೆಯಿಂದ ಪ್ರಕೃತಿಯಲ್ಲಿ ಆಗುವ ಬದಲಾವಣೆಗಳನ್ನು ಮೊದಲೇ ತಿಳಿದುಕೊಳ್ಳಬಹುದು ಎಂದು ತಜ್ಞರು ತಿಳಿಸಿದ್ದಾರೆ. ಪ್ರಕೃತಿ ಅನ್ನೋದು ಸರಪಳಿಯಂತೆ. ಕೇವಲ ಮಾನವರು ಮಾತ್ರ ಅಲ್ಲ ಪ್ರಾಣಿ-ಪಕ್ಷಿ, ಸೂಕ್ಷ್ಮಾಣು ಜೀವಿಗಳು ಪ್ರಕೃತಿಯ ಭಾಗ. ಮಾನವರು ತಾವೇ ಶ್ರೇಷ್ಠವೆಂದು ಪರಿಸರದ ಮೇಲೆ ದಬ್ಬಾಳಿಕೆ ಮಾಡಿದರೆ ಎಲ್ಲಕ್ಕಿಂತ ಮನುಷ್ಯನಿಗೆ ಹೆಚ್ಚು ನಷ್ಟ ಸಂಭವಿಸಲಿದೆ.ಇನ್ನು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,27,510 ಪಾಸಿಟಿವ್​​ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಕೇಸ್​ಗಳ ಸಂಖ್ಯೆ 2,81,75,044ಕ್ಕೆ ಏರಿಕೆ ಆಗಿದೆ.‌ ಒಂದೇ ದಿನ ದೇಶಾದ್ಯಂತ 2,795 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 3,31,895ಕ್ಕೆ ಏರಿಕೆ ಆಗಿದೆ. ದೇಶದಲ್ಲಿ ಇನ್ನೂ 20,26,092 ಆಕ್ಟಿವ್ ಕೇಸುಗಳಿವೆ. ಈವರೆಗೆ 2,59,47,629 ಮಂದಿ ಕೊರೋನಾದಿಂದ ಗುಣಮುಖ ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 2,55,287 ರೋಗಿಗಳು ಚೇತರಿಸಿಕೊಂಡಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: