ವೈರಲ್​ ಆಯ್ತು ಸಿದ್ದರಾಮಯ್ಯರ #AnswerMaadiModi ಹ್ಯಾಶ್​ಟ್ಯಾಗ್​!

news18
Updated:May 1, 2018, 3:20 PM IST
ವೈರಲ್​ ಆಯ್ತು ಸಿದ್ದರಾಮಯ್ಯರ #AnswerMaadiModi  ಹ್ಯಾಶ್​ಟ್ಯಾಗ್​!
news18
Updated: May 1, 2018, 3:20 PM IST
ನ್ಯೂಸ್ 18 ಕನ್ನಡ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ರಾಜ್ಯ ಪ್ರವಾಸದಲ್ಲಿ ಮುನ್ನುಗ್ಗಿದ್ದು, ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಹ್ಯಾಶ್​ಟ್ಯಾಗ್​ ವೈರಲ್​ ಆಗಿದೆ.

ಮೋದಿ ಪ್ರವಾಸ ಆರಂಭಿಸಲು ಮುಂದಾಗುತ್ತಿದ್ದಂತೆಯೇ ಪ್ರಧಾನಿ ವಿರುದ್ಧ ಅಭಿಯಾನಕ್ಕೆ ಮುಂದಾದ ಕಾಂಗ್ರೆಸ್, ‘ಆನ್ಸರ್ ಮಾಡಿ ಮೋದಿ’ ಎಂಬ ಹ್ಯಾಷ್​ಟ್ಯಾಗ್ ಬಳಸಿ ಮೋದಿ ವಿರುದ್ಧ ಸರಣಿ ಟ್ವೀಟ್​ ಮಾಡಿದೆ.ಮೊದಲು ಸಿಎಂ ಸಿದ್ದರಾಮಯ್ಯ, ಜನಾರ್ದನರೆಡ್ಡಿ, ರೈತರ ಸಾಲಮನ್ನಾ ಮುಂತಾದ ವಿಷಯಗಳನ್ನ ಪ್ರಸ್ತಾಪಿಸಿದ್ದು #AnswerMaadiModi ಮೋದಿ ಎಂದು ಕೇಳಿದ್ದಾರೆ.

ಜನಾರ್ದನ ರೆಡ್ಡಿ ಕುಟುಂಬ ಹಾಗೂ ಸ್ನೇಹಿತರಿಗೆ 08 ಟಿಕೆಟ್ ನೀಡಿದ್ದೀರಿ. ಅವರಿಂದ 10-15 ಕ್ಷೇತ್ರಗಳಲ್ಲಿ ನಿಮಗೆ ಅನುಕೂಲವಾಗುವ ವಿಶ್ವಾಸ ಇಟ್ಟುಕೊಂಡಿದ್ದೀರಿ. ಸದಾ ಭ್ರಷ್ಟಾರದ ವಿರುದ್ಧ ಭಾಷಣ ಮಾಡುವ ನೀವು, ಮಂಗಳವಾರದ ರ‍್ಯಾಲಿಯಲ್ಲಿ ರೆಡ್ಡಿ ಭಾಗವಹಿಸುವಿಕೆಗೆ ನೀವು ಅವಕಾಶ ನೀಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಇದಾದ ಬಳಿಕ ಹಲವಾರು ಮಂದಿ ಇದೇ ಟ್ಯಾಗ್​ ಬಳಸಿ ಟ್ವೀಟ್​ ಮಾಡಿದ್ದು ಎರಡು ದಿನಗಳಿಂದ ಈ ಟ್ವೀಟ್​ ವೈರಲ್​ ಆಗಿದೆ.
First published:May 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...