Cashew Trees: ಚಂಡಮಾರುತದಿಂದ ಗೋಡಂಬಿ ಮರಗಳನ್ನು ರಕ್ಷಿಸಿಕೊಳ್ಳಲು ಹೊಸ ವಿಧಾನ ಕಂಡುಹಿಡಿದ ರೈತ ಮಹಿಳೆ

ಕೇರಳದ ಅನಿಯಮ್ಮ ಬೇಬಿ (Aniyamma Baby from Kerala) "ಗೋಡಂಬಿ ಬಹು ಬೇರೂರಿಸುವ ವಿಧಾನ"ವನ್ನು (Cashew Multiple Rooting Propagation Method) ಅಭಿವೃದ್ಧಿಪಡಿಸಿದರು, ಇದು ಬೆಳೆದ ಗೋಡಂಬಿ ಮರದಲ್ಲಿ ಅತಿಹೆಚ್ಚು ಬೇರುಗಳನ್ನು ಉತ್ಪಾದಿಸುತ್ತದೆ

ಗೋಡಂಬಿ

ಗೋಡಂಬಿ

  • Share this:

ತಿರುವನಂತಪುರ: ಕಣ್ಣಿಗೆ ಕೋರೈಸುವ ಹಸಿರು ಹೊಂದಿರುವ ರಾಜ್ಯವೆಂದರೆ ಕೇರಳ(Kerala). ಪ್ರವಾಸಿಗರ ತಾಣವಾದ ಕೇರಳ ಮಳೆನಾಡು ಕೂಡ ಹೌದು. ಕೇರಳದ ಕಣ್ಣೂರು (Kannuru) ಜಿಲ್ಲೆಯ ರೈತ (Farmer) ಮಹಿಳೆಯಾದ ಅನಿಯಮ್ಮ ಬೇಬಿ ಬೋರ್‌ವೆಲ್‍ಗಳ ಹೆಚ್ಚಳ ಮತ್ತು ಚಂಡಮಾರುತಗಳ ದಾಳಿ ಇವುಗಳಿಂದ ಗೋಡಂಬಿ ತೋಟ (cashew trees) ರಕ್ಷಿಸಿಕೊಳ್ಳುವ ಸಲುವಾಗಿ ಬೇರುಗಳು ಬಲವಾಗಿರಬೇಕು ಎಂಬುದನ್ನು ಅರಿತು, ಇವುಗಳನ್ನು ಗಟ್ಟಿಗೊಳಿಸಲು ವಿನೂತನ ಅಭ್ಯಾಸ ಕಂಡುಕೊಂಡಿದ್ದಾರೆ. ಭಾರತದಲ್ಲಿ ಸುಮಾರು 10.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋಡಂಬಿ ಬೆಳೆಯಲಾಗುತ್ತದೆ. ಇಡೀ ದೇಶದಲ್ಲಿ ಕೇರಳದಲ್ಲಿ ಹೆಚ್ಚು ಗೋಡಂಬಿ ಬೆಳೆಯಲಾಗುತ್ತದೆ. ಒಟ್ಟು ವಾರ್ಷಿಕ ಉತ್ಪಾದನೆಯು ಸರಿಸುಮಾರು 7.53 ಲಕ್ಷ ಟನ್‍ಗಳಾಗಿದ್ದು, ಹಲವಾರು ರೈತರು ತಮ್ಮ ಜೀವನೋಪಾಯಕ್ಕಾಗಿ ಇದನ್ನು ಅವಲಂಬಿಸಿದ್ದಾರೆ. ಕರಾವಳಿ ರಾಜ್ಯವಾದ ಕೇರಳವು ಇಡೀ ಪ್ರಪಂಚದಲ್ಲೇ ಗೋಡಂಬಿ ತೋಟಗಳಿಗೆ ಪ್ರಸಿದ್ಧಿ ಪಡೆದಿದೆ.


ಗೋಡಂಬಿಯ ಉತ್ಪಾದನೆಯು ಹಲವಾರು ಜೈವಿಕ ಮತ್ತು ಅಜೈವಿಕ ಅಂಶಗಳಿಂದ ತೊಂದರೆಗೊಳಗಾಗುತ್ತದೆ. ಕಾಂಡ ಮತ್ತು ಬೇರು ಕೊರೆಯುವ ಕೀಟವು ಗೋಡಂಬಿ ಮರಗಳನ್ನು ಅತ್ಯಂತ ದುರ್ಬಲಗೊಳಿಸುತ್ತದೆ. ಏಕೆಂದರೆ ಇದು ಬೆಳೆದ ಮರಗಳನ್ನು ಸಹ ಕಡಿಮೆ ಅವಧಿಯಲ್ಲಿ ಕೊಲ್ಲುವ ಸಾಮರ್ಥ್ಯ ಹೊಂದಿದೆ. ಕೀಟಗಳ ಹಾವಳಿಯ ಜೊತೆಗೆ, ಕರಾವಳಿ ಭಾರತದಲ್ಲಿ ಗೋಡಂಬಿ ತೋಟವು ಆಗಾಗ್ಗೆ ತೀವ್ರವಾದ ಚಂಡಮಾರುತಗಳಿಂದ ನಾಶವಾಗುತ್ತದೆ. ಇಂತಹ ವೇಳೆ ನಾಶವಾದ ಮರಗಳನ್ನು ಮತ್ತೆ ಬೆಳೆಸಲು 10 ವರ್ಷಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ.


ಗೋಡಂಬಿ ಬಹು ಬೇರೂರಿಸುವ ವಿಧಾನ

ಕೇರಳದ ಅನಿಯಮ್ಮ ಬೇಬಿ (Aniyamma Baby from Kerala) "ಗೋಡಂಬಿ ಬಹು ಬೇರೂರಿಸುವ ವಿಧಾನ"ವನ್ನು (Cashew Multiple Rooting Propagation Method) ಅಭಿವೃದ್ಧಿಪಡಿಸಿದರು, ಇದು ಬೆಳೆದ ಗೋಡಂಬಿ ಮರದಲ್ಲಿ ಅತಿಹೆಚ್ಚು ಬೇರುಗಳನ್ನು ಉತ್ಪಾದಿಸುತ್ತದೆ. ಹೀಗಾಗಿ ಪ್ರತಿ ಯೂನಿಟ್ ಪ್ರದೇಶಕ್ಕೆ ಉತ್ಪಾದನೆ ಸುಧಾರಿಸುತ್ತದೆ. ಇದು ಕಾಂಡ ಮತ್ತು ಬೇರು ಕೊರಕಗಳ ಪರಿಸರ ಸ್ನೇಹಿ ನಿರ್ವಹಣೆಗೆ ಸಹಾಯ ಮಾಡುತ್ತದೆ, ಉತ್ಪಾದಕತೆಯನ್ನು ಮರುಸ್ಥಾಪಿಸುತ್ತದೆ, ಗಾಳಿ ಹಾನಿ, ಚಂಡಮಾರುತದ ವಿರುದ್ಧ ಬಲವಾದ ಆಧಾರ ಒದಗಿಸುತ್ತದೆ ಮತ್ತು ಮರು ನೆಡುವ ಅಗತ್ಯವಿಲ್ಲದೇ ತೋಟವನ್ನು ವಿಸ್ತರಿಸುತ್ತದೆ.


ಇದನ್ನೂ ಓದಿ:  Viral: ಉದ್ಯೋಗಿಗಳಿಗೆ 7.5 ಲಕ್ಷ ರೂ, ವಿಮಾನ ಟಿಕೆಟ್​ ಉಡುಗೊರೆ; ಇಂತಹ ಸಿಇಒ ಎಲ್ಲರಿಗೂ ಸಿಗಲ್ಲ

ಅದು ಕೀಟಗಳಿಂದ ಪ್ರಭಾವಿತವಾಗಲಿಲ್ಲ

2004ರಲ್ಲಿ, ಅನಿಯಮ್ಮ ಗೋಡಂಬಿ ಕೊಯ್ಲು ಮಾಡುವಾಗ, ಮಣ್ಣಿನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಒಂದು ಗೋಡಂಬಿ ಕೊಂಬೆಯು ಬೇರುಗಳನ್ನು (ಟ್ಯಾಪ್ ರೂಟ್ ಅಲ್ಲ) ಉತ್ಪಾದಿಸುವುದನ್ನು ಗಮನಿಸಿದರು. ಸಾಮಾನ್ಯ ಗೋಡಂಬಿ ಗಿಡಕ್ಕೆ ಹೋಲಿಸಿದರೆ ಈ ಬೇರಿನಿಂದ ಹೊರಹೊಮ್ಮುವ ಹೊಸ ಸಸ್ಯವು ವೇಗವಾಗಿ ಬೆಳೆಯುವುದನ್ನು ಗಮನಿಸಿದರು. ಮುಂದಿನ ವರ್ಷ, ಕಾಂಡ ಕೊರೆಯುವ ಕೀಟದಿಂದ (ಕೀಟಗಳ ಲಾರ್ವಾ ಅಥವಾ ಆರ್ಥೋಪಾಡ್, ಸಸ್ಯದ ಕಾಂಡಗಳಿಗೆ ಕೊರೆಯುವ) ತಾಯಿ ಸಸ್ಯವು ನಾಶವಾಯಿತು. ಆದರೆ ಹೊಸದಾಗಿ ಬೆಳೆದ ಸಸ್ಯವು ಆರೋಗ್ಯಕರವಾಗಿತ್ತು. ಏಕೆಂದರೆ ಅದು ಕೀಟಗಳಿಂದ ಪ್ರಭಾವಿತವಾಗಲಿಲ್ಲ.


ಇದನ್ನೂ ಓದಿ:  ಬಾಹ್ಯಾಕಾಶದಲ್ಲಿ ‘ಬಿಸಿನೆಸ್ ಪಾರ್ಕ್' ಆರಂಭಿಸಲು ಮುಂದಾದ ಬಿಲಿಯನೇರ್ Jeff Bezos: ಬೆಜೋಸ್ ಮುಂದಿನ ಯೋಜನೆಗಳೇನು?

"ತಾಯಿ ಸಸ್ಯದಿಂದ ಹೊಸ ಸಸ್ಯಗಳ ಬೇರುಗಳು ಬೆಳೆಯುವುದನ್ನು ಗಮನಿಸಿ, ಸಮಾನಾಂತರ ಕೊಂಬೆಗಳ ನೋಡ್‍ಗಳ ಮೇಲೆ ಪಾಟಿಂಗ್ ಮಿಶ್ರಣದಿಂದ ತುಂಬಿದ ಚೀಲ ಸುತ್ತುವ ಮೂಲಕ ಹೊಸ ಸಸ್ಯಗಳನ್ನು ಅಭಿವೃದ್ಧಿಪಡಿಸಲು ಯೋಚಿಸಿದರು. ಅಡಿಕೆ ಕಾಂಡದ ಸಹಾಯದಿಂದ ಬೇರುಗಳು ನೆಲಕ್ಕೆ ಹರಡುವಂತೆ ಮಾಡಿದರು. ಅಡಿಕೆ ಕಾಂಡ, ಜೊತೆಗೆ ನೆಲವನ್ನು ಮುಚ್ಚಲು ಭಾರವಾದ ಮರದ ಟೊಂಗೆಗಳನ್ನು ನೆಲಕ್ಕೆ ಹರಡುವುದು ಮತ್ತು ಬೇರುಗಳನ್ನು ಮಣ್ಣಿನಿಂದ ಮುಚ್ಚುವುದು" ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಪ್ರಕಟಣೆ ಸೋಮವಾರ ತಿಳಿಸಿದೆ.


ಅನಿಯಮ್ಮ ಅವರ ಎರಡು ಪ್ರಯೋಗಗಳು

ಅನಿಯಮ್ಮ ಅವರ ಎರಡೂ ಪ್ರಯೋಗಗಳು ಯಶಸ್ವಿಯಾಗಿದ್ದವು ಮತ್ತು ಹೆಚ್ಚಿನ ಗೋಡಂಬಿ ಉತ್ಪನ್ನಗಳ ನಿರಂತರ ಪೂರೈಕೆಯೊಂದಿಗೆ ತನ್ನ ಕುಟುಂಬವನ್ನು ಬೆಂಬಲಿಸಲು ಕಳೆದ ಏಳು ವರ್ಷಗಳಿಂದ ತನ್ನ ಹಳೆಯ ಗೋಡಂಬಿ ತೋಟಗಳಲ್ಲಿ ಈ ಎರಡು ವಿಧಾನಗಳನ್ನು ಬಳಸುತ್ತಿದ್ದರು.


ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸ್ವಾಯತ್ತ ಸಂಸ್ಥೆಯಾದ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ಅಗತ್ಯ ಬೆಂಬಲ ಮತ್ತು ಕಾವು ಚಟುವಟಿಕೆಗಳಿಗೆ ನವೀನ ತಂತ್ರಜ್ಞಾನ ಕೈಗೆತ್ತಿಕೊಂಡಿದೆ.


2020ರಲ್ಲಿ ಐಸಿಎಆರ್ ಗೋಡಂಬಿ ಸಂಶೋಧನಾ ನಿರ್ದೇಶನಾಲಯ, ಪುತ್ತೂರು (ಕರ್ನಾಟಕ) ICAR- Directorate of Cashew Research, Puttur (Karnataka) ಮತ್ತು 2020ರಲ್ಲಿ ರಾಜ್ಯದ ತ್ರಿಶೂರ್‌ನಲ್ಲಿರುವ ಕೇರಳ ಕೃಷಿ ವಿಶ್ವವಿದ್ಯಾಲಯದಿಂದ "ಸೆನೆಲ್ ಪ್ಲಾಂಟೇಶನ್‍ಗಾಗಿ ಗೋಡಂಬಿ ಬಹು ಬೇರೂರಿಸುವಿಕೆ" ಅನ್ನು ಮತ್ತಷ್ಟು ಪರಿಶೀಲಿಸಲಾಗಿದೆ.


ಹೆಚ್ಚುವರಿ ಇಳುವರಿ ಪಡೆಯುವ ಭರವಸೆ

"ಇದು ಒಂದು ವಿಶಿಷ್ಟ ವಿಧಾನವೆಂದು ಕಂಡುಬಂದಿದೆ ಮತ್ತು ಗಾಳಿ ಹಾನಿ/ಚಂಡಮಾರುತದ ವಿರುದ್ಧ ಆಧಾರ ಒದಗಿಸುತ್ತದೆ ಮತ್ತು ಗೋಡಂಬಿ ಕಾಂಡ ಮತ್ತು ಬೇರು ಕೊರೆಯುವ ಕೀಟಗಳ ತೀವ್ರ ದಾಳಿಯಿಂದ ಗೋಡಂಬಿ ಮರಗಳನ್ನು ಅತ್ಯಂತ ಪರಿಸರ ಸ್ನೇಹಿ ಮತ್ತು ಪರಿಣಾಮಕಾರಿ ರೀತಿಯಲ್ಲಿ ಪುನಃ ಬೆಳೆಸುತ್ತದೆ. ಗೋಡಂಬಿ ತೋಟಗಳನ್ನು ಹೊಂದಿರುವ ಗೋಡಂಬಿ ಬೆಳೆಗಾರರು ಹೆಚ್ಚುವರಿ ಇಳುವರಿ ಪಡೆಯುವ ಭರವಸೆ ಇದೆ ಎಂದು ಪ್ರಕಟಣೆ ತಿಳಿಸಿದೆ.


Published by:Mahmadrafik K
First published: