Viral News: ಕೋತಿಗಳ ಸೇಡಿಗೆ ಬಲಿಯಾಗಿದ್ದು ಒಂದಲ್ಲ, ಎರಡಲ್ಲ ಬರೋಬ್ಬರಿ 250 ನಾಯಿಗಳು!

Monkey: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲಗಾಂವ್‌ನ ಹಳ್ಳಿಯೊಂದರಲ್ಲಿ 250 ನಾಯಿ ಮರಿಗಳನ್ನು ಮಂಗಗಳು ಕ್ರೂರವಾಗಿ ಕೊಂದಿವೆ. ಒಂದು ಮಂಗವನ್ನು ನಾಯಿ ಮರಿಗಳು ಕೊಂದಿದ್ದಕ್ಕಾಗಿ ಗುಂಪು ಗುಂಪಾಗಿ ಸೇರಿ ಮಂಗಗಳು ನಾಯಿಗಳ ಮೇಲೆ ತಮ್ಮ ದ್ವೇಷವನ್ನು ತೀರಿಸಿಕೊಳ್ಳುತ್ತೇವೆ

ಪ್ರಾಣಿಗಳ ಸೇಡು

ಪ್ರಾಣಿಗಳ ಸೇಡು

 • Share this:
  ಮನುಷ್ಯ(Human )ಯಾರಾದ್ರೂ ತಮ್ಮಗೆ ಮೋಸ ಮಾಡಿದರೆ ಅಂತವರ ಮೇಲೆ ಜಿದ್ದು(Revenge)ಸಾಧಿಸುವುದು ಸಹಜ. ಕೆಲವೊಮ್ಮೆ ತಮಗೆ ಆದ ಅನ್ಯಾಯಕ್ಕೆ ಸೇಡುತೀರಿಸಿಕೊಳ್ಳಲು ಹೆಜ್ಜೆ ಹೆಜ್ಜೆಗೂ ಮನುಷ್ಯ ಹವಣಿ ಸುತ್ತಲೇ ಇರುತ್ತಾನೆ..ಹೀಗಾಗಿಯೇ ದ್ವೇಷದಿಂದ(grudge)ಮನಸ್ತಾಪದಿಂದ ಪ್ರತಿನಿತ್ಯ ಕೊಲೆ ಸುಲಿಗೆಗಳು ನಡೆಯುತ್ತಲೇ ಇವೆ.. ಮನುಷ್ಯ ಮಾತ್ರವಲ್ಲದೇ ಹಾ ವುಗಳು(Snakes) ಕೂಡ ಯಾರಾದರೂ ತಮಗೆ ಕಾಟ ಕೊಟ್ರೆ ಹನ್ನೆರಡು ವರುಷ ನೆನಪಲ್ಲಿಟ್ಟುಕೊಂಡು ಸೇಡು ತೀರಿಸಿಕೊಳ್ಳುತ್ತವೆ ಎಂಬ ನಂಬಿಕೆಯಿದೆ.. ಆದರೆ ಈ ಸಿಟ್ಟು ಆಕ್ರೋಶ ದ್ವೇಷದ ಭಾವನೆ(Feel) ಮನುಷ್ಯ ಹಾಗೂ ಕೇವಲ ಹಾವಿಗೆ ಮಾತ್ರ ಸೀಮಿತವಾಗಿಲ್ಲ. ಮಾತುಬಾರದ ಇತರ ಪ್ರಾಣಿಗಳು ಸಹ ತಮ್ಮಗೆ ತೊಂದರೆ ಕೊಟ್ಟವರಿಗೆ, ಮೋಸ ಮಾಡಿದವರಿಗೆ ತೊಂದರೆ ಕೊಡಲು ಬಯಸುತ್ತವೆ.. ತಮ್ಮ ಸೇಡುತೀರಿಸಿಕೊಳ್ಳಲು ಯಾವ ಮಟ್ಟದ ಕ್ರೌರ್ಯ ಬೇಕಾದರೂ ಮೆರೆಯುತ್ತವೆ. ಈ ಮಾತು ನಿಮಗೆ ಆಶ್ಚರ್ಯ ತರಿಸಿದರೂ ಸತ್ಯ.... ತಮಗೆ ಅನ್ಯಾಯವಾದಾಗ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಾಗ, ಮೂಕ ಪ್ರಾಣಿಗಳು ಕೇವಲ ಆಕ್ರೋಶ ವ್ಯಕ್ತಪಡಿಸಿವೆ.. ಈ ಹಿಂದೆ ಹಸುವೊಂದು ತನ್ನ ಕರುವನ್ನು ಕಳೆದುಕೊಂಡ ವಾಹನದ ಹಿಂದೆ ಓಡಿ, ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.. ಆದರೆ ಈಗ ನಾನು ಹೇಳಲು ಹೊರಟಿರುವ ಘಟನೆಯ ಮಾತ್ರ ಎಂಥವರಿಗೂ ಅಚ್ಚರಿ ತರಿಸುತ್ತದೆ. ಪ್ರಾಣಿಗಳು ಈ ಮಟ್ಟಕ್ಕೆ ದ್ವೇಷ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿಸುತ್ತದೆ..

  ನಾಯಿಗಳ ಮೇಲೆ ಮಂಗಗಳ ದ್ವೇಷ

  ಮನುಷ್ಯರಾ ಪೂರ್ವಜರು ಎಂದು ಹೇಳಿಕೊಳ್ಳುವ ಮಂಗಗಳು ಬಹುತೇಕ ಮನುಷ್ಯರಂತೆ ಹಾವಭಾವ ಪ್ರದರ್ಶನ ಮಾಡುತ್ತವೆ.. ಅದ್ರಲ್ಲೂ ದ್ವೇಷದ ವಿಷಯಕ್ಕೆ ಬಂದರೆ ಮನುಷ್ಯನನ್ನುಮೀರಿಸುವಷ್ಟು ಒಂದು ಕೈ ಹೆಚ್ಚಿನ ದ್ವೇಷ ಮಂಗಗಳಲ್ಲಿ ಅಡಗಿದೆ.. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಈ ಘಟನೆಯೇ ಸಾಕ್ಷಿ. ಒಂದು ಮಂಗವನ್ನು ನಾಯಿಗಳು ಕೊಂದಿದ್ದಕ್ಕೆ ಇಡೀ ಗ್ರಾಮದಲ್ಲಿಯೇ ಒಂದೇ ಒಂದು ನಾಯಿಗಳು ಕೂಡ ಬದುಕುಳಿಯುವಂತೆ ಮಂಗಗಳು ಸೇಡು ತೀರಿಸಿ ಕೊಳ್ಳುತ್ತಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

  ಇದನ್ನೂ ಓದಿ: ಓಹಿಯೋ ನದಿಯಲ್ಲಿ 3,300 ಅಡಿಗಳಷ್ಟು ಈಜಿದ್ದ ಶ್ವಾನವನ್ನು ದತ್ತು ಪಡೆದ ಸಂರಕ್ಷಣಾಧಿಕಾರಿ

  ಬರೋಬ್ಬರಿ 250 ನಾಯಿಗಳನ್ನು ಕೊಂದ ಮಂಗಗಳು

  ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲಗಾಂವ್‌ನ ಹಳ್ಳಿಯೊಂದರಲ್ಲಿ 250 ನಾಯಿ ಮರಿಗಳನ್ನು ಮಂಗಗಳು ಕ್ರೂರವಾಗಿ ಕೊಂದಿವೆ. ಒಂದು ಮಂಗವನ್ನು ನಾಯಿ ಮರಿಗಳು ಕೊಂದಿದ್ದಕ್ಕಾಗಿ ಗುಂಪು ಗುಂಪಾಗಿ ಸೇರಿ ಮಂಗಗಳು ನಾಯಿಗಳ ಮೇಲೆ ತಮ್ಮ ದ್ವೇಷವನ್ನು ತೀರಿಸಿಕೊಳ್ಳುತ್ತೇವೆ. ನಾಯಿಗಳು ಕಂಡಲ್ಲಿ ಅವುಗಳ ಮೇಲೆ ಗುಂಪಾಗಿ ದಾಳಿಮಾಡಿ ಮರ ಹಾಗೂ, ಎತ್ತರದ ಕಟ್ಟಡದ ಮೇಲೆ ಎಳೆದುಕೊಂಡು ಹೋಗಿ ತಳ್ಳಿ ಮಂಗಗಳು ನಾಯಿಗಳನ್ನು ಸಾಯಿಸುತ್ತಿದೆ. ಹೀಗಾಗಿ
  ಮಜಲಗಾಂವ್‌ನ ಲವುಲ್‌ನಲ್ಲಿ ಒಂದೇ ಒಂದು ನಾಯಿ ಮರಿಗಳು ಕೂಡ ಉಳಿದಿಲ್ಲ.

  ಮಕ್ಕಳ ಮೇಲೆಯೂ ಮಂಗಗಳ ದಾಳಿ

  ಇನ್ನು ನಾಯಿಗಳನ್ನು ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಮಂಗಗಳ ವಕ್ರದೃಷ್ಟಿ ಈಗ ಶಾಲಾ ಮಕ್ಕಳ ಮೇಲೆ ಬಿದ್ದಿದ್ದು, ಶಾಲಾ ಮಕ್ಕಳು ಕಂಡಲಿ ಅವುಗಳನ್ನು ಓಡಿಸಿಕೊಂಡು ಹೋಗಿ ದಾಳಿಮಾಡಲು ಮಂಗಗಳು ಯತ್ನಿಸುತ್ತಿವೆ. ಹೀಗಾಗಿ ಮಂಗಗಳ ಹಾವಳಿಯಿಂದ ಮಜಲಗಾಂವ್‌ನ ಲವುಲ್‌ನ ಜನರು ಹೈರಾಣಾಗಿ ಹೋಗಿತ್ತು ಹೇಗಾದರೂ ಸರಿ ಮುಕ್ತಿ ಕೊಡಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

  ಇದನ್ನೂ ಓದಿ: ಕೆಂಪುಮೂತಿ ಹಂದಿಯ ಬೆನ್ನುಬಿದ್ದಿದ್ದಾರೆ ಅಮೆರಿಕ ಪೊಲೀಸರು, ಕಾರಣ ಇದು

  ಇತ್ತ ದ್ವೇಷಕ್ಕೆ ಬಿದ್ದು ಕ್ರೂರವಾಗಿ ವರ್ತನೆಯ ಮಾಡುತ್ತಿರುವ ಮಂಗಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಪ್ರಯತ್ನಪಟ್ಟರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ಪ್ರಯತ್ನ ವಿಫಲವಾದ ನಂತರ ಸ್ವತಹ ಗ್ರಾಮಸ್ಥರಿಗೆ ನಾಯಿಗಳು ಹಾಗೂ ಮಕ್ಕಳ ರಕ್ಷಣೆಗೆ ಮುಂದಾದರು, ಉಗ್ರ ಸ್ವರೂಪ ತಾಳಿರುವ ಮಂಗಗಳು, ಗ್ರಾಮಸ್ಥರ ಮೇಲು ಹಲ್ಲೆ ನಡೆಸಿದೆ. ಇದರಿಂದಾಗಿ ಗ್ರಾಮದ ಹಲವರು ಮಂಗಗಳ ದಾಳಿಯಿಂದ ಗಾಯಗೊಂಡಿದ್ದಾರೆ.ಈಗ ಮಕ್ಕಳ ಮೇಲೂ ಮಂಗಗಳು ದಾಳಿ ನಡೆಸುತ್ತಿರುವುದರಿಂದ ಆತಂಕಗೊಂಡಿರುವ ಗ್ರಾಮಸ್ಥರು ಭಯಭೀತಿಯಲ್ಲಿ ಬದುಕುವಂತಾಗಿದೆ
  Published by:ranjumbkgowda1 ranjumbkgowda1
  First published: