Viral Video: ಕೇಳಿದ್ದು ಜಾಗ್ವಾರ್, ಅಪ್ಪ ಕೊಡಿಸಿದ್ದು ಬಿಎಂಡಬ್ಲ್ಯೂ; ಮಗನ ರಂಪಾಟಕ್ಕೆ ಅಪ್ಪ ಸುಸ್ತು!
ಹರಿಯಾಣ ಮೂಲಕ ಯುವಕ ಆತನ ಹುಟ್ಟು ಹಬ್ಬಕ್ಕೆ ಪೋಷಕರೊಂದಿಗೆ ಜಾಗ್ವಾರ್ ಕಾರು ಕೊಡಿಸಬೇಕೆಂದು ಬೇಡಿಕೆ ಇಟ್ಟಿದ್ದ. ಆದರೆ ತಂದೆ ಆತನಿಗೆ ಬಿಎಂಡಬ್ಯ್ಲೂ ಕಾರನ್ನು ಕೊಡಿಸಿದ್ದರು. ಇದರಿಂದ ಕೋಪಗೊಂಡ ಯುವಕ ಆ ಕಾರನ್ನು ನದಿಗೆ ತಳ್ಳಿದ್ದಾನೆ. ಬಳಿಕ ಅದರ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾನೆ.
news18 Updated:August 10, 2019, 3:41 PM IST

ಬಿಎಂಡಬ್ಯ್ಲೂಕಾರು
- News18
- Last Updated: August 10, 2019, 3:41 PM IST
ಕೆಲ ಮಕ್ಕಳು ತಮ್ಮ ಹುಟ್ಟುಹಬ್ಬಕ್ಕೆ ಪಾಲಕರಿಂದ ವಿಶೇಷ ಉಡುಗೊರೆ ಬಯಸುತ್ತಾರೆ. ಮಕ್ಕಳು ಇಡುವ ಬೇಡಿಕೆಯನ್ನು ಈಡೇರಿಸುವ ಶಕ್ತಿ ಇದ್ದವರು ಅದನ್ನು ಪೂರೈಸುತ್ತಾರೆ. ಇನ್ನೂ ಕೆಲವರು ತಮ್ಮ ಕೈಲಾದ್ದನ್ನು ಕೊಡಿಸಿ ಮಕ್ಕಳನ್ನು ಖುಷಿಪಡಿಸುತ್ತಾರೆ. ಹರಿಯಾಣದಲ್ಲೂ ಓರ್ವ ಯುವಕ ತನ್ನ ಹುಟ್ಟುಹಬ್ಬಕ್ಕೆ ಬಹು ದೊಡ್ಡ ಬೇಡಿಕೆಯೊಂದನ್ನು ಇಟ್ಟಿದ್ದ! ಬೇಡಿಕೆ ಸರಿಯಾಗಿ ಈಡೇರದ್ದಕ್ಕೆ ಈ ಯುವಕ ಮಾಡಿದ ರಂಪಾಟ ಅಷ್ಟಿಷ್ಟಲ್ಲ! ಸದ್ಯ ಈ ವಿಚಾರ ಎಲ್ಲ ಕಡೆಗಳಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ.
ಹರಿಯಾಣ ಮೂಲಕ ಯುವಕ ಆತನ ಹುಟ್ಟು ಹಬ್ಬಕ್ಕೆ ಪೋಷಕರೊಂದಿಗೆ ಜಾಗ್ವಾರ್ ಕಾರು ಕೊಡಿಸಬೇಕೆಂದು ಬೇಡಿಕೆ ಇಟ್ಟಿದ್ದ. ಆದರೆ ತಂದೆ ಆತನಿಗೆ ಬಿಎಂಡಬ್ಯ್ಲೂ ಕಾರನ್ನು ಕೊಡಿಸಿದ್ದರು. ಇದರಿಂದ ಕೋಪಗೊಂಡ ಯುವಕ ಆ ಕಾರನ್ನು ನದಿಗೆ ತಳ್ಳಿದ್ದಾನೆ. ಬಳಿಕ ಅದರ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾನೆ.
ಇನ್ನು ನೀರಿಗೆ ತಳ್ಳಿದ ಕಾರು ನದಿಯ ಮಧ್ಯೆಯಲ್ಲಿದ್ದ ಪೊದೆಯಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಯುವಕನಿಗೆ ತಪ್ಪಿನ ಅರಿವಾಗಿದೆ. ನಂತರ ಕಾರನ್ನು ನೀರಿನಿಂದ ತರಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಸ್ಥಲೀಯರು ಯುವಕನಿಗೆ ಸಹಾಯ ಮಾಡಿ ಕಾರನ್ನು ದಡ ಸೇರಿಸಿದ್ದಾರೆ.

Loading...