HOME » NEWS » Trend » ANGRY HANUMAN FAME ARTIST KARAN ACHARYA IS WORKING ON DIFFERENT KIND OF PHOTOS AE

Karan Acharya: ಕಲೆಯ ಮೂಲಕ ಖುಷಿ ಹಂಚುವ ಕರಣ್ ಆಚಾರ್ಯ: ಆ್ಯಂಗ್ರಿ ಹನುಮಾನ್ ಸೃಷ್ಟಿಕರ್ತನ ಹೀಗೊಂದು ಕೆಲಸ!

ಆ್ಯಂಗ್ರಿ ಹನುಮಾನ್ ಬಳಿಕ ಕರಣ್ ಆಚಾರ್ಯ ಮತ್ತೆ ವಾಪಸ್ಸಾಗಿದ್ದಾರೆ. ಈ ಬಾರಿ ಒಂದಲ್ಲ ಎರಡಲ್ಲ... ಹತ್ತಾರು ಫೋಟೋಗಳಿಗೆ ಭಿನ್ನ, ವಿಭಿನ್ನ ರೀತಿಗಳಲ್ಲಿ ಜೀವ ತುಂಬುತ್ತಿದ್ದಾರೆ. ವಿಶೇಷ ಅಂದರೆ, ಈ ಫೋಟೋಗಳು ಒಂದಕ್ಕಿಂತ ಒಂದು ವೈರಲ್ ಆಗುತ್ತಿವೆ. ಜನರಲ್ಲಿ ಅಚ್ಚರಿ ಮೂಡಿಸುತ್ತಿವೆ. ಒಂದು ಸರಳ ಫೋಟೋಗೆ ಹೀಗೂ ಹೊಸ ರೂಪ ನೀಡಬಹುದಾ ಅಂತ ಹುಬ್ಬೇರುವಂತೆ ಮಾಡುತ್ತಿದೆ.

news18-kannada
Updated:September 1, 2020, 4:31 PM IST
Karan Acharya: ಕಲೆಯ ಮೂಲಕ ಖುಷಿ ಹಂಚುವ ಕರಣ್ ಆಚಾರ್ಯ: ಆ್ಯಂಗ್ರಿ ಹನುಮಾನ್ ಸೃಷ್ಟಿಕರ್ತನ ಹೀಗೊಂದು ಕೆಲಸ!
ಕರಣ್​ ಆಚಾರ್ಯ
  • Share this:
ಕೆಲ ವರ್ಷಗಳ ಹಿಂದಷ್ಟೇ ಆಂಗ್ರಿ ಹನುಮಾನ್ ಫೋಟೋ ವೈರಲ್ ಆಗಿತ್ತು. ಭಾರತ ಮಾತ್ರವಲ್ಲ ವಿಶ್ವದ ಹಲವೆಡೆಗಳಲ್ಲಿ ವಾಹನಗಳ ಮೇಲೆ ಆ್ಯಂಗ್ರಿ ಭಜರಂಗಿ ಸ್ಟಿಕ್ಕರ್​ಗಳು ರಾರಾಜಿಸುತ್ತಿವೆ. ಈ ಹನುಮಂತನ ಸೃಷ್ಟಿಕರ್ತ ಕರಣ್ ಆಚಾರ್ಯ. ಈಗ ಕರಣ್ ಮತ್ತೆ ಸುದ್ದಿಯಾಗಿದ್ದಾರೆ. ತಮ್ಮ ಕಲೆಯ ಮೂಲಕ ಜನರ ಮುಖದಲ್ಲಿ ಖುಷಿ ಅರಳಿಸುತ್ತಿದ್ದಾರೆ.

ಹೌದು,  ಆ್ಯಂಗ್ರಿ ಹನುಮಾನ್ ಬಳಿಕ ಕರಣ್ ಆಚಾರ್ಯ ಮತ್ತೆ ವಾಪಸ್ಸಾಗಿದ್ದಾರೆ. ಈ ಬಾರಿ ಒಂದಲ್ಲ ಎರಡಲ್ಲ... ಹತ್ತಾರು ಫೋಟೋಗಳಿಗೆ ಭಿನ್ನ, ವಿಭಿನ್ನ ರೀತಿಗಳಲ್ಲಿ ಜೀವ ತುಂಬುತ್ತಿದ್ದಾರೆ. ವಿಶೇಷ ಅಂದರೆ, ಈ ಫೋಟೋಗಳು ಒಂದಕ್ಕಿಂತ ಒಂದು ವೈರಲ್ ಆಗುತ್ತಿವೆ. ಜನರಲ್ಲಿ ಅಚ್ಚರಿ ಮೂಡಿಸುತ್ತಿವೆ. ಒಂದು ಸರಳ ಫೋಟೋಗೆ ಹೀಗೂ ಹೊಸ ರೂಪ ನೀಡಬಹುದಾ ಅಂತ ಹುಬ್ಬೇರುವಂತೆ ಮಾಡುತ್ತಿದೆ.

Angry Hanuman Fame artist Karan Acharya is working on Different Kind of photos
ಕರಣ್​ ಆಚಾರ್ಯ ಎಡಿಟ್ ಮಾಡಿರುವ ಫೋಟೋ


Angry Hanuman Fame artist Karan Acharya is working on Different Kind of photos
ಕರಣ್​ ಆಚಾರ್ಯ ಎಡಿಟ್ ಮಾಡಿರುವ ಫೋಟೋ




ನನ್ನ ಸ್ನೇಹಿತನ ತಾಯಿಯ ಹುಟ್ಟುಹಬ್ಬ, ತಂಗಿಯ ಹುಟ್ಟುಹಬ್ಬ ಅಂತ ಎಡಿಟಿಂಗ್ ಮಾಡಿಸಿಕೊಳ್ಳುತ್ತಿದ್ದರು. ಆದರೆ ಅದನ್ನು ನಾನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರಲಿಲ್ಲ. ಕೆಲ ದಿನಗಳ ಹಿಂದಷ್ಟೇ ಒಬ್ಬರು ಮೋಡದ ಫೋಟೋ ಕಳುಹಿಸಿದ್ದರು, ಅದು ಗಣಪತಿಯಂತೆ ಕಾಣುತ್ತಿತ್ತು. ಅದಕ್ಕೆ ಕಣ್ಣು, ಕಿವಿ ಸೇರಿಸಿ ಫೋಟೋಶಾಪ್ ಮಾಡಿ ಅಪ್ಲೋಡ್ ಮಾಡಿದ್ದೆ. ಅದನ್ನು ನೋಡಿ ತುಂಬಾ ಜನ ತಮ್ಮ ಮಕ್ಕಳ, ಕುಟುಂಬದ ಫೋಟೋಗಳನ್ನು ಕಳುಹಿಸತೊಡಗಿದರು. ಅದೇ ಸಮಯದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಹಬ್ಬವೂ ಬಂತು. ಆಗ ತುಂಬಾ ಜನ ತಮ್ಮ ಮಕ್ಕಳ ಫೋಟೋಗಳನ್ನು ಶ್ರೀಕೃಷ್ಣನಂತೆ ಎಡಿಟ್ ಮಾಡಲು ಕೇಳುತ್ತಿದ್ದರು. ಬೇರೆ ಸಮಯದಲ್ಲಿ ಈ ರೀತಿ ಫೋಟೋಸ್ ಎಡಿಟ್ ಮಾಡಿದ್ದರೆ ಇಷ್ಟೊಂದು ವೈರಲ್ ಆಗುತ್ತಿರಲಿಲ್ಲವೇನೋ. ಆದರೆ ಹಬ್ಬದ ಸಮಯವಾದ ಕಾರಣ ಹೆಚ್ಚು ವೈರಲ್ ಆಗಿವೆ.

Angry Hanuman Fame artist Karan Acharya is working on Different Kind of photos
ಕರಣ್​ ಆಚಾರ್ಯ ಎಡಿಟ್ ಮಾಡಿರುವ ಫೋಟೋ


ಗಣೇಶ ಚತುರ್ಥಿಯೂ ಬಂತು, ಆಗಲೂ ಕೆಲ ಫೋಟೋಗಳು ವೈರಲ್ ಆದವು, ಎಂದು ಈಗ ಮತ್ತೆ ತಮ್ಮ ಕಲೆಯ ಮೂಲಕ ಸದ್ದು ಮಾಡುತ್ತಿರುವ ಬಗ್ಗೆ ಕರಣ್ ಆಚಾರ್ಯ ಮಾಹಿತಿ ನೀಡುತ್ತಾರೆ. ಇನ್ನು ಆ್ಯಂಗ್ರಿ ಹನುಮಾನ್ ಫೋಟೋ ನಿಮ್ಮ ಜೀವನ ಬದಲಿಸಿತೇ ಎಂದು ಕೇಳಿದರೆ, ಕರಣ್ ಆಚಾರ್ಯ, ನಾನು ಆ ರೀತಿ ಏನೂ ಆಲೋಚನೆ ಮಾಡಿಲ್ಲ. ಮೊದಲು ಹೇಗಿತ್ತೋ ಜೀವನ ಹಾಗೇ ಇದೆ. ಮೊದಲು ನನ್ನ ಕೆಲಸ ಗುರುತಿಸಿಕೊಂಡಿರಲಿಲ್ಲ. ಆ್ಯಂಗ್ರಿ ಹನುಮಾನ್ ಬಂದ ಮೇಲೆ ಟಿವಿ, ಪತ್ರಿಕೆ, ಟ್ರೋಲ್ ಪೇಜ್​ಗಳಲ್ಲಿ ತುಂಬಾ ವೈರಲ್ ಆಗಿತ್ತು. ಆ ಬಳಿಕ ಫ್ರೀಲ್ಯಾನ್ಸ್ ಕೆಲಸಗಳು ಬರತೊಡಗಿತು. ಹೆಚ್ಚು ಕೆಲಸ ದೊರಕಿತು, ಅದರಿಂದ ಸ್ವಲ್ಪ ಸಹಾಯವಾಯಿತು ಎನ್ನುತ್ತಾರೆ ಕರಣ್.
Angry Hanuman Fame artist Karan Acharya is working on Different Kind of photos
ಕರಣ್​ ಆಚಾರ್ಯ ಎಡಿಟ್ ಮಾಡಿರುವ ಫೋಟೋ


ಇಂತಹ ಕರಣ್ ಆಚಾರ್ಯ ಸದ್ಯ ಬೈಜೂಸ್​ನಲ್ಲಿ ಕಾನ್ಸೆಪ್ಟ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಅಥವಾ ಶನಿವಾರ, ಭಾನುವಾರ ರಜೆಯ ಸಮಯದಲ್ಲಿ ಫೋಟೋಗಳನ್ನು ಎಡಿಟ್ ಮಾಡುತ್ತಾರಂತೆ. ಬೆಳಗ್ಗೆ 9.30ರಿಂದ ರಾತ್ರಿ 8 ಗಂಟೆವರೆಗೂ ಆಫೀಸ್ ಕೆಲಸವಿರುತ್ತದೆ. ಆ ಬಳಿಕ ನಾನು ಈ ಕೆಲಸ ಮಾಡುತ್ತೇನೆ, ಒಂದೂವರೆ ಎರಡು ತಾಸು ಕುಳಿತುಕೊಂಡು ಒಂದು ಫೋಟೋ ಎಡಿಟ್ ಮಾಡುತ್ತೇನೆ. ಕ್ಯಾನ್ವಾಸ್ ಮೇಲೆ ನಾನೇ ಪೇಂಟ್ ಮಾಡಬೇಕು ಅಂದ್ರೆ ಒಂದು, ಎರಡು ದಿನ ಸಮಯ ಬೇಕಾಗುತ್ತದೆ. ಆದರೆ ಫೋಟೋಶಾಪ್ ಆದ ಕಾರಣ ಮೊದಲೇ ಇರುವ ಫೋಟೋವನ್ನು ಸ್ವಲ್ಪ ಎಡಿಟ್ ಮಾಡಬೇಕಷ್ಟೆ. ನಾನು ಒಬ್ಬ ಕಲಾವಿದ ಜೊತೆಗೆ ಫೋಟೋಶಾಪ್ಅನ್ನೂ ಕಲಿತಿದ್ದೇನೆ. ಎರಡರ ಬಗ್ಗೆಯೂ ಸ್ವಲ್ಪ ತಿಳಿದಿರುವ ಕಾರಣ ಫೋಟೋಗಳು ಕ್ರಿಯೇಟಿವ್ ಆಗಿ ಮೂಡಿಬರುತ್ತಿವೆ ಎನ್ನುವ ಕರಣ್ ಒಂದೂವರೆ ಎರಡು ತಾಸುಗಳಲ್ಲೇ ಫೋಟೋಶಾಪ್ ಮಾಡುತ್ತಾರಂತೆ.

Angry Hanuman Fame artist Karan Acharya is working on Different Kind of photos
ಕರಣ್​ ಆಚಾರ್ಯ ಎಡಿಟ್ ಮಾಡಿರುವ ಫೋಟೋ


ಚಿಕ್ಕ ವಯಸ್ಸಿನಿಂದಲೂ ಡ್ರಾಯಿಂಗ್ಸ್ ಮಾಡುತ್ತಿದ್ದೆ. ಬಾಲ್ಯದಲ್ಲಿ ಅಜ್ಜಿ, ಅಪ್ಪನ ಬಳಿ ರಾಮಾಯಣ, ಮಹಾಭಾರತ ಕಥೆಗಳನ್ನು ಕೇಳುತ್ತಿದ್ದ ಕಾರಣ ಅದರಿಂದ ತುಂಬಾ ಪ್ರೇರಿತನಾಗಿದ್ದೇನೆ. ರಾಜಾ ರವಿವರ್ಮ ಅವರ ಕಲೆಯ ದೊಡ್ಡ ಅಭಿಮಾನಿ ನಾನು. ಅವರ ಪೇಂಟಿಂಗ್​ನ ಛಾಯೆಯೂ ನನ್ನ ಫೋಟೋಗಳಲ್ಲಿ ಕಾಣುತ್ತದೆ ಎಂದು ತುಂಬಾ ಜನ ಹೇಳಿದ್ದಾರೆ. ಪೌರಾಣಿಕ ಪಾತ್ರಗಳು ನನಗೆ ತುಂಬ ಇಷ್ಟ, ಅವರು ಧರಿಸುವ ಬಟ್ಟೆ, ಒಡವೆ, ಎಲ್ಲವೂ ಇಷ್ಟವಾಗುತ್ತದೆ. ಹೀಗಾಗಿಯೇ ನಾನು ಹೆಚ್ಚಾಗಿ ಫೋಟೋಶಾಪ್ ಮಾಡುವಾಗ ಪೌರಾಣಿಕ ಪಾತ್ರಗಳಂತೆ ಎಡಿಟ್ ಮಾಡುತ್ತೇನೆ ಎನ್ನುತ್ತಾರೆ ಕರಣ್.



ಸದ್ಯ ಅವರ ಬಳಿ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಫೋಟೋಸ್ ಕಳುಹಿಸಿದ್ದು, ಪ್ರತಿದಿನ ನೂರಾರು ಮಂದಿ ಫೋಟೋಗಳನ್ನು ಶೇರ್ ಮಾಡಿ, ಎಡಿಟ್ ಮಾಡಿಕೊಡಿ ಎನ್ನುತ್ತಿದ್ದಾರಂತೆ. ಸದ್ಯ  ಯಾರ ಬಳಿಯೂ ಹಣ ಪಡೆಯದೇ ಉಚಿತವಾಗಿ ಫೋಟೋಶಾಪ್ ಮಾಡಿಕೊಡುತ್ತಿರುವ ಕರಣ್ ಆಚಾರ್ಯರಿಗೆ ಜನರ ಮೆಚ್ಚುಗೆಯ ಕಮೆಂಟ್​ಗಳೇ ಬಹುಮಾನ ಹಾಗೂ ಸಂಭಾವನೆ.
Published by: Anitha E
First published: September 1, 2020, 4:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories