(VIDEO) ಕ್ವಾರ್ಟರ್ ಫೈನಲ್​​ನಲ್ಲಿ ಸೋತ ಬ್ರೆಜಿಲ್​: ಆಕ್ರೋಶಗೊಂಡು ಮೊಟ್ಟೆ ಎಸೆದ ಅಭಿಮಾನಿಗಳು

news18
Updated:July 9, 2018, 4:39 PM IST
(VIDEO) ಕ್ವಾರ್ಟರ್ ಫೈನಲ್​​ನಲ್ಲಿ ಸೋತ ಬ್ರೆಜಿಲ್​: ಆಕ್ರೋಶಗೊಂಡು ಮೊಟ್ಟೆ ಎಸೆದ ಅಭಿಮಾನಿಗಳು
news18
Updated: July 9, 2018, 4:39 PM IST
ನ್ಯೂಸ್ 18 ಕನ್ನಡ

ರಷ್ಯಾ (ಜುಲೈ. 09): ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ ಬ್ರೆಜಿಲ್​​​​ ತಂಡಕ್ಕೆ ತವರಿನಲ್ಲಿ ಟೊಮೆಟೋ-ಮೊಟ್ಟೆ ಸ್ವಾಗತ ದೊರೆತಿದೆ.

ಕ್ವಾರ್ಟರ್​ ಫೈನಲ್​ನಲ್ಲಿ ಬೆಲ್ಜಿಯಂ ವಿರುದ್ಧ ಸೋತ ತವರಿನ ತಂಡದ​ ವಿರುದ್ಧ ಅಭಿಮಾನಿಗಳು ಕುಪಿತಗೊಂಡಿದ್ದಾರೆ. ತವರಿಗೆ ಆಗಮಿಸಿದ ಆಟಗಾರರ ಬಸ್​ ಮೇಲೆ ಅಭಿಮಾನಿಗಳು ಮೊಟ್ಟೆ ಹಾಗೂ ಟೊಮೆಟೋ ಎಸೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, ಟ್ರ್ಯಾಕ್ಟರ್​​ಗಳ ಮೇಲೆ ಹತ್ತಿ ಜನರು ಮೊಟ್ಟೆ ಹೊಡೆದಿದ್ದಾರೆ. 5 ಬಾರಿಯ ಚಾಂಪಿಯನ್​ ಬ್ರೆಜಿಲ್ ತಂಡ  ಕ್ವಾರ್ಟರ್​ ಫೈನಲ್​ನಲ್ಲಿ ಬೆಲ್ಜಿಯಂ ವಿರುದ್ಧ 1-2 ಗೋಲುಗಳ ಅಂತರದಲ್ಲಿ ಸೋಲು ಕಂಡಿತ್ತು.



ಸದ್ಯ ಈ ವಿಡಿಯೋ ಸಾಮಾಜಿ ತಾಣಗಳಲ್ಲಿ ಹರಿದಾಡುತ್ತಿದ್ದು, ಎಲ್ಲಡೆ ವೈರಲ್ ಆಗುತ್ತಿದೆ.
First published:July 9, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ