ಫೇಸ್​ಬುಕ್​ ಪ್ರೇಮಿಗಾಗಿ ಪತಿಯನ್ನೇ ಕೊಲೆಗೈದ ಪತ್ನಿ

news18
Updated:May 9, 2018, 8:16 PM IST
ಫೇಸ್​ಬುಕ್​ ಪ್ರೇಮಿಗಾಗಿ ಪತಿಯನ್ನೇ ಕೊಲೆಗೈದ ಪತ್ನಿ
news18
Updated: May 9, 2018, 8:16 PM IST
ನ್ಯೂಸ್ 18 ಕನ್ನಡ

ಫೇಸ್​ಬುಕ್​ ಪ್ರೇಮಿಗಾಗಿ ಪತಿಯನ್ನು ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. 10 ದಿನಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟಿದ್ದ ಶಂಕರ್ ರಾವ್ ಹತ್ಯೆಯಾದ ವ್ಯಕ್ತಿ. ಕೊಲೆ ಆರೋಪಿಗಳಾದ ಪತ್ನಿ ಸರಸ್ವತಿ ಹಾಗೂ ಪ್ರಿಯತಮ ಶಿವ ಅವರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ಆಂಧ್ರದ ವಿಜಯನಗರಂ ಗ್ರಾಮದ ತೋಟಪಲ್ಲಿ ನಿವಾಸಿಗಳಾದ ಶಂಕರ್ ಮತ್ತು ಸರಸ್ವತಿ ವಿಹಾವು 10 ದಿನಗಳ ಹಿಂದೆ ನಡೆದಿತ್ತು. ಆದರೆ ವಿವಾಹದ ಬಳಿಕ ಸರಸ್ವತಿ ಸಂತೋಷವಾಗಿರಲಿಲ್ಲ . ಪದವಿ ವ್ಯಾಸಂಗದ ಸಂದರ್ಭದಲ್ಲಿ ಪರಿಚಿತರಾದ ಶಿವ ಎಂಬವರನ್ನು ವಿವಾಹವಾಗಲು ಸರಸ್ವತಿ ಬಯಸಿದ್ದರು.

ಫೇಸ್​ಬುಕ್ ಮುಖಾಂತರ ಪರಿಚಿತರಾದ ಶಿವ ಮತ್ತು ಸರಸ್ವತಿ ನಡುವಿನ ಗೆಳೆತನವು ನಿಧಾನಕ್ಕೆ ಪ್ರೇಮವಾಗಿ ಮಾರ್ಪಟ್ಟಿದೆ. ಇದರ ನಡುವೆ ವಿವಾಹವಾದ ಸರಸ್ವತಿಯು ತನ್ನ ಪ್ರಿಯತಮನ ಸಂಪರ್ಕದಲ್ಲಿದ್ದರು. ಮತ್ತೆ ಒಂದಾಗಲು ಬಯಸಿದ್ದ ಮಾಜಿ ಪ್ರೇಮಿಗಳು ಶಂಕರ್​ ಅವರನ್ನು ಕೊಲೆಗೈಯ್ಯಲು ಯೋಜನೆ ರೂಪಿಸಿದ್ದರು.

ಅದರಂತೆ ರಾತ್ರಿ ಮಾರುಕಟ್ಟೆಯಿಂದ ಹಿಂತಿರುವಾಗ ಮಾರ್ಗ ಮಧ್ಯೆ ಶೌಚಾಲಯಕ್ಕೆ ಹೋಗಲು ಕಾರು ನಿಲ್ಲಿಸುವಂತೆ ಪತಿಯಲ್ಲಿ ಸರಸ್ವತಿ ಕೇಳಿಕೊಂಡಿದ್ದಾರೆ. ಈ ವೇಳೆ  ಶಿವ ಮತ್ತು ಇಬ್ಬರು ರಿಕ್ಷಾದಲ್ಲಿ ಆಗಮಿಸಿ ಕಾರಿನಲ್ಲಿದ್ದ ಶಂಕರ್ ಅವರನ್ನು ಹತ್ಯೆ ಮಾಡಿದ್ದಾರೆ.

ಘಟನೆಯ ಬಳಿಕ ಸರಸ್ವತಿಯು ಪತಿಯ ಹತ್ಯೆಯ ಬಗ್ಗೆ ಪೊಲೀಸರಿಗೆ ಸ್ವತಃ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದರು. ಮೊದಲು ಇದೊಂದು ದರೋಡೆ ಪ್ರಕರಣ ಎಂದು ಭಾವಿಸಿದ್ದ ಪೊಲೀಸರಿಗೆ ದೂರದಾರರ ಮೇಲೆ ಅನುಮಾನ ಮೂಡಿದೆ. ಬಳಿಕ ಸರಸ್ವತಿಯನ್ನು ತೀವ್ರ ವಿಚಾರಣೆ ನಡೆಸಿದಾಗ ಪ್ರಕರಣ ಹಿಂದೆ ಫೇಸ್​ಬುಕ್ ಪ್ರೇಮಕಥೆ ಇರುವುದು ಬೆಳಕಿಗೆ ಬಂದಿದೆ.

ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಶಂಕರ್ ರಾವ್​ ಅವರನ್ನು ಹತ್ಯೆ ಮಾಡಲು ಈ ಮೊದಲು ಎರಡು ಬಾರಿ ಪ್ರಯತ್ನಿಸಲಾಗಿತ್ತು. ಕೊನೆಗೆ ಸರಸ್ವತಿಯ ಮಾಹಿತಿಯಂತೆ ಶಿವ ಮತ್ತು ತಂಡ ಮಾರ್ಗಮಧ್ಯೆ ಹತ್ಯೆಗೈಯ್ಯಲು ಯೋಜನೆ ರೂಪಿಸಿದ್ದರು. ಇದಾದ ಬಳಿಕ ಕಬ್ಬಿಣದ ಸಲಾಕೆಯಿಂದ ಪತ್ನಿಯನ್ನು ಮೂವರು ಪತ್ನಿಯನ್ನು ಹತ್ಯೆಗೈದು ಆಭರಣಗಳನ್ನು ದೋಚಿದ್ದಾರೆ ಎಂದು ಆರೋಪಿ ಸರಸ್ವತಿ ಸುಳ್ಳು ದೂರು ನೀಡಿದ್ದರು ಎಂದು ವಿಜಯನಗರಂ ಪೊಲೀಸರು ತಿಳಿಸಿದ್ದಾರೆ.
First published:May 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ