Andhra Pradesh: ಮೇಕೆಯ ತಲೆ ಅಂದ್ಕೊಂಡು ವ್ಯಕ್ತಿ ತಲೆಯನ್ನೇ ಕತ್ತರಿಸಿದ ಕುಡುಕ..! ಮುಂದೇನು ಆಯ್ತು..

ಪ್ರಾಣಿ ಬಲಿಯ ಸಮಯದಲ್ಲಿ ಚಲಪತಿ ತುಂಬಾನೇ ಕುಡಿದಿದ್ದನು ಮತ್ತು ದೇವರಿಗೆ ಆ ಮೇಕೆಯನ್ನು ಬಲಿ ಕೊಡಬೇಕೆಂದು ಅದರ ಕತ್ತನ್ನು ಕತ್ತರಿಸಲು ಸಹಾಯವಾಗಲೆಂದು ಅದನ್ನು ಹಿಡಿದುಕೊಂಡು ಕೂತಂತಹ ಸುರೇಶ್ ಎಂಬುವವನ ಕತ್ತನ್ನೇ ಕತ್ತರಿಸಿದ್ದಾನೆ ಎನ್ನಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ಮನುಷ್ಯನಿಗೆ ಎರಡು ಸಂದರ್ಭಗಳಲ್ಲಿ(೦ccasions) ಅವನ ಬುದ್ದಿ ಅವನ ಹತೋಟಿಯಲ್ಲಿ ಇರುವುದಿಲ್ಲ ಅಂತ ಹೇಳಲಾಗುತ್ತದೆ. ಮನುಷ್ಯನಿಗೆ ವಿಪರೀತ ಕೋಪ ಬಂದಾಗ ಮತ್ತು ಕಂಠಪೂರ್ತಿಯಾಗಿ (Drinks Alcohol) ಮದ್ಯವನ್ನು ಕುಡಿದಾಗ ಅವನು ಏನು ಮಾಡುತ್ತಾನೆ ಎಂಬುದು ಅವನಿಗೆ ಯಾವುದೇ ರೀತಿಯ ಅರಿವೇ(Control) ಇರುವುದಿಲ್ಲ.ಆದರೆ ಕೋಪವನ್ನು (Anger)ನಿಯಂತ್ರಿಸಿ ಆ ವ್ಯಕ್ತಿಯನ್ನು ಕೂಡಲೇ ಶಾಂತ ರೀತಿಯಿಂದ ವರ್ತಿಸುವಂತೆ ಮಾಡಬಹುದು, ಆದರೆ ಈ ಕುಡಿದ ವ್ಯಕ್ತಿಯನ್ನು ಶಾಂತವಾಗಿ ಕೂರಿಸುವುದು ತುಂಬಾ ಕಷ್ಟದ (Difficult) ಕೆಲಸ.

ಕುಡಿದ ಅಮಲಿನಲ್ಲಿ ಅವಾಂತರ
ಈ ಕುಡುಕರು ಕುಡಿದಾಗ ಬೇರೆಯವರನ್ನು ಅವಾಚ್ಯ ಪದಗಳನ್ನು ಬಳಸಿ ಬಾಯಿಗೆ ಬಂದಂತೆ ನಿಂದಿಸುವುದನ್ನು ನಾವೆಲ್ಲಾರೂ ನೋಡಿರುತ್ತೇವೆ. ಯಾವುದೇ ಕಾರಣವಿಲ್ಲದೆ ಬೇರೆಯವರೊಡನೆ ಜಗಳ ಮಾಡುವುದು, ಜೋರಾಗಿ ವಾದ ಮಾಡುವುದು, ಹೀಗೆ ಕುಡುಕರು ಮಾಡುವ ಅವಾಂತರಗಳು ಒಂದೇ ಎರಡೇ. ಆದರೆ ಯಾವುದು ಅತಿ ಆಗಬಾರದು ಅಲ್ಲವೇ? ನಾವು ಏನೇ ಮಾಡಿದರೂ ಅದರಿಂದ ಬೇರೆಯವರಿಗೆ ತೊಂದರೆ ಆಗಬಾರದು ಅಷ್ಟೇ.

ಈ ಕುಡುಕರ ಬಗ್ಗೆ ಇಷ್ಟೊಂದು ಪೀಠಿಕೆ ಏಕೆ ಹಾಕುತ್ತಿದ್ದೇವೆ ಎಂದು ನಿಮಗೆ ಪ್ರಶ್ನೆಯೊಂದು ಮೂಡುವುದು ಸಹಜ. ಬನ್ನಿ ಹಾಗಾದರೆ ಇಲ್ಲಿ ನಡೆದ ಒಂದು ಹೃದಯ ವಿದ್ರಾವಕ ಘಟನೆಯ ಬಗ್ಗೆ ತಿಳಿದುಕೊಳ್ಳೋಣ. ಈ ಕುಡುಕ ಕುಡಿದ ಅಮಲಿನಲ್ಲಿ ಮಾಡಿರುವ ಅವಾಂತರ ನೋಡಿದರೆ ನಿಮಗೆ ಖಂಡಿತವಾಗಿಯೂ ಭಯವಾಗುತ್ತದೆ.

ಇದನ್ನೂ ಓದಿ: Goat Milk Soap: ಅಬ್ಬಾಬ್ಬ ಮೇಕೆ ಹಾಲಿನ ಸಾಬೂನಿನಿಂದ ಎಷ್ಟು ಪ್ರಯೋಜನವಿದೆ ಗೊತ್ತೇ..?

ದೇವರಿಗೆ ಪ್ರಾಣಿ ಬಲಿ
ಅದು ಮಕರ ಸಂಕ್ರಾಂತಿಯ ಹಬ್ಬದ ಸಂದರ್ಭ, ಈ ಹಬ್ಬದ ಆಚರಣೆಗಳ ನಡುವೆ ಜನವರಿ 16ರಂದು ಎಂದರೆ ಭಾನುವಾರದಂದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ವಲಸಪಲ್ಲೆಯಲ್ಲಿ ಕಂಠಪೂರ್ತಿಯಾಗಿ ಕುಡಿದ ಒಬ್ಬ ವ್ಯಕ್ತಿಯು ದೇವರಿಗೆ ಪ್ರಾಣಿ ಬಲಿ ನೀಡುವ ಸಮಯದಲ್ಲಿ ಕುಡಿದ ಅಮಲಿನಲ್ಲಿ ಅವನು ಏನು ಮಾಡುತ್ತಿದ್ದಾನೆ ಎನ್ನುವ ಅರಿವೇ ಇಲ್ಲದೆ ಮೇಕೆಯನ್ನು ಬಲಿ ಕೊಡುವ ಬದಲಿಗೆ ಒಬ್ಬ ವ್ಯಕ್ತಿಯನ್ನೇ ಕೊಂದು ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ.

ಈ ಕುಡಿದು ಆರೋಪ ಎಸಗಿದ ವ್ಯಕ್ತಿಯನ್ನು ಚಲಪತಿ ಎಂದು ಗುರುತಿಸಲಾಗಿದ್ದು, ಪ್ರಾಣಿ ಬಲಿ ನೀಡಲು ಮೇಕೆಯ ತಲೆಯನ್ನು ಕತ್ತರಿಸಬೇಕಾಗಿತ್ತು. ಪೊಲೀಸರ ಪ್ರಕಾರ, ಪ್ರಾಣಿ ಬಲಿಯ ಸಮಯದಲ್ಲಿ ಚಲಪತಿ ತುಂಬಾನೇ ಕುಡಿದಿದ್ದನು ಮತ್ತು ದೇವರಿಗೆ ಆ ಮೇಕೆಯನ್ನು ಬಲಿ ಕೊಡಬೇಕೆಂದು ಅದರ ಕತ್ತನ್ನು ಕತ್ತರಿಸಲು ಸಹಾಯವಾಗಲೆಂದು ಅದನ್ನು ಹಿಡಿದುಕೊಂಡು ಕೂತಂತಹ ಸುರೇಶ್ ಎಂಬುವವನ ಕತ್ತನ್ನೇ ಕತ್ತರಿಸಿದ್ದಾನೆ. ಈ ಘಟನೆ ತುಂಬಾನೇ ಹಠಾತ್ ಆಗಿ ನಡೆದದ್ದು ಅಲ್ಲಿಯೇ ದೂರದಲ್ಲಿರುವ ಜನರು ನೋಡುವಷ್ಟರಲ್ಲಿಯೇ ಈ ಅಚಾತುರ್ಯ ನಡೆದೇ ಹೋಗಿದೆ ಎಂದು ಹೇಳಬಹುದು.

ವಲಸಪಲ್ಲೆಯಲ್ಲಿ ಸಂಪ್ರದಾಯ
ನಂತರ 35 ವರ್ಷ ವಯಸ್ಸಿನ ಸುರೇಶ್ ಅವರು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಕಾರಣ ಅಲ್ಲಿಯೇ ಸ್ಥಳದಲ್ಲಿ ಜಮಾಯಿಸಿದ ಜನರು ಅವರನ್ನು ಕೂಡಲೇ ಮದನಪಲ್ಲಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆಗೆ ಸೇರಿಸಿದ ಸ್ವಲ್ಪ ಸಮಯದಲ್ಲಿಯೇ ಸುರೇಶ್ ನಿಧನರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮದನಪಲ್ಲಿ ಗ್ರಾಮೀಣ ಮಂಡಲದ ವಲಸಪಲ್ಲೆಯಲ್ಲಿ ಅವರ ಸಂಪ್ರದಾಯದ ಭಾಗವಾಗಿ ಜನರ ಗುಂಪು ಪ್ರಾಣಿಯನ್ನು ಬಲಿ ನೀಡುತ್ತಿದ್ದಾಗ ಈ ಘಟನೆಯು ಸಂಭವಿಸಿತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Cop Steal Goats: ಹೊಸ ವರ್ಷದ ಪಾರ್ಟಿಗೆ ಮೇಕೆ ಕದ್ದ ಪೊಲೀಸಪ್ಪ.. ಆಹಾ ಐನಾತಿ ಖಾಕಿ!

ಪ್ರತಿ ವರ್ಷ ಮದನಪಲ್ಲಿ ಗ್ರಾಮೀಣ ಮಂಡಲದ ವಲಸಪಲ್ಲೆಯ ಗ್ರಾಮದ ಜನರು ಮಕರ ಸಂಕ್ರಾಂತಿ ಹಬ್ಬದ ಆಚರಣೆಯ ಸಮಯದಲ್ಲಿ ಮೇಕೆಯನ್ನು ಬಲಿ ನೀಡಿ ಸ್ಥಳೀಯ ಯಲ್ಲಮ್ಮ ದೇವಾಲಯದಲ್ಲಿ ಅದನ್ನು ಅರ್ಪಿಸುತ್ತಾರೆ. ಕುಡಿದ ಅಮಲಿನಲ್ಲಿ ಭಯಾನಕ ಕೃತ್ಯ ಎಸಗಿದ ವ್ಯಕ್ತಿಯನ್ನು ಕೂಡಲೇ ಸ್ಥಳೀಯ ಪೊಲೀಸರು ಬಂಧಿಸಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
Published by:vanithasanjevani vanithasanjevani
First published: