Godsend Twins- ಮರಣದ ದಿನವೇ ಪುನರ್ಜನ್ಮ? ಏನಿದು ನಂಬಲಾಗದ ದೈವ ಪವಾಡ ರಹಸ್ಯ!

2019, ಸೆ. 15ರಂದು ದೋಣಿ ದುರಂತದಲ್ಲಿ ಇಬ್ಬರು ಮಕ್ಕಳನ್ನ ಕಳೆದುಕೊಂಡಿದ್ದ ವಿಶಾಖಪಟ್ಟಣದ ದಂಪತಿ ಸರಿಯಾಗಿ ಎರಡು ವರ್ಷದ ಬಳಿಕ ಸೆ. 15ರಂದೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ಧಾರೆ. ಇದು ದೈವವೇ ಇತ್ತ ಕೊಡುಗೆ ಎಂದು ಈ ದಂಪತಿ ನಂಬಿದ್ಧಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ಅಪ್ಪಲ ರಾಜು (T Appala Raju) ಮತ್ತು ಭಾಗ್ಯಲಕ್ಷ್ಮಿ (Bhagyalakshmi) ಬಾಳಿನಲ್ಲಿ ಯಾರೂ ಊಹಿಸಲಾಗದ ಪವಾಡವೊಂದು ನಡೆದುಹೋಗಿದೆ. ಸೆಪ್ಟೆಂಬರ್ 15, 2019 ರಂದು ದುರಂತವೊಂದು ನಡೆದು ಹೋಗಿತ್ತು. ದೋಣಿ ಅಪಘಾತದಲ್ಲಿ (Godavari Boat Accident Tragedy) ತನ್ನ ಮುದ್ದಿನ ಇಬ್ಬರು ಹೆಣ್ಣು ಮಕ್ಕಳನ್ನು ಈ ದಂಪತಿ ಕಳೆದುಕೊಂಡಿದ್ದರು. ಪ್ರೀತಿಸಿದ ಮಕ್ಕಳನ್ನ ಕಳೆದುಕೊಂಡು ನೋವಿನಲ್ಲಿದ್ದ ದಂಪತಿ, ನಮ್ಮ ಜೀವನವೇ ಮುಗಿದು ಹೋಯಿತು ಎಂದುಕೊಂಡಿದ್ದರು. ಆದರೆ ದೈವ ಇಚ್ಛೆ ಬೇರೆಯಾಗಿತ್ತು. ಎರಡು ವರ್ಷದ ಬಳಿಕ ಮಕ್ಕಳನ್ನು ಕಳೆದುಕೊಂಡ ದಿನವೇ ಭಾಗ್ಯಲಕ್ಷ್ಮಿ ಅವಳಿ ಮಕ್ಕಳಿಗೆ (Twins Born) ಜನ್ಮ ನೀಡಿದ್ದಾರೆ. ಸೆಪ್ಟೆಂಬರ್ 15, 2019 ರಂದು ದಂಪತಿ ತಮ್ಮ ಮಕ್ಕಳನ್ನ ಕಳೆದುಕೊಂಡಿದ್ದರು. ಇದೀಗ ಸೆಪ್ಟೆಂಬರ್ 15, 2021ರಲ್ಲಿ ಅವಳಿ ಮಕ್ಕಳಿಗೆ ಭಾಗ್ಯಲಕ್ಷ್ಮಿ ಜನ್ಮ ನೀಡಿದ್ದಾರೆ.

  ಅಪ್ಪಲ ರಾಜು ಹಾಗೂ ಭಾಗ್ಯಲಕ್ಷ್ಮಿ ಆಂಧ್ರಪ್ರದೇಶದ ವಿಶಾಖಪಟ್ಟಣಂ (Vishakhapatnam district of Andhra Pradesh) ಮೂಲದವರು. ಸೆಪ್ಟೆಂಬರ್ 15, 2019 ರಂದು ಗೋದಾವರಿಯಲ್ಲಿ ನಡೆದ ದೋಣಿ ದುರಂತದಲ್ಲಿ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಕಳೆದುಕೊಂಡಿದ್ದರು. ತಮ್ಮ ಮಕ್ಕಳನ್ನು ಕಳೆದುಕೊಂಡ ದಂಪತಿ ಬದುಕುವ ಆಸೆಯನ್ನೇ ಬಿಟ್ಟಿದ್ದರು. ಇದೇ ಅಪ್ಪಲ ರಾಜು ಅವರ ತಾಯಿ ಕೂಡ ಈ ಹಿಂದೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ನೋವುಗಳನ್ನೆಲ್ಲಾ ಉಂಡಿದ್ದ ಅಪ್ಪಲ ರಾಜು ಬದುಕುವ ಆಸೆಯನ್ನೇ ಬಿಟ್ಟಿದ್ದರು. ಕೆಲ ದಿನಗಳವರೆಗೂ ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿ ಊಟವನ್ನು ಕೂಡ ಮರೆತಿದ್ದರು.

  ಭಾಗ್ಯಲಕ್ಷ್ಮಿ ಮತ್ತು ಆಕೆಯ ಪತಿ ಗಾಜಿನ ತಯಾರಿಕಾ ಘಟಕವೊಂದರಲ್ಲಿ (Glass Manufacturing Unit) ಕೆಲಸ ನಿರ್ವಹಿಸುತ್ತಿದ್ದರು. ಈ ಕಷ್ಟದ ಬದುಕಿನಲ್ಲೂ ತಮ್ಮ ಇಬ್ಬರು ಮಕ್ಕಳನ್ನ ಭವಿಷ್ಯದಲ್ಲಿ ದೊಡ್ಡ ಸ್ಥಾನಕ್ಕೆ ಕೊಂಡೊಯ್ಯುವ ಆಸೆಯನ್ನು ಹೊಂದಿದ್ದರು. ವಿಧಿಯಾಟವೇ ಬೇರೆಯಾಗಿತ್ತು, ಇಬ್ಬರು ಮಕ್ಕಳನ್ನು ಕಳೆದುಕೊಂಡ ದಂಪತಿ ಅದೆಷ್ಟೋ ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದರು.

  ಇದನ್ನೂ ಓದಿ: Thalapathy Vijay: ತಂದೆ-ತಾಯಿ ವಿರುದ್ಧವೇ ವಿಜಯ್ ವಾರ್, ಕೋರ್ಟ್ ಮೆಟ್ಟಿಲೇರುವಂಥಾದ್ದು ಏನಾಯ್ತು?

  ಮತ್ತೆ ಮಕ್ಕಳನ್ನ ಪಡೆಯುವ ಆಸೆ ಹೊಂದಿದ್ದ ಈ ದಂಪತಿ ಫರ್ಟಿಲಿಟಿ ಸೆಂಟರ್ (Fertility Center) ಮೊರೆ ಹೋಗಿದ್ದರು. ಆದರೆ ಕಳೆದ ವರ್ಷ ಕೋವಿಡ್-19 ಕಾರಣದಿಂದ ಈ ಕೆಲಸವೂ ಅವರ ಕೈಹಿಡಿಯಲಿಲ್ಲ. ಆದರೆ ಈ ವರ್ಷ ಅದೃಷ್ಟ ಅವರ ಕೈಹಿಡಿದಿದೆ. ಮಕ್ಕಳ ಆಸೆಯನ್ನೇ ಬಿಟ್ಟಿದ್ದ ದಂಪತಿಗೆ ಇದೀಗ ಐವಿಎಫ್ (IVF) ಮೂಲಕ ಅವಳಿ ಜವಳಿ ಮಕ್ಕಳ ಆಗಿರೋದು ಆಶ್ಚರ್ಯಕರ. ಆದರೆ ಇದು ದೇವರ ಪವಾಡ ಎಂದು (Miracle of The God) ದಂಪತಿ ಹೇಳುತ್ತಿದ್ದಾರೆ.  'ಈ ಅವಳಿ-ಜವಳಿ ಮಕ್ಕಳನ್ನು ಕೊಟ್ಟಿರುವುದು ಆ ದೇವರು. ನಮಗೆ ಈಗ ತುಂಬಾ ಸಂತೋಷವಾಗಿದೆ. ನಮ್ಮ ಜೀವನದಲ್ಲಿ ಯಾರು ಊಹಿಸಲಾಗದ ಅಚ್ಚರಿಯೊಂದು ನಡೆದಿದೆ. ಆ ದೇವರಿಗೆ ನಾವು ಎಂದು ಆಭಾರಿ. ಇದೆಲ್ಲವೂ ಆ ದೇವರ ಕೃಪೆ' ಎಂದು ಈ ದಂಪತಿ ಹೇಳಿದ್ದಾರೆ.

  ಇದನ್ನೂ ಓದಿ: IPL 2021- ಇಂದಿನಿಂದ ಮತ್ತೆ ಐಪಿಎಲ್ ಹಬ್ಬ; ಹೊಸದಾಗಿ ಯಾರು ‘ಇನ್’, ಯಾರು ‘ಔಟ್’?

  ಇನ್ನು ಇವರಿಗೆ ಡೆಲಿವರಿ ಮಾಡಿದ ಡಾ. ಸುಧಾ ಪದ್ಮಶ್ರೀ (Dr. Sudha Padmashree), ‘ಇದನ್ನು ನಾವು ಚಾಲೆಂಜ್ ಆಗಿ ತೆಗೆದುಕೊಂಡಿದ್ದೆವು. ಅಪ್ಪಲ ರಾಜು ಹಾಗೂ ಭಾಗ್ಯಲಕ್ಷ್ಮಿ ತುಂಬಾ ಚೆನ್ನಾಗಿ ಸಹಕಾರ ನೀಡಿದರು’ ಎಂದು ಹೇಳಿದ್ದಾರೆ. ಅವಳಿ ಮಕ್ಕಳಲ್ಲಿ ಒಂದು ಮಗು 1.9 ಕೆಜಿ, ಮತ್ತೊಂದು ಮಗು 1.6 ಕೆಜಿ ಇದೆ. ಈ ಎರಡು ಮಕ್ಕಳು ಆರೋಗ್ಯಕರವಾಗಿವೆ ಎಂದು ವೈದ್ಯರು ಹೇಳಿದ್ದಾರೆ.

  - ವಾಸುದೇವ್ ಎಂ.
  Published by:Vijayasarthy SN
  First published: