• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral News: ಮೌಂಟ್‌ ಎವರೆಸ್ಟ್ ಮೀರಿಸುವ ಪ್ರಾಚೀನ ರಚನೆ ಪತ್ತೆ! ವಿಜ್ಞಾನಿಗಳಿಂದ ಮಹತ್ವದ ಸಂಶೋಧನೆ

Viral News: ಮೌಂಟ್‌ ಎವರೆಸ್ಟ್ ಮೀರಿಸುವ ಪ್ರಾಚೀನ ರಚನೆ ಪತ್ತೆ! ವಿಜ್ಞಾನಿಗಳಿಂದ ಮಹತ್ವದ ಸಂಶೋಧನೆ

ವೈರಲ್​ ಸುದ್ಧಿ

ವೈರಲ್​ ಸುದ್ಧಿ

ಭೂಮಿಯ ರಚನೆಯಲ್ಲಿ ಪ್ರಮುಖ ಎಂದೆನಿಸಿರುವ ಐದನೆಯ ತೆಳುವಾದ ಪದರವನ್ನು ಕಂಡುಹಿಡಿದಿದ್ದು ಗ್ರಹದ ಆಂತರಿಕ ಪ್ರಪಂಚದ ಕುರಿತು ಇನ್ನಷ್ಟು ಮಾಹಿತಿ ನೀಡುವಲ್ಲಿ ಸಹಕಾರಿಯಾಗಿದೆ.

  • Share this:

ವಿಜ್ಞಾನಿಗಳು (Scientist) ಒಂದಿಲ್ಲೊಂದು ಕೌತುಕಗಳನ್ನು ನಮ್ಮ ಮುಂದೆ ಇಡುತ್ತಲೇ ಇರುತ್ತಾರೆ. ಅನೇಕ ಅನ್ವೇಷಣೆಗಳು ಹಾಗೂ ಸಂಶೋಧನೆಗಳನ್ನು ಮಾಡುವ ವಿಜ್ಞಾನಿಗಳ ತಂಡ ಕ್ಷಣ ಕ್ಷಣವು ಹೊಸ ಹೊಸ ಆವಿಷ್ಕಾರ ಹಾಗೂ ಕಂಡುಹಿಡಿಯುವಿಕೆಗಳನ್ನು ಮನುಕುಲದ ಮುಂದೆ ಇರಿಸುತ್ತಾರೆ. ಇದೀಗ ಭೂಮಿಯ ರಚನೆಯಲ್ಲಿ ಪ್ರಮುಖ ಎಂದೆನಿಸಿರುವ ಐದನೆಯ ತೆಳುವಾದ ಪದರವನ್ನು ಕಂಡುಹಿಡಿದಿದ್ದು ಗ್ರಹದ ಆಂತರಿಕ ಪ್ರಪಂಚದ (World) ಕುರಿತು ಇನ್ನಷ್ಟು ಮಾಹಿತಿ ನೀಡುವಲ್ಲಿ ಸಹಕಾರಿಯಾಗಿದೆ.


ಐದನೆಯ ತೆಳುವಾದ ಪದರ ಪತ್ತೆಹಚ್ಚಿದ ವಿಜ್ಞಾನಿಗಳು


ಭೂಮಿಯ ರಚನೆಯನ್ನು ಕ್ರಸ್ಟ್, ಮ್ಯಾಂಟಲ್, ಔಟರ್ ಕೋರ್, ಇನ್ನರ್ ಕೋರ್ ಎಂದು ನಾಲ್ಕು ಪದರಗಳಾಗಿ ವಿಂಗಡಿಸಲಾಗಿದ್ದು, ಇದೀಗ ಐದನೆಯ ಪದರವನ್ನೇ ವಿಜ್ಞಾನಿಗಳು ಕಂಡುಹುಡುಕಿದ್ದಾರೆ. ಪುರಾತನ ಸಾಗರ ತಳಭಾಗವು ಈ ರಚನೆಯ ಸುತ್ತಲೂ ಸುತ್ತುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ತೆಳುವಾದ ಆದರೆ ದಟ್ಟವಾದ ಪದರವು ಮೇಲ್ಮೈಯಿಂದ ಸುಮಾರು 2,900 ಕಿಲೋಮೀಟರ್ ಕೆಳಗೆ ಇದ್ದು ಅಲ್ಲಿ ಕರಗಿದ, ಲೋಹೀಯ ಹೊರಭಾಗವು ಕಲ್ಲಿನ ಪದರದೊಂದಿಗೆ ಸಂಯೋಜನೆಗೊಳ್ಳುತ್ತದೆ ಇದನ್ನು ಕೋರ್-ಮ್ಯಾಂಟಲ್ ಬೌಂಡರಿ (CMB) ಎಂದು ಕರೆಯಲಾಗುತ್ತದೆ.


ಅಲಬಾಮಾ ವಿಶ್ವವಿದ್ಯಾನಿಲಯದ ಸಂಶೋಧಕರು ಕೋರ್ ಮತ್ತು ಮ್ಯಾಂಟಲ್ ನಡುವಿನ ಪದರವನ್ನು ಬಹಿರಂಗಪಡಿಸಿದ್ದಾರೆ ಹಾಗೂ ಮುಳುಗಿರುವ ಸಾಗರದ ತಳವಾಗಿದೆ ಎಂದು ತಂಡ ಸ್ಪಷ್ಟಪಡಿಸಿದೆ.


ಇದನ್ನೂ ಓದಿ: ಸಂವಿಧಾನದ ಶಿಲ್ಪಿಯಲ್ಲದೆ ಸಮಾಜ ಸುಧಾರಕರಾಗಿ ಅಂಬೇಡ್ಕರ್ ಮಾಡಿರುವ ಸಾಧನೆಗಳೇನು?


ಸಂಕೀರ್ಣವಾದ ರಚನೆ


ಈ ಪದರವು ಮೌಂಟ್ ಎವರೆಸ್ಟ್‌ಗಿಂತಲೂ ಹೆಚ್ಚು ಎತ್ತರವಾಗಿದ್ದು ಭೂಮಿಯ ಕೋರ್ ಅನ್ನು ಅಂದರೆ ಮಧ್ಯಭಾಗವನ್ನು ಸುತ್ತುವುದನ್ನು ಪತ್ತೆಹಚ್ಚಿದೆ. ಭೂಮಿಯ ಮಧ್ಯಭಾಗವು ನಮ್ಮ ಗ್ರಹದ ಅತ್ಯಂತ ಬಿಸಿಯಾದ, ದಟ್ಟವಾದ ಕೇಂದ್ರವಾಗಿದ್ದು ಇದನ್ನೇ ಕೋರ್ ಎಂದು ಕರೆಯಲಾಗುತ್ತದೆ.


ಸೈನ್ಸ್ ಅಡ್ವಾನ್ಸಸ್ ಜರ್ನಲ್‌ನಲ್ಲಿ ಈ ಸಂಶೋಧನೆಗಳನ್ನು ಪ್ರಕಟಿಸಲಾಗಿದ್ದು ದಕ್ಷಿಣ ಗೋಳಾರ್ಧದ ಭಾಗದ ಕೆಳಗೆ ಪದರವನ್ನು ಕಂಡುಹಿಡಿಯಲಾಗಿದೆ ಎಂದು ವರದಿ ನೀಡಲಾಗಿದೆ. ಭೂಕಂಪನ ಸಂಶೋಧನೆಗಳು ನಮ್ಮ ಗ್ರಹದ ಆಂತರಿಕ ರಚನೆಯ ಅತ್ಯುನ್ನತ ಉತ್ತಮ ಮಟ್ಟದ ಚಿತ್ರಣವನ್ನು ಒದಗಿಸುತ್ತವೆ ಈ ರಚನೆ ಹೆಚ್ಚು ಸಂಕೀರ್ಣವಾಗಿದೆ ಎಂದು ಅಲಬಾಮಾ ವಿಶ್ವವಿದ್ಯಾಲಯದ ಭೂವಿಜ್ಞಾನಿ ಸಮಂತಾ ಹ್ಯಾನ್ಸೆನ್ ತಿಳಿಸಿದ್ದಾರೆ.


ಭೂಕಂಪನ ಅಲೆಗಳ ನಕ್ಷೆ ತಯಾರಿಗೆ ಕೇಂದ್ರಗಳ ಬಳಕೆ


ಹ್ಯಾನ್ಸೆನ್ ಮತ್ತು ಅವರ ಸಹೋದ್ಯೋಗಿಗಳು ಅಂಟಾರ್ಕ್ಟಿಕಾದ ಮಂಜುಗಡ್ಡೆಯಲ್ಲಿದ್ದ ಮೇಲ್ವಿಚಾರಣಾ ಕೇಂದ್ರಗಳನ್ನು ಭೂಕಂಪನ ಅಲೆಗಳ ನಕ್ಷೆ ತಯಾರಿಸಲು ಬಳಸಿಕೊಂಡಿದ್ದಾರೆ. ಆ ಅಲೆಗಳು ಭೂಮಿಯೊಳಗಿನ ವಸ್ತುಗಳ ಸಂಯೋಜನೆಯನ್ನು ಬಹಿರಂಗಪಡಿಸುತ್ತದೆ ಎಂಬುದು ಸಮಂತಾ ಹೇಳಿಕೆಯಾಗಿದೆ. ಈ ಪ್ರದೇಶಗಳಲ್ಲಿ ಧ್ವನಿ ತರಂಗಗಳು ನಿಧಾನವಾಗಿ ಚಲಿಸುವ ಕಾರಣ, ಅವುಗಳನ್ನು ಅಲ್ಟ್ರಾಲೋ ವೇಗ ವಲಯಗಳು (ULVZs) ಎಂದು ಕರೆಯಲಾಗುತ್ತದೆ ಎಂಬ ಮಾಹಿತಿಯನ್ನು ವಿಜ್ಞಾನಿ ಸಮಂತಾ ನೀಡಿದ್ದಾರೆ. ಭೂಕಂಪನ ಜಾಲದಿಂದ ಮೂರು ವರ್ಷಗಳವರೆಗೆ ಡೇಟಾವನ್ನು ಸಂಗ್ರಹಿಸಿದೆ. ಅಂತೆಯೇ ಈ ಜಾಲಗಳು ಕೆಳಗಿನ ಭೂಮಿಯ ಚಿತ್ರವನ್ನು ರಚಿಸಲು ಜಗತ್ತಿನಾದ್ಯಂತ ಭೂಕಂಪಗಳಿಂದ ಉಂಟಾಗುವ ಭೂಕಂಪನ ಅಲೆಗಳನ್ನು ವಿಶ್ಲೇಷಿಸಿದವು.


ಇದನ್ನೂ ಓದಿ: ಇಲ್ಲಿ ಒಂದೇ ಒಂದು ಮಾಂಸಾಹಾರದ ಹೋಟೆಲ್‌ಗಳಿಲ್ವಂತೆ! ನಿಜ ಕಣ್ರೀ


ಮೌಂಟ್ ಎವರೆಸ್ಟ್‌ಗಿಂತ 5 ಪಟ್ಟು ಎತ್ತರದ ಪರ್ವತಗಳು ಕಂಡುಬರಬಹುದು


ಅಂಟಾರ್ಟಿಕಾದಿಂದ ಸಾವಿರಾರು ಭೂಕಂಪನ ರೆಕಾರ್ಡಿಂಗ್‌ಗಳನ್ನು ವಿಶ್ಲೇಷಿಸುವಾಗ, ಹೈ-ಡೆಫಿನಿಷನ್ ಇಮೇಜಿಂಗ್ ವಿಧಾನವು ವಸ್ತುಗಳ ತೆಳುವಾದ ವಲಯಗಳನ್ನು ಪತ್ತೆಹಚ್ಚಿದೆ. ಈ ವಲಯಗಳ ದಪ್ಪವು ಕೆಲವು ಕಿಲೋಮೀಟರ್‌ಗಳವರೆಗೆ ಬದಲಾಗುತ್ತಿರುತ್ತದೆ ಎಂದು ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯ ಡಾ. ಎಡ್ವರ್ಡ್ ಗಾರ್ನೆರೊ ಹೇಳಿದ್ದಾರೆ. ಕೆಲವು ಸ್ಥಳಗಳಲ್ಲಿ ಮೌಂಟ್ ಎವರೆಸ್ಟ್‌ಗಿಂತ 5 ಪಟ್ಟು ಎತ್ತರದ ಪರ್ವತಗಳನ್ನು ನಾವು ಕಾಣಬಹುದು ಎಂಬುದನ್ನು ಈ ಸಂಶೋಧನೆ ಸೂಚಿಸುತ್ತದೆ ಎಂದು ಎಡ್ವರ್ಡೊ ತಿಳಿಸಿದ್ದಾರೆ.
ಕೋರ್ ಮ್ಯಾಂಟಲ್ ಗಡಿ


ಈ ಪ್ರದೇಶವು ಕೋರ್ ಮ್ಯಾಂಟಲ್ ಗಡಿ ಪ್ರದೇಶವೆಂಬುದಾಗಿ ಉಲ್ಲೇಖಗೊಂಡಿದ್ದು ಸುಮಾರು ಮೂರು ಮೈಲಿಗಳಿಗಿಂತ ಕಡಿಮೆ ಹಾಗೂ 25 ಮೈಲಿಗಳಿಗಿಂತ ಹೆಚ್ಚು ಎತ್ತರವಿದೆ. ಕಾಂತೀಯ ಕ್ಷೇತ್ರಕ್ಕೆ ಶಕ್ತಿ ನೀಡುವ ಗ್ರಹದ ಭಾಗದಿಂದ ತಪ್ಪಿಸಿಕೊಳ್ಳಲು ಶಾಖೋತ್ಪತ್ತಿಯಲ್ಲಿ ಹೇಗೆ ಪಾತ್ರ ವಹಿಸುತ್ತದೆ ಎಂಬುದನ್ನು ಇನ್ನಷ್ಟು ತನಿಖೆ ಮಾಡಬೇಕಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

First published: