• Home
  • »
  • News
  • »
  • trend
  • »
  • Baby Carrier: 10,000 ವರ್ಷಗಳ ಹಿಂದೆ ಮಕ್ಕಳನ್ನು ಹೇಗೆ ಸಾಗಿಸುತ್ತಿದ್ದರು? ಇದಕ್ಕೆ ಸಾಕ್ಷಿಯಾಯ್ತು ಮಗುವಿನ ಸಮಾಧಿ

Baby Carrier: 10,000 ವರ್ಷಗಳ ಹಿಂದೆ ಮಕ್ಕಳನ್ನು ಹೇಗೆ ಸಾಗಿಸುತ್ತಿದ್ದರು? ಇದಕ್ಕೆ ಸಾಕ್ಷಿಯಾಯ್ತು ಮಗುವಿನ ಸಮಾಧಿ

ಶಿಶು ಸಮಾಧಿ

ಶಿಶು ಸಮಾಧಿ

10,000 ವರ್ಷಗಳ ಹಿಂದೆ ಮಾನವರು ತಮ್ಮ ಮಕ್ಕಳನ್ನು ಜೋಲಿಗಳಲ್ಲಿ ಒಯ್ಯುತ್ತಿದ್ದರು. ಇತಿಹಾಸ ಪೂರ್ವ ಕಾಲದಲ್ಲಿ ಬೇಬಿ ಕ್ಯಾರಿಯರ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಪುರಾತತ್ತ್ವ ಶಾಸ್ತ್ರದ ಪುರಾವೆಗಳಲ್ಲಿ ಬಟ್ಟೆಯ ಪಳೆಯುಳಿಕೆ ದಾಖಲೆಯನ್ನು ಉಲ್ಲೇಖಿಸಿಲ್ಲ. ಸಂಶೋಧಕರು 2017 ರಲ್ಲಿ ಇಟಲಿಯ ಅರ್ಮಾ ವೀರಾನಾ ಗುಹೆಯಲ್ಲಿ ಸಮಾಧಿಯನ್ನು ಅನ್ವೇಷಿಸಿದ್ದಾರೆ.

ಮುಂದೆ ಓದಿ ...
  • Share this:

ಯುರೋಪ್‌ನಲ್ಲಿ (Europe) ಕಂಡುಬಂದ ಅತ್ಯಂತ ಅಪರೂಪದ ಶಿಶು ಸಮಾಧಿಯು ಮಕ್ಕಳನ್ನು ಮಲಗಿಸುತ್ತಿದ್ದ ಬಟ್ಟೆಯ ಜೋಲಿಯ ಬಗೆಗಿನ ಮಾಹಿತಿಯನ್ನು ತಿಳಿಸಿದೆ. 10,000 ವರ್ಷಗಳ ಹಿಂದೆ ಮಾನವರು ತಮ್ಮ ಮಕ್ಕಳನ್ನು (Children) ಜೋಲಿಗಳಲ್ಲಿ ಒಯ್ಯುತ್ತಿದ್ದರು. ಇತಿಹಾಸ ಪೂರ್ವ ಕಾಲದಲ್ಲಿ ಬೇಬಿ ಕ್ಯಾರಿಯರ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಪುರಾತತ್ತ್ವ ಶಾಸ್ತ್ರದ ಪುರಾವೆಗಳಲ್ಲಿ ಬಟ್ಟೆಯ (Clothes) ಪಳೆಯುಳಿಕೆ ದಾಖಲೆಯನ್ನು ಉಲ್ಲೇಖಿಸಿಲ್ಲ. ಸಂಶೋಧಕರು 2017 ರಲ್ಲಿ ಇಟಲಿಯ ಅರ್ಮಾ ವೀರಾನಾ ಗುಹೆಯಲ್ಲಿ ಸಮಾಧಿಯನ್ನು ಅನ್ವೇಷಿಸಿದರು. ನಂತರದ ವರ್ಷಗಳಲ್ಲಿ, ಸಮಾಧಿ ಮಾಡಿದ ಶಿಶುವನ್ನು "ನೀವ್" ಎಂದು ಕರೆಯಲಾಯಿತು, ಮತ್ತು ಆಕೆಯ ಹಲ್ಲುಗಳು (Teeth) ಯುರೋಪ್‌ನಲ್ಲಿ ಸಂಸ್ಕಾರಗೊಂಡ ಅತ್ಯಂತ ಪುರಾತನ ಹೆಣ್ಣು ಮಗು (Girl baby) ಎಂಬುದನ್ನು ಸೂಚಿಸುತ್ತವೆ.


ವಿಶೇಷವಾಗಿರುವ ಮಗುವಿನ ಜೋಲಿ
ನೆವ್ ಸಮುದಾಯದವರು ಮಗುವನ್ನು ಮಣಿಗಳೊಂದಿಗೆ ಸಮಾಧಿ ಮಾಡಿದ್ದು ಆಕೆಯನ್ನು ಎಷ್ಟು ಚೆನ್ನಾಗಿ ಪ್ರೀತಿಸುತ್ತಿದ್ದರು ಹಾಗೂ ಗೌರವಿಸುತ್ತಿದ್ದರು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮಗುವನ್ನು ಮಲಗಿಸಿರುವ ಭಂಗಿಯನ್ನು ನೋಡಿದಾಗ ಚಿಪ್ಪಿನಿಂದ ಆವೃತವಾಗಿರುವ ಜೋಲಿಯಲ್ಲಿ ಮಗುವನ್ನು ಸುತ್ತಿ ಕೊಂಡೊಯ್ಯುತ್ತಿದ್ದರು ಎಂಬುದನ್ನು ಸೂಚಿಸುತ್ತದೆ.


ಸುಂದರವಾದ ಕಸೂತಿ
ಇಂದು ಬಟ್ಟೆಯ ಸುತ್ತುವಿಕೆಯು ಸಾಮಾನ್ಯವಾಗಿದೆ ಆದರೆ ನೆವ್ ಅನ್ನು ಸುತ್ತುವರಿದ ಬಟ್ಟೆಯು ಚಿಪ್ಪುಗಳ ರಂಧ್ರವನ್ನು ಹೊಂದಿತ್ತು ಹಾಗೂ ಅವುಗಳನ್ನು ಜವಳಿ, ತುಪ್ಪಳದ ಮೇಲೆ ಜೊತೆಯಾಗಿ ಸೇರಿಸಿ ಹೊಲಿಯುತ್ತಿದ್ದರು. ಇನ್ನು ಜೋಲಿಯ ಸುತ್ತಲಿನ ಮಣಿಗಳು ಹಿಂದಿನ ಕಾಲದ್ದಾಗಿದ್ದು ಇದರ ಕಸೂತಿಗೆ ಹಲವಾರು ಗಂಟೆಗಳು ತೆಗೆದುಕೊಂಡಿರಬಹುದು ಎಂಬುದನ್ನು ಸೂಚಿಸುತ್ತದೆ.


ಅರಿಝೋನಾ ಸ್ಟೇಟ್ ಯೂನಿವರ್ಸಿಟಿ ಮಾನವಶಾಸ್ತ್ರಜ್ಞ ಕ್ಲೌಡಿನ್ ಗ್ರಾವೆಲ್-ಮಿಗುಯೆಲ್ ನೇತೃತ್ವದ ತಂಡವು ತಿಳಿಸಿರುವಂತೆ ಮಗುವಿನ ಕ್ಯಾರಿಯರ್ ಅನ್ನು ಬೇರೆ ಬೇರೆ ಕಾರಣಗಳಿಗಾಗಿ ಬಳಸುತ್ತಿದ್ದರು ಎಂಬುದನ್ನು ಸೂಚಿಸಿದೆ.


ಇದನ್ನೂ ಓದಿ: Trash on Mars: ಮಂಗಳ ಗ್ರಹದಲ್ಲಿ 7,000 ಕೆಜಿ ಮಾನವನಿರ್ಮಿತ ಕಸದ ರಾಶಿ!


ಮಗುವಿನ ಕಾಲುಗಳನ್ನು ಹೊಟ್ಟೆಯ ಮೇಲೆ ಕೂಡಿಸಿರುವುದರಿಂದ ಅನೇಕ ಚಿಪ್ಪುಗಳನ್ನು ಅಳವಡಿಸಲಾಗಿದೆ, ಹೀಗಾಗಿ ಮಿಗುವೆಲ್ ತಂಡವು ಅನ್ವೇಷಿಸಿರುವಂತೆ ಸಮಾಧಿಯ ಮೇಲ್ಭಾಗದಲ್ಲಿ ಹರಡಿರುವ ಆಭರಣಗಳು ಅಂತ್ಯಕ್ರಿಯೆಯಲ್ಲಿ ಬಳಸಿದ್ದವುಗಳಲ್ಲ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.


ಚಿಪ್ಪುಗಳಿಂದ ಆವೃತವಾದ ಬಟ್ಟೆ
ಬದಲಿಗೆ ಮಗುವಿಗೆ ಬಳಸುತ್ತಿದ್ದ ಅಲಂಕೃತ ಉಡುಪು ಇಲ್ಲವೇ ಮಗುವಿನ ಜೋಲಿಯ ಭಾಗವಾಗಿದೆ ಎಂದು ಊಹಿಸಿದ್ದಾರೆ. ಮಣಿಗಳು ಮಗುವಿನ ತೋಳಿನ ಮೂಳೆಯ ಸುತ್ತಲೂ ವಕ್ರವಾಗಿವೆ, ಇದು ಕಳೆದುಹೋದ ಹೊದಿಕೆಯ ರೇಖೆಯನ್ನು ಪತ್ತೆಹಚ್ಚಿದೆ. ಈ ಚಿಪ್ಪುಗಳನ್ನು ಸ್ಕ್ಯಾನ್ ಮಾಡಿದಾಗ ಅವುಗಳನ್ನು ಚೆನ್ನಾಗಿ ಧರಿಸಿರುವುದು ತಿಳಿದುಬಂದಿದೆ.


ಮಗುವಿನ ಕ್ಯಾರಿಯರ್‌ಗೆ ಅಂಟಿಸಲಾದ ಆಭರಣಗಳು
ಅಧ್ಯಯನದ ಫಲಿತಾಂಶಗಳು ಮಣಿಗಳನ್ನು ಶಿಶುಗಳ ಸಮುದಾಯದ ಸದಸ್ಯರು ಜೋಲಿ ಮೇಲೆ ಹೊಲಿಯುವ ಮೊದಲು ಸಾಕಷ್ಟು ಅವಧಿಯವರೆಗೆ ಧರಿಸುತ್ತಿದ್ದರು ಎಂದು ಸೂಚಿಸುತ್ತವೆ. ಇಟಾಲಿಯನ್ ಪರ್ಯಾಯ ದ್ವೀಪದಲ್ಲಿನ ಇತರ ಸಮಾಧಿ ಸ್ಥಳಗಳು ಅಪರೂಪವಾಗಿ 40 ರಂದ್ರಗಳ ಚಿಪ್ಪುಗಳನ್ನು ಒಳಗೊಂಡಿರುತ್ತವೆ ಹಾಗೂ ನೀವ್ ಅನ್ನು 70 ಕ್ಕಿಂತ ಹೆಚ್ಚು ರಂಧ್ರವಿರುವ ನಾಲ್ಕು ರಂಧ್ರದ ಬಿವಾಲ್ವ್ ಪೆಂಡೆಂಟ್‌ಗಳೊಂದಿಗೆ ಸಮಾಧಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


ನೀವ್‌ನೊಂದಿಗೆ ಸಮಾಧಿ ಮಾಡಲಾದ ಚಿಪ್ಪುಗಳ ಹೇರಳತೆಯು ಮಗುವಿನ ಭಂಗಿಗೆ ಸಂಬಂಧಿಸಿದಂತೆ ಆಭರಣದ ಬಳಕೆಯ ಸಂಭಾವ್ಯ ಮಾದರಿಗಳನ್ನು ಗುರುತಿಸಲು ಸಂಶೋಧಕರಿಗೆ ಅವಕಾಶ ಮಾಡಿಕೊಟ್ಟಿದೆ. ಇತಿಹಾಸ ಪೂರ್ವ ಶಿಶುಗಳ ಸಮಾಧಿ ಸ್ಥಳಗಳ ಮೇಲೆ ನಡೆಸಿರುವ ಅಧ್ಯಯನಗಳು ಕಂಬಳಿಗಳು ಹಾಗೂ ಮಗುವಿನ ಕ್ಯಾರಿಯರ್‌ಗೆ ಅಂಟಿಸಲಾದ ಆಭರಣಗಳನ್ನು ಪತ್ತೆಮಾಡಿವೆ. ಅವುಗಳು ತುಂಬಾ ದೊಡ್ಡದಾಗಿದ್ದು ಸ್ವತಃ ಮಕ್ಕಳೇ ಧರಿಸುತ್ತಿದ್ದರು ಎಂಬುದನ್ನು ತಿಳಿಸಿವೆ.


ಇದನ್ನೂ ಓದಿ: Mohenjo-daro: ನಶಿಸಿಹೋಗುತ್ತಿದೆ ಮೊಹೆಂಜೋದಾರೋ ಕುರುಹು! ಕಳಚಿ ಹೋಗುತ್ತಾ ಐತಿಹಾಸಿಕ ಕೊಂಡಿ?


ಬಟ್ಟೆಯ ಮೇಲಿನ ಪ್ರಾಚೀನ ಮಾನವ ಆಭರಣಗಳು ಸಾಮಾನ್ಯವಾಗಿ ಗುರುತು, ಲಿಂಗ ಮತ್ತು ಸ್ಥಾನಮಾನವನ್ನು ಸಂವಹನ ಮಾಡುತ್ತವೆ ಎಂದು ಭಾವಿಸಲಾಗಿದೆ, ಆದರೆ ಅವು ಆಧ್ಯಾತ್ಮಿಕ ರಕ್ಷಣೆಯ ಒಂದು ರೂಪವಾಗಿರಬಹುದು.

Published by:Ashwini Prabhu
First published: