ಆನಂದ್ ಮಹೀಂದ್ರಾ ಸೋಷಿಯಲ್ ಮೀಡಿಯಾದಲ್ಲಿ ಅತ್ಯಂತ ಜನಪ್ರಿಯ ಮತ್ತು ಸಕ್ರಿಯ ಉದ್ಯಮಿಗಳಲ್ಲಿ ಒಬ್ಬರು. ಅವರು, ಆಗಾಗ್ಗೆ ಟ್ವಿಟರ್ನಲ್ಲಿ ಮಹೀಂದ್ರಾ ಕಂಪನಿಯ ವಾಹನಗಳ ಬಗ್ಗೆ ಪೋಸ್ಟ್ ಮಾಡುವುದನ್ನು ನಾವು ನೋಡಬಹುದು. ಆನಂದ್ ಮಹೀಂದ್ರಾ (Anand Mahindra) ಅವರು ಇಂಟ್ರೆಸ್ಟಿಂಗ್ ಸಂಗತಿಗಳ ಕುರಿತು ಆಗಾಗ ಪೋಸ್ಟ್ (Post) ಮತ್ತು ಟ್ವೀಟ್ಗಳನ್ನು ಮಾಡುತ್ತಾ, ಸೋಷಿಯಲ್ ಮೀಡಿಯಾದಲ್ಲಿ (Social media) ಹೆಚ್ಚು ಸಕ್ರಿಯರಾಗಿರುತ್ತಾರೆ. ಈಗ ಆನಂದ್ ಮಹೀಂದ್ರಾ ಅವರು ಉದ್ಯಮಿಗಳನ್ನು ಪ್ರೇರೇಪಿಸಲು ಪುನರುತ್ಥಾನದ ಸಸ್ಯದ ವಿಡಿಯೋವೊಂದು ಬಳಸುವ ಮೂಲಕ ವಿಶೇಷತೆ ಮೆರೆದಿದ್ದಾರೆ. ಅದರ ಬಗ್ಗೆ ಇಲ್ಲಿದೆ ಮಾಹಿತಿ.
ಆನಂದ್ ಮಹೀಂದ್ರಾ ಅವರು ಫೇಮಸ್ ಉದ್ಯಮಿ ಎಂದು ಎಲ್ಲರಿಗೂ ತಿಳಿದಿರುವ ವಿಷಯ. ಅವರು ಉದ್ಯಮಿಗಳಿಗೆ ಕೆಲವು ಉದ್ಯಮ ಪಾಠಗಳನ್ನು ತಿಳಿಸಿದ್ದಾರೆ. 'ವೊಂಡರ್ ಆಫ್ ಸೈನ್ಸ್' ಎಂಬ ಪುಟದಿಂದ ಅಪ್ಲೋಡ್ ಮಾಡಲಾದ ವೀಡಿಯೊವನ್ನು ಮತ್ತೆ ಶೇರ್ ಮಾಡಿಕೊಂಡಾಗ, ಒಬ್ಬ ವ್ಯಾಪಾರ ಉದ್ಯಮಿಯು ವ್ಯಾಪಾರದಲ್ಲಿ ಹೇಗೆ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವ ಬಗ್ಗೆ ಮತ್ತು ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಹೇಗೆ ಬದುಕುವುದು ಎಂಬುದರ ಕುರಿತು ಟ್ವೀಟ್ ಮಾಡಿದ್ದಾರೆ.
ಸಸ್ಯವೊಂದರ ವಿಡಿಯೋ ಮೂಲಕ ಉದ್ಯಮದ ಪಾಠ:
ಇವರು ಒಂದು ಸಸ್ಯದ ಮೂಲಕ ಉದ್ಯಮಿಗಳಿಗೆ ಉದ್ಯಮದ ಪಾಠವನ್ನು ಹೇಳಿಕೊಟ್ಟಿದ್ದಾರೆ. ಚೆಂಡಿನ ಆಕಾರದಲ್ಲಿರುವ ಒಣಗುತ್ತಿರುವ ಸಸ್ಯವು ನೀರಿನಿಂದ ಹೇಗೆ ಪುನರುತ್ಥಾನಗೊಳ್ಳುತ್ತಿದೆ ಮತ್ತು ಅದರ ಸುರುಳಿಗಳನ್ನು ಹೇಗೆಲ್ಲ ಹರಡಿಸಿಕೊಂಡಿದೆ ಎಂಬುದನ್ನು 15 ಸೆಕೆಂಡುಗಳ ವೀಡಿಯೊ ತೋರಿಸುತ್ತದೆ.
Amazing. Can’t help thinking about the lesson for business. Build such resilience into your strategy and Organization that you can survive any economic ‘droughts.’ 😊 https://t.co/psVmtt6yQo
— anand mahindra (@anandmahindra) December 8, 2022
ಉತ್ತಮ ಸಂದೇಶ ನೀಡಿದ ಉದ್ಯಮಿ:
ಆನಂದ್ ಮಹೀಂದ್ರಾ ಅವರು ವ್ಯಾಪಾರದ ಪುನರುಜ್ಜೀವನಕ್ಕೆ ಒತ್ತು ನೀಡುವ ಮೂಲಕ ವ್ಯಾಪಾರದಲ್ಲಿ ಸೋತ ಮಾಲೀಕರನ್ನು ಹುರಿದುಂಬಿಸಲು ಪ್ರಯತ್ನಿಸಿದರು. ಅವರ ಪ್ರಕಾರ, ವ್ಯಾಪಾರದಲ್ಲಿ ಒಂದು ಸಲ ಸೋತ ನಂತರ ಮತ್ತೆ ಅದರ ಬಗ್ಗೆ ಭರವಸೆಯನ್ನೇ ಬಿಟ್ಟು ಬಿಡುತ್ತಾರೆ. ವ್ಯವಹಾರಗಳನ್ನು ಪುನಃಸ್ಥಾಪಿಸಲು ಪ್ರಯತ್ನಿಸುವುದೇ ಇಲ್ಲ. 67 ವರ್ಷ ವಯಸ್ಸಿನ ಆನಂದ್ ಮಹೀಂದ್ರಾ ಅವರು ಈ ಮೇಲೆ ತೋರಿಸಲಾದ ಸಸ್ಯದ ವಿಡಿಯೋದ ಜೊತೆಗೆ ಹೋಲಿಕೆ ಮಾಡುತ್ತಾ ವ್ಯಾಪಾರದಲ್ಲಿ ಸೋತಾಗ ಅದನ್ನು ಪುನಃಸ್ಥಾಪಿಸಲು ಸಲಹೆ ನೀಡುತ್ತಾರೆ.
"ವ್ಯಾಪಾರದ ಪಾಠದ ಬಗ್ಗೆ ಯೋಚಿಸುವ ಬದಲು, ನಿಮ್ಮ ಕಾರ್ಯತಂತ್ರ ಮತ್ತು ಸಂಘಟನೆಯಲ್ಲಿ ಒಂದು ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಿ. ಆಗ ನೀವು ಯಾವುದೇ ಆರ್ಥಿಕ ಬಿಕ್ಕಟ್ಟಿನಲ್ಲಿಯೂ ಸಹ ಧೈರ್ಯದಿಂದ ಬದುಕಬಹುದು” ಎಂದು ಆನಂದ್ ಮಹೀಂದ್ರಾ ಅವರು ತಿಳಿಸುತ್ತಾರೆ.
ಆನಂದ್ ಮಹೀಂದ್ರಾ ಅವರ ಟ್ವೀಟ್ ಅನ್ನು ನೋಡಿದ ಹಲವಾರು ಟ್ವಿಟರ್ ಬಳಕೆದಾರರು ಉದ್ಯಮಿ ಅವರು ಯೋಚಿಸುವ ರೀತಿ ಮತ್ತು ಅವರ ಆಲೋಚನೆಗಳ ಬಗ್ಗೆ ಕುರಿತು ಪ್ರಶಂಸೆಗಳ ಸುರಿಮಳೆ ಸುರಿಸಿದ್ದಾರೆ. ಬಳಕೆದಾರರಲ್ಲಿ ಒಬ್ಬರು, "ಪುನರುತ್ಥಾನ ಸಸ್ಯವು ನಮಗೆ ಉತ್ತಮ ಪಾಠವನ್ನು ಕಲಿಸುತ್ತದೆ" ಎಂದು ಬರೆದಿದ್ದಾರೆ.
ಇದನ್ನೂ ಓದಿ: Viral Video: 'ಸುರೇಶ್-ಅಬ್ದುಲ್' ಅವರ ಹಳೆಯ ವಿಡಿಯೋ ಮತ್ತೆ ವೈರಲ್! ವಿಡಿಯೋದಲ್ಲಿ ಏನಿದೆ ಗೊತ್ತಾ?
ಇನ್ನೊಬ್ಬ ಬಳಕೆದಾರರು "ಅತ್ಯುತ್ತಮ ಚಿಂತನೆ, ನಿರ್ವಹಣೆಗಳು ಬಗ್ಗೆ ಉತ್ತಮ ಜ್ಞಾನ ಬೆಳೆಸಿಕೊಳ್ಳಬೇಕು ಮತ್ತು ಇತರರ ದೃಷ್ಟಿಕೋನವನ್ನು ಸಹ ಒಪ್ಪಿಕೊಳ್ಳಬೇಕು" ಎಂದು ಕಮೆಂಟ್ ಮಾಡಿದ್ದಾರೆ. ಮೂರನೇ ಬಳಕೆದಾರರು ಆನಂದ್ ಮಹೀಂದ್ರಾ ಅವರನ್ನು "ಕೆಲವು ವ್ಯವಹಾರಗಳು ಏಕೆ ಬೆಳೆಯುತ್ತವೆ ಎಂದ್ರೆ ಆ ಸಂಸ್ಥೆಗಳಿಗೆ ನಿಮ್ಮಂತಹ ನಾಯಕರು ಇದ್ದಾರೆ” ಎಂದು ಹೊಗಳಿದ್ದಾರೆ.
ಪುನರುತ್ಥಾನದ ಸಸ್ಯದ ಬಗ್ಗೆ ಒಂದಿಷ್ಟು ಮಾಹಿತಿ
ಈ ಸಸ್ಯದ ಹೆಸರು ಸೆಲಜಿನೆಲ್ಲಾ ಲೆಪಿಡೋಫಿಲ್ಲಾ ಚಿಹುವಾಹುವಾನ್ ಆಗಿದೆ. ಇದು ಮರುಭೂಮಿಯ ಸ್ಥಳೀಯ ಸಸ್ಯವಾಗಿದ್ದು, ಅದು ಗರಿಷ್ಠ 5 ಸೆಂ.ಮೀ ಎತ್ತರಕ್ಕೆ ಬೆಳೆಯುತ್ತದೆ. ಶುಷ್ಕ ಪರಿಸ್ಥಿತಿಗಳಲ್ಲಿ, ಅದರ ಕಾಂಡಗಳು ನೈಸರ್ಗಿಕವಾಗಿ ಬಿಗಿಯಾದ ಚೆಂಡಿನೊಳಗೆ ಸುರುಳಿಯಾಗಿರುತ್ತವೆ ಮತ್ತು ತೇವಾಂಶದ ವಾತಾವರಣ ಸಿಕ್ಕ ಕೂಡಲೇ ಸಂಪೂರ್ಣವಾಗಿ ಎಲ್ಲ ಕಾಂಡಗಳು ಹರಡಿಕೊಳ್ಳುತ್ತವೆ.
ಅಲ್ಪಾವಧಿಯ ನಿರ್ಜಲೀಕರಣದ ನಂತರ, ಸಸ್ಯದ ಹೊರ ಕಾಂಡಗಳು ವೃತ್ತಾಕಾರದ ಉಂಗುರಗಳಾಗಿ ತಿರುಚುತ್ತವೆ. ಅದರ ಜೊತೆಗೆ ಅವುಗಳ ಉದ್ದಕ್ಕೂ ಇರುವ ಸ್ಟ್ರೈನ್ ಗ್ರೇಡಿಯಂಟ್ನ ಪರಿಣಾಮದಿಂದಾಗಿ, ಒಳಗಿನ ಕಾಂಡಗಳು ನಿಧಾನವಾಗಿ ಒಳಗೆ ಸುತ್ತುವ ಮೂಲಕ ಶುಷ್ಕತೆಗೆ ಪ್ರತಿಕ್ರಿಯಿಸುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ