ಸಾಮಾಜಿಕ ಮಾಧ್ಯಮಗಳಲ್ಲಿ ದಿನ ಬೆಳಗಾದರೆ ಸಾಕು, ಅನೇಕ ಸ್ವಾರಸ್ಯಕರವಾದ ವೀಡಿಯೋಗಳು (Video) ಹರಿದಾಡುತ್ತಲೇ ಇರುತ್ತವೆ ಅಂತ ಹೇಳಬಹುದು. ಕೆಲವು ವೀಡಿಯೋಗಳು ನೋಡುಗರ ಮನಸ್ಸಿಗೆ ತುಂಬಾನೇ ಮುದ ನೀಡಿದರೆ, ಇನ್ನೂ ಕೆಲವು ವೀಡಿಯೋಗಳು ನಮ್ಮ ಕಣ್ಣುಗಳ ಹುಬ್ಬುಗಳನ್ನು ಏರಿಸುವಂತೆ ಮಾಡುತ್ತವೆ ಮತ್ತು ಹೃದಯವನ್ನು (Heart) ಕರಗಿಸುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇದರಿಂದ ಅನೇಕ ಹೊಸ ವಿಚಾರಗಳು ಸಹ ನಮಗೆ ತಿಳಿದುಕೊಳ್ಳಲು ಸಿಗುತ್ತವೆ ಅಂತ ಹೇಳಬಹುದು. ಅದರಲ್ಲೂ ಅನೇಕ ಉದ್ಯಮಿಗಳು, ಪ್ರಭಾವಿತ ವ್ಯಕ್ತಿಗಳು ಪ್ರತಿದಿನ ಒಂದಲ್ಲ ಒಂದು ಒಳ್ಳೆಯ ವೀಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುವುದನ್ನು ನಾವು ನೋಡಿರುತ್ತೇವೆ.
ಆನಂದ್ ಮಹೀಂದ್ರಾ ಹಂಚಿಕೊಂಡ ವೈರಲ್ ವಿಡಿಯೋ:
ಮಹೀಂದ್ರಾ ಗ್ರೂಪ್ ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಸ್ವಾರಸ್ಯಕರವಾದ ಮತ್ತು ಮನಸ್ಸಿಗೆ ಮುದ ನೀಡುವ ವಿಚಾರಗಳನ್ನು ಒಳಗೊಂಡ ವೀಡಿಯೋಗಳನ್ನು ಸದಾ ಹಂಚಿಕೊಳ್ಳುತ್ತಲೇ ಇರುತ್ತಾರೆ ಎಂಬುದು ನಮಗೆಲ್ಲಾ ತಿಳಿದ ವಿಚಾರವೇ ಆಗಿದೆ. ಮೊನ್ನೆ ತಾನೇ ಆನಂದ್ ಮಹೀಂದ್ರಾ ಅವರು ಒಂದು ಮಜವಾದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಅದನ್ನು ನೋಡಿ ನೆಟ್ಟಿಗರೊಬ್ಬರು ಫ್ರೆಂಚ್ ಅಳಿಯ ಏಕೆ? ಭಾರತದ ಅಳಿಯ ಯಾಕಾಗಬಾರದು? ಅಂತ ಕೇಳಿಯೇ ಬಿಟ್ಟಿದ್ದರು. ಇದಕ್ಕೆ ಸಮಾಧಾನವಾಗಿ ಉತ್ತರ ನೀಡಿದ ಆನಂದ್ ಮಹೀಂದ್ರಾ ಅವರಿಗೆ ಅನೇಕ ನೆಟ್ಟಿಗರಿಂದ ಮೆಚ್ಚುಗೆ ಸಹ ದೊರೆತಿತ್ತು.
With just small design inputs, (cylindrical sections for the chassis @BosePratap ?) this device could find global application. As a tour ‘bus’ in crowded European tourist centres? I’m always impressed by rural transport innovations, where necessity is the mother of invention. pic.twitter.com/yoibxXa8mx
— anand mahindra (@anandmahindra) December 1, 2022
ಮಹೀಂದ್ರಾ ಅವರು ಇಲ್ಲೊಂದು ನವ ನವೀನವಾದ ಆವಿಷ್ಕಾರದ ಬಗ್ಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ, ಕಿಕ್ಕಿರಿದ ಸ್ಥಳಗಳಿಗೆ ಸೂಕ್ತವಾದ ಎಲೆಕ್ಟ್ರಿಕ್ ಮಲ್ಟಿ-ರೈಡರ್ ಪ್ಯಾಸೆಂಜರ್ ವಾಹನದ ಕ್ಲಿಪ್ ಅನ್ನು ಕೈಗಾರಿಕೋದ್ಯಮಿ ಹಂಚಿಕೊಂಡಿದ್ದಾರೆ. 6 ಆಸನಗಳ ಸೈಕಲ್ ಆಟೋರಿಕ್ಷಾವನ್ನು ಗ್ರಾಮೀಣ ಭಾರತದ ಯುವಕನೊಬ್ಬ ತಯಾರಿಸಿದ್ದಾನೆ.
ಭಾರತ ನಿರ್ಮಿತ ವಾಹನದ ಪ್ರದರ್ಶನಾತ್ಮಕ ವೀಡಿಯೋವನ್ನು ಹಂಚಿಕೊಳ್ಳುವಾಗ, ಮಹೀಂದ್ರಾ ಅವರು ಮಂಗಳವಾರ "ಕೇವಲ ಸಣ್ಣ ವಿನ್ಯಾಸದ ಇನ್ಪುಟ್ ಗಳೊಂದಿಗೆ ತಯಾರಾದ ಈ ಸಾಧನವು ಜಾಗತಿಕ ಅಪ್ಲಿಕೇಶನ್ ಗಳಲ್ಲಿ ಸ್ಥಾನ ಗಿಟ್ಟಿಸಬಹುದು. ಕಿಕ್ಕಿರಿದು ತುಂಬಿರುವ ಯುರೋಪಿಯನ್ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸದ 'ಬಸ್' ಇದ್ದಂತೆ ಇದು ಸಹ. ನಾನು ಯಾವಾಗಲೂ ಗ್ರಾಮೀಣ ಸಾರಿಗೆ ಆವಿಷ್ಕಾರಗಳಿಂದ ಪ್ರಭಾವಿತನಾಗಿದ್ದೇನೆ, ಅಲ್ಲಿರುವ ಅಗತ್ಯವೇ ಆವಿಷ್ಕಾರಕ್ಕೆ ನಾಂದಿ ಹಾಡುತ್ತದೆ ಅಂತ ಹೇಳಬಹುದು" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: Photography: ಚಲಿಸುತ್ತಿರುವ ರೈಲಿನಿಂದ ಸೆರೆಯಾದವು ಮ್ಯಾಜಿಕಲ್ ಫೋಟೋಗಳು; ಮಿಸ್ ಮಾಡದೇ ನೋಡಿ
ಈ ಮಲ್ಟಿರೈಡರ್ ವಾಹನದ ಬೆಲೆ ಎಷ್ಟು?:
ಈ ವಾಹನವು 12,000 ರೂಪಾಯಿ ಮೌಲ್ಯದ್ದಾಗಿದೆ ಮತ್ತು ಒಂದು ಬಾರಿ ಚಾರ್ಜ್ ಮಾಡಿದರೆ ಅದು 150 ಕಿಲೋ ಮೀಟರ್ ವರೆಗೆ ಚಲಿಸಬಹುದು ಎಂದು ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಹೇಳಿ ಕೊಂಡಿದ್ದಾರೆ. ವಾಹನಕ್ಕೆ ಚಾರ್ಜ್ ಮಾಡಲು ಕೇವಲ 10 ರೂಪಾಯಿ ಶುಲ್ಕ ವಿಧಿಸಬಹುದು ಎಂದು ಅವರು ಹೇಳಿದ್ದಾರೆ.
ಕೆಲವು ಗಂಟೆಗಳ ಹಿಂದೆ ಪೋಸ್ಟ್ ಮಾಡಲಾದ ಈ ವೀಡಿಯೋವು ಟ್ವಿಟ್ಟರ್ ನಲ್ಲಿ 68,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ಈ ವಿನೂತನ ಆವಿಷ್ಕಾರದಿಂದ ತುಂಬಾನೇ ಪ್ರಭಾವಿತರಾಗಿದ್ದಾರೆ ಮತ್ತು ಕೆಲವರು ಅದನ್ನು ಗೇಮ್ ಚೇಂಜರ್ ಆಗಿ ಪರಿವರ್ತಿಸಲು ಸುರಕ್ಷತಾ ಕ್ರಮಗಳನ್ನು ಸೂಚಿಸಿದರು. "ಮೃಗಾಲಯ, ಪಾರ್ಕ್, ಕಾರ್ಪ್ ಸಂಕೀರ್ಣಗಳಂತಹ ಮುಚ್ಚಿದ ಕುಣಿಕೆಗಳಿಗೆ ಇದು ಉತ್ತಮ ಕಲ್ಪನೆಯಾಗಿದೆ, ಏಕೆಂದರೆ ಸಾಮಾನ್ಯ ಟ್ರಾಫಿಕ್ ಗೆ ಇದು ಫಿಟ್ ಆಗುವುದಿಲ್ಲ. ಏಕೆಂದರೆ ಇದರ ಟರ್ನಿಂಗ್ ರೇಡಿಯಸ್, ತಿರುಗಿಸುವಾಗ ಕೇಂದ್ರಾಪಗಾಮಿ ಸಮತೋಲನ, ಅಸಮ ರಸ್ತೆಗಳಲ್ಲಿ ಸಸ್ಪೆನ್ಷನ್ ಮತ್ತು ಇದರಲ್ಲಿ ಲಗೇಜ್ ಇಡಲು ಸ್ಥಳಾವಕಾಶವಿಲ್ಲ” ಎಂದು ನೆಟ್ಟಿಗರು ಹೇಳಿದ್ದಾರೆ.
"ಗ್ರಾಮೀಣ ಭಾಗದ ಮಹಿಳೆಯರಿಗೆ ಇದು ಒಂದು ಅದ್ಭುತ ಆವಿಷ್ಕಾರವಾಗಿದೆ, ಅಲ್ಲಿ ಅವರು ನೀರಿಗಾಗಿ ಹೆಚ್ಚು ಕಾಲ ಓಡಾಡುತ್ತಾರೆ" ಎಂದು ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಬರೆದಿದ್ದಾರೆ. "ವೆಚ್ಚ ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಸರಿಯಾದ ಬೆಂಬಲದೊಂದಿಗೆ ಈ ಗ್ರಾಮೀಣ ಆವಿಷ್ಕಾರಗಳು ಜಾಗತಿಕವಾಗಿ ದೊಡ್ಡ ಛಾಪು ಮೂಡಿಸಬಹುದು" ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ