ಈಗಂತೂ ಯಾವುದೇ ಮಹಾನಗರಗಳಿಗೆ ಹೋದರೂ ಸಂಚಾರ ದಟ್ಟಣೆ ತುಂಬಾನೇ ಇರುತ್ತದೆ, ಇಂತಹ ಸಮಯದಲ್ಲಿ ಟ್ರಾಫಿಕ್ (Traffic) ಅನ್ನು ನಿಯಂತ್ರಿಸಲು ರಸ್ತೆಯ ಮೇಲೆ ಟ್ರಾಫಿಕ್ ಪೊಲೀಸರು (Police) ಮತ್ತು ಟ್ರಾಫಿಕ್ ಸಿಗ್ನಲ್ ಗಳು ಇರುವುದನ್ನು ನಾವು ನೋಡುತ್ತೇವೆ. ಟ್ರಾಫಿಕ್ ನಿಯಂತ್ರಿಸಲು ಇಷ್ಟೆಲ್ಲಾ ಕ್ರಮಗಳು ಇದ್ದರೂ ಸಹ ವಾಹನ ಸವಾರರು ಸಿಗ್ನಲ್ ಜಂಪ್ ಮಾಡುವುದು ಮತ್ತು ಅವಸರದಲ್ಲಿ ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಹೋಗಿ ಅಪಘಾತಗಳು ಆಗುವುದನ್ನು ನಾವು ನೋಡಿರುತ್ತೇವೆ. ಇಷ್ಟೆಲ್ಲಾ ಇದ್ದರೂ ನಮ್ಮ ಜನರು ಟ್ರಾಫಿಕ್ ನಿಯಮಗಳನ್ನು ಸರಿಯಾಗಿ ಪಾಲಿಸುವುದಿಲ್ಲ, ಇನ್ನೂ ಸಿಗ್ನಲ್ ಮತ್ತು ಪೊಲೀಸರು ರಸ್ತೆಯ (Road) ಮೇಲೆ ಇರದೆ ಹೋಗಿದ್ದರೆ, ಪರಿಸ್ಥಿತಿ ಎಷ್ಟು ಕೆಟ್ಟದಾಗಿರುತ್ತಿತ್ತು ಅಂತ ಒಮ್ಮೆ ಊಹಿಸಿಕೊಳ್ಳಿ.
ಟ್ರಾಫಿಕ್ ಸಿಗ್ನಲ್ ಗಳಿಲ್ಲದ ರಸ್ತೆ ವಿನ್ಯಾಸ:
ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಇಂತಹದೇ ಒಂದು ರಸ್ತೆಯ ವಿನ್ಯಾಸವನ್ನು ಹಂಚಿಕೊಂಡಿದ್ದು, ಅಲ್ಲಿ ಟ್ರಾಫಿಕ್ ಸಿಗ್ನಲ್ ಗಳ ಅಗತ್ಯವೇ ಇಲ್ವಂತೆ. ಟ್ವಿಟ್ಟರ್ ನಲ್ಲಿ 10 ದಶಲಕ್ಷಕ್ಕೂ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ಮಹೀಂದ್ರಾ ಗ್ರೂಪ್ ನ ಅಧ್ಯಕ್ಷರು ಯಾವಾಗಲೂ ತಮಾಷೆ, ಮಾಹಿತಿಯುಕ್ತ ಮತ್ತು ಸ್ಪೂರ್ತಿದಾಯಕ ಪೋಸ್ಟ್ ಗಳೊಂದಿಗೆ ನಿಯಮಿತವಾಗಿ ನೆಟ್ಟಿಗರ ಆಸಕ್ತಿಯನ್ನು ಕೆರಳಿಸುತ್ತಾರೆ ಅಂತ ಹೇಳಬಹುದು.
Fascinating. A design by a Yemeni engineer Muhammad Awas (developed in 2016) which continuously regulates traffic without traffic lights using ‘half round-abouts'. But does it involve a higher use of fuel?
[source: https://t.co/iBIxKgbDzs] pic.twitter.com/83UV1vjmTb
— anand mahindra (@anandmahindra) February 23, 2023
ವೀಡಿಯೋ ಪೋಸ್ಟ್ ಗೆ ಶೀರ್ಷಿಕೆ ಏನಿದೆ ನೋಡಿ:
ಈ 47 ಸೆಕೆಂಡಿನ ವೀಡಿಯೋವನ್ನು ಹಂಚಿಕೊಂಡ ಅವರು "ಆಕರ್ಷಕವಾಗಿದೆ.. ಯೆಮೆನ್ ಎಂಜಿನಿಯರ್ ಮುಹಮ್ಮದ್ ಆವಾಸ್ (2016 ರಲ್ಲಿ ಅಭಿವೃದ್ಧಿಪಡಿಸಲಾಗಿದೆ) ಅವರ ವಿನ್ಯಾಸವು 'ಅರ್ಧ ವೃತ್ತಗಳನ್ನು ಬಳಸಿಕೊಂಡು ಟ್ರಾಫಿಕ್ ಸಿಗ್ನಲ್ ಗಳಿಲ್ಲದೆ ಸಂಚಾರವನ್ನು ನಿರಂತರವಾಗಿ ನಿಯಂತ್ರಿಸುತ್ತದೆ. ಆದರೆ ಇದರಲ್ಲಿ ಹೆಚ್ಚು ಇಂಧನ ಬಳಕೆ ಆಗುತ್ತೆಯೇ?” ಅಂತ ಶೀರ್ಷಿಕೆ ಸಹ ಬರೆದಿದ್ದಾರೆ.
ಇದನ್ನೂ ಓದಿ: Marriage: ಮದುವೆಗೂ ಮುನ್ನವೇ ಮೈಥುನಕ್ಕೆ ಅವಕಾಶ! ಭಾರತದಲ್ಲೂ ಇದೆ ಈ ವಿಚಿತ್ರ ಸಂಪ್ರದಾಯ!
ಈ ವೀಡಿಯೋದಲ್ಲಿ, ವಾಹನಗಳು ಯಾವುದೇ ನಿಲುಗಡೆಯಿಲ್ಲದೆ ರಸ್ತೆಯಲ್ಲಿ ಚಲಿಸುವುದನ್ನು ಮತ್ತು ಯಾವುದೇ ದಟ್ಟಣೆಯಿಲ್ಲದೆ ಅರ್ಧ ಸುತ್ತಿನಲ್ಲಿ ತಿರುವು ತೆಗೆದುಕೊಳ್ಳುವುದನ್ನು ನಾವು ನೋಡಬಹುದು.
ರಸ್ತೆ ವಿನ್ಯಾಸ ನೋಡಿ ಅನುಮಾನ ವ್ಯಕ್ತಪಡಿಸಿದ ನೆಟ್ಟಿಗರು:
ಹಲವಾರು ಇಂಟರ್ನೆಟ್ ಬಳಕೆದಾರರು ಈ ರಸ್ತೆ ಮಾದರಿಯಿಂದ ಆಕರ್ಷಿತರಾಗಿದ್ದರೆ, ಅನೇಕರು ಅನುಮಾನಗಳನ್ನು ಸಹ ವ್ಯಕ್ತಪಡಿಸಿದರು ಮತ್ತು ಇದು ಭಾರತದಲ್ಲಿ ಕೆಲಸ ಮಾಡುವುದಿಲ್ಲ ಅಂತ ಹೇಳಿದರು.
ಟ್ವಿಟ್ಟರ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ "ಈ ಮಾದರಿಯು ಅಸಮರ್ಥವಾಗಿದೆ, ಏಕೆಂದರೆ ಇದರಿಂದ ಹೆಚ್ಚು ಇಂಧನ ಹಾಳಾಗುತ್ತದೆ ಮತ್ತು ಎಡ ತಿರುವುಗಳಿಗೆ ಸಹ ಹೆಚ್ಚಿನ ಸಮಯ ಬೇಕಾಗುತ್ತದೆ" ಎಂದಿದ್ದಾರೆ. ಇನ್ನೋರ್ವ ಬಳಕೆದಾರರು "ಕಾಯುವ ಸಮಯ ಮತ್ತು ಸಿಗ್ನಲ್ ಗಳಲ್ಲಿ ದಟ್ಟಣೆ ಕಡಿಮೆಯಾಗುವವರೆಗೆ ಇಂಧನ ಬಳಕೆ ಸಮಸ್ಯೆಯಾಗಬಾರದು. ವೀಡಿಯೋದಲ್ಲಿ ನೋಡಲು ಚೆನ್ನಾಗಿಯೇ ಕಾಣುತ್ತದೆ.
ಆದರೆ ಈ ವಿನ್ಯಾಸದಲ್ಲಿಯೂ ವಾಹನಗಳು ಎಡದಿಂದ ಬಲ ಲೇನ್ ಗೆ ಹೋಗುತ್ತವೆ - ಈ ಲೇನ್ ಬದಲಾಯಿಸುವ ಪ್ರದೇಶವು ಇನ್ನೂ ಉದ್ದವಾಗಿರಬೇಕು, ಸುಗಮವಾಗಿ ವಾಹನಗಳು ಓಡಾಡಲು ಕನಿಷ್ಠ 500 ಮೀಟರ್ ಅಗಲದ ರಸ್ತೆ ಬೇಕು" ಎಂದಿದ್ದಾರೆ. ಮೂರನೆಯವರು ಇದನ್ನು ನೋಡಿ "ಇದು ನನಗೆ ತುಂಬಾ ಅಹಿತಕರ ಅಂತ ಅನ್ನಿಸುತ್ತದೆ, ಏಕೆಂದರೆ ರಸ್ತೆಯಲ್ಲಿ ಎಷ್ಟೊಂದು ಅಡೆತಡೆಗಳಿವೆ. ಸಂಚಾರವಿಲ್ಲದಾಗಲೂ ಅನಗತ್ಯ ಉದ್ದದ ರಸ್ತೆಗಳು ನಮಗೆ ಬೇಕೆ? ಇದಕ್ಕಿಂತ ಮಲ್ಟಿಲೆವೆಲ್ ಫ್ಲೈಓವರ್ ಗಳು ತುಂಬಾ ಉತ್ತಮವಾಗಿರುತ್ತವೆ” ಅಂತ ಹೇಳಿದ್ದಾರೆ.
“ವಿನ್ಯಾಸವು ನೋಡಲು ಚೆನ್ನಾಗಿಯೇ ಕಾಣುತ್ತದೆ, ಆದರೆ ಇದು ಭಾರಿ ಟ್ರಾಫಿಕ್ ಜಾಮ್ ಅನ್ನು ಸೃಷ್ಟಿಸುತ್ತದೆ, ಅಂದರೆ ಯಾರಾದರೂ ನೇರವಾಗಿ ಹೋಗಲು ಬಯಸಿದರೆ ಮೊದಲ ಬಲಕ್ಕೆ ತಿರುಗಲು, ಮತ್ತೆ ಎಡಕ್ಕೆ, ಪ್ರತಿ ಬಾರಿಯೂ ವ್ಯಕ್ತಿಯು ಸುಗಮ ತಿರುಗುವಿಕೆಗಾಗಿ ರಸ್ತೆಯ ಎಡ ಬದಿಗೆ ಬರಬೇಕಾಗುತ್ತದೆ, ಆಗ ಸ್ಥಳವು ಎರಡು ಬದಿಯಿಂದ ಕಡಿಮೆ ಮತ್ತು ಭಾರಿ ದಟ್ಟಣೆಯನ್ನು ಹೊಂದಿದೆ” ಅಂತ ನಾಲ್ಕನೆಯ ಬಳಕೆದಾರರು ಪ್ರತಿಕ್ರಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ