Viral Photo: ಜೋಡಿಸಿಟ್ಟ ಸ್ಟೀಲ್ ತಟ್ಟೆಗಳು ನಿಮಗೆ ಹೇಗೆ ಕಾಣಿಸುತ್ತಿವೆ? ಉದ್ಯಮಿ ಆನಂದ್ ಮಹಿಂದ್ರಾ ಹೇಳಿದ್ದೇನು ಗೊತ್ತಾ?

ಇಲ್ಲೊಂದು ವೀಡಿಯೋ ಇದೆ ನೋಡಿ, ಇದನ್ನು ದೇಶದ ಖ್ಯಾತನಾಮ ಉದ್ಯಮಿ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಯ ಮುಖ್ಯಸ್ಥರಾದ ಆನಂದ್‌ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿರುವ ಪುಟದಲ್ಲಿ ಹಂಚಿಕೊಂಡಿದ್ದಾರೆ.

ದೇವಾಲಯದಲ್ಲಿ ಜೋಡಿಸಿಟ್ಟ ಸ್ಟೀಲ್ ತಟ್ಟೆಗಳು

ದೇವಾಲಯದಲ್ಲಿ ಜೋಡಿಸಿಟ್ಟ ಸ್ಟೀಲ್ ತಟ್ಟೆಗಳು

  • Share this:
ಸಾಮಾನ್ಯವಾಗಿ ನಾವು ಯಾವುದಾದರೂ ದೇವಸ್ಥಾನಕ್ಕೆ (Temple) ಹೋದಾಗ ಅಲ್ಲಿಯೇ ದೇವಸ್ಥಾನದ ಆವರಣದಲ್ಲಿಯೇ ಭಕ್ತಾದಿಗಳಿಗೆ (Devotees) ಪ್ರಸಾದ ಕೊಟ್ಟು ಕಳುಹಿಸುವ ವ್ಯವಸ್ಥೆ ಮಾಡಿರುತ್ತಾರೆ. ಇನ್ನೂ ಕೆಲವು ಕಡೆಗಳಲ್ಲಿ ದೇವಸ್ಥಾನಗಳು ತುಂಬಾನೇ ದೊಡ್ಡದಾಗಿದ್ದರೆ ಮತ್ತು ತುಂಬಾನೇ ಜನಪ್ರಿಯವಾಗಿದ್ದರೆ ಅಂತಹ ಸ್ಥಳಗಳಲ್ಲಿ (Places) ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲು ದೊಡ್ಡ ದೊಡ್ಡ ಅಡುಗೆಮನೆಗಳು (Kitchen) ಮತ್ತು ಅಲ್ಲಿಯೇ ಕೂರಿಸಿ ಪ್ರಸಾದವನ್ನು ಬಡಿಸಲು ದೊಡ್ಡ ದೊಡ್ಡ ದಾಸೋಹಗಳು ಸಹ ಇರುವುದನ್ನು ನಾವು ನೋಡಿರುತ್ತೇವೆ. ಅಲ್ಲಿಯೇ ಕೂತು ಪ್ರಸಾದ ಸ್ವೀಕರಿಸಿ ಬಂದಿರುತ್ತೇವೆ, ಆದರೆ ಎಷ್ಟೋ ಸಲ ಮನಸ್ಸಿಗೆ ಮುದ ನೀಡುವ ದೃಶ್ಯಗಳು ಕಣ್ಮುಂದೆ ಇದ್ದರೂ ಸಹ ಅದನ್ನು ಗಮನಿಸಿರುವುದೇ ಇಲ್ಲ.

ಆನಂದ್ ಮಹಿಂದ್ರಾ ಅವರು ಹಂಚಿಕೊಂಡ ಫೋಟೋ ಇದು
ಇಲ್ಲೊಂದು ಫೋಟೋ ಇದೆ ನೋಡಿ, ಇದನ್ನು ದೇಶದ ಖ್ಯಾತನಾಮ ಉದ್ಯಮಿ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಯ ಮುಖ್ಯಸ್ಥರಾದ ಆನಂದ್‌ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿರುವ ಪುಟದಲ್ಲಿ ಹಂಚಿಕೊಂಡಿದ್ದಾರೆ. ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿರುವ ವೀಡಿಯೋ ಮತ್ತು ಫೋಟೋ ಎಂದರೆ ಅದು ನಿಜಕ್ಕೂ ಸ್ವಾರಸ್ಯಕರವಾಗಿ ಮತ್ತು ಮನಸ್ಸಿಗೆ ಮುದ ನೀಡುವಂತೆ ಇರುತ್ತದೆ ಎಂದು ಬಹುತೇಕರಿಗೆ ಗೊತ್ತು. ಏಕೆಂದರೆ ಮಹೀಂದ್ರಾ ಅವರು ಸದಾ ಒಂದಲ್ಲ ಒಂದು ವೀಡಿಯೋ ಅಥವಾ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿರುವ ಖಾತೆಯ ಪುಟದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇದನ್ನೂ ಓದಿ:  Viral Video: ಅಮ್ಮ ಅಂದ್ರೆ ಹಂಗೇನೆ! ಎಲ್ಲಾದಕ್ಕೂ ಸೊಲ್ಯೂಷನ್! ತಾಯಿ-ಮಗುವಿನ ಹ್ಯಾಪಿ ರೈಡ್

ಈಗ ಹಂಚಿಕೊಂಡಿರುವ ಫೋಟೋವನ್ನು ನೀವು ನೋಡಲೇಬೇಕು. ಅದರಲ್ಲಿ ಅಚ್ಚುಕಟ್ಟಾಗಿ ಜೋಡಿಸಲಾದ ಸ್ಟೀಲ್ ತಟ್ಟೆಗಳ ರಾಶಿಯೇ ಇದೆ ಎಂದು ಹೇಳಬಹುದು. ಈ ದೃಷ್ಯವು ಆನಂದ್ ಮಹೀಂದ್ರಾ ಅವರನ್ನು ಸಂಪೂರ್ಣವಾಗಿ ಆಶ್ಚರ್ಯಚಕಿತರನ್ನಾಗಿಸಿತು.





67 ವರ್ಷದ ಉದ್ಯಮಿ ಈ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅವರು ಅದರ ಕಲೆ, ನಿಖರತೆ ಮತ್ತು ಕಾರ್ಯಕ್ಷಮತೆಯನ್ನು ಸಂಪೂರ್ಣವಾಗಿ ಇಷ್ಟಪಟ್ಟಿದ್ದಾರೆ. ಅವರು ಹಂಚಿಕೊಂಡಿರುವ ಈ ಫೋಟೋ ಕರ್ನಾಟಕದ ಶೃಂಗೇರಿ ದೇವಾಲಯದಲ್ಲಿ ತೆಗೆದಿರುವುದು ಎಂದು ತಿಳಿದು ಬಂದಿದೆ.

ಜೋಡಿಸಿಟ್ಟ ತಟ್ಟೆಗಳ ಬಗ್ಗೆ ಹೇಳಿದ್ದೇನು?
ಈ ಫೋಟೋ ಹಂಚಿಕೊಳ್ಳುವುದರೊಂದಿಗೆ ಆನಂದ್ ಅವರು ಅದಕ್ಕೆ "ಸ್ಟೀಲ್ ತಟ್ಟೆಗಳನ್ನು ಜೋಡಿಸಿಟ್ಟಿರುವುದು ತುಂಬಾನೇ ಅದ್ಭುತವಾಗಿದೆ. ಇದೊಂದು ಶಿಲ್ಪಕಲೆ ಇದ್ದಂತೆ, ನಿಖರತೆ ಮತ್ತು ಕಾರ್ಯಕ್ಷಮತೆಯ ಮಿಶ್ರಣ ಇದು. ಅವರು ಇದನ್ನೆಲ್ಲಾ ಜೋಡಿಸುವ ಚಿಕ್ಕ ವೀಡಿಯೋ ಇದ್ದರೆ ಅದರಲ್ಲಿ ಹೇಗೆ ಜೋಡಿಸಿದ್ದಾರೆ ಎಂದು ನೋಡಿ ನಾನು ಆಶ್ಚರ್ಯ ಪಡುವುದಂತೂ ನಿಜ" ಎಂದು ಶೀರ್ಷಿಕೆ ಬರೆದಿದ್ದಾರೆ.

ಇದನ್ನೂ ಓದಿ:  Fort: ಚಕ್ರವರ್ತಿ ಪೃಥ್ವಿರಾಜ್ ಚೌಹಾಣ್ ಎಷ್ಟು ಸುಂದರ ಕೋಟೆ ಕಟ್ಟಿಸಿದ್ದರು ನೋಡಿ! ಫೋಟೋಗಳು ಇಲ್ಲಿವೆ

ಈ ಫೋಟೋವನ್ನು ಆರಂಭದಲ್ಲಿ ಆಶಾ ಖಾರ್ಗಾ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡರು ಮತ್ತು ನಂತರ ಆನಂದ್ ಮಹೀಂದ್ರಾ ಅವರು ಆ ಪೋಸ್ಟ್ ಅನ್ನು ಮರು ಟ್ವೀಟ್ ಮಾಡಿದರು. ಈ ಫೋಟೋದಲ್ಲಿ ಸುಂದರವಾಗಿ ಜೋಡಿಸಲ್ಪಟ್ಟ ಸ್ಟೀಲ್ ತಟ್ಟೆಗಳ ಬಗ್ಗೆ ಆಶಾ ಅವರು "ಜೀವನದಲ್ಲಿ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳುವುದು ಎಷ್ಟೊಂದು ಮುಖ್ಯ ಎಂದರೆ ಈ ಫೋಟೋ ನೋಡಿ ಅರ್ಥವಾಗುತ್ತದೆ. ಕರ್ನಾಟಕದಲ್ಲಿರುವ ಶೃಂಗೇರಿ ದೇವಾಲಯದಲ್ಲಿ ಜೋಡಿಸಿಟ್ಟ ಈ ತಟ್ಟೆಗಳು ಸಮತೋಲನವು ಸಾಮರಸ್ಯವನ್ನು ಹೇಗೆ ತರುತ್ತದೆ ಎಂಬುದನ್ನು ತೋರಿಸುತ್ತವೆ" ಎಂದು ಸುಂದರವಾದ ಶೀರ್ಷಿಕೆಯನ್ನು ಬರೆದಿದ್ದರು.

ತಟ್ಟೆಗಳ ಜೋಡಣೆಯನ್ನು ಕಂಡು ಆಶ್ಚರ್ಯಚಕಿತರಾದ ನೆಟ್ಟಿಗರು
ಈ ಸ್ಟೀಲ್ ತಟ್ಟೆಗಳ ಜೋಡಣೆಯನ್ನು ಕಂಡು ನೆಟ್ಟಿಗರು ಸಹ ಆಶ್ಚರ್ಯಚಕಿತರಾಗಿದ್ದಾರೆ. "ಸರ್ ನೀವು ಈ ತಟ್ಟೆಗಳ ಜೋಡಿಸುವುದರ ಫೋಟೋ ಬಗ್ಗೆ ಕೇಳುತ್ತಿದ್ದೀರಿ, ನೀವು ಅವರು ಆ ಜೋಡಿಸಿಟ್ಟ ತಟ್ಟೆಗಳನ್ನು ಹೇಗೆ ತೆಗೆದು ಕೊಳ್ಳುತ್ತಾರೆ ಎಂಬುದನ್ನು ನೋಡಬೇಕು.



ಇದು ನಿಜಕ್ಕೂ ಒಂದು ಕಲೆ ಅಂತಾನೆ ಹೇಳಬಹುದು. ಈ ತಟ್ಟೆಗಳನ್ನು ತೆಗೆಯುವಾಗ ಮೇಲ್ಭಾಗದಿಂದ ಪ್ರಾರಂಭಿಸಿ ಒಂದೇ ಬಾರಿಗೆ 10 ರಿಂದ 15 ತಟ್ಟೆಗಳನ್ನು ಒಮ್ಮೆಲೇ ಸಂಗ್ರಹಿಸುತ್ತಾರೆ. ನಾನು ಅದನ್ನು ವೈಯಕ್ತಿಕವಾಗಿ ನೋಡಿದ್ದೇನೆ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
Published by:Ashwini Prabhu
First published: