ನೀವು ಟ್ವಿಟ್ಟರ್ (Twitter) ಬಳಕೆದಾರರಾಗಿದ್ದರೆ, ನೀವು ಜನಪ್ರಿಯ ಉದ್ಯಮಿ ಆನಂದ್ ಮಹೀಂದ್ರಾ ಅವರು ಹಂಚಿಕೊಳ್ಳುವ ಟ್ವೀಟ್ ಗಳನ್ನು ಒಮ್ಮೆಯಾದರೂ ನೋಡಿರುತ್ತೀರಿ. ಹೌದು, ಆನಂದ್ ಮಹೀಂದ್ರಾ (Anand Mahindra) ಅವರು ಟ್ವಿಟ್ಟರ್ ನಲ್ಲಿ ತುಂಬಾನೇ ಸಕ್ರಿಯರಾಗಿರುತ್ತಾರೆ ಅಂತ ಹೇಳಬಹುದು. ಅತ್ಯಂತ ಯಶಸ್ವಿ ಉದ್ಯಮಿಯಾದ ಆನಂದ್ ಮಹೀಂದ್ರಾ ಅವರು ಮೈಕ್ರೋ-ಬ್ಲಾಗಿಂಗ್ ಟ್ವಿಟ್ಟರ್ ಪ್ಲಾಟ್ಫಾರ್ಮ್ ನಲ್ಲಿ ಸ್ವಾರಸ್ಯಕರವಾದ ಸಂಗತಿಗಳನ್ನು ಹಂಚಿಕೊಳ್ಳುವುದರಿಂದ ಹಿಡಿದು ಜನರ ಆವಿಷ್ಕಾರಗಳಿಗೆ ಮೆಚ್ಚುಗೆ ವ್ಯಕ್ತಪಡಿಸುವುದರವರೆಗೆ ಸಾಕಷ್ಟು ಸಕ್ರಿಯರಾಗಿರುತ್ತಾರೆ. ಎಷ್ಟೋ ಜನರು ಹಾಕುವ ಟ್ವೀಟ್ ಗಳನ್ನು ಮೆಲುಕು ಹಾಕುತ್ತಾ, ಅವರಿಗೆ ಇಷ್ಟವಾದ ಮತ್ತು ಸ್ವಾರಸ್ಯಕರವಾದ ಪೋಸ್ಟ್ ಗಳನ್ನು (Post) ಹಂಚಿಕೊಳ್ಳುತ್ತಾರೆ ಆನಂದ್ ಮಹೀಂದ್ರಾ ಅವರು ಅಂತ ಹೇಳಬಹುದು.
ಮೊನ್ನೆ ತಾನೇ ನಾವು ಆನಂದ್ ಮಹೀಂದ್ರಾ ಅವರ ಬಗ್ಗೆ ಒಂದು ಸುದ್ದಿಯನ್ನು ನೋಡಿದ್ದೆವು. ಅದೇನೆಂದರೆ ಹಿಂದೊಮ್ಮೆ ಆನಂದ್ ಮಹೀಂದ್ರಾ ಅವರು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದ್ದರು. ಅವುಗಳ ಫೋಟೋಗಳನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಈ ಹೊಸ ಇವಿಗಳ ಫೋಟೋಗಳನ್ನು ನೋಡಿದ ಮಹಿಳೆಯೊಬ್ಬರು ಪ್ರತಿಕ್ರಿಯೆ ನೀಡಿದ್ದರು. ಆ ಪ್ರತಿಕ್ರಿಯೆ ನೋಡಿದ ನಂತರ ಮತ್ತೆ ಆನಂದ್ ಮಹೀಂದ್ರಾ ಅವರು ಆ ಮಹಿಳೆಗೆ ತ್ವರಿತವಾಗಿ ಉತ್ತರ ನೀಡಿದ್ದು ನಾವು ನೋಡಿದ್ದೇವೆ.
ಹಳೆಯ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಪುಲ್ಲರ್ ಆಗಿ ಬಳಸಿದ ವ್ಯಕ್ತಿ
ತಮ್ಮ ಹಳೆಯ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಪುಲ್ಲರ್ ಆಗಿ ಪರಿವರ್ತಿಸಿದ ಕಟ್ಟಡ ನಿರ್ಮಾಣ ಕಾರ್ಮಿಕರ ವೀಡಿಯೋವನ್ನು ನೀವು ನೋಡಿರಬಹುದು. ಈಗ ಆನಂದ್ ಮಹೀಂದ್ರಾ ಅವರು ಈ ಔಟ್-ಆಫ್-ದಿ-ಬಾಕ್ಸ್ ಆವಿಷ್ಕಾರವನ್ನು ಗಮನಿಸಿದ್ದಾರೆ ಮತ್ತು ಆ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. 67 ವರ್ಷದ ಕೈಗಾರಿಕೋದ್ಯಮಿ ಇದು ದೊಡ್ಡ ಆವಿಷ್ಕಾರ ಎಂದು ಭಾವಿಸುತ್ತಾರೆ ಮತ್ತು ಇದನ್ನು ದೈನಂದಿನ ಬಳಕೆಗೆ ತರಲು ಕೆಲವು ಬದಲಾವಣೆಗಳನ್ನು ಸಹ ಇಲ್ಲಿ ಸೂಚಿಸಿದ್ದಾರೆ ನೋಡಿ.
ಇದನ್ನೂ ಓದಿ: ಪಾತ್ರೆ, ಲೋಟ ಬಾರಿಸುತ್ತಾ ಮದುವೆ ಮನೆಯಲ್ಲಿ ದೇಶಿ ಹುಡುಗರ ಕ್ರೇಜಿ ಡ್ಯಾನ್; ವಿಡಿಯೋ ನೋಡಿ
ವಾಹನಗಳ ಎಂಜಿನ್ ಗಳ ಬಗ್ಗೆ ಮಹೀಂದ್ರಾ ಅವರು ಹೇಳಿದ್ದೇನು?
ಈ ಸ್ಕೂಟರ್ ನ ಎಂಜಿನ್ ನ ಬಗ್ಗೆ ಹೇಳುತ್ತಾ ಆನಂದ್ ಮಹೀಂದ್ರಾ ಅವರು “ಅದಕ್ಕಾಗಿಯೇ ನಾವು ಅವುಗಳನ್ನು 'ಪವರ್' ಟ್ರೈನ್ ಗಳೆಂದು ಕರೆಯುತ್ತೇವೆ ಎಂದು ನಾನು ಊಹಿಸುತ್ತೇನೆ. ವಾಹನ ಎಂಜಿನ್ ಗಳ ಶಕ್ತಿಯನ್ನು ಬಳಸಿಕೊಳ್ಳಲು ಅನೇಕ ಮಾರ್ಗಗಳಿವೆ. ಒಮ್ಮೆ ಅದರ ವೆಚ್ಚವನ್ನು ಕಡಿಮೆ ಮಾಡಿದ ನಂತರ ಅಥವಾ ಅವರು ಸೆಕೆಂಡ್ ಹ್ಯಾಂಡ್ ನಲ್ಲಿ ಲಭ್ಯವಾದ ನಂತರ, ಇ-ಸ್ಕೂಟರ್ ನೊಂದಿಗೆ ಇದು ಇನ್ನೂ ಉತ್ತಮವಾಗಿರುತ್ತದೆ" ಎಂದು ಆನಂದ್ ಮಹೀಂದ್ರಾ ಆ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಸಂಪೂರ್ಣವಾಗಿ ಕ್ರಿಯಾತ್ಮಕ ವಿದ್ಯುತ್ ಪುಲ್ಲರ್ ಆಗಿ ರೂಪಾಂತರಗೊಂಡ ಸ್ಕೂಟರ್ ಮೇಲೆ ನಿರ್ಮಾಣ ಕಾರ್ಮಿಕ ಕುಳಿತಿರುವುದನ್ನು ಈ ವೀಡಿಯೋ ಪ್ರಾರಂಭದಲ್ಲಿ ತೋರಿಸುತ್ತದೆ. ಅವರು ನಿಶ್ಚಲ ಸ್ಕೂಟರ್ ನ ಆಕ್ಸಿಲರೇಟರ್ ಅನ್ನು ಜೋರು ಮಾಡಿದಾಗ ಆ ಕೆಳಗೆ ಇರುವಂತಹ ಸಿಮೆಂಟ್ ನ ಭಾರವಾದ ಚೀಲವು ಹಾಗೆಯೇ ಮೂರನೇ ಮಹಡಿಯ ಮೇಲ್ಭಾಗಕ್ಕೆ ಎಳೆಯುವುದನ್ನು ನಾವು ನೋಡಬಹುದು.
👏🏽👏🏽👏🏽 I guess that’s why we call them ‘power’trains. Many ways to utilise the power of vehicle engines. This would be even better ( and quieter!) with an e-scooter, once their cost is brought down or they are available second-hand. pic.twitter.com/Xo6WuIKEMV
— anand mahindra (@anandmahindra) December 6, 2022
ಆನಂದ್ ಮಹೀಂದ್ರಾ ಮಾತ್ರವಲ್ಲದೇ, ನೆಟ್ಟಿಗರು ಸಹ ಈ ಆವಿಷ್ಕಾರದಿಂದ ತುಂಬಾನೇ ಸಂತೋಷ ಪಟ್ಟಿದ್ದಾರೆ. ಇದನ್ನು ನೋಡಿದ ಅನೇಕ ನೆಟ್ಟಿಗರು ಅನೇಕ ರೀತಿಯ ಕಾಮೆಂಟ್ ಗಳನ್ನು ಹಾಕಿದ್ದಾರೆ ನೋಡಿ. ಅನೇಕ ಮಂದಿ ನೆಟ್ಟಿಗರು ಈ ಆವಿಷ್ಕಾರವನ್ನು ನೋಡಿ ‘ಅದ್ಭುತವಾಗಿದೆ’, ‘ತುಂಬಾ ಒಳ್ಳೆಯ ಆವಿಷ್ಕಾರ’, ‘ತುಂಬಾ ಹೊಸದಾಗಿದೆ’ ಅಂತೆಲ್ಲಾ ಕಾಮೆಂಟ್ ಗಳನ್ನು ಹಾಕಿದ್ದಾರೆ.
ಇದನ್ನೂ ಓದಿ: ಪ್ರತಿಭಟನಾಕಾರರನ್ನು ಹೊರದಬ್ಬಿದ ಸಾಲ್ಟ್ ಬೇ ರೆಸ್ಟೋರೆಂಟ್ ಸಿಬ್ಬಂದಿಗಳು, ಕಾರಣವೇನು ಗೊತ್ತಾ?
ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ‘ಆವಿಷ್ಕಾರ ಎಂದರೆ ಇದಪ್ಪಾ’ ಅಂತ ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬರು ಈ ವೀಡಿಯೋ ನೋಡಿ ‘ನಾವು ಭಾರತೀಯರು, ನಮಗೆ ಎಲ್ಲವೂ ಸಾಧ್ಯವಾಗುತ್ತದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಈ ಒಂದು ನಿಮಿಷದ ವೀಡಿಯೋಗೆ ಇದುವರೆಗೆ 6,000ಕ್ಕೂ ಹೆಚ್ಚು ಲೈಕ್ ಗಳು ಸಹ ಬಂದಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ