• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Viral Video: ಮಹಿಳೆಯೊಬ್ಬರು ಐಸ್ ಕ್ರೀಂ ಮಾಡೋ ವಿಡಿಯೋ ನೋಡಿ ಬೆರಗಾದ ಆನಂದ್ ಮಹೀಂದ್ರಾ! ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್​

Viral Video: ಮಹಿಳೆಯೊಬ್ಬರು ಐಸ್ ಕ್ರೀಂ ಮಾಡೋ ವಿಡಿಯೋ ನೋಡಿ ಬೆರಗಾದ ಆನಂದ್ ಮಹೀಂದ್ರಾ! ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್​

ಆನಂದ್ ಮಹೀಂದ್ರಾ ಮತ್ತು ವೈರಲ್ ಆಗಿರುವ ವಿಡಿಯೋ

ಆನಂದ್ ಮಹೀಂದ್ರಾ ಮತ್ತು ವೈರಲ್ ಆಗಿರುವ ವಿಡಿಯೋ

ಇತ್ತೀಚೆಗಷ್ಟೇ ಮಹಿಳೆಯೊಬ್ಬರು "ದೇಸಿ ಜುಗಾಡ್" ಐಸ್ ಕ್ರೀಂ ತಯಾರಿಸುವುದನ್ನು ಮತ್ತು ಅವರ ಹೊಸತನವನ್ನು ಕಂಡು ಆನಂದ್ ಮಹೀಂದ್ರಾ ಬೆರಗಾಗಿದ್ದಾರೆ. ಅದು ಸಹ ಯಾವುದೇ ದೊಡ್ಡ ಯಂತ್ರಗಳು ಅಥವಾ ಸಲಕರಣೆಗಳನ್ನು ಬಳಸದೆಯೇ ತಯಾರಿಸಲ್ಪಟ್ಟಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಮುಂದೆ ಓದಿ ...
 • Share this:

ಮಹೀಂದ್ರಾ ಗ್ರೂಪ್ (Mahindra Group) ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra) ಜೀವನ ಸಲಹೆ ನೀಡುವಲ್ಲಿ ಬಹಳಷ್ಟು ಹೆಸರುವಾಸಿಯಾಗಿದ್ದಾರೆ. ಈ ಬಿಲಿಯನೇರ್ ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಆಗಾಗ್ಗೆ ಉಲ್ಲಾಸದ ಮತ್ತು ಸ್ಫೂರ್ತಿದಾಯಕ ಜೀವನ-ಪಾಠದ ವಿಡಿಯೋಗಳನ್ನುಶೇರ್​ ಮಾಡಿಕೊಳ್ಳುತ್ತಾರೆ. ಅವರು ಹಂಚಿಕೊಂಡಿರುವ ಇದೇ ರೀತಿಯ ಒಂದು ವಿಡಿಯೋ ಇದೀಗ ಆನ್‌ಲೈನ್‌ನಲ್ಲಿಯೂ ಭಾರೀ ಸುದ್ದಿ (Viral Video) ಮಾಡುತ್ತಿದೆ. ನಾವು ಭಾರತೀಯರು ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪಾನೆಯ ಹೊರತಾಗಿಯೂ ನಮ್ಮದೇ ಆದ ವಿಧಾನವನ್ನು ಹೊಂದಿದ್ದೇವೆ. ಅನೇಕ ಜನರು ಇದನ್ನು ಜುಗಾಡ್‌ ಎಂದು ಕರೆಯುತ್ತಾರೆ, ಆದರೆ ಇದು ಕೇವಲ ಜಾಣ್ಮೆ ಮತ್ತು ಅಗತ್ಯತೆಯ ಸಂಯೋಜನೆ ಎಂದರ್ಥ.


ಇಂದಿನ "ಕ್ರಿಯೇಟಿಂಗ್ ಥಿಂಗ್ಸ್ ಫ್ರಮ್ ಸ್ಕ್ರ್ಯಾಚ್" ಸಂಚಿಕೆಯಲ್ಲಿ, ಸೀಲಿಂಗ್ ಫ್ಯಾನ್‌ನಿಂದ ಮಾಡಿದ ಐಸ್ ಕ್ರೀಂನ ವಿಡಿಯೋ ಇಲ್ಲಿದೆ.


"ದೇಸಿ ಜುಗಾಡ್" ಐಸ್ ಕ್ರೀಂ


ಇತ್ತೀಚೆಗಷ್ಟೇ ಮಹಿಳೆಯೊಬ್ಬರು "ದೇಸಿ ಜುಗಾಡ್" ಐಸ್ ಕ್ರೀಂ ತಯಾರಿಸುವುದನ್ನು ಮತ್ತು ಅವರ ಹೊಸತನವನ್ನು ಕಂಡು ಆನಂದ್ ಮಹೀಂದ್ರಾ ಬೆರಗಾಗಿದ್ದಾರೆ. ಅದು ಸಹ ಯಾವುದೇ ದೊಡ್ಡ ಯಂತ್ರಗಳು ಅಥವಾ ಸಲಕರಣೆಗಳನ್ನು ಬಳಸದೆಯೇ ತಯಾರಿಸಲ್ಪಟ್ಟಿದ್ದಾರೆ.


ಇದನ್ನೂ ಓದಿ: 550 ಮಕ್ಕಳ ತಂದೆಗೆ ಎದುರಾಯ್ತು ಕಾನೂನಿನ ಸಂಕಷ್ಟ; ವೀರ್ಯಾಣು ದಾನಿಯಿಂದ ಮಹಾ ಎಡವಟ್ಟು!


ಸಾಮಾಜಿಕ ಮಾಧ್ಯಮದ ಮೆಚ್ಚಿನ, ಕೈಗಾರಿಕೋದ್ಯಮಿ ತನ್ನ 10.4 ಮಿಲಿಯನ್ ಫಾಲೋವರ್ಸ್​​ನೊಂದಿಗೆ ಟ್ವಿಟ್ಟರ್‌ನಲ್ಲಿ ಲೇಡಿ ದೇಸಿ ಜುಗಾಡ್ ಎಂಬ ಟೈಟಲ್​​ನೊಂದಿಗೆ ವಿಡಿಯೋವನ್ನು ಆನಂದ್​ ಮಹೀಂದ್ರಾ ಶೇರ್​ ಮಾಡಿಕೊಂಡಿದ್ದಾರೆ.


ವಿಡಿಯೋದಲ್ಲಿ ಏನಿದೆ?


ಎರಡೂವರೆ ನಿಮಿಷದ ವಿಡಿಯೋದಲ್ಲಿ ಮಹಿಳೆಯೊಬ್ಬರು ಸಾಮಾನ್ಯ ಅಡುಗೆ ಸಾಮಾನುಗಳನ್ನು ಬಳಸಿ ಐಸ್ ಕ್ರೀಮ್ ತಯಾರಿಸುತ್ತಿದ್ದಾರೆ. ಬೇಯಿಸಿದ ಮತ್ತು ದಪ್ಪನಾದ ಹಾಲನ್ನು ಮೊದಲು ತಯಾರಿಸಲಾಗುತ್ತದೆ ಮತ್ತು ನಂತರ ಸಿಲಿಂಡರಾಕಾರದ ಪಾತ್ರೆಯಲ್ಲಿ ಅದನ್ನು ಹಾಕಲಾಗುತ್ತದೆ.


ನಂತರ ಅವರು ಆ ಕಂಟೇನರ್ ಅನ್ನು ಮತ್ತೊಂದು ದೊಡ್ಡ ಪಾತ್ರೆಯೊಳಗೆ ಇರಿಸುತ್ತಾರೆ ಮತ್ತು ತಾತ್ಕಾಲಿಕ ಫ್ರೀಜರ್ ಅನ್ನು ರಚಿಸಲು ದೊಡ್ಡ ಐಸ್ ತುಂಡುಗಳಿಂದ ಪಾತ್ರೆಗಳ ನಡುವಿನ ಅಂತರವನ್ನು ತುಂಬುತ್ತಾಳೆ. ನಂತರ ಹಾಲಿನ ಪಾತ್ರೆಯನ್ನು ಹಗ್ಗ ಬಳಸಿ ಫ್ಯಾನ್‌ಗೆ ಕಟ್ಟುತ್ತಾಳೆ.ವಿಡಿಯೋ ನೋಡಿ ಜನರ ಪ್ರತಿಕ್ರಿಯೆ


ಕಂಟೇನರ್ ಹಗ್ಗದೊಂದಿಗೆ ತಿರುಗುತ್ತದೆ ಇದರಿಂದ ಐಸ್ ಕ್ರೀಮ್ ಸಿದ್ಧವಾಗುತ್ತದೆ. ಈ ವಿಡಿಯೋ 957,100 ಕ್ಕೂ ಹೆಚ್ಚು ವೀಕ್ಷಣೆಗಳು, 27,600 ಲೈಕ್​ಗಳು ಮತ್ತು 3,166 ರೀಟ್ವೀಟ್​​ಗಳೊಂದಿಗೆ ನೆಟ್ಟಿಗರ ಮೇಲೆ ಆಳವಾದ ಪ್ರಭಾವ ಬೀರಿದೆ.


" ಒಬ್ಬರಾದರೂ ಖಂಡಿತವಾಗಿಯೂ ಈ ಅದ್ಭುತ ಐಸ್‌ಕ್ರೀಮ್‌ನ ದೊಡ್ಡ ಅಭಿಮಾನಿಯಾಗಬಹುದು. ಅವರ ಜಾಣ್ಮೆಗೆ ಒಂದು ಸಲಾಂ ಎಂದಿದ್ದಾರೆ.


ಆನಂದ್ ಮಹೀಂದ್ರಾ ಮತ್ತು ವೈರಲ್ ಆಗಿರುವ ವಿಡಿಯೋ


ನಿಜವಾದ ವಿದ್ಯಾವಂತ ವ್ಯಕ್ತಿಯು ಜ್ಞಾನವನ್ನು ಗಮನಿಸುತ್ತಾನೆ, ಅರ್ಥಮಾಡಿಕೊಳ್ಳುತ್ತಾನೆ ಮತ್ತು ಅನ್ವಯಿಸುತ್ತಾನೆ. ಸರಿಯಾದ ವೇದಿಕೆಯೊಂದಿಗೆ ಹಂಚಿಕೊಳ್ಳುತ್ತಾನೆ ಎಂದು ಬಳಕೆದಾರರು ತಮ್ಮ ಅಭಿಪ್ರಾಯವನ್ನು ಕಾಮೆಂಟ್‌ ಮಾಡಿದ್ದಾರೆ.


ಎಷ್ಟು ಅದ್ಭುತವಾಗಿದೆ ಹಾಗೂ ಹಳ್ಳಿಗಳಲ್ಲಿಯೂ ಈ ರೀತಿ ಐಸ್ ಕ್ರೀಂ ಮಾಡುವುದನ್ನು ನೋಡಿದ್ದೇವೆ ಎಂದು ಹಲವಾರು ಕಾಮೆಂಟ್ ಮಾಡಿದ್ದಾರೆ.


ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ, "ಗೃಹಿಣಿ ಪಟ್ಟ ಕಠಿಣ ಪರಿಶ್ರಮ ಶ್ಲಾಘನೀಯ. ತನ್ನ ಕಠಿಣ ಪರಿಶ್ರಮದ ಕೊನೆಯಲ್ಲಿ, ಅವಳು ನಗು ಮತ್ತು ಪ್ರೀತಿಯಿಂದ ಐಸ್ ಕ್ರೀಂ ಅನ್ನು ಬಡಿಸುತ್ತಾಳೆ. ಅವಳ ಸುತ್ತಲಿನ ಪ್ರತಿಯೊಬ್ಬರೂ ಅವಳ ಶ್ರಮವನ್ನು ಮೆಚ್ಚುತ್ತಾರೆ ಮತ್ತು ಗೌರವವನ್ನು ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ."
ವಿಡಿಯೋವನ್ನು 'ಅದ್ಭುತ' ಎಂದು ಕರೆದ ಎಡೆಲಿಟಿಕ್ಸ್ ಸಂಸ್ಥಾಪಕ ಅನೂಪ್ ಮುಂಧ್ರಾ, ಸ್ಥಳೀಯ ಆಹಾರಗಳು ಸೇರಿದಂತೆ ಭಾರತೀಯ ಆಹಾರವನ್ನು ನವೀನ ವಿಧಾನಗಳನ್ನು ಬಳಸಿ ತಯಾರಿಸಲಾಗುತ್ತದೆ ಎಂದು ಕಾಮೆಂಟ್‌ ಮಾಡಿದ್ದಾರೆ.

top videos


  ಜ್ಯೋತಿಷಿ ಸುಮಿತ್ ಬಜಾಜ್ ಕೂಡ ಐಸ್ ಕ್ರೀಮ್ ತಯಾರಕರಿಗೆ "ಅದ್ಭುತ ಪ್ರಯತ್ನ" ಎಂದು ಕಾಮೆಂಟ್‌ ಮಾಡಿದ್ದಾರೆ .

  First published: