Pink River: ದೇವರ ನಾಡಿನಲ್ಲಿ 'ಪಿಂಕ್ ನದಿ'! ಈ ಬಗ್ಗೆ ಉದ್ಯಮಿ ಆನಂದ್ ಮಹೀಂದ್ರ ಹೇಳಿದ್ದೇನು?

ಇದೀಗ ಕೇರಳದ ಅಪರೂಪದ ಜಾಗವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹೌದು 'ಅವಳ್ ಪಾಂಡಿ' ಎಂಬ ಪ್ರದೇಶದಲ್ಲಿ ಪಿಂಕ್ ನದಿಯೊಂದು ಹರಿಯುತ್ತಿದ್ದು ಇದು ಪ್ರವಾಸಿಗಳ ಗಮನ ಸೆಳೆಯುತ್ತಿದೆ. 

ಅವಳ್ ಪಾಂಡಿ ನದಿ

ಅವಳ್ ಪಾಂಡಿ ನದಿ

 • Share this:
  ಭಾರತದೆಲ್ಲೆಡೆ ಪ್ರವಾಸಿಗಳಿಗೆ ಅಚ್ಚುಮೆಚ್ಚಾದ ರಾಜ್ಯ ಎಂದರೆ ಅದು ಕೇರಳ (Kerala). ದೇವರ ಸ್ವಂತ ನಾಡು ಎಂದು ಕರೆಸಿಕೊಳ್ಳುವ ಕೇರಳದ (Kerala) ಅದ್ಭುತ ಪ್ರಾಕೃತಿಕ ಸೌಂದರ್ಯಕ್ಕೆ ಸೋಲದವರಿಲ್ಲ. ರಾಷ್ಟ್ರ ಹೊರ ರಾಷ್ಟ್ರದಿಂದ ಇಲ್ಲಿಗೆ ಪ್ರತಿದಿನ ಲಕ್ಷಾಂತರ ಮಂದಿ ಪ್ರವಾಸಕ್ಕೆ (Tour) ಬರುತ್ತಾರೆ. ಇದೀಗ ಕೇರಳದ ಅಪರೂಪದ ಜಾಗವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹೌದು 'ಅವಳ್ ಪಾಂಡಿ' (Aval Paandi) ಎಂಬ ಪ್ರದೇಶದಲ್ಲಿ ಪಿಂಕ್ ನದಿಯೊಂದು (Pink River) ಹರಿಯುತ್ತಿದ್ದು ಇದು ಪ್ರವಾಸಿಗಳ ಗಮನ ಸೆಳೆಯುತ್ತಿದೆ. ಈ ಬಗ್ಗೆ ಖ್ಯಾತ ಉದ್ಯಮಿ ಆನಂದ ಮಹಿಂದ್ರಾ (Anand Mahindra) ಕೂಡ ತಮ್ಮ ಟ್ವಿಟ್ಟರ್ (Tweeter) ಖಾತೆಯಲ್ಲಿ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ ಕೂಡ.

  I’m not surprised to hear that tourists are flocking to the village. It lifts my spirits & sense of optimism just looking at this photo. I’m making this my new screensaver and naming it the “River of Hope.” https://t.co/iFAF7bQZS3

  — anand mahindra (@anandmahindra) June 7, 2022

  ಈ ಅದ್ಭುತ ಸೌಂದರ್ಯದ ಚಿತ್ರವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಮಹೀಂದ್ರಾ, “ಪ್ರವಾಸಿಗರು ಗ್ರಾಮಕ್ಕೆ ಆಗಮಿಸುತ್ತಿದ್ದಾರೆ ಎಂದು ಕೇಳಿ ನನಗೆ ಆಶ್ಚರ್ಯವಾಗುವುದಿಲ್ಲ. ಈ ಫೋಟೋವನ್ನು ನೋಡಿದರೆ ಇದು ನನ್ನ ಉತ್ಸಾಹವನ್ನೇ ಹೆಚ್ಚಿಸುತ್ತದೆ. ನಾನು ಇದನ್ನು ನನ್ನ ಹೊಸ ಸ್ಕ್ರೀನ್ ಸೇವರ್ ಮಾಡುತ್ತಿದ್ದೇನೆ ಮತ್ತು ಅದಕ್ಕೆ “ಭರವಸೆಯ ನದಿ” ( River of Hope)ಎಂದು ಹೆಸರಿಸುತ್ತಿದ್ದೇನೆ.

  ಇದನ್ನೂ ಓದಿ: Deep Sea Fish: ಆಳ ಸಮುದ್ರದ ಮೀನಿನ ಫೋಟೋ ವೈರಲ್! ನೋಡಿ ನೆಟ್ಟಿಗರು ಹೆದರಿಕೊಂಡಿದ್ದೇಕೆ?

  ಈ ನದಿಯ ವಿಶೇಷತೆ ಏನು?

  ಸಾಮಾನ್ಯವಾಗಿ ನದಿಗಳು ಎಂದರೆ ಸಂಪೂರ್ಣ ತಿಳಿನೀರಿನಿಂದ ಕೂಡಿರುತ್ತದೆ ಅಲ್ಲವೇ? ಕೇವಲ ಮಳೆ ಬಂದಾಗ ಮಾತ್ರ ನೀರಿಗೆ ಮಣ್ಣು ಸೇರಿಕೊಂಡು ನೀರಿನ ಬಣ್ಣ ಕೆಂಪಾಗುತ್ತವೆ. ಆದರೆ ಕೇರಳದ ಕೋಝಿಕೋಡ್ ನಲ್ಲಿರುವ ನದಿ ಒಂದು ಸಂಪೂರ್ಣ ಗುಲಾಬಿ ಬಣ್ಣಕ್ಕೆ ತಿರುಗಿದೆ. ಇದು ಅವಳ್ ಪಾಂಡಿ ಅಲ್ಲಿರುವ ಒಂದು ಅದ್ಭುತ ನದಿಯು ಈಗ ಪ್ರವಾಸಿಗರ ಮನ ಗೆಲ್ಲುತ್ತಿದೆ.

  ಮುಲ್ಲನ್ ಪಾಯಲ್ ಎಂಬ ಪಿಂಕ್ ಹೂಗಳ ಸೊಬಗು ಈ ರೀತಿ ಇದೆ

  ನದಿ ಪಿಂಕ್ ಬಣ್ಣಕ್ಕೆ ತಿರುಗಲು ಕಾರಣ ಅಲ್ಲಿ ಹರಿಯುತ್ತಿರುವ ನೀರಲ್ಲ. ಬದಲಾಗಿ ಪಿಂಕ್ ಬಣ್ಣದ ಹೂಗಳು. ಹೌದು ಈ ಸಸ್ಯವು ಕೇರಳದಲ್ಲಿ ಹುಟ್ಟಿಕೊಂಡದ್ದಲ್ಲ. ಇದು ದೂರದ ದಕ್ಷಿಣ ಅಮೆರಿಕದ ಒಂದು ಸಸ್ಯವಾಗಿದೆ. ಸ್ಥಳೀಯವಾಗಿ ಈ ಹೂವುಗಳು ‘ಮುಲ್ಲನ್ ಪಾಯಲ್’ ಎಂದು ಕರೆಯಲ್ಪಡುತ್ತದೆ ಆದರೆ ಈ ಸಸ್ಯ ಕೇರಳಕ್ಕೆ ಬಂದು ಹೇಗೆ ಹುಟ್ಟಿಕೊಂಡಿತು ಎಂದು ಯಾರಿಗೂ ತಿಳಿದಿಲ್ಲ. ಆಕಸ್ಮಿಕವಾಗಿ ಗಿಡ ನದಿಗೆ ಸೇರಿರಬಹುದು, ಇಲ್ಲವೇ ಸ್ಥಳೀಯರು ಗಿಡವನ್ನು ನದಿಗೆ ತಪ್ಪಿ ಎಸೆದಿರಬಹುದು ಎಂದು ಹೇಳಲಾಗುತ್ತಿದೆ. ಸಂಪೂರ್ಣ ಪಿಂಕ್ ಬಣ್ಣಕ್ಕೆ ತಿರುಗಿರುವ ನದಿಯನ್ನು ನೋಡಲು ದೇಶ-ವಿದೇಶದಿಂದ ಜನರು ಕೇರಳಕ್ಕೆ ಆಗಮಿಸುತ್ತಿದ್ದಾರೆ. ಅವಳ್ ಪಿಂಡಿಗೆ ಆಗಮಿಸುತ್ತಿರುವ ಪ್ರವಾಸಿಗರ ಸಮಖ್ಯೆ ದಿಢೀರ್ ಹೆಚ್ಚಳವಾಗಿರುವುದು ಪ್ರವಾಸೋದ್ಯಮಕ್ಕೂ ಖುಷಿಯನ್ನುಂಟು ಮಾಡಿದೆ.

  ಇದನ್ನೂ ಓದಿ: Parking: ಈ ಪ್ರೀಸ್ಕೂಲ್ ಪಾರ್ಕಿಂಗ್ ಒಮ್ಮೆ ನೋಡಿ! ಎಷ್ಟು ಚೆನ್ನಾಗಿದೆ ಅಲ್ವಾ?

  ಇದು ಬೆಳೆಯಲು ದೊಡ್ಡ ಪ್ರಮಾಣದ ಆಮ್ಲಜನಕದ ಅಗತ್ಯವಿದೆ

  “ಈ ಸಸ್ಯಗಳು ರಾಜ್ಯದಾದ್ಯಂತ ಜಲಮೂಲಗಳಲ್ಲಿ ಹರಡುತ್ತದೆ, ಅವುಗಳನ್ನು ಉಸಿರುಗಟ್ಟಿಸುತ್ತದೆ ಮತ್ತು ಒಳಚರಂಡಿ ಕಾಲುವೆಗಳನ್ನು ಉಸಿರುಗಟ್ಟಿಸುತ್ತದೆ. ಇದು ಬೆಳೆಯಲು ದೊಡ್ಡ ಪ್ರಮಾಣದ ಆಮ್ಲಜನಕದ ಅಗತ್ಯವಿದೆ ಮತ್ತು ಅದು ಸಿಹಿನೀರಿನ ಜೀವವೈವಿಧ್ಯತೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ನೀರಿನ ಗುಣಮಟ್ಟದ ಮೇಲೂ ಪರಿಣಾಮ ಬೀರಲಿದೆ’ ಎಂದು ಕೇರಳದ ಅರಣ್ಯ ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಟಿವಿ ಸಜೀವ್ ಅವರು ಹೇಳಿದ್ದಾರೆ.
  Published by:Swathi Nayak
  First published: