Anand Mahindra: ತಮಿಳುನಾಡಿನ ಇಡ್ಲಿ ಅಮ್ಮನಿಗೆ ಮನೆ ಹಸ್ತಾಂತರಿಸುವ ಮೂಲಕ ಭರವಸೆ ಈಡೇರಿಸಿದ ಆನಂದ್ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ತಮಿಳುನಾಡಿನ ಇಡ್ಲಿ ಅಮ್ಮನಿಗೆ ಮನೆಯನ್ನು ಉಡುಗೊರೆಯಾಗಿ ನೀಡುವ ಭರವಸೆಯನ್ನು ಈಡೇರಿಸಿದ್ದಾರೆ.

ಆನಂದ್ ಮಹೀಂದ್ರ

ಆನಂದ್ ಮಹೀಂದ್ರ

 • Share this:
  ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ (Anand Mahindra) ತಮಿಳುನಾಡಿನ ಇಡ್ಲಿ ಅಮ್ಮನಿಗೆ ಮನೆಯನ್ನು (Idli Amma) ಉಡುಗೊರೆಯಾಗಿ ನೀಡುವ ಭರವಸೆಯನ್ನು ಈಡೇರಿಸಿದ್ದಾರೆ. ಈ ಮೂಲಕ ಮತ್ತೆ ಜನರ ಮೆಚ್ಚುಗೆಗೆ ಮಹೀಂದ್ರಾ ಪಾತ್ರರಾಗಿದ್ದಾರೆ. 2021ರ ಏಪ್ರಿಲ್‌ನಲ್ಲಿ ಟ್ವೀಟ್‌ (Tweet) ವೊಂದನ್ನು ಹಂಚಿಕೊಂಡಿದ್ದ ಮಹೀಂದ್ರಾ, ಜನರಿಗೆ ಅವರ ಪ್ರಸಿದ್ಧ ಮನೆ-ಬೇಯಿಸಿದ ಆಹಾರವನ್ನು ಬಡಿಸಲು ಇಡ್ಲಿ ಅಮ್ಮಾ ಶೀಘ್ರದಲ್ಲೇ ತಮ್ಮ ಸ್ವಂತ ಮನೆ (Own House) ಯನ್ನು ಪಡೆಯಲಿದ್ದಾರೆ ಎಂದು ತಿಳಿಸಿದ್ದರು. ಈಗ ಆ ಭರವಸೆಯನ್ನು ಮಹೀಂದ್ರ ಈಡೇರಿಸಿದ್ದಾರೆ. ಈ ಮೂಲಕ ಮತ್ತೆ ಜನರ ಮೆಚ್ಚುಗೆಗೆ ಮಹೀಂದ್ರಾ ಪಾತ್ರರಾಗಿದ್ದಾರೆ. 

  ತಾಯಂದಿರ ದಿನದಂದು ಇಡ್ಲಿ ಅಮ್ಮನಿಗೆ ಉಡುಗೊರೆ

  ಇಂದು ತಾಯಂದಿರ ದಿನದಂದು, ಇಡ್ಲಿ ಅಮ್ಮ ತನ್ನ ಹೊಸ ಮನೆಗೆ ಪ್ರವೇಶಿಸುತ್ತಿರುವುದನ್ನು ತೋರಿಸುವ ವೀಡಿಯೊವೊಂದನ್ನು ಆನಂದ್‌ ಮಹೀಂದ್ರಾ ಹಂಚಿಕೊಂಡಿದ್ದಾರೆ. “

  ಇದನ್ನೂ ಓದಿ: Anand Mahindra: ಭಾರತೀಯ ವಿದ್ಯಾರ್ಥಿಗಳಿಗೆ ಮೆಡಿಕಲ್ ಕಾಲೇಜು ಪ್ರಾರಂಭಿಸುತ್ತಾರಂತೆ ಆನಂದ್ ಮಹೀಂದ್ರಾ..!

  ತಾಯಂದಿರ ದಿನದಂದು ಇಡ್ಲಿ ಅಮ್ಮನಿಗೆ ಉಡುಗೊರೆಯಾಗಿ ನೀಡಲು ಸಮಯಕ್ಕೆ ಸರಿಯಾಗಿ ಮನೆಯ ನಿರ್ಮಾಣವನ್ನು ಪೂರ್ಣಗೊಳಿಸಿದ್ದಕ್ಕಾಗಿ ನಮ್ಮ ತಂಡಕ್ಕೆ ಅಪಾರ ಕೃತಜ್ಞತೆಗಳು. ಅವಳು ತಾಯಿಯ ಸದ್ಗುಣಗಳ ಸಾಕಾರ: ಪೋಷಣೆ, ಕಾಳಜಿ ಮತ್ತು ನಿಸ್ವಾರ್ಥಳು. ಅವಳನ್ನು ಮತ್ತು ಅವಳ ಕೆಲಸವನ್ನು ಬೆಂಬಲಿಸಲು ಸಂತೋಷವೆನಿಸುತ್ತಿದೆ. ನಿಮ್ಮೆಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು! ” ಎಂದು ಮಹೀಂದ್ರಾ ಟ್ವೀಟ್‌ ಮಾಡಿದ್ದಾರೆ.

  Immense gratitude to our team for completing the construction of the house in time to gift it to Idli Amma on #MothersDay She’s the embodiment of a Mother’s virtues: nurturing, caring & selfless. A privilege to be able to support her & her work. Happy Mother’s Day to you all! pic.twitter.com/LgfR2UIfnm

  — anand mahindra (@anandmahindra) May 8, 2022

  ಕಮಲಾತಾಲ್ ಎಂದು ಕರೆಯಲ್ಪಡುವ ಇಡ್ಲಿ ಅಮ್ಮ ತಮಿಳುನಾಡಿನ ಪೆರು ಬಳಿಯ ವಡಿವೇಲಂಪಾಳ್ಯಂ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಅವರು ಸುಮಾರು 37 ವರ್ಷಗಳಿಂದ ಕೇವಲ 1 ರೂಪಾಯಿಗೆ ಸಾಂಬಾರ್ ಮತ್ತು ಚಟ್ನಿಯೊಂದಿಗೆ ಇಡ್ಲಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಆಕೆಯ ಕಥೆಯು 2019 ರಲ್ಲಿ ವೈರಲ್ ಆಗಿತ್ತು. ಈ ವೇಳೆ ಆನಂದ್ ಮಹೀಂದ್ರಾ ತಮ್ಮ ಬೆಂಬಲ ಸೂಚಿಸಿ ಮತ್ತು ವ್ಯವಹಾರದಲ್ಲಿ 'ಹೂಡಿಕೆ' ಮಾಡಲು ಸಂತೋಷಪಡುತ್ತೇನೆ ಎಂದು ಹೇಳಿದ್ದರು.

  ಇದನ್ನೂ ಓದಿ: Viral Video: ಮ್ಯಾರಥಾನ್​ನಲ್ಲಿ ಓಡಿದ ಬಾತುಕೋಳಿ, ವೈರಲ್ ವಿಡಿಯೋಗೆ ನೆಟ್ಟಿಗರು ಫಿದಾ!

  2021ರ ಏಪ್ರಿಲ್‌ನಲ್ಲಿ ಟ್ವೀಟ್‌ವೊಂದನ್ನು ಹಂಚಿಕೊಂಡಿದ್ದ ಮಹೀಂದ್ರಾ, ಜನರಿಗೆ ಅವರ ಪ್ರಸಿದ್ಧ ಮನೆ-ಬೇಯಿಸಿದ ಆಹಾರವನ್ನು ಬಡಿಸಲು ಇಡ್ಲಿ ಅಮ್ಮಾ ಶೀಘ್ರದಲ್ಲೇ ತಮ್ಮ ಸ್ವಂತ ಮನೆಯನ್ನು ಪಡೆಯಲಿದ್ದಾರೆ ಎಂದು ತಿಳಿಸಿದ್ದರು. ಈಗ ಆ ಭರವಸೆಯನ್ನು ಮಹೀಂದ್ರ ಈಡೇರಿಸಿದ್ದಾರೆ.

  This planet has a few good people too, that's why we still have rains. I don't know why, Ananji touches my heart and brings tears too...

  Thank you, Anandji... From Coimbatore...


  — Thiruvanchiam (@NirmalK79257900) May 8, 2022

  ತಾಯಂದಿರ ದಿನದಂದು ಮಹೀಂದ್ರಾ ಅವರ ಅದ್ಭುತ ವೀಡಿಯೊದ ನಂತರ, ನೆಟ್ಟಿಗರು ಫುಲ್‌ ಫೀದಾ ಆಗಿದ್ದು ಕಮೆಂಟ್‌ಗಳ ಸುರಿಮಳೆಯೇ ಸುರಿದಿದ್ದಾರೆ.
  Published by:Swathi Nayak
  First published: