ಅನಕೊಂಡ ದೈತ್ಯ ಗಾತ್ರದ ಹಾವು. ಎಷ್ಟು ದೊಡ್ಡ ಗಾತ್ರದ ಪ್ರಾಣಿಯನ್ನಾದರು ನುಂಗಿ ಹಸಿವು ನೀಗಿಸಿಕೊಳ್ಳುವ ಸಾಮರ್ಥ್ಯ ಅದಕ್ಕಿದೆ. ಮನುಷ್ಯರನ್ನು, ದನ-ಕರು, ಜಿಂಕೆಯನ್ನು ತಿಂದ ಹಲವು ಘಟನೆಗಳು ಬೆಳಕಿವೆ ಬಂದಿದೆ. ಆದರೆ ಇದೀಗ ಬಲಿಷ್ಠವಾದ ಮೊಸಳೆಯನ್ನು ತಿನ್ನಲು ಹರಸಾಹಸ ಪಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮನೌಸ್ನ ಪೊಂಟಾ ನೇಗ್ರಾ ಸಮೀಪದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮೊಸಳೆಯನ್ನು ಸುತ್ತವರಿದು ಅದನ್ನು ತಿನ್ನಲು ಅನಕೊಂಡ ಪ್ರಯತ್ನಿಸುತ್ತಿದೆ. ಆದರೆ ಈ ಸಮಯದಲ್ಲಿ ಯಾರೋ ಅನಕೊಂಡ ಬಾಯಿಗೆ ಮೊಸಳೆ ಬಲಿಯಾಗುತ್ತಿರುವುದನ್ನು ನೋಡಿದ್ದಾರೆ. ತಕ್ಷಣ ಮೊಸಳೆಯನ್ನು ಪ್ರಾಣ ರಕ್ಷಿಸಲು ಅನಕೊಂಡಕ್ಕೆ ಹಗ್ಗ ಕಟ್ಟಿದ್ದಾರೆ. ಮೊಸಳೆಯನ್ನು ಅದರ ಬಾಯಿಯಿಂದ ತಪ್ಪಿಸಲು ಪ್ರಯತ್ನ ಪಟ್ಟಿದ್ದಾರೆ.
ಈ ಘಟನೆ ಆಗಸ್ಟ್ 7 ರಂದು ನಡೆದಿದೆ. ಅಲ್ಲಿನ ಸ್ಥಳೀಯ ವೆಬ್ಸೈಟ್ವೊಂದು ಅನಕೊಂಡ ಮೊಸಳೆಯನ್ನು ಹಿಡಿದಿರುವ ವಿಡಿಯೋವನ್ನು ಪ್ರಕಟಿಸಿದೆ.
ಇನ್ನು ಘಟನೆ ನಡೆಯುವ ವೇಳೆ ಪ್ರತ್ಯಕ್ಷದರ್ಶಿಯಾಗಿ ವೀಕ್ಷಿಸುತ್ತಿದ್ದ ಡೆರ್ನಾಲ್ಡೋ ರೀಸ್ ಎಂಬವರು ದೃಶ್ಯದ ಬಗ್ಗೆ ವಿವರಿಸಿದ್ದಾರೆ. ನಾನು ಮನೆಗೆ ಬರುವ ವೇಳೆ ಅನಕೊಂಡ ಮೊಸಳೆಯನ್ನು ಹಿಡಿದು ನುಂಗಲು ಪ್ರಯತ್ನಿಸುತ್ತಿತ್ತು. ಅದರ ಸುತ್ತ ಒಂದಿಷ್ಟು ಜನ ಸೇರಿದ್ದರು. ಮೊಸಳೆಯನ್ನು ಹಾವಿನಿಂದ ರಕ್ಷಣೆ ಮಾಡುತ್ತಿದ್ದರು. ಕೊನೆಗೆ ದೊಡ್ಡ ಗಾತ್ರದ ಅನಕೊಂಡವನ್ನು ಬಿಡಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ ಎಂದರು.
Ê CAROÇO! 😳
Uma sucuri foi flagrada tentando engolir um jacaré na área de um condomínio na Ponta Negra. 🐍🐊 pic.twitter.com/d3JlCQm3Ey
— Manaus POP A 911🏳️🌈 (@manaus_pop) August 17, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ