• Home
 • »
 • News
 • »
 • trend
 • »
 • Robbery: ಜ್ಯುವೆಲ್ಲರಿ ಶಾಪ್‌ನಿಂದ 10 ಲಕ್ಷ ಬೆಲೆಯ ಚಿನ್ನದ ನೆಕ್ಲೆಸ್‌ ಕದ್ದ ವೃದ್ಧೆ! ಖತರ್ನಾಕ್‌ ಅಜ್ಜಿಯ ಕೈಚಳಕ ನೀವೇ ನೋಡಿ

Robbery: ಜ್ಯುವೆಲ್ಲರಿ ಶಾಪ್‌ನಿಂದ 10 ಲಕ್ಷ ಬೆಲೆಯ ಚಿನ್ನದ ನೆಕ್ಲೆಸ್‌ ಕದ್ದ ವೃದ್ಧೆ! ಖತರ್ನಾಕ್‌ ಅಜ್ಜಿಯ ಕೈಚಳಕ ನೀವೇ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎಷ್ಟೋ ಬಾರಿ ನಾವು ಈ ಚಿನ್ನ ತೊಗೋಬೇಕು ಅಂತ ಬಂಗಾರದಂಗಡಿಗೆ ಹೋದಾಗ ಅಲ್ಲಿ ಅನೇಕ ಮಹಿಳೆಯರು ಕೂತು ನಾನಾ ರೀತಿಯ ಒಡವೆಗಳನ್ನು ಕೈಯಲ್ಲಿ ಮುಟ್ಟಿ ನೋಡುತ್ತಿರುತ್ತಾರೆ. ಇಲ್ಲೋಂದು ಅಜ್ಜಿ ಅದೇರೀತಿ ಮುಟ್ಟಿ ಏನು ಮಾಡಿದ್ದಾರೆ ಗೊತ್ತಾ?

 • Share this:

  ಎಷ್ಟೋ ಬಾರಿ ನಾವು ಈ ಚಿನ್ನ (Gold) ತೊಗೋಬೇಕು ಅಂತ ಬಂಗಾರದಂಗಡಿಗೆ ಹೋದಾಗ ಅಲ್ಲಿ ಅನೇಕ ಮಹಿಳೆಯರು (Women's) ಕೂತು ನಾನಾ ರೀತಿಯ ಒಡವೆಗಳನ್ನು ಕೈಯಲ್ಲಿ ಮುಟ್ಟಿ ನೋಡುತ್ತಿರುತ್ತಾರೆ ಮತ್ತು ಅವರು ಅಂಗಡಿಯವರಿಗೆ ಒಡವೆ ಎಷ್ಟು ಗ್ರಾಂ ಇದೆ? ಇದರ ಬೆಲೆ ಎಷ್ಟು? ಇದು ಎಷ್ಟು ಕ್ಯಾರಟ್ ಬಂಗಾರದ್ದು ಅಂತೆಲ್ಲಾ ಕೇಳುವುದನ್ನು ನಾವು ನೋಡಿರುತ್ತೇವೆ. ತುಂಬಾ ಮುಖ್ಯವಾಗಿ ಬಂಗಾರದಂಗಡಿಯಲ್ಲಿ (Jewelry Shop) ತುಂಬಾ ಜನರು ಬಂದು ಹೋಗುವುದರಿಂದ ಮತ್ತು ಚಿನ್ನದ ಮಾರಾಟ (Gold Business) ಅಲ್ಲಿ ನಡೆಯುವುದರಿಂದ, ಬಂದ ಜನರ ಮೇಲೆ ತೀವ್ರವಾದ ನಿಗಾ ಇರಿಸಲು ಅನೇಕ ಸ್ಥಳಗಳಲ್ಲಿ ಅನೇಕ ರೀತಿಯ ಸಿಸಿಟಿವಿ (CCTV) ಕ್ಯಾಮೆರಾಗಳನ್ನು(Camera) ಸಹ ಅಳವಡಿಸಿರುತ್ತಾರೆ.


  ಎಷ್ಟೊಂದು ಸಿಸಿಟಿವಿ ಕ್ಯಾಮೆರಾಗಳನ್ನು ಬಂಗಾರದಂಗಡಿಯಲ್ಲಿ ಅಳವಡಿಸಿದ್ದರೂ ಸಹ ಆಗಾಗ್ಗೆ ಕಳ್ಳ ಖದೀಮರು ತಮ್ಮ ಕೈಚಳಕ ತೋರಿಸಿಯೇ ಬಿಟ್ಟಿರುತ್ತಾರೆ. ಎಂದರೆ ಚಿಕ್ಕ ಪುಟ್ಟ ಒಡವೆಗಳನ್ನು ತಮ್ಮ ಜೇಬಿಗೆ ಯಾರಿಗೂ ಗೊತ್ತಾಗದಂತೆ ಇಳಿಸಿರುತ್ತಾರೆ. ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ.


  ವೃದ್ದೆ ಚಿನ್ನದ ಆಭರಣವನ್ನು ಕದಿಯುವ ವೀಡಿಯೋ ಈಗ ವೈರಲ್


  ಉತ್ತರ ಪ್ರದೇಶದ ಅಂಗಡಿಯಲ್ಲಿ ವೃದ್ಧ ಮಹಿಳೆಯೊಬ್ಬರು ಯಾರಿಗೂ ಗೊತ್ತಾಗದಂತೆ ಚಿನ್ನದ ಆಭರಣಗಳನ್ನು ಕದಿಯುವ ಒಂದು ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವರದಿಗಳ ಪ್ರಕಾರ, ವೃದ್ದೆ ಕದ್ದಿರುವ ಚಿನ್ನದ ಹಾರದ ಬೆಲೆ ಸುಮಾರು 10 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ.


  An old woman stole a gold necklace worth 10 lakhs from a jewelery shop! See for yourself the skill of Khatarnak's grandmother
  ಸಾಂದರ್ಭಿಕ ಚಿತ್ರ


  ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಇನ್ನೂ ಹೆಸರು ಗುರುತಿಸದ ವೃದ್ದ ಮಹಿಳೆಯೊಬ್ಬಳು ತನ್ನ ಹಸಿರು ಸೀರೆಯ ಮಡಿಕೆಗಳ ಕೆಳಗೆ ಆಭರಣ ಪೆಟ್ಟಿಗೆಯನ್ನು ಚಾಣಾಕ್ಷತನದಿಂದ ಮರೆಮಾಚುವ ಮೊದಲು ಅಂಗಡಿಯಲ್ಲಿ ಚಿನ್ನದ ನೆಕ್ಲೇಸ್ ಗಳನ್ನು ಹಾಗೆಯೇ ಪರಿಶೀಲಿಸುತ್ತಿರುವುದನ್ನು ನಾವು ನೋಡಬಹುದು. ನಂತರ ಅಂಗಡಿಯ ಉದ್ಯೋಗಿಗಳಿಗೆ ಕಳ್ಳತನದ ಬಗ್ಗೆ ಯಾವುದೇ ಅನುಮಾನ ಬರಬಾರದು ಅಂತ ಇನ್ನೂ ಬೇರೆ ಒಡವೆ ತೋರಿಸಿ ಅಂತ ಹೇಳಿದ್ದನು ಮತ್ತು ವೀಡಿಯೋದ ಕೊನೆಯಲ್ಲಿ ಹಾಗೆ ಬೇರೆ ಕಡೆ ನೋಡಿಕೊಂಡು ಬರುತ್ತೇನೆ ಅಂತ ಅಲ್ಲಿಂದ ಮೆಲ್ಲಗೆ ಎದ್ದು ಹೋದದ್ದನ್ನು ನಾವು ನೋಡಬಹುದು.


  1 ನಿಮಿಷ 35 ಸೆಕೆಂಡುಗಳ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಿನಿಂದಲೂ ಕ್ಲಿಪ್ 7,430 ವೀಕ್ಷಣೆಗಳನ್ನು ಮತ್ತು 600ಕ್ಕೂ ಹೆಚ್ಚು ಲೈಕ್ ಗಳನ್ನು ಸಹ ವೀಡಿಯೋ ಗಳಿಸಿದೆ. ವರದಿಗಳ ಪ್ರಕಾರ, ಗೋರಖ್‌ಪುರ್ ನಲ್ಲಿರುವ ಬಲದೇವ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ.


  ಬ್ಯಾಂಕ್ ಲೂಟಿ ಮಾಡಿದ ಗ್ಯಾಂಗ್ ನ ಸದಸ್ಯರನ್ನು ಬಂಧಿಸಿದ ಪೊಲೀಸರು


  ಇದೇ ರೀತಿಯ ಘಟನೆಯೊಂದು ಕಟ್ನಿ ಜಿಲ್ಲೆಯ ಬ್ಯಾಂಕ್ ನಲ್ಲಿ ನಡೆದಿತ್ತು. ಅಲ್ಲಿ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು 3.5 ಲಕ್ಷ ರೂಪಾಯಿ ನಗದನ್ನು ದೋಚಿದ ಬಿಹಾರದ ಗ್ಯಾಂಗ್ ನ ಇಬ್ಬರು ಸದಸ್ಯರನ್ನು ಮಧ್ಯಪ್ರದೇಶ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.


  ಬರ್ಗವಾನ್ ಪ್ರದೇಶದಲ್ಲಿರುವ ಚಿನ್ನಕ್ಕೆ ಸಾಲ ನೀಡುವ ಬ್ಯಾಂಕಿನಲ್ಲಿ ನುಗ್ಗಿದ್ದ ಆರು ಸದಸ್ಯರ ಗ್ಯಾಂಗ್ ಶನಿವಾರ ಬೆಲೆಬಾಳುವ ವಸ್ತುಗಳು ಮತ್ತು ನಗದನ್ನು ಅಲ್ಲಿದ್ದವರಿಗೆ ಬಂದೂಕು ತೋರಿಸಿ ಲೂಟಿ ಮಾಡಿಕೊಂಡು ಹೋಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


  ಪಾಟ್ನಾ ನಿವಾಸಿ ಸುಭಮ್ ತಿವಾರಿ (24) ಮತ್ತು ಬಕ್ಸಾರ್ ನಿವಾಸಿ ಅಂಕುಶ್ ಸಾಹು (25) ಎಂದು ಹೆಸರಿಸಲಾದ ಇಬ್ಬರು ವ್ಯಕ್ತಿಗಳನ್ನು ಆ ಜಿಲ್ಲೆಯ ಪೊಲೀಸರ ಸಹಾಯದಿಂದ ಮಾಂಡ್ಲಾದಿಂದ ಭಾನುವಾರ ಬಂಧಿಸಿದ್ದೇವೆ ಎಂದು ಕಟ್ನಿ ಪೊಲೀಸ್ ಅಧೀಕ್ಷಕ ಎಸ್.ಕೆ.ಜೈನ್ ಸುದ್ದಿ ಸಂಸ್ಥೆಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.


  ಇದನ್ನೂ ಓದಿ: Robot: ರಜನಿಕಾಂತ್‌ರ ರೋಬೋ ಸಿನಿಮಾ ಏನೂ ಅಲ್ಲ, ಅದಕ್ಕಿಂತಲೂ ಸೂಪರ್ ಆಗಿ ಕೆಲ್ಸ ಮಾಡುತ್ತೆ ಈ ರೋಬೋ!


  "ಅವರು ಈ ವಿಚಾರಣೆಯಲ್ಲಿ ನಮ್ಮ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ಅವರ ಹೆಸರುಗಳನ್ನು ಪರಿಶೀಲಿಸುತ್ತಿದ್ದೇವೆ. ಅವರ ದಾಖಲೆಗಳನ್ನು ಪರಿಶೀಲಿಸಲು ಪೊಲೀಸ್ ತಂಡವನ್ನು ಪಾಟ್ನಾಗೆ ಸಹ ಕಳುಹಿಸಲಾಗಿದೆ" ಎಂದು ಹೇಳಿದರು. ಗ್ಯಾಂಗ್ ನ ಇತರ ನಾಲ್ವರು ಸದಸ್ಯರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

  Published by:Gowtham K
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು