ಈಗಂತೂ ಎಲ್ಲಾದರೂ ಸ್ವಲ್ಪ ಸ್ಥಳ (Place) ಸಿಕ್ಕರೆ ಸಾಕು, ಅಲ್ಲಿ ಒಂದು ಚಿಕ್ಕ ಮನೆ (Small House) ಕಟ್ಟಿಕೊಂಡು ಇದ್ದರೆ ಯಾರು ಕೇಳುವುದಕ್ಕೆ ಬರುವುದಿಲ್ಲ ಮತ್ತು ಯಾರು ನಮ್ಮನ್ನು ಆ ಸ್ಥಳದಿಂದ ಓಡಿಸುವುದಿಲ್ಲ ಅಂತ ಹೇಳಿ ಬೇರೆಯವರ ಸ್ಥಳವನ್ನು ಕಬಳಿಸುವ ಜನರು ತುಂಬಾನೇ ಜಾಸ್ತಿಯಾಗಿದ್ದಾರೆ ಅಂತ ಹೇಳಬಹುದು. ಅಷ್ಟೇಕೆ ಸ್ವಂತ ಒಡ ಹುಟ್ಟಿದವರೆ ಒಂದು ಅಡಿ ಜಾಗಕ್ಕೂ (Property) ಒಳ್ಳೆ ವೈರಿಗಳಂತೆ (Enemy) ಕಚ್ಚಾಡುವುದನ್ನು ನಾವು ನೋಡಿರುತ್ತೇವೆ. ಸ್ವಲ್ಪ ಸ್ಥಳಕ್ಕಾಗಿಯೇ ಅನೇಕ ಅಹಿತಕರ ಘಟನೆಗಳು ನಡೆಯುವುದನ್ನು ನಾವು ಸುದ್ದಿ ಮಾಧ್ಯಮದಲ್ಲಿ ಪ್ರತಿದಿನ ನೋಡುತ್ತಲೇ ಇರುತ್ತೇವೆ.
ಬಾಡಿಗೆಗೆ ಇದ್ದವರಿಗೆ ಮನೆ ಬಿಟ್ಟುಕೊಟ್ಟ ವೃದ್ದೆ
ಇಂತಹ ಜನರ ಮಧ್ಯೆ ತುಂಬಾನೇ ಅಪರೂಪವೆಂಬಂತೆ ಕೇರಳದ ಒಬ್ಬ ವೃದ್ದೆ ತನ್ನ ಮನೆಯಲ್ಲಿ ತುಂಬಾನೇ ವರ್ಷಗಳಿಂದ ಬಾಡಿಗೆಗೆ ಇದ್ದ ಕುಟುಂಬಕ್ಕೆ ಆಕೆಯ ಮನೆಯನ್ನು ಮತ್ತು ಆಕೆಯ ಬಳಿ ಇದ್ದ 7 ಸೆಂಟ್ ಭೂಮಿಯನ್ನು ಸಹ ತನ್ನ ಇಚ್ಛೆಯಿಂದ ಅವರಿಗಾಗಿ ಬಿಟ್ಟು ಕೊಟ್ಟಿದ್ದಾರೆ ನೋಡಿ. ಹೌದು.. ಪಥನಂತಿಟ್ಟದಲ್ಲಿ ವೃದ್ದೆಯೊಬ್ಬರು ಅನೇಕ ವರ್ಷಗಳ ಹಿಂದೆ ತನ್ನ ಮನೆಯಲ್ಲಿ ಬಾಡಿಗೆದಾರರಾಗಿ ವಾಸಿಸಲು ಪ್ರಾರಂಭಿಸಿದ ಒಂದು ಕುಟುಂಬಕ್ಕೆ ತನ್ನ ಮನೆ ಮತ್ತು 7 ಸೆಂಟ್ ಭೂಮಿಯನ್ನು ಸಹ ಬಿಟ್ಟುಕೊಟ್ಟಿದ್ದಾರೆ ಅಂತ ಹೇಳಿದರೆ ನೀವು ಒಂದು ಕ್ಷಣ ನಂಬಲಿಕ್ಕಿಲ್ಲ, ಆದರೆ ಇದು ನಿಜವಾಗಿ ನಡೆದ ಘಟನೆಯಾಗಿದೆ.
ನಿಸ್ವಾರ್ಥ ಪ್ರೀತಿಯ ಸಂಕೇತವಾಗಿ, 77 ವರ್ಷ ವಯಸ್ಸಿನ ಚುರಕ್ಕಾಡ್ ಚಂದ್ರಮತಿ ಅಮ್ಮ, 14 ವರ್ಷಗಳಿಂದ ತನ್ನ ಮನೆಯಲ್ಲಿ ತನ್ನ ಸ್ವಂತ ಒಡ ಹುಟ್ಟಿದವರಂತೆ ವಾಸಿಸುತ್ತಿದ್ದ ಮನ್ನಾಡಿ ಪಡಿಂಜರೆಕುನ್ನತೇತು ಸರಸ್ವತಿ ಅಮ್ಮಾಳ್ ಅವರಿಗೆ ತನ್ನ ಮನೆಯನ್ನು ಬಿಟ್ಟುಕೊಟ್ಟರು. ಸರಸ್ವತಿ ಅಮ್ಮಾಳ್ ಮತ್ತು ಅವರ ದಿವಂಗತ ಪತಿ ಜೋಸೆಫ್ ಅವರ ಮಗಳು ಪೊನ್ನು ಅವರ ಹೆಸರಿನಲ್ಲಿ ತನ್ನ ಆಸ್ತಿಯನ್ನು ಬರೆದು ಕೊಟ್ಟಿದ್ದಾರೆ. ಈಗ ಪೊನ್ನು ಈ ಆಸ್ತಿಗೆ ವಾರಸುದಾರರು ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಚಂದ್ರಮತಿ ಅವರ ಆರೈಕೆ ಮಾಡುತ್ತಿದ್ದ ಸರಸ್ವತಿ ಅಮ್ಮಾಳ್ ಕುಟುಂಬ
ಎರ್ನಾಕುಲಂ ಮೂಲದ ಜೋಸೆಫ್ ಮತ್ತು ಅವರ ಪತ್ನಿ ಸರಸ್ವತಿ ಅಮ್ಮಾಳ್ ಅವರು ತಮ್ಮ ಮಗಳು ಪೊನ್ನು ಕೇವಲ 4 ತಿಂಗಳ ಮಗುವಾಗಿದ್ದಾಗ ಚಂದ್ರಮತಿ ಅಮ್ಮನ ಮನೆಯಲ್ಲಿ 500 ರೂಪಾಯಿಗಳ ಬಾಡಿಗೆಗೆ ವಾಸಿಸಲು ಪ್ರಾರಂಭಿಸಿದರು. ನಂತರ, ಜೋಸೆಫ್ ನ ಆರ್ಥಿಕ ತೊಂದರೆಗಳನ್ನು ಅರ್ಥಮಾಡಿಕೊಂಡ ಚಂದ್ರಮತಿ ಅಮ್ಮ ಬಾಡಿಗೆಯನ್ನು ತೆಗೆದುಕೊಳ್ಳದೆ ಇರುವುದಕ್ಕೂ ನಿರ್ಧರಿಸಿದರು. ಅಷ್ಟೊತ್ತಿಗಾಗಲೇ, ಜೋಸೆಫ್ ಮತ್ತು ಅವನ ಕುಟುಂಬವು ಚಂದ್ರಮತಿ ಅವರಿಗೆ ಬೆಂಬಲವಾಗಿ ಮತ್ತು ಅವರ ಆರೈಕೆಯನ್ನು ಮಾಡಲು ಶುರು ಮಾಡಿದ್ದರು. ಆದರೆ ಜೋಸೆಫ್ ನಾಲ್ಕು ವರ್ಷಗಳ ಹಿಂದೆ ನಿಧನರಾದರು.
ಇದನ್ನೂ ಓದಿ: Lottery Results: ಅಮ್ಮನ ಮಾತು ಕೇಳಿ ಕೋಟ್ಯಾಧಿಪತಿಯಾದ! 6 ರೂ.ನಿಂದ ಕೋಟಿ ಒಡೆಯ
ಜೋಸೆಫ್ ಇದ್ದಕ್ಕಿದ್ದಂತೆ ನಿಧನರಾದಾಗ ಸರಸ್ವತಿ ಅಮ್ಮಾಳ್ ಅವರಿಗೆ ಮುಂದಿನ ಜೀವನ ಹೇಗೆ ಅಂತ ದೊಡ್ಡ ಪ್ರಶ್ನೆಯೊಂದು ಕಾಡುವುದಕ್ಕೆ ಶುರುವಾಯಿತು. ಇಂತಹ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಚಂದ್ರಮತಿ ಅಮ್ಮ ಅವರು ಇವರಿಗೆ ಸಹಾಯಹಸ್ತವನ್ನು ಚಾಚಿದರು ಎಂದು ಹೇಳಲಾಗುತ್ತಿದೆ.
7 ಸೆಂಟ್ ಭೂಮಿಯನ್ನು ಪೊನ್ನುವಿಗೆ ಬಿಟ್ಟುಕೊಡಲು ನಿರ್ಧಾರ
ಚಂದ್ರಮತಿ ಅಮ್ಮ ಸರಸ್ವತಿ ಅಮ್ಮಾಳ್ ಮತ್ತು ಪೊನ್ನು ಅವರನ್ನು ತಮ್ಮ ಮನೆಯಲ್ಲಿಯೇ ಇರಿಸಿಕೊಂಡರು. ತನ್ನ ವಯಸ್ಸಿನಲ್ಲಿ ಅಂತಹ ಒಂದು ಕುಟುಂಬವು ಅವಳಿಗೆ ಹೊರೆಯಾಗುವುದಿಲ್ಲವೇ ಎಂಬ ಪ್ರಶ್ನೆಯನ್ನು ಸಹ ಅವಳು ತಲೆಯಿಂದ ತೆಗೆದು ಹಾಕಿದಳು. ಚಂದ್ರಮತಿ ಅಮ್ಮ ಇಷ್ಟು ವರ್ಷಗಳ ಕಾಲ ಪೊನ್ನುವಿನ ಆರೈಕೆ ಮಾಡುವ ತಾಯಿಯಾಗಿದ್ದರು.
ಇದನ್ನೂ ಓದಿ: 7 ವರ್ಷದ ಬಾಲಕ Zomato ಡೆಲಿವರಿ ಬಾಯ್, ವಿಡಿಯೋದಲ್ಲಿ ಬಯಲಾಯ್ತು ನೋವಿನ ಕತೆ!
ಚಂದ್ರಮತಿ ಅಮ್ಮ "ತನ್ನ ಮನೆ ಮತ್ತು 7 ಸೆಂಟ್ ಭೂಮಿಯನ್ನು ಪೊನ್ನುವಿಗೆ ಬಿಟ್ಟು ಕೊಡಲು ನಿರ್ಧರಿಸಿದ್ದೇನೆ, ನನ್ನೊಂದಿಗೆ ಹಲವಾರು ವರ್ಷಗಳ ಕಾಲ ತನ್ನ ಸ್ವಂತ ಬಂಧುಗಳಿಗಿಂತಲೂ ಹೆಚ್ಚಾಗಿ ಪ್ರೀತಿಸಿದ ಮತ್ತು ನನ್ನೊಡನೆ ವಾಸಿಸುತ್ತಿದ್ದ ಕುಟುಂಬವು ಬೇರೆ ಕಡೆಗೆ ಹೋಗಲು ಸ್ಥಳವಿಲ್ಲದೆ ಬೀದಿಗಳಲ್ಲಿ ಇರಬೇಕಾಗಿಲ್ಲ ಎಂದು ಹೀಗೆ ಮಾಡಿದೆ” ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ