Dog Lover: ನಿತ್ಯ 120 ನಾಯಿಗಳಿಗೆ ಅಡುಗೆ ಮಾಡಿ ಬಡಿಸುತ್ತಾರೆ 90ರ ವೃದ್ದೆ! ವಿಡಿಯೋ ವೈರಲ್

ಅಕ್ಕರೆಗಾಗಿ ಹಾತೊರೆಯುವ ನಿರ್ಗತಿಕ ಬೀದಿ ನಾಯಿಗಳಿಗೆ ಪರಿಶುದ್ಧ ಮತ್ತು ನಿಷ್ಕಲ್ಮಶವಾದ ಪ್ರೀತಿ ಮತ್ತು ಅನುಕಂಪವನ್ನು ತೋರಿಸುವ ವರ್ಗವದು. ಅಂತಹ ಶ್ವಾನ ಪ್ರೀಯರ ವರ್ಗಕ್ಕೆ ಸೇರಿದ 90 ವರ್ಷ ವಯಸ್ಸಿನ ವೃದ್ಧೆಯೊಬ್ಬರ ವಿಡಿಯೋವೊಂದು ಇನ್‍ಸ್ಟಾಗ್ರಾಂನಲ್ಲಿ ನೆಟ್ಟಿಗರ ಹೃದಯವನ್ನು ಗೆಲ್ಲುತ್ತಿದೆ.

ಬೀದಿ ನಾಯಿಗಳಿಗೆ ಆಹಾರ ನೀಡುವ ವೃದ್ದೆ

ಬೀದಿ ನಾಯಿಗಳಿಗೆ ಆಹಾರ ನೀಡುವ ವೃದ್ದೆ

  • Share this:
ಬೀದಿ ನಾಯಿಗಳನ್ನು (Street Dogs) ಕಂಡರೆ ಭಯವಾಗುತ್ತದೆ, ಅವು ಸಾರ್ವಜನಿಕರ (Public) ಮೇಲೆ ಆಕ್ರಮಣ ಮಾಡಿರುವ ಸುದ್ದಿಗಳನ್ನು ಕೇಳಿ ದಿಗಿಲಾಗುತ್ತದೆ ಎಂದು ಅವುಗಳಿಂದ ದೂರ ಇರುವ ಮತ್ತು ವಿನಾ ಕಾರಣ ಅವುಗಳಿಗೆ ಕಲ್ಲು ಹೊಡೆದು ನೋಯಿಸುವ ಮಂದಿ ಒಂದೆಡೆಯಾದರೆ, ಇನ್ನು ಕೆಲವರು ಅವುಗಳನ್ನು ನಡೆಸಿಕೊಳ್ಳುವ ರೀತಿಯೇ ಬೇರೆ. ಅಕ್ಕರೆಗಾಗಿ ಹಾತೊರೆಯುವ ನಿರ್ಗತಿಕ ಬೀದಿ ನಾಯಿಗಳಿಗೆ ಪರಿಶುದ್ಧ ಮತ್ತು ನಿಷ್ಕಲ್ಮಶವಾದ ಪ್ರೀತಿ (Love) ಮತ್ತು ಅನುಕಂಪವನ್ನು (Compassion) ತೋರಿಸುವ ವರ್ಗವದು. ಅಂತಹ ಶ್ವಾನ ಪ್ರೀಯರ ವರ್ಗಕ್ಕೆ ಸೇರಿದ 90 ವರ್ಷ ವಯಸ್ಸಿನ ವೃದ್ಧೆಯೊಬ್ಬರ (Old Woman) ವಿಡಿಯೋವೊಂದು ಇನ್‍ಸ್ಟಾಗ್ರಾಂನಲ್ಲಿ ನೆಟ್ಟಿಗರ ಹೃದಯವನ್ನು ಗೆಲ್ಲುತ್ತಿದೆ.

ಬೀದಿ ನಾಯಿಗಳಿಗೆ ಆಹಾರ ನೀಡುವ ಮುದುಕಿ 
ಆ ಕರುಣಾಮಯಿ ಅಜ್ಜಿ ಏನು ಮಾಡುತ್ತಾರೆ ಗೊತ್ತೆ? ನಿತ್ಯವೂ ಬೀದಿ ನಾಯಿಗಳಿಗಾಗಿ ಅಡುಗೆ ಮಾಡಿ, ನೀಡುತ್ತಾರೆ. ಆ ಹಿರಿಯ ಜೀವ , ಬೀದಿ ನಾಯಿಗಳಿಗೆ ಊಟ ಹಾಕುತ್ತಿರುವ ವಿಡೀಯೋವನ್ನು , ಇನ್‍ಸ್ಟಾಗ್ರಾಂನ ಪಾವ್ಸ್‍ಇನ್‍ಪಡಲ್ ಎಂಬ ಹೆಸರಿನ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಒಂದು ವಾರದ ಹಿಂದೆ ಪೋಸ್ಟ್ ಮಾಡಲಾಗಿರುವ ಈ ವಿಡಿಯೋವನ್ನು ಈಗಾಗಲೇ ಸುಮಾರು 1.42 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ವೈರಲ್ ಆದ ವಿಡಿಯೋದಲ್ಲಿ ಏನಿದೆ
ಈ ವಿಡಿಯೋ ವೃದ್ಧೆಯೊಬ್ಬರು ತಮ್ಮ ಅಡುಗೆ ಮನೆಯಲ್ಲಿ ಬಿರಿಯಾನಿಯನ್ನು ತಯಾರಿಸುವ ದೃಶ್ಯದೊಂದಿದೆ ಆರಂಭವಾಗುತ್ತದೆ. ಬೀದಿ ನಾಯಿಗಳಿಗಾಗಿ ಮಾಡಿದ ಅಡುಗೆಯನ್ನು , ಸ್ವತಃ ಅವುಗಳಿಗೆ ಅಜ್ಜಿಯೇ ನೀಡಲಿ ಎಂದು, ಪ್ರಥಮ ಬಾರಿಗೆ ಆಕೆಯ ಮೊಮ್ಮಗಳು ನಾಯಿಗಳಿರುವ ಜಾಗಕ್ಕೆ ಕರೆದುಕೊಂಡು ಹೋಗುವ ದೃಶ್ಯವನ್ನು ಕೂಡ ಈ ವಿಡಿಯೋದಲ್ಲಿ ಕಾಣಬಹುದು.
ಆ ಹಿರಿಯ ಮಹಿಳೆ ನಾಯಿಗಳಿಗೆ ಆಹಾರ ತಿನ್ನಿಸಲು ಹೊರಡಲು ತೋರುವ ಉತ್ಸಾಹವನ್ನು ಕಂಡಾಗ ನೋಡುಗರು ಮೆಚ್ಚದಿರಲು ಸಾಧ್ಯವಿಲ್ಲ. ಅಜ್ಜಿ ತಾನೇ ಸ್ವತಃ ಅಲ್ಲಿರುವ ಎಲ್ಲಾ ಬೀದಿ ನಾಯಿಗಳಿಗೆ ಆಹಾರ ನೀಡುವ ಮತ್ತು ಅವುಗಳ ತಲೆಯನ್ನು ಆಕ್ಕರೆಯಿಂದ ನೇವರಿಸುವ ದೃಶ್ಯವನ್ನು ಕೂಡ ವಿಡಿಯೋ ತೋರಿಸುತ್ತದೆ.

ವೃದ್ಧೆಗೆ ದೀರ್ಘಾಯಸ್ಸು ನೀಡಿದ್ದು ಪ್ರಾಣಿಗಳ ಪ್ರೀತಿಯಂತೆ
“ನನ್ನ 90 ವರ್ಷದ ಅಜ್ಜಿಗೆ ತೀವ್ರವಾದ ಆಸ್ಟಿಯೋಪೊರೋಸಿಸ್ ಇದ್ದು, ಹಲವಾರು ಮೇಜರ್ ಆಪರೇಶನ್‍ಗಳನ್ನು ಮಾಡಲಾಗಿದೆ. ಆಕೆ ಈ ಮಧ್ಯೆ ಹಾಸಿಗೆ ಹಿಡಿದ್ದರೂ, ಅವಳ ಮತ್ತು ನಾಯಿಗಳ ಪ್ರೀತಿಯ ಮಧ್ಯೆ ಏನನ್ನೂ ಬರಲು ಬಿಡಲಿಲ್ಲ. ಆಕೆ 120 ಕ್ಕಿಂತಲೂ ಹೆಚ್ಚು ನಾಯಿಗಳಿಗೆ ಅಡುಗೆ ಮಾಡಲು ಬೆಳಗ್ಗೆ 4.30 ಕ್ಕೆ ಏಳುತ್ತಾರೆ. ಹಾಗೂ ಆಕೆ ಅನೇಕ ವಿಧದ ಪಾಕ ಪ್ರಯೋಗಗಳನ್ನು ಮಾಡುತ್ತಾರೆ, ಏಕೆಂದರೆ, ತಾನು ಮಾಡಿದ ಎಲ್ಲವನ್ನು ಅವುಗಳು ಆನಂದದಿಂದ ತಿಂದಾಗ ಮಾತ್ರ ಆಕೆಯ ಹೃದಯ ತುಂಬುತ್ತದೆ.

ಇದನ್ನೂ ಓದಿ:  Penguins: ಜಪಾನ್ ನಲ್ಲಿರುವ ಈ ಪೆಂಗ್ವಿನ್‌ಗಳು ಬರೀ ದುಬಾರಿ ಮೀನು ಮಾತ್ರ ತಿನ್ನೋದಂತೆ, ಏನ್ ಲೆವೆಲ್ ನೋಡಿ ಇವುಗಳದ್ದು!

ಪ್ರತೀ ಬಾರಿ ನಾನು ಆಹಾರ ನೀಡಿ ಹಿಂದಿರುಗಿ ಬಂದ ನಂತರ, “ಇವತ್ತು ಎಲ್ಲರು ಚೆನ್ನಾಗಿ ತಿಂದ್ರಾ? ಎಲ್ಲರಿಗೂ ಇಷ್ಟವಾಯಿತಾ? “ ಎಂದು ಕೇಳುತ್ತಾರೆ. ಬಳಿಕ ನಾನು ಆಕೆಯ ಮುಖದಲ್ಲಿ ದೊಡ್ಡ ನಗುವನ್ನು ಮೂಡಿಸುವ ವಿಡಿಯೋಗಳನ್ನು ತೋರಿಸುತ್ತೇನೆ. ಇವತ್ತು ನಾನು ಮೊದಲ ಬಾರಿಗೆ ಆಕೆಯನ್ನು ನನ್ನೊಂದಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದೆ. ಆಕೆಯ ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಪಾಯಗಳಿದ್ದವು, ಆದರೆ ಆಕೆ , “ ಬೇರೆ ಯಾವ ಔಷಧಿಯೂ ಇಲ್ಲ, ಆದರೆ ನಾಯಿಯ ಪ್ರೀತಿ ಇದೆ, ಇವುಗಳ ಕಾರಣದಿಂದ ನನಗೆ ದೀರ್ಘಾಯಸ್ಸು ದೊರಕಿದೆ, ನಾನು ಮಾಡಬೇಕು, ಅವುಗಳು ತಿನ್ನಬೇಕು, ಕೇವಲ ಇಷ್ಟೇ ಖುಷಿ ಬೇಕಿದೆ ನನಗೆ” ಎಂದು ಹೇಳಿದರು.

ಇದನ್ನೂ ಓದಿ:  Cat And Kitten: ಬೆಕ್ಕಿನ ಮರಿಗಳ ಕ್ಯೂಟ್ ವಿಡಿಯೋ ಈಗ ಎಲ್ಲೆಡೆ ವೈರಲ್‌

ಮತ್ತೆ, ಆಕೆಯ ನಗುವನ್ನು ನೋಡಿ? ಇಷ್ಟು ವರ್ಷಗಳ ನಂತರ ಅವರು ಅವುಗಳನ್ನು ಸ್ಪರ್ಶಿಸುತ್ತಿರುವ ರೀತಿ? ಅವುಗಳ ಜೊತೆ ಆಕೆ ಮಾತಾಡುತ್ತಿರುವ ರೀತಿ? ನೀವು ಒಂದು ಸಮುದಾಯದ ಪ್ರಾಣಿಗಳಿಗೆ ಏಕೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲು ಸಾವಿರಾರು ಕಾರಣಗಳನ್ನು ಹೇಳುವ ಮುನ್ನ ದಯವಿಟ್ಟು ಇದನ್ನು ನೋಡಿ” ಎಂದು ಆ ವಿಡಿಯೋ ಜೊತೆ ವಿವರಣೆಯನ್ನು ಬರೆಯಲಾಗಿದೆ.

ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ 
ಈ ವಿಡಿಯೋಗೆ ಇದುವರೆಗೆ 7,500 ಲೈಕ್‍ಗಳು ಸಿಕ್ಕಿವೆ. ನೆಟ್ಟಿಗರು ಈ ನಿಸ್ವಾರ್ಥಿ ಅಜ್ಜಿಯನ್ನು ಮನಸಾರೆ ಹೊಗಳಿ ಪ್ರತಿಕ್ರಿಯೆಗಳನ್ನು ಬರೆದಿದ್ದಾರೆ. ಒಬ್ಬ ನೆಟ್ಟಿಗ “ದೇವರು ಆಕೆಯನ್ನು ಆಶೀರ್ವದಿಸುತ್ತಾರೆ , ಧನ್ಯವಾದಗಳು” ಎಂದು ಬರೆದಿದ್ದರೆ, ಇನ್ನೊಬ್ಬರು “ನಾನು ಇದಕ್ಕಿಂತ ಒಳ್ಳೆಯ ಪೋಸ್ಟನ್ನು ನೋಡೇ ಇಲ್ಲ “ ಎಂದು ಹೊಗಳಿದ್ದಾರೆ, ಸಾಕಷ್ಟು ಮಂದಿ ಹೃದಯದ ಇಮೋಜಿಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ.
Published by:Ashwini Prabhu
First published: