• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral News: ರಜೆ ದಿನ ಆಫೀಸ್‌ ಕೆಲ್ಸ ಮಾಡೋದೇ ಇಲ್ಲ ಅಂತ ಪಟ್ಟುಹಿಡಿದ ಉದ್ಯೋಗಿ! ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್

Viral News: ರಜೆ ದಿನ ಆಫೀಸ್‌ ಕೆಲ್ಸ ಮಾಡೋದೇ ಇಲ್ಲ ಅಂತ ಪಟ್ಟುಹಿಡಿದ ಉದ್ಯೋಗಿ! ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವು ಕಂಪನಿಗಳು ಕೆಲಸದ ಸಮಯ ಮುಗಿದು ಉದ್ಯೋಗಿ ಮನೆಗೆ ಹೋದರೂ ಸಹ ಅವರಿಗೆ ಕ್ಲೈಂಟ್ ಇದನ್ನ ಈಗಲೇ ಬೇಕು ಅಂತ ಕೇಳುತ್ತಾ ಇದ್ದಾರೆ ಅಂತ ಫೋನ್ ಮಾಡಿ ಮತ್ತು ಮೆಸೇಜ್ ಮಾಡಿ ತಲೆ ತಿನ್ನುತ್ತಾ ಇರುತ್ತಾರೆ. ಅದಕ್ಕೆ ಇಲ್ಲೊಬ್ರು ಏನು ಮಾಡಿದ್ದಾರೆ ನೋಡಿ.

  • Share this:

ಸಾಮಾನ್ಯವಾಗಿ ಕೆಲವು ದೊಡ್ಡ ದೊಡ್ಡ ಐಟಿ ಕಂಪನಿಗಳಲ್ಲಿ  (IT Company) ಶುಕ್ರವಾರ (Friday) ಸಂಜೆ (Evening) ಆಯಿತು ಎಂದರೆ ಸಾಕು ಸೋಮವಾರ ಬೆಳಿಗ್ಗೆ ಆಫೀಸಿಗೆ ಬರುವ ತನಕ ಉದ್ಯೋಗಿಗೆ ಒಂದು ಫೋನ್ ಕಾಲ್ (Phono Call) ಸಹ ಮಾಡೋದಿಲ್ಲ. ಎಂದರೆ ಇದರರ್ಥ ಉದ್ಯೋಗಿ ವಾರದ ಐದು ದಿನ ಎಂದರೆ ಸೋಮವಾರದಿಂದ (Monday) ಶುಕ್ರವಾರದವರೆಗೆ  ತುಂಬಾನೇ ಕೆಲಸ ಮಾಡಿ ಸುಸ್ತಾಗಿರುತ್ತಾರೆ, ಅವರಿಗೆ ವಿಶ್ರಾಂತಿ (Rest) ಪಡೆಯಲು ಮತ್ತು ಅವರ ಕುಟುಂಬದವರೊಡನೆ ಸಮಯ ಕಳೆಯಲು ಕನಿಷ್ಠ ಶನಿವಾರ ಮತ್ತು ಭಾನುವಾರ ಬೇಕೆ ಬೇಕು ಅಂತ ಅವರಿಗೆ ಯಾವುದೇ ಕೆಲಸದ ಕುರಿತು ಕರೆ ಮಾಡುವುದಾಗಲಿ ಅಥವಾ ಮೆಸೇಜ್ ಮಾಡುವುದಾಗಲಿ ಕಂಪನಿಗಳು ಮಾಡುವುದಿಲ್ಲ.


ಇವತ್ತು ರಜೆ ಇದೆ, ನಾಳೆ ಮಾಡ್ತೀನಿ ಕೆಲಸ ಎಂದ ಉದ್ಯೋಗಿ


ಇನ್ನೂ ಕೆಲವು ಕಂಪನಿಗಳು ಕೆಲಸದ ಸಮಯ ಮುಗಿದು ಉದ್ಯೋಗಿ ಮನೆಗೆ ಹೋದರೂ ಸಹ ಅವರಿಗೆ ಕ್ಲೈಂಟ್ ಇದನ್ನ ಈಗಲೇ ಬೇಕು ಅಂತ ಕೇಳುತ್ತಾ ಇದ್ದಾರೆ ಅಂತ ಫೋನ್ ಮಾಡಿ ಮತ್ತು ಮೆಸೇಜ್ ಮಾಡಿ ತಲೆ ತಿನ್ನುತ್ತಾ ಇರುತ್ತಾರೆ.


ಇಂತಹದೇ ಒಂದು ಕಂಪನಿಗೆ ಉದ್ಯೋಗಿಯೊಬ್ಬ ಹೇಗೆ ಖಡಕ್ ಆಗಿ ‘ಇವತ್ತು ರಜೆ ಇದೆ, ಕೆಲಸ ಆಗೋದಿಲ್ಲ, ನಾಳೆ ಮಾಡ್ತೀನಿ ಅಂತ’ ಹೇಳಿದ್ದಾನೆ ನೋಡಿ.


Viral News: An employee who insists on not doing office work on holiday! Full viral on social media
ಸಾಂದರ್ಭಿಕ ಚಿತ್ರ


ಹೀಗೆ ಉದ್ಯೋಗಿಗಳು ರಜೆ ಇದ್ದಾಗ, ಅವರಿಗೆ ಕಂಪನಿಯವರು ಪದೇ ಪದೇ ಇದೊಂದು ಚೂರು ಕೆಲಸ ಇದೆ, ದಯವಿಟ್ಟು ಮಾಡಿ ಕೊಡಿ ಅಂತೆಲ್ಲಾ ಹೇಳುವುದರಿಂದಲೇ ಅಂತ ಅನ್ನಿಸುತ್ತದೆ ಉದ್ಯೋಗದಾತರು ತಮ್ಮ ಉದ್ಯೋಗಿಯ ವೈಯುಕ್ತಿಕ ಸಮಯವನ್ನು ಮತ್ತು ಇತಿ ಮಿತಿಗಳನ್ನು ಗೌರವಿಸುತ್ತಿಲ್ಲ ಎಂದು ಅನೇಕ ಜನರು ಆಗಾಗ್ಗೆ ದೂರುತ್ತಾರೆ.


ಉದ್ಯೋಗಿ ಹಂಚಿಕೊಂಡ ಟ್ವಿಟ್ಟರ್ ಪೋಸ್ಟ್ ನಲ್ಲಿ ಏನಿತ್ತು?


ತಮ್ಮ ರಜೆ ಅಥವಾ ರಜಾ ದಿನಗಳಲ್ಲಿಯೂ ಲಭ್ಯವಿರುತ್ತಾರೆ ಎಂದು ಕೆಲ ಕಂಪನಿಯವರು ನಿರೀಕ್ಷಿಸುತ್ತಾರೆ. ರಜಾದಿನಗಳಲ್ಲಿ ಕೆಲಸ ಮಾಡಲು ಆಗೋದಿಲ್ಲ ಅಂತ ಕಡ್ಡಿ ಮುರಿದ ಹಾಗೆ ಹೇಳಲು ಕಲಿಯಲು ಎಷ್ಟು ವರ್ಷಗಳು ಬೇಕಾಯಿತು ಅಂತ ಉದ್ಯೋಗಿಯೊಬ್ಬ ತಮ್ಮ ಟ್ವಿಟ್ಟರ್ ನಲ್ಲಿ ಅವರ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.


ಬರಹಗಾರ ಮತ್ತು ಭಾಷಾಂತರಕಾರರಾಗಿ ಕೆಲಸ ಮಾಡುತ್ತಿರುವ ಹೈದರಾಬಾದ್ ಮೂಲದ ರಘು ಎಂಬ ವ್ಯಕ್ತಿ ತನ್ನ ಕಚೇರಿಯಲ್ಲಿ ಕೆಲಸ ಮಾಡುವ ತನಗಿಂತ ಹಿರಿಯ ಸ್ಥಾನದಲ್ಲಿರುವವರ ಜೊತೆಗೆ ವಾಟ್ಸಪ್ ನಲ್ಲಿ ಚಾಟ್ ಮಾಡಿದ್ದರ ಸ್ಕ್ರೀನ್‌ಶಾಟ್ ಅನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.


ಅವರು ಹಂಚಿಕೊಂಡ ಪೋಸ್ಟ್ ನಲ್ಲಿದ್ದ ಆ ವಾಟ್ಸಾಪ್ ನ ಸಂದೇಶಗಳ ಸ್ಕ್ರೀನ್‌ಶಾಟ್ ನಲ್ಲಿ ನೋಡುವಂತೆ ಅವರ ಆಫೀಸಿನವರು ಅವರಿಗೆ ಒಂದು ಚಿಕ್ಕ ಕೆಲಸ ಇದೆ ಮಾಡಿಕೊಡು ಅಂತ ಕೇಳಿದ್ದಕ್ಕೆ, ರಘು ಅವರು ‘ಇಂದು ರಜೆ ಇದೆ ಕೆಲಸ ಮಾಡುತ್ತಿಲ್ಲ’ ಎಂದು ಸಹೋದ್ಯೋಗಿಗೆ ಹೇಳಿದ್ದಾರೆ.


ಹೀಗೆ ಹೇಳಿದ ನಂತರವೂ ಸಹ ಅವರು ಕೇವಲ ಒಂದೇ ಒಂದು ಗಂಟೆಯ ಕೆಲಸ ಇದೆ, ಮಾಡಿಕೊಡಿ ದಯವಿಟ್ಟು ಅಂತ ಹೇಳಿದ್ದಾರೆ. ನಂತರ ಕ್ಲೈಂಟ್ ಗೆ ಈ ಕೆಲಸ ತುಂಬಾನೇ ಅರ್ಜೆಂಟ್ ಇದೆ, ದೊಡ್ಡ ಕೆಲಸ ಏನಿಲ್ಲ ಎರಡರಿಂದ ನಾಲ್ಕು ಟ್ಯಾಗ್ ಗಳ ಬಗ್ಗೆ ಸ್ವಲ್ಪ ಸಹಾಯ ಬೇಕಾಗಿತ್ತು ಅಂತ ಪದೇ ಪದೇ ಕೇಳಿದ್ದಾರೆ.


ಅದಕ್ಕೆ ಒಪ್ಪದ ಉದ್ಯೋಗಿ ರಘು ಕಡ್ಡಿ ಮುರಿದ ಹಾಗೆ ನೇರವಾಗಿ ‘ನಾಳೆ ಬೆಳಿಗ್ಗೆ ಆ ಕೆಲಸ ಮಾಡಬಹುದು, ಆದರೆ ಇಂದು ಮಾತ್ರ ಅದು ಆಗೋದೇ ಇಲ್ಲ’ ಎಂದು ಹೇಳಿದ್ದಾರೆ.


ತಮ್ಮ ಪೋಸ್ಟ್ ಬಗ್ಗೆ ಖುದ್ದು ರಘು ಹೇಳಿದ್ದೇನು ನೋಡಿ..


"ರಜಾದಿನಗಳಲ್ಲಿ ಕೆಲಸ ಮಾಡಲು ಆಗೋದಿಲ್ಲ ಅಂತ ನೇರವಾಗಿ ಹೇಳೋದಕ್ಕೆ ನನಗೆ 5 ವರ್ಷಗಳು ಬೇಕಾಯಿತು, ಮೊದಲೇ ಕೆಲಸದ ಬಗ್ಗೆ ಒಂದು ದೃಢವಾದ ನಿಲುವು ನಮ್ಮಲ್ಲಿರುವುದು ತುಂಬಾ ಮುಖ್ಯವಾಗುತ್ತದೆ. ಯುಗಾದಿ ಹಬ್ಬದ ಶುಭಾಶಯಗಳು” ಎಂದು ರಘು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ:Viral Video: ಪೊಲೀಸ್​ ಅಧಿಕಾರಿಗೆ ಸೆಲ್ಯೂಟ್​​​ ಮಾಡಿದ ಪುಟಾಣಿ; ನೋಡುಗರ ಹೃದಯ ಗೆದ್ದ ಬಾಲಕಿ


ಪೋಸ್ಟ್ ಮಾಡಿದಾಗಿನಿಂದ, ಈ ಟ್ವೀಟ್ 21,000 ಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದಿದೆ ಮತ್ತು ಇದಕ್ಕೆ ಅನೇಕ ಜನ ನೆಟ್ಟಿಗರು ಕಾಮೆಂಟ್ ಮಾಡಿ ಸ್ಪಂದಿಸಿದ್ದಾರೆ.


"ಅಧಿಸೂಚನೆಗಳಿಂದ ಓದುವ ಕೌಶಲ್ಯವನ್ನು ಬೆಳೆಸಿಕೊಳ್ಳಿ. ಉತ್ತರ ನೀಡದೆ ಮತ್ತು ನಿಮ್ಮ ಫೋನ್ ನಿಮ್ಮೊಂದಿಗೆ ಇಲ್ಲ ಎಂಬ ನೆಪವೊಡ್ಡಿ ತಪ್ಪಿಸಿಕೊಳ್ಳಬಹುದು" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.


ರಘು ಬಳಕೆದಾರರಿಗೆ ಉತ್ತರಿಸಿ, "ಅದನ್ನು ಹೇಗೆ ಮಾಡಬೇಕೆಂದು ನನಗೆ ತಿಳಿದಿದೆ, ನಾನು ತಪ್ಪಿಸಿಕೊಳ್ಳುವ ಬದಲು ನನ್ನ ನಿರ್ಧಾರವನ್ನು ಅವರಿಗೆ ತಿಳಿಸಲು ಬಯಸುತ್ತೇನೆ" ಎಂದು ಬರೆದಿದ್ದಾರೆ.ಆದ್ದರಿಂದ ನನ್ನ ಪ್ರಸ್ತುತ ಕೆಲಸಕ್ಕೆ ಹೋಗುವಾಗ ನಾನು ಕೆಲಸಕ್ಕಾಗಿ ಪ್ರತ್ಯೇಕ ಫೋನ್ ಬಳಸಲು ನಿರ್ಧರಿಸಿದೆ. ಏಕೆಂದರೆ ರಜಾದಿನಗಳಲ್ಲಿ ಕೆಲಸದಿಂದ ಸಂಪೂರ್ಣವಾಗಿ ಸಂಪರ್ಕವನ್ನು ಕಡಿತಗೊಳಿಸುವುದು ನನಗೆ ತುಂಬಾ ಸುಲಭವಾಗಿದೆ" ಎಂದು ಮತ್ತೊಬ್ಬ ಬಳಕೆದಾರರು ಹಂಚಿಕೊಂಡಿದ್ದಾರೆ.

top videos
    First published: