Office Event: ಈತನಿಗಾದ ನಷ್ಟಕ್ಕೆ ಆಫೀಸ್ ಈವೆಂಟ್ ಕಾರಣವಂತೆ! ಸಂಸ್ಥೆಯ ಮೇಲೆಯೇ ಮೊಕದ್ದಮೆ ಹೂಡಿದ ಉದ್ಯೋಗಿ

ಪ್ರಾಜೆಕ್ಟ್ ಯಶಸ್ವಿಯಾಗಿ ಮುಗಿದ ನಂತರ, ಸಂಸ್ಥೆಗೆ ಲಾಭ ಬಂದ ಸಂದರ್ಭದಲ್ಲಿ ಕಂಪೆನಿಗಳು ಮೋಜಿನ ಈವೆಂಟ್‌ಗಳನ್ನು ಹಮ್ಮಿಕೊಳ್ಳುವುದು ಸರ್ವೇಸಾಮಾನ್ಯ. ಈ ಸಂದರ್ಭದಲ್ಲಿ ಮೋಜುಮಸ್ತಿ, ಕುಣಿತ, ಕುಡಿತ, ಬೇರೆ ಬೇರೆ ಫನ್ ಗೇಮ್‌ಗಳನ್ನು ಸಂಸ್ಥೆ ಉದ್ಯೋಗಿಯ ಮನರಂಜನೆಗಾಗಿ ಇರಿಸುತ್ತದೆ. ಆದರೆ ಇಂತಹ ಪಾರ್ಟಿಯನ್ನು ಆಯೋಜಿಸಿರುವ ಕಂಪೆನಿಯ ಮೇಲೆಯೇ ಉದ್ಯೋಗಿಯೊಬ್ಬರು ಪ್ರಕರಣ ದಾಖಲಿಸಿ ಪರಿಹಾರ ಕೋರಿದ್ದಾರೆ.

ಪ್ರೈಸ್‌ವಾಟರ್‌ಹೌಸ್‌ಕೂಪರ್ಸ್

ಪ್ರೈಸ್‌ವಾಟರ್‌ಹೌಸ್‌ಕೂಪರ್ಸ್

  • Share this:
ಪ್ರಾಜೆಕ್ಟ್ (Project) ಯಶಸ್ವಿಯಾಗಿ ಮುಗಿದ ನಂತರ, ಸಂಸ್ಥೆಗೆ ಲಾಭ ಬಂದ ಸಂದರ್ಭದಲ್ಲಿ ಕಂಪೆನಿಗಳು ಮೋಜಿನ ಈವೆಂಟ್‌ಗಳನ್ನು ಹಮ್ಮಿಕೊಳ್ಳುವುದು ಸರ್ವೇಸಾಮಾನ್ಯ. ಈ ಸಂದರ್ಭದಲ್ಲಿ ಮೋಜುಮಸ್ತಿ, ಕುಣಿತ, ಕುಡಿತ, ಬೇರೆ ಬೇರೆ ಫನ್ ಗೇಮ್‌ಗಳನ್ನು ಸಂಸ್ಥೆ ಉದ್ಯೋಗಿಯ(Employee)  ಮನರಂಜನೆಗಾಗಿ ಇರಿಸುತ್ತದೆ. ಆದರೆ ಇಂತಹ ಪಾರ್ಟಿಯನ್ನು (Party) ಆಯೋಜಿಸಿರುವ ಕಂಪೆನಿಯ ಮೇಲೆಯೇ ಉದ್ಯೋಗಿಯೊಬ್ಬರು ಪ್ರಕರಣ ದಾಖಲಿಸಿ ಪರಿಹಾರ ಕೋರಿದ್ದಾರೆ. ಕಂಪೆನಿಯ ಈವೆಂಟ್ (Event) ಸಂದರ್ಭದಲ್ಲಿ ತಲೆಗೆ ಗಂಭೀರ ಗಾಯವಾದ ಹಿನ್ನಲೆಯಲ್ಲಿ ಲೆಕ್ಕಪರಿಶೋಧನಾ ಸಂಸ್ಥೆ ಪ್ರೈಸ್‌ವಾಟರ್‌ಹೌಸ್‌ಕೂಪರ್ಸ್ (PwC) ಮೇಲೆ ಅದೇ ಸಂಸ್ಥೆಯ ಉದ್ಯೋಗಿಯೊಬ್ಬರು ಮೊಕ್ಕದ್ದಮೆ ಹೂಡಿದ್ದಾರೆ.

ಕಂಪೆನಿಯ ಮೇಲೆ ಮೊಕದ್ದಮೆ ಹೂಡಿರುವ ಉದ್ಯೋಗಿ ಮೈಕೆಲ್ ಬ್ರಾಕಿ ಆಗಿದ್ದು, ಅತಿಯಾದ ಮದ್ಯಪಾನವನ್ನೊಳಗೊಂಡಿದ್ದ ಮನರಂಜನಾ ಈವೆಂಟ್‌ಗಳನ್ನು ಕಂಪೆನಿಯು ಹಲವಾರು ವರ್ಷಗಳಿಂದ ಏರ್ಪಡಿಸುತ್ತಿದ್ದು ಆತ ಸೇರಿದಂತೆ ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಲ್ಲಿ ಕಂಪೆನಿಯು ಯಾವುದೇ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗಿದೆ ಎಂದು ದೂರಿದ್ದಾರೆ. PwC ಯ ನಿರ್ಲಕ್ಷ್ಯತನದಿಂದಾಗಿ ಬ್ರಾಕಿಯು ವೈಯಕ್ತಿಕವಾಗಿ ಗಾಯಗೊಂಡಿರುವುದಾಗಿ ತಿಳಿಸಿದ್ದು, ಮೆದುಳಿನ ಗಾಯದಿಂದಾಗಿ 2019 ರಲ್ಲಿ ಕೋಮಾಗೆ ಒಳಗಾದರು ಎಂದು ಹೇಳಿದ್ದಾರೆ.

ಈವೆಂಟ್‌ನಲ್ಲಿ ಪಬ್‌ಗಾಲ್ಫ್ ಆಟ ಆಯೋಜಿಸಿದ್ದ ಕಂಪೆನಿ
ಬ್ಯುಸಿ ಶೆಡ್ಯೂಲ್‌ನ ಅಂತ್ಯವನ್ನು ಆಚರಿಸಲು ಸಲುವಾಗಿ ತನ್ನ ನಿರ್ವಾಹಕರು ಆಯೋಜಿಸಿದ್ದ ಈವೆಂಟ್‌ನಲ್ಲಿ ಪಾಲ್ಗೊಳ್ಳುವಂತೆ ತನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂದು ಬ್ರಾಕಿ ನ್ಯಾಯಾಲಯದ ಫೈಲಿಂಗ್‌ನಲ್ಲಿ ತಿಳಿಸಿದ್ದಾರೆ.

ಬ್ಲೂಮ್‌ಬರ್ಗ್ ಸುದ್ದಿ ಸಂಸ್ಥೆಯ ಪ್ರಕಾರ, ಪಬ್ ಗಾಲ್ಫ್ ಎಂಬ ಆಟವನ್ನು ಕಂಪೆನಿ ಆಯೋಜಿಸಿತ್ತು ಇದರಲ್ಲಿ ಸಿಬ್ಬಂದಿಯು ಪ್ರತಿ ಒಂಭತ್ತು ಬಾರ್‌ಗಳಲ್ಲಿದ್ದ ಬೇರೆ ಬೇರೆ ಆಲ್ಕೊಹಾಲ್ಯುಕ್ತ ಪಾನೀಯಗಳನ್ನು ಸಾಧ್ಯವಾದಷ್ಟು ಬಾಯಿತುಂಬಾ ಕಡಿಮೆ ಗುಟುಕಿನ ಮೂಲಕ ಸೇವಿಸುವಂತೆ ಹೇಳಲಾಯಿತು. ಕಡಿಮೆ ಗುಟುಕಿನಲ್ಲಿ ಮದ್ಯಪಾನ ಸೇವಿಸುವ ಗ್ರಾಹಕರಿಗೆ ಉತ್ತಮ ಅಂಕಗಳನ್ನು ನೀಡಲಾಗುತ್ತದೆ ಅಂತೆಯೇ ಕಾರ್ಡ್‌ಗಳಲ್ಲಿ ದಾಖಲಿಸಿ ಮುದ್ರಿಸಿ ಕಚೇರಿಗಳಲ್ಲಿ ವಿತರಿಸಲಾಗುತ್ತದೆ ಎಂಬುದಾಗಿ ಮೊಕದ್ದಮೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Ganesh Chaturthi: ಮಗಳ ಸ್ಕೂಲ್ ಫೀಸ್ ಪಾವತಿಸಲು ಖೈದಿಯಿಂದ ಗಣೇಶನ ಮೂರ್ತಿ ತಯಾರಿಸಿ ಮಾರಾಟ! 

ಗಾಯಗೊಂಡಿದ್ದ ಬ್ರಾಕಿ
ಬ್ರಾಕಿಗೆ ಎಷ್ಟು ಅಮಲೇರಿತ್ತೆಂದರೆ ರಾತ್ರಿ 10 ರ ಬಳಿಕ ನಡೆದ ಘಟನೆಗಳ ಬಗ್ಗೆ ಆತನಿಗೆ ಒಂದೂ ನೆನಪಿರಲಿಲ್ಲ ಹಾಗೂ ಬ್ರಾಕಿ ತಲೆಗಾದ ಗಾಯದೊಂದಿಗೆ ಲಂಡನ್‌ನ ಪಟ್ಟಣದ ರಸ್ತೆಯೊಂದರಲ್ಲಿ ಬಿದ್ದಿದ್ದರು ಎಂದು ಬ್ರಾಕಿಯ ವಕೀಲರು ತಿಳಿಸಿದ್ದಾರೆ.

ಕಂಪೆನಿಯ ಮೇಲೆ ಆರೋಪ
ಸಂಜೆ 6 ಗಂಟೆಯಿಂದ ಹಲವಾರು ಗಂಟೆಗಳವರೆಗೆ ಮಿತಿಮೀರಿದ, ಅತಿಯಾದ, ದೀರ್ಘಸಮಯದ ಆಲ್ಕೋಹಾಲ್ ಸೇವನೆಯ ಸ್ಪರ್ಧಾತ್ಮಕ ಗುಣವನ್ನು ಉತ್ತೇಜಿಸುವುದರೊಂದಿಗೆ ಹಾಗೆ ಮಾಡುವಂತೆ ಪ್ರೇರೇಪಿಸಿದೆ ಎಂದು ಮೊಕದ್ದಮೆ ತಿಳಿಸಿದೆ.

7 ತಿಂಗಳ ನಂತರ ಕಚೇರಿಗೆ ಹೋದ ಬ್ರಾಕಿ
28 ರ ಹರೆಯದ ಬ್ರಾಕಿ ಗಾಯವನ್ನು ಅನುಭವಿಸಿದ ಏಳು ತಿಂಗಳ ನಂತರ ಪೂರ್ಣ ಪ್ರಮಾಣದಲ್ಲಿ ಉದ್ಯೋಗಕ್ಕೆ ಹೋಗಲು ಸಾಧ್ಯವಾಯಿತು ಹಾಗೂ ನ್ಯಾಯಾಲಯದ ದಾಖಲೆಗಳ ಪ್ರಕಾರ ಅಪಸ್ಮಾರವನ್ನು ಬೆಳೆಯಿಸಿಕೊಳ್ಳಬಹುದೆಂಬ ಭಯವನ್ನು ಹೊಂದಿದ್ದರು ಎಂದು ತಿಳಿಸಿದೆ. ಚೇತರಿಕೆಯ ನಂತರ ವೈದ್ಯರು ಬ್ರಾಕಿಯ ಚೇತರಿಕೆ ಕಂಡು ಬೆರಗುಗೊಂಡಿದ್ದಾರೆ ಹಾಗೂ ಚಿಕಿತ್ಸೆಯ ಅನ್ವಯ ಬ್ರಾಕಿಯ ತಲೆಬುರುಡೆಯ ಅರ್ಧ ಭಾಗವನ್ನು ತೆಗೆದು ಹಾಕಲಾಗಿದ್ದು ಕಂಪೆನಿಯು ನಷ್ಟ ಪರಿಹಾರವಾಗಿ ರೂ 1.88 ಕೋಟಿಯನ್ನು ಕೋರಿದ್ದಾರೆ.

ಇದನ್ನೂ ಓದಿ:  Crime News: ಗೋಡೆ ಮೇಲೆ ಸತ್ತು ಅಂಟಿದ್ದ ಸೊಳ್ಳೆಯಿಂದ ಸಿಕ್ಕಿಬಿದ್ದ ಕಳ್ಳ! ಈ ಪೊಲೀಸ್​ ಸ್ಟೋರಿ ಸಖತ್ತಾಗಿದೆ

ತನ್ನ ತಪ್ಪಿಲ್ಲವೆಂದು ಹೇಳಿಕೆ ನೀಡಿದ ಕಂಪೆನಿ
ಈ ಕುರಿತಾಗಿ PwC ಹೇಳಿಕೆಯನ್ನು ನೀಡಿದ್ದು ಬ್ಲೂಮ್‌ಬರ್ಗ್ ನ್ಯೂಸ್ ಏಜೆನ್ಸಿ ಈ ಕುರಿತು ವರದಿ ಮಾಡಿದೆ. ಕಂಪೆನಿಯು ಜವಬ್ದಾರಿಯುತ ಉದ್ಯೋಗದಾತರಾಗಿರುವುದರಿಂದ ನಮ್ಮಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಉದ್ಯೋಗಿಗಳ ಸುರಕ್ಷತೆ, ಆರೋಗ್ಯ ಹಾಗೂ ಅಂತರ್ಗತ ಸಂಸ್ಕೃತಿಯನ್ನೊದಗಿಸಲು ನಾವು ಬದ್ಧರಾಗಿದ್ದೇವೆ. ಸಾಮಾಜಿಕ ಈವೆಂಟ್‌ನಲ್ಲಿ ಪಾಲ್ಗೊಳ್ಳುವ ಯಾರಾದರೂ ಜವಬ್ದಾರರಾಗಿರಬೇಕು ಹಾಗೂ ತಮ್ಮ ಅಂತೆಯೇ ಇತರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕೆಂದು ನಾವು ನಿರೀಕ್ಷಿಸುತ್ತೇವೆ ಎಂದು ತಿಳಿಸಿದೆ. ಬ್ರಾಕಿಯ ಗಾಯದ ನಂತರ PwC ವಾರ್ಷಿಕ ಪ್ರವಾಸವನ್ನು ಕೊನೆಗೊಳಿಸಿತು.
Published by:Ashwini Prabhu
First published: