Employee: 7 ವರ್ಷಗಳಲ್ಲಿ ಫಸ್ಟ್​ ಟೈಂ ಕೆಲಸಕ್ಕೆ ಲೇಟಾಗಿ ಬಂದವನಿಗೆ ಕಂಪನಿ ಕಠಿಣ ಶಿಕ್ಷೆ

ಉದ್ಯೋಗಿಯೊಬ್ಬರು ಕಂಪನಿ ಕೆಲಸಕ್ಕೆ ಅಂತ ಬರುವಾಗ ಸ್ವಲ್ಪ ತಡವಾಗಿ ಬಂದಿದ್ದಾರೆ. ಅದಕ್ಕೆ ಅವರನ್ನು ಕೆಲಸದಿಂದಾನೆ ತೆಗೆದು ಹಾಕಿದ್ದಾರೆ ನೋಡಿ. ಅದರಲ್ಲೂ ಈ ಉದ್ಯೋಗಿ ತನ್ನ 7 ವರ್ಷಗಳ ಕೆಲಸದಲ್ಲಿ ಒಂದು ದಿನ ಆಫೀಸಿಗೆ ಸ್ವಲ್ಪವೂ ತಡವಾಗಿ ಬಂದಿರಲಿಲ್ವಂತೆ. ಈ ಘಟನೆಯನ್ನು ರೆಡ್ಡಿಟ್ ನಲ್ಲಿ ಕೆಲಸದಿಂದ ತೆಗೆದು ಹಾಕಿದ ಉದ್ಯೋಗಿಯ ಸಹೋದ್ಯೋಗಿಯೊಬ್ಬರು ಹಂಚಿಕೊಂಡಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮೊದಲೆಲ್ಲಾ ಖಾಸಗಿ ಕಂಪನಿಗಳಲ್ಲಿ (Company) ಉದ್ಯೋಗಿಗಳು ಟ್ರಾಫಿಕ್ ಸಮಸ್ಯೆಯಿಂದಲೂ ಅಥವಾ ಇನ್ನಾವುದೋ ವೈಯುಕ್ತಿಕ ಸಮಸ್ಯೆಗಳಿಂದ ಸ್ವಲ್ಪ ತಡವಾಗಿ ಬಂದರೂ ‘ಇರಲಿ ಬಿಡಿ, ಪರವಾಗಿಲ್ಲ’ ಅಂತ ಬಾಸ್ ಗಳು (Boss) ಹೇಳುತ್ತಿದ್ದರು. ಆದರೆ ಈಗೆಲ್ಲಾ ತುಂಬಾನೇ ಕಟ್ಟುನಿಟ್ಟಾದ ನಿಯಮಗಳನ್ನು ಖಾಸಗಿ ಕಂಪನಿಗಳು (Private Company) ಜಾರಿಗೆ ತಂದಿದ್ದು, ಈಗೆಲ್ಲಾ ತಮ್ಮ ಬೆರಳಿನಿಂದ ಪಂಚ್ ಮಾಡಿ ಒಳಗಡೆ ಬರಬೇಕು ಮತ್ತು ಅವರು ಆಫೀಸಿಗೆ (Office) ಬಂದ ಸಮಯ ಸಿಸ್ಟಂ ಅಲ್ಲಿ ರೆಕಾರ್ಡ್ (Record) ಆಗುತ್ತದೆ. ಮೊದಲೆಲ್ಲಾ ಇಂಥದ್ದೆಲ್ಲಾ ಇರಲಿಲ್ಲ, ಹಾಗೂ ಹೀಗೂ ತಮ್ಮ ಮೇಲಿನ ಹಿರಿಯ ಅಧಿಕಾರಿಗಳಿಗೆ ಹೇಳಿಕೊಂಡು ಮ್ಯಾನೇಜ್ ಮಾಡುತ್ತಿದ್ದರು. ಈಗ ಆ ಥರ ಎಲ್ಲಾ ನಡೆಯುತ್ತಿಲ್ಲ ಬಿಡಿ.

 ಕೆಲಸಕ್ಕೆ ತಡವಾಗಿ ಬಂದಿದ್ದಕ್ಕೆ ಏನು ಮಾಡಿದ್ದಾರೆ
ಇಲ್ಲೊಬ್ಬ ಉದ್ಯೋಗಿ ತನ್ನ ಕಂಪನಿ ಕೆಲಸಕ್ಕೆ ಅಂತ ಬರುವಾಗ ಸ್ವಲ್ಪ ತಡವಾಗಿ ಬಂದಿದ್ದಾರೆ. ಅದಕ್ಕೆ ಅವರನ್ನು ಕೆಲಸದಿಂದಾನೆ ತೆಗೆದು ಹಾಕಿದ್ದಾರೆ ನೋಡಿ. ಅದರಲ್ಲೂ ಈ ಉದ್ಯೋಗಿ ತನ್ನ 7 ವರ್ಷಗಳ ಕೆಲಸದಲ್ಲಿ ಒಂದು ದಿನ ಆಫೀಸಿಗೆ ಸ್ವಲ್ಪವೂ ತಡವಾಗಿ ಬಂದಿರಲಿಲ್ವಂತೆ. ಈ ಘಟನೆಯನ್ನು ರೆಡ್ಡಿಟ್ ನಲ್ಲಿ ಕೆಲಸದಿಂದ ತೆಗೆದು ಹಾಕಿದ ಉದ್ಯೋಗಿಯ ಸಹೋದ್ಯೋಗಿಯೊಬ್ಬರು ಹಂಚಿಕೊಂಡಿದ್ದಾರೆ.

ರೆಡ್ಡಿಟ್ ನ ಯಾಂಟಿ ವರ್ಕ್ ಫೋರಂನಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ, ಅಲ್ಲಿ ಉದ್ಯೋಗಿಯು ಆ ಕಂಪನಿಯಲ್ಲಿ ಕೆಲಸ ಮಾಡಿದ ಏಳು ವರ್ಷಗಳಲ್ಲಿ "ಮೊದಲ ಬಾರಿಗೆ" ತಡವಾಗಿ ಬಂದಿದ್ದಾನೆ ಎಂದು ಬಳಕೆದಾರರು ಬಹಿರಂಗಪಡಿಸಿದ್ದಾರೆ. ಬಳಕೆದಾರನ ಪ್ರಕಾರ, ಕೇವಲ 20 ನಿಮಿಷ ತಡವಾಗಿ ತಲುಪಿದ್ದಕ್ಕಾಗಿ ಅವರನ್ನು ಕೆಲಸದಿಂದ ತೆಗೆದು ಹಾಕಲಾಯಿತು. ಘಟನೆ ಎಲ್ಲಿ ನಡೆಯಿತು ಎಂಬುದು ಇನ್ನೂ ತಿಳಿದು ಬಂದಿಲ್ಲ.

ಈ ವರ್ತನೆಗೆ ಮತ್ತೊಬ್ಬ ಉದ್ಯೋಗಿ ಏನು ಹೇಳಿದ್ದಾರೆ ನೋಡಿ
ಪ್ರಸ್ತುತ ಆ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ತಮ್ಮ ಸಹದ್ಯೋಗಿಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವ ತನಕ ಅವರೆಲ್ಲಾ ತಡವಾಗಿ ಬರುವ ಮೂಲಕ ಈ ಕಂಪನಿಯ ನಿರ್ಧಾರವನ್ನು ಪ್ರತಿಭಟಿಸಲು ನಿರ್ಧರಿಸಿದ್ದಾರೆ ಎಂದು ಬಳಕೆದಾರರು ಹೇಳಿದರು. "ನಾಳೆ, ನಾನು ಮತ್ತು ನನ್ನ ಎಲ್ಲಾ ಸಹೋದ್ಯೋಗಿಗಳು ತಡವಾಗಿ ಬರುತ್ತೇವೆ ಮತ್ತು ಅವರು ಅವನನ್ನು ಮತ್ತೆ ನೇಮಿಸಿಕೊಳ್ಳುವವರೆಗೆ ನಾವೆಲ್ಲಾ ಹೀಗೆ ತಡವಾಗಿ ಬರುತ್ತೇವೆ" ಎಂದು ಸಾಮಾಜಿಕ ಮಾಧ್ಯಮ ಅಪ್ಡೇಟ್ ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Viral Story: ನೀವೂ ನಂಬಲೇ ಬೇಕು! ಈ ಮಹಿಳೆಯ ಜೀವ ಉಳಿಸಿದ್ದು Puma ಚಪ್ಪಲಿಯಂತೆ!

ಈ ಘಟನೆಯನ್ನು "7 ವರ್ಷಗಳಲ್ಲಿ ಎಂದಿಗೂ ತಡವಾಗಿ ಆಫೀಸಿಗೆ ಬಂದಿರದ ಸಹೋದ್ಯೋಗಿ, ಮೊದಲ ಬಾರಿಗೆ ತಡವಾಗಿ ಕೆಲಸಕ್ಕೆ ಬಂದರೆ ಅವರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ವೈರಲ್ ಪೋಸ್ಟ್ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ 
ರೆಡ್ಡಿಟ್ ನಲ್ಲಿ ಹಂಚಿಕೊಂಡಾಗಿನಿಂದಲೂ ಈ ಪೋಸ್ಟ್ ಸುಮಾರು 79,000 ಕ್ಕೂ ಹೆಚ್ಚು ಅಪ್‌ವೋಟ್ ಗಳನ್ನು ಗಳಿಸಿದೆ ಮತ್ತು 4,000ಕ್ಕೂ ಹೆಚ್ಚು ಕಾಮೆಂಟ್ ಗಳನ್ನು ಸಹ ಈ ಪೋಸ್ಟ್ ಗಳಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅನೇಕ ಬಳಕೆದಾರರು ಹಲವಾರು ಪ್ರತಿಕ್ರಿಯೆಗಳನ್ನು ನೀಡಿದ್ದು, ಇದರಲ್ಲಿ ಅನೇಕರು ಉದ್ಯೋಗದಾತನ ನಡೆಯನ್ನು ಖಂಡಿಸಿದ್ದಾರೆ.



ವಜಾಗೊಂಡ ಉದ್ಯೋಗಿಯ ದುಃಸ್ಥಿತಿಯನ್ನು ಬಳಕೆದಾರರೊಬ್ಬರು ಎತ್ತಿ ತೋರಿಸಿದ್ದಾರೆ, ಅವರು 20 ನಿಮಿಷ ತಡವಾಗಿ ಬಂದಿದ್ದರಿಂದ ಅವರು ಆರ್ಥಿಕ ಸಂಕಷ್ಟಗಳನ್ನು ಎದುರಿಸಬಹುದು. ಆ ವ್ಯಕ್ತಿಯನ್ನು ಕೆಲಸದಿಂದ ತೆಗೆದು ಹಾಕಲು ಮತ್ತು ಅವನಿಗಿಂತಲೂ ಕಡಿಮೆ ವೇತನದ ಮೇಲೆ ಯಾರನ್ನಾದರೂ ಹೊಸಬರನ್ನು ನೇಮಿಸಲು ಉದ್ಯೋಗದಾತರು ಕೇವಲ ಒಂದು ನೆಪವನ್ನು ಬಯಸುತ್ತಾರೆ ಎಂದು ಇನ್ನೊಬ್ಬರು ಶಂಕಿಸಿದರು. ಈ ಪೋಸ್ಟ್ ಕೆಲವು ಬಳಕೆದಾರರನ್ನು ಇದೇ ರೀತಿಯ ಅನುಭವಗಳನ್ನು ವಿವರಿಸಲು ಪ್ರೇರೇಪಿಸಿತು.

ಇದನ್ನೂ ಓದಿ:  Farting: ಅದೊಂದು ರೋಲ್ ತಿಂದು ಐದು ವರ್ಷ ಆಯ್ತಂತೆ, ಗ್ಯಾಸ್ ಬಿಡೋದು ಮಾತ್ರ ಇನ್ನೂ ನಿಂತಿಲ್ಲ! ಅಕಟಕಟಾ!!

ಒಮ್ಮೆ ಹಿಮಪಾತದಿಂದಾಗಿ ತಾನು ಕೆಲಸಕ್ಕೆ ತಡವಾಗಿ ಬಂದಿದ್ದೇನೆ ಎಂದು ಒಬ್ಬ ವ್ಯಕ್ತಿಯು ಹಂಚಿಕೊಂಡನು. ಅವರು ಆರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತಡವಾಗಿ ಬಂದರು, ಆದರೆ ಅದಕ್ಕಾಗಿ ಕೆಲಸದಿಂದ ತೆಗೆದು ಹಾಕಲಿಲ್ಲ. ಆದರೆ ತಮ್ಮ ಉದ್ಯೋಗದಾತರು ತಮ್ಮ ವಾರ್ಷಿಕ ವಿಮರ್ಶೆಯಲ್ಲಿ ಇದನ್ನು ಉಲ್ಲೇಖಿಸಿದ್ದಾರೆ” ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ.
Published by:Ashwini Prabhu
First published: