Viral Video: ವೇದಿಕೆ ಮೇಲೆ ಡ್ಯಾನ್ಸ್ ಮಾಡುತ್ತಿರುವಾಗಲೇ ಕುಸಿದು ಬಿದ್ದ ಕಲಾವಿದ; ಗಣೇಶನ ಮುಂದೆ ಹೋಯ್ತು ಪ್ರಾಣ

ಯುವ ಕಲಾವಿದರೊಬ್ಬರು (Artist) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಗಣೇಶೋತ್ಸವದ (Ganeshotsav) ನಿಮಿತ್ತ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ (Program) ಕುಣಿಯುತ್ತಿದ್ದ ಕಲಾವಿದ ಹಾರ್ಟ್ ಅಟ್ಯಾಕ್‌ನಿಂದ ವೇದಿಕೆ ಮೇಲೆಯೇ ಕುಸಿದು ಬಿದ್ದಿದ್ದಾರೆ. ಮರುಕ್ಷಣವೇ ಅವರ ಪ್ರಾಣಪಕ್ಷಿ ಹಾರಿಹೋಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಜಮ್ಮು ಮತ್ತು ಕಾಶ್ಮೀರ: ಸಾವು (Death) ಎನ್ನುವುದು ಎಷ್ಟು ವಿಚಿತ್ರ ನೋಡಿ, ಈ ಕ್ಷಣಕ್ಕೆ ಇದ್ದವರು, ಮರುಕ್ಷಣವೇ ಇರುತ್ತಾರೆ ಎನ್ನುವ ಭರವಸೆಯೇ ಇಲ್ಲ. ಅದರಲ್ಲೂ ಹಾರ್ಟ್ ಅಟ್ಯಾಕ್ (Heart Attack) ಎನ್ನುವುದು ಯಾವಾಗ ಯಾರನ್ನು ಬಲಿಪಡೆಯುತ್ತದೆಯೋ ಹೇಳೋದಕ್ಕೆ ಆಗುವುದಿಲ್ಲ. ಮೊನ್ನೆಯಷ್ಟೇ ಕರ್ನಾಟಕದ (Karnataka) ಅರಣ್ಯ ಸಚಿವ (Forest Minister) ಉಮೇಶ್ ಕತ್ತಿಯವರು (Umesh Katti) ಹೃದಯಾಘಾತಕ್ಕೆ ಒಳಗಾಗಿ, ನಿಧನರಾಗಿದ್ದರು. ಅವರ ನಿಧನದಿಂದ ಹಾರ್ಟ್ ಅಟ್ಯಾಕ್ ಅಥವಾ ಹೃದಯಾಘಾತದ ಬಗ್ಗೆ ಭಾರೀ ಚರ್ಚೆ ಶುರುವಾಗಿತ್ತು. ಇದೀಗ ಅವರ ಸಾವಿನ ಕಹಿಘಟನೆ ಮಾಸುವ ಮುನ್ನವೇ ಕಲಾವಿದರೊಬ್ಬರು (Artist) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಗಣೇಶೋತ್ಸವದ (Ganeshotsav) ನಿಮಿತ್ತ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ (Program) ಕುಣಿಯುತ್ತಿದ್ದ ಕಲಾವಿದ ಹಾರ್ಟ್ ಅಟ್ಯಾಕ್‌ನಿಂದ ವೇದಿಕೆ ಮೇಲೆಯೇ ಕುಸಿದು ಬಿದ್ದಿದ್ದಾರೆ. ಮರುಕ್ಷಣವೇ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ಈ ವಿಡಿಯೋ (Video) ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ (Viral) ಆಗಿದ್ದು, ವಿಡಿಯೋ ನೋಡಿವರು ಶಾಕ್‌ಗೆ ಒಳಗಾಗಿದ್ದಾರೆ.

ವೇದಿಕೆ ಮೇಲೆ ಕುಸಿದು ಬಿದ್ದ ಕಲಾವಿದ

ಜಮ್ಮು ಕಾಶ್ಮೀರದಲ್ಲಿ ಕಲಾವಿದರೊಬ್ಬರು ಡ್ಯಾನ್ಸ್ ಮಾಡುವಾಗ ವೇದಿಕೆ ಮೇಲೆಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ಇಲ್ಲಿನ ಬಿಷ್ನಾಹ್ ಪ್ರದೇಶದಲ್ಲಿ ಏರ್ಪಡಿಸಲಾಗಿದ್ದ ಗಣೇಶೋತ್ಸವದ ಕಾರ್ಯಕ್ರಮದಲ್ಲಿ ಗಣೇಶನ ಮುಂದೆಯೇ ಈ ಘಟನೆ ನಡೆದ್ದೆ. ಇಲ್ಲಿನ ಖ್ಯಾತ ಕಲಾವಿದ ಯೋಗೇಶ್ ಗುಪ್ತಾ ಎಂಬುವರು ವೇದಿಕೆ ಮೇಲೆ ಕುಸಿದು ಬಿದ್ದು ಸಾನಪ್ಪಪ್ಪಿದ್ದಾರೆ.

ಹೃದಯಾಘಾತದಿಂದ ಕೊನೆಯುಸಿರೆಳೆದ ಕಲಾವಿದ

ಜಮ್ಮುವಿನ ಕೋಥೇ ಗ್ರಾಮದಲ್ಲಿ ಗಣೇಶ ಉತ್ಸವ ಕಾರ್ಯಕ್ರಮದ ವೇಳೆ ನೃತ್ಯ ಪ್ರದರ್ಶನ ನೀಡುತ್ತಿದ್ದ ವೇಳೆ 20 ವರ್ಷದ ಯುವ ಕಲಾವಿದ ಯೋಗೇಶ್ ಗುಪ್ತಾ ಎಂಬುವರು ಕುಸಿದು ಬಿದ್ದಿದ್ದಾರೆ. ಯೋಗೇಶ್ ಮಹಿಳೆಯಂತೆ ವೇಷ ಧರಿಸಿ ನೃತ್ಯ ಮಾಡುತ್ತಿದ್ದರು. ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಮುಂದೆ ನೃತ್ಯ ಮಾಡುತ್ತಿರುವಾಗಲೇ ಅವರಿಗೆ ಹೃದಯಾಘಾತ ಸಂಭವಿಸಿದೆ.

ಇದನ್ನೂ ಓದಿ: Heart Attack: ನಿರ್ಲಕ್ಷ್ಯ ಮಾಡಬೇಡಿ, ಇದು ‘ಹೃದಯ’ಗಳಾ ವಿಷಯ! ನಿಮ್ಮ ಹಾರ್ಟ್ ಮೇಲೂ ಇರಲಿ ಪ್ರೀತಿ

ಕುಸಿದು ಬಿದ್ದ ಮರುಕ್ಷಣವೇ ಕೊನೆಯುಸಿರು

ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಾಗ ಯಾರಿಗೂ ತಿಳಿಯಲೇ ಇಲ್ಲ ಎನ್ನವಾಗಿದೆ. ಅವರು ತಾವು ಮಾಡುತ್ತಿದ್ದ ಆ ನೃತ್ಯದ ಭಾಗವಾಗಿ ವೇದಿಕೆ ಮೇಲೆ ಹಾಗೆ ಕುಸಿದು ಬಿದ್ದಿದ್ದಾರೆ ಅಂತ ತಿಳಿದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ. ಆದರೆ, ಕೆಳಗೆ ಬಿದ್ದ ಕಲಾವಿದ ಎಷ್ಟು ಹೊತ್ತಾದರೂ ಏಳದಿದ್ದಾಗ ಅವರು ಪ್ರಜ್ಞೆ ತಪ್ಪಿ ಬಿದ್ದಿರುವುದು ಗೊತ್ತಾಗಿದೆ.

ಆಸ್ಪತ್ರೆಗೆ ಸಾಗಿಸುವ ಮುನ್ನವೇ ಕಲಾವಿದ ಸಾವು

ಹಲವಾರು ಕ್ಷಣಗಳು ಕಳೆದ ನಂತರ, ಅವರ ಸಹ-ನಟರೊಬ್ಬರು ವೇದಿಕೆಗೆ ಧಾವಿಸಿದರು, ಅವರನ್ನು ಎಬ್ಬಿಸಲು ಹಲವಾರು ಪ್ರಯತ್ನಗಳ ಹೊರತಾಗಿಯೂ ಅವರು ಪ್ರತಿಕ್ರಿಯಿಸಲಿಲ್ಲ. ಗುಪ್ತಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Health Tips: ಹೃದಯದ ಬಗ್ಗೆ ಇರಲಿ ಕಾಳಜಿ; ಹಾರ್ಟ್ ಫೇಲ್ಯೂರ್​ನ ಆರಂಭಿಕ ಲಕ್ಷಣಗಳಿವು

ವೇದಿಕೆ ಮೇಲೆ ಸಾವನ್ನಪ್ಪಿದ್ದ ಗಾಯಕ

ಇತ್ತೀಚಿನ ದಿನಗಳಲ್ಲಿ, ವೇದಿಕೆಯ ಮೇಲೆ ಹೃದಯ ಸ್ತಂಭನದಿಂದ ಬಳಲುತ್ತಿರುವ ಕಲಾವಿದರು ಸಾವನ್ನಪ್ಪುತ್ತಿರುವ ಘಟನೆಗಳು ಒಂದಾದ ಮೇಲೆ ಒಂದರಂತೆ ನಡೆಯುತ್ತಿದೆ. ದಿಲ್ ಇಬಾದತ್, ತೂ ಜೋ ಮಿಲಾ, ಖುದಾ ಜಾನೆ, ಲಾಬೊನ್ ಕೊ, ಮತ್ತು ಇನ್ನೂ ಹಲವಾರು ಹಾಡುಗಳ ಹಿಂದಿನ ಧ್ವನಿಯಾಗಿದ್ದ ಜನಪ್ರಿಯ ಹಿನ್ನೆಲೆ ಗಾಯಕ ಕೃಷ್ಣಕುಮಾರ್ ಕುನ್ನತ್ ಅಕಾ ಕೆಕೆ ಹೀಗೆಯೇ ನಿಧನರಾಗಿದ್ದರು. ಭಾರತದ ಬಹುಮುಖ ಗಾಯಕರಲ್ಲಿ ಒಬ್ಬರಾಗಿದ್ದ ಇವರು, ಕೋಲ್ಕತ್ತಾದ ನಜ್ರುಲ್ ಮಂಚಾದಲ್ಲಿ ವೇದಿಕೆಯಲ್ಲಿ ಪ್ರದರ್ಶನ ನೀಡಿದ ಕೆಲವೇ ನಿಮಿಷಗಳಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
Published by:Annappa Achari
First published: