Real Story: ಅತಿಯಾದ ಜಿಮ್​ ಅಪಾಯಕ್ಕೆ ಆಹ್ವಾನ! ಈತನ ಕೈ ಕತ್ತರಿಸಲು ಆ ಒಂದು ವರ್ಕೌಟ್​ ಕಾರಣ!

ಈ ವ್ಯಕ್ತಿಯ ಹೆಸರು ಗೇಬ್ ಲೀಶ್ಕೆ. ಎಲ್ಲರಂತೆಯೇ ನಾನು ಕೂಡ ಫಿಟ್​ ಆಗಿರಬೇಕು, ಬಾಡಿ ಶೇಪ್​ ಬದಲಾಯಿಸಿಕೊಳ್ಳಬೇಕು ಎಂದು ಬಯಸಿದ್ದರು. ಅದರಂತೆಯೇ ಜಿಮ್​ನಲ್ಲಿ ವರ್ಕೌಟ್​ ಮಾಡಲು ಪ್ರಾರಂಭಿಸಿದರು. ಆದರೆ ಒಂದು ದಿನ ಗೇಬ್ ಲೀಶ್ಕೆ ಜಿಮ್‌ನಲ್ಲಿ ಬೈಸೆಪ್ಸ್ ವ್ಯಾಯಾಮ ಮಾಡುವಾಗ ಗಾಯಗೊಂಡರು.

ಗೇಬ್ ಲೀಶ್ಕೆ

ಗೇಬ್ ಲೀಶ್ಕೆ

 • Share this:
  ಈಗ ಜನರು ಫಿಟ್ನೆಸ್ (Fitness) ಬಗ್ಗೆ ಜಾಗೃತರಾಗಿದ್ದಾರೆ. ಪ್ರತಿಯೊಬ್ಬರೂ ಫಿಟ್ ಆಗಿರಲು ಪ್ರಯತ್ನಿಸುತ್ತಾರೆ. ಜನರಲ್ಲಿ ಜಾಗೃತಿ ಮೂಡಿಸಲು ಹಲವು ಕಾರಣಗಳಿವೆ. ಫಿಟ್‌ನೆಸ್‌ನಿಂದಾಗಿ, ವ್ಯಕ್ತಿಯು ಅನೇಕ ಕಾಯಿಲೆಗಳಿಂದ ದೂರವಿರಬಹುದು. ವ್ಯಾಯಾಮವು ದೇಹವನ್ನು ಆಕಾರದಲ್ಲಿರಿಸುತ್ತದೆ (Body Shape) ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ. ಆದರೆ ಯಾವುದೇ ರೀತಿಯ ಮಾರ್ಗದರ್ಶನವಿಲ್ಲದೆ ಜಿಮ್‌ನಲ್ಲಿ (Gim) ವ್ಯಾಯಾಮವನ್ನು ಮಾಡಿದರೆ, ಅದು ಅಪಾಯಕ್ಕೆ ಅಹ್ವಾನವಾಗುವ ಸಾಧ್ಯತೆಯೂ ಇದೆ. ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬರಿಗೆ ಇಂತಹದ್ದೇ ಘಟನೆ ಎದುರಾಗಿದೆ. ಈ ವಿಚಾರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಾರೆ.

  ಈ ವ್ಯಕ್ತಿಯ ಹೆಸರು ಗೇಬ್ ಲೀಶ್ಕೆ. ಎಲ್ಲರಂತೆಯೇ ನಾನು ಕೂಡ ಫಿಟ್​ ಆಗಿರಬೇಕು, ಬಾಡಿ ಶೇಪ್​ ಬದಲಾಯಿಸಿಕೊಳ್ಳಬೇಕು ಎಂದು ಬಯಸಿದ್ದರು. ಅದರಂತೆಯೇ ಜಿಮ್​ನಲ್ಲಿ ವರ್ಕೌಟ್​ ಮಾಡಲು ಪ್ರಾರಂಭಿಸಿದರು. ಆದರೆ ಒಂದು ದಿನ ಗೇಬ್ ಲೀಶ್ಕೆ ಜಿಮ್‌ನಲ್ಲಿ ಬೈಸೆಪ್ಸ್ ವ್ಯಾಯಾಮ ಮಾಡುವಾಗ ಗಾಯಗೊಂಡರು. ಅತಿಯಾದ ತೂಕವನ್ನು ಎತ್ತಿದ ಅವರಿಗೆ ಅಪಾಯ ಬಂದೊದಗಿತು. ಅವರ ಕಂಠನಾಳವು ಛಿದ್ರವಾಯಿತು. ಬಳಿಕ ವೈದ್ಯರ ಬಳಿ ತೆರಳಿದರು. ಆದರೆ ವೈದ್ಯರು ಹೇಳಿದ ಮಾತನ್ನು ಲೆಕ್ಕಿಸದೆ ಮತ್ತೆ ಜಿಮ್​ನತ್ತ ತೆರಳಿದರು.

  ಆದರೆ ವೈದ್ಯರು ನೀಡಿದ ಎಚ್ಚರಿಕೆಯ ಹೊರತಾಗಿಯೂ ಅವರು ವಿಶ್ರಾಂತಿ ಪಡೆಯದೆ ಜಿಮ್‌ಗೆ ತೆರಳಿದ್ದೇ ಇದಕ್ಕೆ ಮೂಲ ಕಾರಣವಾಗಿದೆ. ಅದರ ಫಲಿತಾಂಶವೇ ಅವರು ಊಹಿಸಲೂ ಸಾಧ್ಯವಾಗದಷ್ಟು ಅಪಾಯಕಾರಿಯಾಗಿತ್ತು. ವೈದ್ಯರು ಹೇಳಿದ ಮಾತನ್ನು ಕೇಳುತ್ತಿದ್ದರೆ ಹೀಗಾಗುತ್ತಿರಲಿಲ್ಲ. ಕೊನೆಗೆ ಇದರ ಪರಿಣಾಮವಾಗಿ ಗೇಬ್ ಲೀಶ್ಕೆ ತನ್ನ ಬಲ ಕೈಯನ್ನು ಕತ್ತರಿಸಬೇಕಾಯಿತು. ಇದರಿಂದಾಗಿ ಗೇಬ್ ಲೀಶ್ಕೆ ತುಂಬಾ ನೊಂದಿದ್ದಾರೆ. ಜಿಮ್​ಗೆ ಹೋಗುವವರು ಹೆಚ್ಚಿನ ಗಮನಹರಿಸಿ ಎಂದು ಹೇಳುತ್ತಿದ್ದಾರೆ. ತನಗಾದ ಕಷ್ಟ ಬೇರೆಯವರಿಗೆ ಆಗದೇ ಇರಲಿ ಎಂದು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಗೇಬ್ ಲೀಶ್ಕೆ ಹೇಳಿಕೊಂಡಿದ್ದಾರೆ.

  ಅತಿಯಾದ ಜಿಮ್​ನಿಂದ ಕೈ ಕತ್ತರಿಸಬೇಕಾಯ್ತು!

  ಗೇಬ್ ಲೀಶ್ಕೆ ಅವರಿಗೆ ಎಲ್ಲರಂತೆ ತಾನು ಚೆನ್ನಾಗಿ ಕಾಣಬೇಕು. ದೇಹವನ್ನು ಫಿಟ್​​​ ಆಗಿ ಇಡಬೇಕು ಎಂಬ ಆಸೆ ಇತ್ತು. ಈ ಕಾರಣಕ್ಕಾಗಿ ಜಿಮ್​ ಹೋಗುತ್ತಿದ್ದರು. ಬೇಗನೆ ದೇಹಕ್ಕೆ ಚೆನ್ನಧ ರೂಪ ನೀಡಬೇಕೆಂಬ ಬಯಕೆ ಅವರದ್ದು, ಜೊತೆಗೆ ಬೈಸೆಪ್ಸ್ ಕೂಡ ಹೆಚ್ಚಾಗಿ ಮಾಡುತ್ತಿದ್ದರು. ಆದರೆ ಬೈಸೆಪ್ಸ್​ ವ್ಯಾಯಾಮದ ಸಮಯದಲ್ಲಿ ರಕ್ತನಾಳವು ಛಿದ್ರಗೊಂಡ ನಂತರ ಅವರ ಬಲಗೈಯನ್ನು ಕತ್ತರಿಸಬೇಕಾಯಿತು.

  ಇದನ್ನೂ ಓದಿ: Animals: ಹವಾಮಾನ ಬದಲಾವಣೆಯಿಂದ ಜೀವಕುಲಕ್ಕೆ ಸಂಕಷ್ಟ! ಯಾವೆಲ್ಲ ಪ್ರಾಣಿಗಳು ಕಣ್ಮರೆಯಾಗಲಿವೆ?

  ಗೇಬ್ ಲೀಶ್ಕೆ ಈ ಘಟನೆಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಾರೆ. ಜಿಮ್‌ನಲ್ಲಿ ಬೈಸೆಪ್ಸ್ ಮಾಡುವಾಗ ಅಗತ್ಯಕ್ಕಿಂತ ಹೆಚ್ಚು ತೂಕವನ್ನು ಎತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಒತ್ತಡದಿಂದಾಗಿ, ಅವರ ತೋಳಿನ ರಕ್ತನಾಳವು ಒಡೆದುಹೋಗಿದೆ. ನೋವು ಅನುಭವಿಸಿದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ವಿರಾಮ ತೆಗೆದುಕೊಂಡು ಕೆಲವು ತಿಂಗಳು ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಆದರೆ ಚೇತರಿಸಿಕೊಳ್ಳುವ ಬದಲು ಮತ್ತೆ ಜಿಮ್ ಸೇರಿಕೊಂಡರು. ಇದರಿಂದ ಅವರ ಕೈಗೆ ಸೋಂಕು ತಗುಲಿದ್ದು, ಅವರ ಸ್ಥಿತಿ ಹದಗೆಟ್ಟಿದೆ. ನಂತರ ಅವರ ಪ್ರಾಣ ಉಳಿಸಲು ವೈದ್ಯರು ಬಲ ಕೈಯನ್ನು ಕತ್ತರಿಸಬೇಕಾಯಿತು.  ಇದನ್ನೂ ಓದಿ: Organ Transplant: ಸಾವು-ಬದುಕಿನ ಮಧ್ಯೆ ವ್ಯಕ್ತಿಯ ಹೋರಾಟ, ಅಂಗಾಂಗ ದಾನ ಮಾಡಿ ಜೀವ ಉಳಿಸಿದ ಸಹೋದರಿ

  ಈಗ ಗೇಬ್ ಯಂಗ್ ಬ್ಲಡ್ - ಪುರುಷರ ಮಾನಸಿಕ ಆರೋಗ್ಯ ಪಾಡ್‌ಕ್ಯಾಸ್ಟ್‌ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಘಟನೆಯಿಂದಾಗಿ ಅವರು ಸಾವನ್ನು ಬಹಳ ಹತ್ತಿರದಿಂದ ನೋಡಿದ್ದಾರೆ ಎಂದು ಜನರಿಗೆ ತಿಳಿಸಿದ್ದಾರೆ. ಈ ಅಪಘಾತದಿಂದಾಗಿ ಹಲವು ದಿನಗಳಿಂದ ಕೋಮಾ ಸ್ಥಿತಿಯಲ್ಲಿದ್ದೆ ಎಂದರು. ನನಗೆ ಪ್ರಜ್ಞೆ ಬಂದಾಗ, ನನ್ನ ಒಂದು ಕೈ ಕತ್ತರಿಸಲ್ಪಟ್ಟಿರುವುದನ್ನು ಕಂಡೆನು. ಇದರಿಂದ ಬೇಸರಗೊಂಡಿದ್ದೇನೆ ಎಂದು ಹೇಳಿದ್ದಾರೆ.
  Published by:Harshith AS
  First published: