Shocking News: ಗರ್ಲ್‌ಫ್ರೆಂಡ್ ಜೊತೆ ಹೋಗೋಕೆ ಗಂಡನಿಗೆ ಅನುಮತಿ ಕೊಟ್ಟ ಹೆಂಡ್ತಿ!

ತನ್ನ ಗಂಡನಿಗೆ ಬೇರೆ ಮಹಿಳೆಯೊಂದಿಗೆ ಸಮಯ ಕಳೆಯಲು ಅವಕಾಶ ನೀಡಿದ ಪತ್ನಿ

ತನ್ನ ಗಂಡನಿಗೆ ಬೇರೆ ಮಹಿಳೆಯೊಂದಿಗೆ ಸಮಯ ಕಳೆಯಲು ಅವಕಾಶ ನೀಡಿದ ಪತ್ನಿ

ಗಂಡನನ್ನು ಖುಷಿ ಪಡಿಸಲು ಹೆಂಡತಿಯರು ಏನೆಲ್ಲಾ ಮಾಡಬಹುದು, ಏನೇಲ್ಲಾ ಗಿಫ್ಟ್​ಗಳನ್ನು ತಂದು ಕೊಡಬಹುದು ಹೇಳಿ? ಆದರೆ ಇಲ್ಲೋರ್ವ ಹೆಂಡತಿ ಕೊಟ್ಟ ಗಿಫ್ಟ್​ ಏನಂತ ಕೇಳಿದ್ರೆ ನಿಜಕ್ಕೂ ಶಾಕ್​ ಆಗಬಹುದು ನಿಮಗೆ.​

  • Share this:
  • published by :

ಗಂಡ ಹೆಂಡತಿ (Husband Wife) ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಹಾಗೆಯೇ ಏನೇ ಕೋಪ ಇದ್ರು ಕೂಡ ಡಿವೋರ್ಸ್​ ತಂಕ ಹೋಗ್ಬಾರ್ದು. ಮಾತಾಡಿ ಸರಿ ಮಾಡಿಕೊಳ್ಳುವುದು ಉತ್ತಮ . ಅದೆಷ್ಟೋ ಬಾರಿ ಗಂಡ ತನಗೆ ಟೈಮ್​ ಕೊಡೋಲ್ಲ. ಹೆಂಡತಿ ನನ್ನ ಜೊತೆ ಸರಿಯಾಗಿ ಟೈಮ್​ ಸ್ಪೆಂಡ್ (Time Spend)​ ಮಾಡಲ್ಲ ಎನ್ನುವ ಹಲವಾರು ಕಾರಣಕ್ಕಾಗಿಯೇ (Reason) ಬೇರೆ ಬೇರೆ ಅಗೋದು ಕಾಮನ್​ಆಗಿದೆ. ಇದರ ಜೊತೆಗೆ ಅಸೂಯೆ, ಹೊಟ್ಟೆಕಿಚ್ಚು ಇಂತ ಸಾಮಾನ್ಯ ಕಾರಣಗಳಿಂದಲೂ ಕೂಡ ಡಿವೋರ್ಸ್​ ಆಗ್ತಾ ಇದೆ. ಆದ್ರೆ ಇಲ್ಲೊಂದು ವೈರಲ್ (Viral News)​ ಆಗ್ತಾ ಇರುವ ವಿಷಯವನ್ನು ಕೇಳಿದ್ರೆ ಶಾಕ್​ ಆಗುತ್ತೆ.


ಇಲ್ಲೋರ್ವ ಹೆಂಡತಿಗೆ ಕೊಟ್ಟ ಗಿಫ್ಟ್​ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರ. ಯಾಕೆ ಅಂದ್ರೆ ಹಾಗಿದೆ ಈಕೆ ಕೊಟ್ಟ ಗಿಫ್ಟ್​! ತಾನು ಯಾವಾಗ್ಲೂ ಬ್ಯುಸಿ ಇರ್ತೀನಿ, ಕೆಲಸ ಕೆಲಸ ಅಂತ ಓಡಾಡ್ತೀನಿ ಎಂದು ಹಲವಾರು ಬಾರಿ ಹೆಂಡತಿ ಯೋಚನೆ ಮಾಡಿದ್ಲು. ಇದಕ್ಕಾಗಿ ಗಂಡನಿಗೆ ಕೊಟ್ಟ ಉಡುಗೊರೆ ನಿಜಕ್ಕೂ ಯಾರಿಗೂ ಊಹಿಸಲೂ ಅಸಾಧ್ಯ.


ಗಂಡನನ್ನೇ ಬಿಟ್ಟುಕೊಟ್ಟ ಹೆಂಡತಿ
ಅಮೇರಿಕಾದ ಮೋನಿಕಾ ಹಲ್ಟ್ ಎಂಬ ಮಹಿಳೆ ತನ್ನ ಪತಿಯನ್ನು ಪ್ರತೀ ದಿನ ಸಂತೋಷವಾಗಿಟ್ಟುಕೊಳ್ಳಲು ತಾನು ಬ್ಯುಸಿಯಾಗಿರುವ ಸಮಯದಲ್ಲಿ ಬೇರೆ ಮಹಿಳೆಯರೊಂದಿಗೆ ಮಲಗಲು ಅವಕಾಶ ನೀಡಿದ್ದಾಳೆ. ತನ್ನ ಪತಿಯನ್ನು ಸಂತೋಷಪಡಿಸುವುದು ತನ್ನ ಕರ್ತವ್ಯ ಎಂದು ನಂಬುತ್ತಾಳೆ ಈಕೆ. ತನಗೆ ಬಿಡುವಿಲ್ಲದ ಕಾರಣ ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಲು ಕಳುಹಿಸಿದ ನಂತರ ಅವಳು ತನ್ನ ಪತಿಗೆ ಬೇಕಾಗುವಂತಹ ಅಡುಗೆ ಮಾಡಿ, ಮನೆಯನ್ನು ಸ್ವಚ್ಛಗೊಳಿಸುತ್ತಾಳೆ.


ಇದನ್ನೂ ಓದಿ: ತಂಗಿಯ ಮದುವೆಗೆ ಅಣ್ಣಂದಿರು ಖರ್ಚು ಮಾಡಿದ ಹಣ ಕೇಳಿದ್ರೆ ಪಕ್ಕಾ ಶಾಕ್​ ಆಗ್ತೀರ! ಇದು ಅಂತಿಂಥಾ ಮ್ಯಾರೇಜ್​ ಅಲ್ಲ


ಅಮೆರಿಕಾದ ಸುದ್ದಿ ಸಂಸ್ಥೆಯಾದ ನ್ಯೂಯಾರ್ಕ್ ಪೋಸ್ಟ್‌ನ ಸಂದರ್ಶನವೊಂದರಲ್ಲಿ, ತನ್ನ ಪತಿ ಜಾನ್ ಅವರನ್ನು ಸಂತೋಷಪಡಿಸುವುದು ಹೆಂಡತಿಯಾಗಿ ತನ್ನ ಪ್ರಾಥಮಿಕ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ. ತನ್ನ ಪತಿಗೆ ಇತರ ಮಹಿಳೆಯರೊಂದಿಗೆ ಮಲಗಲು ಅವಕಾಶ ನೀಡುವುದು ನಮ್ಮ ಸಂಬಂಧಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ಆಕೆ ಹೇಳಿದ್ದಾಳೆ.


ಸೆಲ್ಯೂಟ್​ ಹೊಡೆಯಲೇ ಬೇಕು ಅಲ್ವಾ?
ಮೊದಲಿಗೆ ಪತಿ ಬೇಡ ಎಂದ. ನಂತರ ಪತ್ನಿ ಒತ್ತಾಯ ಮಾಡಿದಕ್ಕಾಗಿಯೇ ಪತಿ ತೆರಳಿದ್ದಾನೆ. ಈಕೆಗೆ ನಿಜಕ್ಕೂ ಸೆಲ್ಯೂಟ್​ ಹೊಡೆಯಲೇ ಬೇಕು ಅಲ್ವಾ?  ತಾನು ಗೃಹಿಣಿಯಾಗಿದ್ದು, ತನ್ನ ಮನೆಯ ಜವಾಬ್ದಾರಿಯನ್ನು ಜೊತೆಗೆ ಅಡುಗೆ ಮತ್ತು ಮನೆಕೆಲಸಗಳನ್ನು ನೋಡಿಕೊಳ್ಳುವಾಗ ತನ್ನ ಪತಿಯೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಆಗ ತನ್ನ ಪತಿಯನ್ನು ಇತರ ಮಹಿಳೆಯರೊಂದಿಗೆ ಸಮಯ ಕಳೆಯಲು ಕಳುಹಿಸುತ್ತೇನೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾಳೆ.


ಇದನ್ನೂ ಓದಿ: ಇದೇ ಮೊದಲ ಬಾರಿ 2 ಗಂಡು ಇಲಿಗಳ ಜೀವಕೋಶಗಳಿಂದ ಮರಿ ಸೃಷ್ಟಿಸಿದ ವಿಜ್ಞಾನಿಗಳು; ಮಾನವನ ಮೇಲೂ ಈ ಪ್ರಯೋಗ?


ಇದಲ್ಲದೇ, ತನ್ನ ಪತಿ ಬೇರೆ ಮಹಿಳೆಯೊಂದಿಗೆ ಸಮಯ ಕಳೆಯಲು ಹೋಗುವಾಗ ಯಾವ ರೀತಿ ಬಟ್ಟೆಗಳನ್ನು ಧರಿಸಬೇಕು ಎಂದು ನಿರ್ಧರಿಸುವುದು ಕೂಡ ನಾನೇ ಎಂದು ಹೇಳಿಕೊಂಡಿದ್ದಾಳೆ.


top videos    ನಿಜಕ್ಕೂ ಈ ಹೆಂಡತಿ ಗ್ರೇಟ್​ ಅಲ್ವಾ? ಕೆಲವೊಬ್ಬರು ಇದಕ್ಕೆ ಹುಚ್ಚುತನ ಎಂದೆಲ್ಲಾ ಹೇಳಿದ್ದಾರೆ. ಆದರೆ, ಗಂಡನಿಗೆ ಮೂಲ ಸಂತೋಷ ಸಿಗಬೇಕು ಎಂಬ ಕಾರಣದಿಂದಾಗಿ ಏನು ಸಾಹಸ ಮಾಡಿದ್ರು ನೋಡಿ.

    First published: