• Home
  • »
  • News
  • »
  • trend
  • »
  • Shocking: ಕುಡಿದ ಮತ್ತಿನಲ್ಲಿ ಬೇರೆ ಮಹಿಳೆಯ ಬೆಡ್​ರೂಂನಲ್ಲಿ ಮಲಗಿದ ಅಧಿಕಾರಿ, ಮುಂದೇನಾಯ್ತು ಗೊತ್ತಾ?

Shocking: ಕುಡಿದ ಮತ್ತಿನಲ್ಲಿ ಬೇರೆ ಮಹಿಳೆಯ ಬೆಡ್​ರೂಂನಲ್ಲಿ ಮಲಗಿದ ಅಧಿಕಾರಿ, ಮುಂದೇನಾಯ್ತು ಗೊತ್ತಾ?

ಹಣಕಾಸು ಅಧಿಕಾರಿ ಜಾನ್‌. ಆರ್‌. ಟೈಸನ್‌

ಹಣಕಾಸು ಅಧಿಕಾರಿ ಜಾನ್‌. ಆರ್‌. ಟೈಸನ್‌

ಟೈಸನ್‌ ಫುಡ್ಸ್ ಕಂಪನಿಯ ಸಿಎಫ್‌ಒ ಆಗಿರುವ ಜಾನ್‌. ಆರ್‌. ಟೈಸನ್‌ ವಿರುದ್ಧ ಅರ್ಕಾನ್ಸಸ್‌ ಮೂಲದ ಮಹಿಳೆ ಪೊಲೀಸರಿಗೆ ದೂರು ನೀಡಿದ ಬಳಿಕ ಅವರನ್ನು ಬಂಧಿಸಲಾಗಿದೆ.

  • Share this:

ಕಂಪನಿಯೊಂದರ(Company) ಪ್ರಮುಖ ಹಣಕಾಸು ಅಧಿಕಾರಿಯೋರ್ವ ಕುಡಿದು, ಅಪರಿಚಿತ ಮಹಿಳೆಯ ಮನೆಗೆ ಹೋಗಿ ಆಕೆಯ ಬೆಡ್(Bed)‌ ಮೇಲೆ ಮಲಗಿದ ಘಟನೆ ಅಮೆರಿಕಾ(America)ದಲ್ಲಿ ನಡೆದಿದೆ. ಅಮೆರಿಕ ಮೂಲದ ಮಾಂಸ ಸಂಸ್ಕರಣಾ ಕಂಪನಿಯೊಂದರ ಪ್ರಮುಖ ಹಣಕಾಸು ಅಧಿಕಾರಿ ಜಾನ್‌. ಆರ್‌. ಟೈಸನ್‌ ವಿರುದ್ಧ ಅಪರಿಚಿತ ಮಹಿಳೆಯ ಮನೆಗೆ ಹೋಗಿ ಆಕೆಯ ಬೆಡ್‌ ಮೇಲೆ ಮಲಗಿದ ಆರೋಪ ಕೇಳಿ ಬಂದಿದೆ. ಮಹಿಳೆಯ ಹೇಳಿಕೆಯ ಆಧಾರದ ಮೇಲೆ ಈಗಾಗ್ಲೇ ಕೇಸ್‌ ದಾಖಲಿಸಿ ಟೈಸನ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.


ಟೈಸನ್‌ ಅವರನ್ನು ಬಂಧಿಸಿದ ಪೊಲೀಸರು


ಭಾನುವಾರ ಟೈಸನ್‌ ಅವರನ್ನು ಪೊಲೀಸರು ವಶಕ್ಕೆ ಪಡೆದು ಕಂಬಿ ಹಿಂದೆ ನಿಲ್ಲಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಟೈಸನ್‌ ಫುಡ್ಸ್ ಕಂಪನಿಯ ಸಿಎಫ್‌ಒ ಆಗಿರುವ ಜಾನ್‌. ಆರ್‌. ಟೈಸನ್‌ ವಿರುದ್ಧ ಅರ್ಕಾನ್ಸಸ್‌ ಮೂಲದ ಮಹಿಳೆ ಪೊಲೀಸರಿಗೆ ದೂರು ನೀಡಿದ ಬಳಿಕ ಅವರನ್ನು ಬಂಧಿಸಲಾಗಿದೆ. ಅಪರಿಚಿತ ವ್ಯಕ್ತಿ ತನ್ನ ಬೆಡ್‌ ಮೇಲೆ ಮಲಗಿದ್ದು, ತನ್ನ ಬಟ್ಟೆಗಳನ್ನು ನೆಲದ ಮೇಲೆ ಬಿಸಾಡಿ ಮಲಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.


ಇದನ್ನೂ ಓದಿ: Mother Gift to Son: ಮಗನಿಗೆ ಹೊಸ ಬಂಗಲೆ ತೋರಿಸಿ ಸಪ್ರೈಸ್ ಕೊಟ್ಟ ತಾಯಿ! ಮಗನ ರಿಯಾಕ್ಷನ್ ವೈರಲ್


ಡಿಸೆಂಬರ್ 1ಕ್ಕೆ ವಿಚಾರಣೆ


ಕೆಲ ಹೊತ್ತು ಜೈಲಿನಲ್ಲಿ ಕಳೆದ ಟೈಸನ್ $415 ಬಾಂಡ್ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇನ್ನೂ ಡಿಸೆಂಬರ್ 1ಕ್ಕೆ ವಿಚಾರಣೆ ಇರಲಿದ್ದು ಅಂದು ಟೈಸನ್ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.


ಮಹಿಳೆಯ ದೂರಿನನ್ವಯ ಬಂಧನ


ಟೈಸನ್ ಫುಡ್ಸ್ ಸಿಎಫ್‌ಒ ಜಾನ್ ಆರ್ ಟೈಸನ್, ಕಂಪನಿಯ ಸಂಸ್ಥಾಪಕರ ಮರಿಮೊಮ್ಮಗ. ಅರ್ಕಾನ್ಸಾಸ್‌ನಲ್ಲಿ ಮಹಿಳೆಯೊಬ್ಬರು ಮನೆಗೆ ವಾಪಸ್‌ ಆಗುತ್ತಿದ್ದಂತೆಯೇ ತಮ್ಮ ಹಾಸಿಗೆ ಮೇಲೆ ಈ ವ್ಯಕ್ತಿ ಮಲಗಿದ್ದು ಕಂಡು ಬಂದಿದೆ. ಇದನ್ನು ನೋಡಿದ ಮಹಿಳೆ ಹೆದರಿ ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಾನು ಮನೆಗೆ ವಾಪಸ್‌ ಬಂದಾಗ ತನಗೆ ಪರಿಚಯವಿಲ್ಲದ ಪುರುಷರೊಬ್ಬರು ತನ್ನ ಬೆಡ್‌ ಮೇಲೆ ಮಲಗಿದ್ದು, ಅವರ ಬಟ್ಟೆಗಳು ನೆಲದ ಮೇಲೆ ಬಿದ್ದಿದ್ದವು ಎಂದೂ ದೂರಿನಲ್ಲಿ ತಿಳಿಸಿದ್ದಾರೆ.


ಮಹಿಳೆ ದೂರಿನನ್ವಯ ಫಯೆಟ್ಟೆವಿಲ್ಲೆ ಪೊಲೀಸರು ಮಹಿಳೆ ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು, ಟೈಸನ್‌ ಅವರನ್ನು ಎಬ್ಬಿಸಿದಾಗ, ಅವರು ಸರಿಯಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಪೊಲೀಸರು ಅವರನ್ನು ವಿಚಾರಿಸುತ್ತಿದ್ದರೂ, ಮತ್ತೆ ಮಲಗಿ ಕೆಲ ಸಮಯದ ನಂತರ ಆ ಹಾಸಿಗೆಯಿಂದ ಎದ್ದರು ಎಂದು ತಿಳಿದುಬಂದಿದೆ.


ಪೊಲೀಸ್ ಅಧಿಕಾರಿಗಳು ಟೈಸನ್‌ ಹೆಚ್ಚಾಗಿ ಕುಡಿದಿದ್ದಾರೆ ಎಂದು ಅವರ ಉಸಿರಿನ ವಾಸನೆಯನ್ನು ಪರಿಶೀಲಿಸಿ ಹೇಳಿದ್ದಾರೆ. ಟೈಸನ್‌ ಮೇಲೆ ಪೊಲೀಸರು ಸಾರ್ವಜನಿಕ ಮಾದಕತೆ ಮತ್ತು ಕ್ರಿಮಿನಲ್ ಅತಿಕ್ರಮದ ಆರೋಪ ಹೊರಿಸಿ ಬಂಧಿಸಿದ್ದಾರೆ.


ಕ್ಷಮೆಯಾಚಿಸಿದ ಟೈಸನ್‌


ಈ ಎಲ್ಲಾ ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ಟೈಸನ್ ಫುಡ್ಸ್ ನಿರಾಕರಿಸಿದ್ದು, ಇದು ನನ್ನ "ವೈಯಕ್ತಿಕ ವಿಷಯ" ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಈ ಬಗ್ಗೆ ಸಿಎನ್‌ಎನ್‌ಗೆ ಇಮೇಲ್‌ ಮಾಡಿದ ಟೈಸನ್‌ ಫುಡ್ಸ್‌, ನಮಗೆ ಈ ವಿಚಾರದ ಬಗ್ಗೆ ಅರಿವಿದೆ. ಆದರೆ, ಇದು ವೈಯಕ್ತಿಕ ವಿಚಾರವಾದ್ದರಿಂದ ನಾವು ಈ ಬಗ್ಗೆ ಹೆಚ್ಚೇನೂ ಪ್ರತಿಕ್ರಿಯೆ ನೀಡಲ್ಲ ಎಂದು ಉತ್ತರಿಸಿದ್ದಾರೆ.


ಟೈಸನ್‌ ಈ ವಿಚಾರವಾಗಿ ಕ್ಷಮೆಯಾಚಿಸಿದ್ದಾರೆ ಮತ್ತು ಮದ್ಯಪಾನ ಚಟದ ಕುರಿತು ಕೌನ್ಸೆಲ್ಲಿಂಗ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದರು. "ನನ್ನ ವೈಯಕ್ತಿಕ ಮೌಲ್ಯಗಳು, ಕಂಪನಿಯ ಮೌಲ್ಯಗಳು ಮತ್ತು ಇಲ್ಲಿ ಟೈಸನ್ ಫುಡ್ಸ್‌ನಲ್ಲಿ ನಾವು ಪರಸ್ಪರ ಹೊಂದಿರುವ ಹೆಚ್ಚಿನ ನಿರೀಕ್ಷೆಗಳೊಂದಿಗೆ ಅಸಮಂಜಸವಾಗಿರುವ ವೈಯಕ್ತಿಕ ನಡವಳಿಕೆಗಾಗಿ ನಾನು ಮುಜುಗರಕ್ಕೊಳಗಾಗಿದ್ದೇನೆ.


ಇದನ್ನೂ ಓದಿ: Viral News: 21 ದಿನದ ಹೆಣ್ಣು ಶಿಶುವಿನ ಹೊಟ್ಟೆಯಲ್ಲಿದ್ದವು 8 ಭ್ರೂಣಗಳು! ಇದು ನಿಮ್ಮನ್ನು ಬೆಚ್ಚಿ ಬೀಳಿಸುವ ಸುದ್ದಿ


ನಾನು ಗಂಭೀರವಾದ ತಪ್ಪನ್ನು ಮಾಡಿದ್ದೇನೆ ಮತ್ತು ಇದು ನನ್ನ ಕೆಲಸಗಳ ಮೇಲೆ ಪರಿಣಾಮ ಬೀರುತ್ತಿದೆ" ಎಂದು ಟೈಸನ್‌ ಫುಡ್ಸ್‌ ಕಂಪನಿಯ ಪ್ರಮುಖ ಹಣಕಾಸು ಅಧಿಕಾರಿ ಜಾನ್‌. ಆರ್‌. ಟೈಸನ್‌ ಕ್ಷಮೆ ಕೇಳಿದ್ದಾರೆ.

Published by:Latha CG
First published: