ಯುವ ವಯಸ್ಸಿನಲ್ಲಿ ಇದ್ದಾಗ ಎನಾದ್ರೂ ಸಾಧನೆ ಮಾಡ್ಬೇಕು, ಮನೆಯವರನ್ನೆಲ್ಲಾ ಚೆನ್ನಾಗಿ ನೋಡ್ಕೋಬೇಕು ಅಂತ ಒಂದು ಪಂಗಡದವರಿಗೆ ಅನಿಸಿದರೆ, ಇನ್ನೂ ಕೆಲವರಿಗೆ ಸಖತ್ ಮಜಾ ಮಾಡ್ಬೇಕು, ಲೈಫ್ (Life) ಅಲ್ಲಿ ಎಂಜಾಯ್ ಮಾಡಬೇಕು ಅಂತ ಹುಚ್ಚು ಕನಸುಗಳು ಇರುತ್ತೆ. ಹಾಗೇಯೇ ಬಾಳು ಮೂರೇ ದಿನ ಯಾವಾಗ ಸಾಯ್ತೀವೋ ಗೊತ್ತಿಲ್ಲ, ಅಡ್ವೆಂಚರ್ಸ್ ಮಾಡಬೇಕು ಅಂತ ಕೆಲವೊಬ್ಬರಿಗೆ ಆಸೆ ಆಕಾಂಕ್ಷೆಗಳು ಇರೋದು ತಪ್ಪೇನಲ್ಲ ಬಿಡಿ. ಆದರೆ ಸಣ್ಣ ವಯಸ್ಸಿನಲ್ಲಿಯೇ ಅಧ್ಯಾತ್ಮ, ಲೋಕ (World), ಮೋಕ್ಷ ಈ ರೀತಿಯಾದ ಜೀವನಕ್ಕೆ ಹೋಗಲು ಇಷ್ಟಪಡುವುದು ಬೆರಳೆಣಿಕೆಯಷ್ಟು ಜನರೇ ಬಿಡಿ. ಯಾಕೆ ಈ ವಿಷಯವನ್ನು ಹೇಳ್ತಾ ಇದ್ದೀನಿ ಅಂದ್ರೆ ಇಲ್ಲೊಬ್ಬ ವ್ಯಕ್ತಿ ತನ್ನ ಸಣ್ಣ ವಯಸ್ಸಿನಲ್ಲಿ ಏನು ಮಾಡಿದ್ದಾರೆ ನೋಡಿ. ಕೇಳಿದ್ರೆ ಪಕ್ಕಾ ಶಾಕ್ ಆಗ್ತೀರಾ!
ಹೌದು. ಅಮೇರಿಕಾದಲ್ಲಿ ಉದ್ಯೋಗ ಸಿಗೋದು ಅಂದರೆ ಅಷ್ಟು ಸುಲಭ ಅಲ್ಲ. ಯಾಕಂದ್ರೆ ತಿಂಗಳಿಗೆ ಲಕ್ಷಗಟ್ಟಲೆ ವೇತನ, ಐಷಾರಾಮಿ ಜೀವನ, ಬಿಂದಾಸ್ ಬದುಕು ಇವೆಲ್ಲಾ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಆದರೆ ಈ ವ್ಯಕ್ತಿಗೆ ಅದ್ಯಾವ ಮನಸ್ಸು ಬಂತೋ ಎನೋ ಗೊತ್ತಿಲ್ಲ. ಯಾಕಂದ್ರೆ ಇದೆಲ್ಲ ಜೀವನಕ್ಕೆ ಪೂರ್ಣವಿರಾಮ ಇಟ್ಟು ದೊಡ್ಡ ಮನಸ್ಸು ಮಾಡಿದ್ದಾರೆ.
ಮಧ್ಯಪ್ರದೇಶ ಮೂಲದ 28ವರ್ಷದ ಯುವಕ ಈ ಬಿಂದಾಸ್ ಲೈಫ್ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಿದ್ದಾರೆ. ಈ ಧೀರನ ಹೆಸರು ಪ್ರನ್ಸುಖ್ ಕಾಂತೇಡ್. ಎಂಜಿನಿಯರ್ ಮುಗಿಸಿದ ಬಳಿಕ ಅಮೇರಿಕಾಕ್ಕೆ ತೆರಳಿ , ಅಲ್ಲಿ ಡೇಟಾ ಸೈನ್ಸ್ನಲ್ಲಿ ಉನ್ನತ ಶಿಕ್ಷಣ ಮುಗಿಸಿ, ವಾರ್ಷಿಕ 1,5ಕೋಟಿ ರೂ. ಸಂಬಳದ ಉದ್ಯೋಗಕ್ಕೆ ಸೇರಿಕೊಂಡಿದ್ದರು.
ಇಷ್ಟು ಕೇಳ್ತಾನೇ ನಿಮಗೆ ನಿಟ್ಟುಸಿರು ಬಿಟ್ಟಿದಂತಾಗಿರಬಹುದು. ಯಾಕಂದ್ರೆ ತಿಂಗಳಿಗೆ ಲಕ್ಷಗಟ್ಟಲೆ ವೇತನ, ಸೂಪರ್ ಸೌಲಭ್ಯ ಇದ್ರೂ ಕೂಡ ಎಲ್ಲವನ್ನೂ ತ್ಯಜಿಸಿ ಸನ್ಯಾಸತ್ವ ಲೋಕಕ್ಕೆ ಕಾಲಿಟ್ಟರು ಅಂತ, ಅಲ್ವಾ? ಈ ಯುವಕನಿಗೆ ಅಷ್ಟು ವೇತನ ಇದ್ರೂ ಜೀವನದಲ್ಲಿ ನೆಮ್ಮದಿ ಇರ್ಲಿಲ್ಲ ಅಂತೆ. ಮಾಡುವ ಕೆಲಸದಲ್ಲಿ ತೃಪ್ತಿ ಇಲ್ಲದೇ, ತನಗೆ ಬೇಕಾದ ಜೀವನ ಇದಲ್ಲ, ಕೋಟಿಗಟ್ಟಲೆ ಸಂಬಳ ಇದ್ರೂ ಮನಸ್ಸಿನಲ್ಲಿ ನೂರಾರು ಕಳವಳ, ಸಂತೋಷ ಎಂಬುದೇ ಇಲ್ಲ ಎನ್ನುವ ಸಲುವಾಗಿ ಎಲ್ಲವನ್ನೂ ತ್ಯಜಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲೇ ಇದೆ ಅಲೆಕ್ಸಾಂಡರ್ನ ಸೈನಿಕರ ಗ್ರಾಮ, ಇಲ್ಲಿ ಹೊರಗಿನಿಂದ ಬಂದವರು ಏನೂ ಮುಟ್ಟುವಂತಿಲ್ಲ!
ಇಷ್ಟು ಸಂಬಳವನ್ನು ತ್ಯಜಿಸಿ ಅಮೇರಿಕಾದಿಂದ ಭಾರತಕ್ಕೆ ಬಂದರು ಕಾಂತೇಡ್. ತದನಂತರ, ಆಡಂಬರ ಜೀವನ ಹಾಗೂ ಪ್ರಾಪಂಚಿಕ ಸಂತೋಷಗಳನ್ನು ತ್ಯಜಿಸಲು ಮುಂದಾದರು. ಅಹಿಂಸೆ ಬೋಧಿಸುವುದನ್ನು ಗುರಿಯಾಗಿಸಿಕೊಂಡರು. ಮೋಕ್ಷಕ್ಕೆ ಇದೇ ದಾರಿ ಅಂದುಕೊಂಡು, ಹಣ ಮುಖ್ಯವಲ್ಲ, ನೆಮ್ಮದಿ ಬಹಳ ಮುಖ್ಯ. ಇದಕ್ಕೆ ಧ್ಯಾನವು ಸಹಕರಿಸುತ್ತದೆ ಎಂದು ಆಲೋಚನೆ ಮಾಡಲು ಆರಂಭಿಸಿದರು.
ಕಳೆದ ವರ್ಷ ಭಾರತಕ್ಕೆ ಮರಳಿದ ಕಾಂತೇಡ್, ಜೈನ ಸನ್ಯಾಸದಲ್ಲಿ ಒಲವು ತೋರಿಸಿದರು. ಮುಂಬರುವ ಡಿಸೆಂಬರ್ 26ರಂದು ಕಾಂತೇಡ್ ಜೈನ ಸನ್ಯಾಸಿಯಾಗಲಿದ್ದು, ಜೈನ ಧಾರ್ಮಿಕ ಗುರು ಜಿನೇಂದ್ರ ಮುನಿಯಿಂದ ಸನ್ಯಾಸ ದೀಕ್ಷೆ ತೆಗೆದುಕೊಳ್ಳಲಿದ್ದಾರೆ. ಕಾಂತೇಡ್ ಜೊತೆಗೆ ಇನ್ನಿಬ್ಬರು ಯುವಕರೂ ಕೂಡ ಸನ್ಯಾಸತ್ವ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದಾರೆ. ದೀಕ್ಷಾ ಕಾರ್ಯಕ್ರಮಕ್ಕೆ 50ಕ್ಕೂ ಹೆಚ್ಚು ಜೈನ ಸಂತರು ಆಗಮಿಸಲಿದ್ದಾರೆ.
ಇಷ್ಟು ದುಡಿಯುವಾಗ ಸಾಮಾನ್ಯವಾಗಿ ಮನೆಯಲ್ಲಿನ ಮಗ ಈ ರೀತಿಯಾದ ನಿರ್ಧಾರಗಳನ್ನು ತೆಗದುಕೋಳ್ಳುತ್ತಾನೆ ಅಂದ್ರೆ ಯಾವ ಪೋಷಕರಾದ್ರೂ ತಡೆಯುತ್ತಾರೆ ಅಥವಾ ಗೋಗರೆಯುತ್ತಾರೆ. ಆದರೆ, ಕಾಂತೇಡ್ ಮನೆಯಲ್ಲಿ ಒಂದು ಚೋರು ತಡೆಯಲಿಲ್ಲ. ಮಗನ ಈ ನಿರ್ಧಾರಕ್ಕೆ ಸಂಪೂರ್ಣ ಅಸ್ತು ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ