• Home
 • »
 • News
 • »
 • trend
 • »
 • Runner Job- ತನ್ನ ನೆಚ್ಚಿನ ರೆಸ್ಟೋರೆಂಟ್ ಕಷ್ಟಕ್ಕೆ ಸಿಲುಕಿದಾಗ ಸ್ಪಂದಿಸಿದ ಅಜ್ಜಿ; 81ರ ವಯಸ್ಸಲ್ಲಿ ರನ್ನರ್ ಕೆಲಸ

Runner Job- ತನ್ನ ನೆಚ್ಚಿನ ರೆಸ್ಟೋರೆಂಟ್ ಕಷ್ಟಕ್ಕೆ ಸಿಲುಕಿದಾಗ ಸ್ಪಂದಿಸಿದ ಅಜ್ಜಿ; 81ರ ವಯಸ್ಸಲ್ಲಿ ರನ್ನರ್ ಕೆಲಸ

ಬೋನೀ ಆಗಸ್ಟ್

ಬೋನೀ ಆಗಸ್ಟ್

ಅಮೆರಿಕದಲ್ಲಿ ಕೆಲಸ ಮಾಡುವವರ ಕೊರತೆ ಕಾಡುತ್ತಿದೆ. ಸಂಬಳ, ಅಸಮರ್ಪಕ ಸಮಯ ಇತ್ಯಾದಿ ಕಾರಣಗಳಿಂದ ಕೆಲಸ ಬಿಡುವವರ ಸಂಖ್ಯೆ ಹೆಚ್ಚುತ್ತಿದೆ. ನಿವೃತ್ತರಾದವರಿಗೆ ಮತ್ತೆ ಉದ್ಯೋಗಾವಕಾಶ ಸಿಗುತ್ತಿದೆ. 81 ವರ್ಷದ ಅಜ್ಜಿಯೊಬ್ಬರು ರನ್ನರ್ ಕೆಲಸ ಮಾಡುತ್ತಿದ್ದಾರೆ.

 • Share this:

  ನೆಚ್ಚಿನ ರೆಸ್ಟೋರೆಂಟ್​ವೊಂದು ಸಿಬ್ಬಂದಿ ಕೊರತೆಯಿಂದಾಗಿ ಡೈನಿಂಗ್ ಕೊಠಡಿ ಮುಚ್ಚಿದ ಕಾರಣ ಓಹಿಯೋದ 81 ವರ್ಷದ ಬೋನಿ ಆಗಸ್ಟ್ (Bonnie August) ಹೆಸರಿನ ಮುತ್ತಜ್ಜಿಯೊಬ್ಬರು ಇದೇ ರೆಸ್ಟೋರೆಂಟ್‌ನಲ್ಲಿ ರನ್ನರ್ ಆಗಿ ಕೆಲಸ ಮಾಡುತ್ತಾ ಸಹಾಯಕ್ಕೆ ನಿಂತಿದ್ದಾರೆ. ಹ್ಯಾಂಬರ್ಗರ್ ಮತ್ತು ಫ್ರೋಜನ್-ಕಸ್ಟರ್ಡ್ ಚೈನ್‌ಗೆ ಸೇರಿದ ಫೈಂಡ್ಲೇ (Findlay Restaurant) ರೆಸ್ಟೋರೆಂಟ್ ಬೇರೆ ಬೇರೆ ಕಾರಣಕ್ಕೆ ಡ್ರೈವ್ ಥ್ರೂ ಆಹಾರ ಸೇವೆಗೆ ಮಾತ್ರ ಸೀಮಿತಗೊಳಿಸಿದೆ. ಇದಕ್ಕೆ ಸಿಬ್ಬಂದಿ ಕೊರತೆಯೂ ಒಂದು ಕಾರಣ. 2009ರಲ್ಲಿ ನಿವೃತ್ತರಾಗಿದ್ದ ಬೋನಿ ಆಗಸ್ಟ್ ಅವರು ಈ ರೆಸ್ಟೋರೆಂಟ್​ಗೆ ಕಳೆದ 10 ವರ್ಷಗಳಿಂದ ಭೇಟಿ ಕೊಡುತ್ತಾ ಖಾಯಂ ಗ್ರಾಹಕರಾಗಿದ್ದವರು. ಈಗ ರೆಸ್ಟೋರೆಂಟ್ ಸಿಬ್ಬಂದಿ ಕೊರತೆಯಿಂದ ತಮ್ಮ ಕಣ್ಣೆದುರೇ ಮುರುಟಿಕೊಳ್ಳುತ್ತಿರುವುದನ್ನು ನೋಡಿ ಮರುಗಿದ ಬೋನಿ ಅವರು ರೆಸ್ಟೋರೆಂಟ್​ನಲ್ಲಿ ಕೆಲಸ ಮಾಡಲು ಆರಂಭಿಸಿದರು. 81 ವರ್ಷದ ಅವರು ರನ್ನರ್ (Runner job in restaurant) ಕೆಲಸ ನಿರ್ವಹಿಸುತ್ತಿದ್ಧಾರೆ. ಸರ್ವರ್ ರೀತಿಯಲ್ಲಿ ರನ್ನರ್ ಕೆಲಸ. ಒಂದೇ ವ್ಯತ್ಯಾಸ ಎಂದರೆ ಕಾರುಗಳಲ್ಲಿ ಕೂತಿರುವ ಗ್ರಾಹಕರ ಬಳಿ ಹೋಗಿ ಊಟದ ಆರ್ಡರ್ ಪಡೆದು ಅವರಿಗೆ ಆಹಾರ ಸಪ್ಲೈ ಮಾಡುವುದು ರನ್ನರ್ ಕೆಲಸ. ಕುತೂಹಲ ಎಂದರೆ, ಬೋನಿ ಆಗಸ್ಟ್ ಅವರಿಗೆ ಕಾರಿನಲ್ಲಿ ಆಹಾರ ಸೇವಿಸುವುದು ವೈಯಕ್ತಿಕವಾಗಿ ಇಷ್ಟ ಇಲ್ಲ. ಆದರೆ, ರೆಸ್ಟೋರೆಂಟ್ ಮೇಲಿನ ಪ್ರೀತಿಗಾಗಿ ಅವರು ಬೇರೆ ಗ್ರಾಹಕರಿಗೆ ಇದೇ ಸೇವೆ ಮಾಡಬೇಕಾಗಿ ಬಂದಿದೆ.


  ಪ್ರಸ್ತುತ ರೆಸ್ಟೋರೆಂಟ್‌ನಲ್ಲಿ ರನ್ನರ್ (ಕಾರಿನ ಬಳಿ ಹೋಗಿ ಆಹಾರ ವಿತರಿಸುವುದು) ಆಗಿ ಕಾರ್ಯನಿರ್ವಹಿಸುತ್ತಿರುವ ಬೋನಿ ತಮ್ಮ ಮೆಚ್ಚಿನ ರೆಸ್ಟೋರೆಂಟ್‌ನ ಕಷ್ಟಕಾಲದಲ್ಲಿ ಈ ರೀತಿ ಸಹಕಾರ ನೀಡುತ್ತಿದ್ದಾರೆ. ಅಮೆರಿಕದಲ್ಲಿ ಸಾಕಷ್ಟು ಜನರು ಉತ್ತಮ ವೇತನ, ಪ್ರಯೋಜನಗಳು ಹಾಗೂ ಕೆಲಸದ ಪರಿಸ್ಥಿತಿಗಳಿಂದಾಗಿ ಉದ್ಯೋಗ ತೊರೆಯುತ್ತಿದ್ದಾರೆ. ದೀರ್ಘ ಹಾಗೂ ಸಾಮಾಜಿಕವಲ್ಲದ ಕೆಲಸದ ಸಮಯ, ಅಸಭ್ಯ ಗ್ರಾಹಕರು ಹಾಗೂ ಕೋವಿಡ್-19ಗೆ ಒಳಗಾಗುವ ಭಯದಿಂದ ಅತಿಥೇಯ ಸಿಬ್ಬಂದಿ ಕೂಡ ಕೆಲಸ ತೊರೆಯುತ್ತಿದ್ದಾರೆ.


  ಯುಎಸ್‌ನಲ್ಲಿರುವ ಚಿಕ್-ಫಿಲ್-ಎ (Chick-fil-A), ವೆಂಡಿಸ್ (Wendy's), ಮೆಕ್‌ಡೊನಾಲ್ಡ್ಸ್ (McDonald's) ಮೊದಲಾದ ಪ್ರತಿಷ್ಠಿತ ಕಂಪನಿಗಳ ಹೋಟೆಲ್, ರೆಸ್ಟೋರೆಂಟ್​ಗಳಲ್ಲಿ ಡೈನಿಂಗ್ ಸೇವೆ ಸ್ಥಗಿತಗೊಳ್ಳುವ ಟ್ರೆಂಡ್ ಇದೆ. ಡ್ರೈವ್-ಥ್ರೂ ಡೆಲಿವರಿಗೆ ಮಾತ್ರ ಆಹಾರ ಸೇವೆ ಸೀಮಿತಗೊಳಿಸುತ್ತಿವೆ. ಸಿಬ್ಬಂದಿ ಕೊರತೆಯಿಂದಾಗಿ ಬಹುದೊಡ್ಡ ರೆಸ್ಟೋರೆಂಟ್‌ಗಳು ಡೈನಿಂಗ್ ಕೊಠಡಿ ಮುಚ್ಚುವ ನಿರ್ಧಾರವನ್ನು ತಾಳಿವೆ. ಈ ರೀತಿಯ ವ್ಯವಸ್ಥೆಯು ವೇಗ ಹಾಗೂ ಉತ್ತಮ ಸೇವೆಯನ್ನು ಒದಗಿಸಲು ಸಹಕಾರಿಯಾಗಿದ್ದು, ಹಣವನ್ನೂ ಉಳಿಸಲಿದೆ ಎಂಬುದು ರೆಸ್ಟೋರೆಂಟ್ ಮಾಲಿಕರ ಅನಿಸಿಕೆ.


  ಇದನ್ನೂ ಓದಿ: Viral News: ನಂಬರ್‌ ಪ್ಲೇಟ್‌ನಲ್ಲಿ SEX ಪದ: ತಂದೆ ಕೊಡಿಸಿದ ಸ್ಕೂಟಿ ರಸ್ತೆಗೆ ಇಳಿಸಲು ಧೈರ್ಯ ಮಾಡದ ಯುವತಿ


  ಫಿಂಡ್ಲೇಯಲ್ಲಿನ ಕಲ್ವರ್ಸ್‌ನ ಫ್ರಾಂಚೈಸಿ ಪಡೆದಿರುವ ಡೇನಿಯಲ್ ಡಾಕ್ಸೆ ಅವರು ಸಿಎನ್​ಎನ್ ಜೊತೆ ಮಾತನಾಡಿ, ತಮ್ಮ ರೆಸ್ಟೋರೆಂಟ್‌ ಊಟದ ಕೊಠಡಿಗಳನ್ನು ಮುಚ್ಚಿದ್ದೇವೆ. ಡ್ರೈವ್-ಥ್ರೂಗೆ ಇರುವ ಬೇಡಿಕೆ ಮತ್ತು ರೆಸ್ಟೋರೆಂಟ್​ನಲ್ಲಿ ಸಿಬ್ಬಂದಿ ಕೊರತೆ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.


  ಬೋನಿ ಆಗಸ್ಟ್ ಅವರು ವಾರದ ಐದು ದಿನಗಳ ಕಾಲ ಕೆಲಸ ಮಾಡುವುದಾಗಿ ಹೇಳಿದ್ದು, ಗ್ರಾಹಕರ ಕಾರಿನ ಬಳಿಗೆ ಹೋಗಿ ಆರ್ಡರ್‌ಗಳನ್ನು ತರುವುದು ಆಕೆಯ ಕೆಲಸ ಎಂದು ಹೇಳಿದ್ದಾರೆ. ನನ್ನ ಉದ್ಯೋಗದ ಹೆಸರು ರನ್ನರ್ ಆಗಿದ್ದರೂ ನಾನು ಆರ್ಡರ್ ತರುವುದಕ್ಕಾಗಿ ಓಡುವುದಿಲ್ಲ .ಬದಲಿಗೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಆರ್ಡರ್ ತಂದು ಅವರ ಕಾರಿನ ಬಳಿ ಆಹಾರ ವಿತರಿಸುತ್ತೇನೆ ಎಂದು ತಿಳಿಸಿದ್ದಾರೆ.


  ಇದನ್ನೂ ಓದಿ: Winter Style : ಚಳಿಗಾಲದಲ್ಲಿ ಟ್ರೆಂಡಿಯಾಗಿ ಕಾಣಿಸಿಕೊಳ್ಳಲು ಇಲ್ಲಿದೆ ಬೆಸ್ಟ್ ಫ್ಯಾಶನ್ ಟಿಪ್ಸ್


  ಅಮೆರಿಕದಲ್ಲಿ ನಿವೃತ್ತರು ಕೆಲಸ ಮಾಡುವ ಟ್ರೆಂಡ್:


  ಅಮೆರಿಕದಲ್ಲಿ ಕೆಲಸ ಮಾಡುವವರ ಕೊರತೆ ಹೆಚ್ಚುತ್ತಿದ್ದು, ನಿವೃತ್ತಿ ಹೊಂದಿದ ಜನರಿಗೆ ಮತ್ತೆ ಉದ್ಯೋಗಾವಕಾಶಗಳು ಸಿಗುತ್ತಿವೆ. ಸಿಬ್ಬಂದಿ ಕೊರತೆ, ಹೆಚ್ಚುತ್ತಿರುವ ದೈನಂದಿನ ಖರ್ಚುಗಳು ಹಾಗೂ ವ್ಯಾಕ್ಸಿನ್ ಬಿಡುಗಡೆಯ ನಡುವೆಯೇ ನಿವೃತ್ತಿ ಹೊಂದಿದ ಇತರ ವಯಸ್ಸಾದವರು ಬೇರೆ ಬೇರೆ ಉದ್ಯೋಗಗಳನ್ನು ಅರಸಿಕೊಂಡು ಸೇರಿಕೊಳ್ಳುತ್ತಿದ್ದಾರೆ.


  ವಾಷಿಂಗ್ಟನ್‌ನಲ್ಲಿ ಆಭರಣ ಅಂಗಡಿಯ ಮಾಲೀಕರೊಬ್ಬರು ಹೇಳುವಂತೆ, ಆಕೆಯ ಪತಿ ನಿವೃತ್ತಿ ಹೊಂದಿದ ನಂತರ ಸಿಬ್ಬಂದಿ ಕೊರತೆಯಿಂದಾಗಿ ಆಭರಣದ ಅಂಗಡಿಯಲ್ಲಿ ತಾವೇ ಕೆಲಸಕ್ಕೆ ತೊಡಗಿಸಿಕೊಂಡಿದ್ದಾರೆ ಮತ್ತು ಆಕೆಗೆ ಸಹಾಯ ಮಾಡುತ್ತಿದ್ದಾರೆ ಎನ್ನಲಾಗಿದೆ. ಉತ್ತರ ಕ್ಯಾಲಿಫೋರ್ನಿಯಾದ ಎಷ್ಟೋ ಮಳಿಗೆಗಳು ಸಿಬ್ಬಂದಿ ಕೊರತೆಯನ್ನು ನಿಭಾಯಿಸಲು ನಿವೃತ್ತಿ ಹೊಂದಿದವರನ್ನು ಸಂಪರ್ಕಿಸಿ ಕೆಲಸಕ್ಕೆ ಸೇರುವಂತೆ ಕೋರುತ್ತಿವೆಯಂತೆ.


  ಭಾಷಾಂತರ ನೆರವು: ಏಜೆನ್ಸಿ

  Published by:Vijayasarthy SN
  First published: