• Home
  • »
  • News
  • »
  • trend
  • »
  • Viral News: ತನಗೆ ಕಚ್ಚಿದ ಹಾವನ್ನೇ ಹಿಡಿದು ಕಚ್ಚಿದ ಬಾಲಕ! ಹುಡುಗ ಸೇಫ್, ಉರಗ ಖಲಾಸ್!

Viral News: ತನಗೆ ಕಚ್ಚಿದ ಹಾವನ್ನೇ ಹಿಡಿದು ಕಚ್ಚಿದ ಬಾಲಕ! ಹುಡುಗ ಸೇಫ್, ಉರಗ ಖಲಾಸ್!

ಹಾವನ್ನೇ ಕಚ್ಚಿ ಸಾಯಿಸಿದ ಬಾಲಕ

ಹಾವನ್ನೇ ಕಚ್ಚಿ ಸಾಯಿಸಿದ ಬಾಲಕ

ಇದು ಹಾವು ಬಾಲಕನನ್ನು ಕಚ್ಚಿದ ಸುದ್ದಿಯಲ್ಲ, ಬದಲಾಗಿ ಬಾಲಕನೇ ಹಾವಿಗೆ ಕಚ್ಚಿದ ಸುದ್ದಿ! ಇನ್ನೂ ಮುಂದುವರೆದು, ಬಾಲಕ ಬಚಾವಾಗಿ, ಆ ವಿಷಕಾರಿ ಹಾವು ಸತ್ತುಹೋದ ಸುದ್ದಿ!

  • News18 Kannada
  • Last Updated :
  • Chhattisgarh, India
  • Share this:

ಛತ್ತೀಸ್‌ಗಢ: ನಾಯಿ (Dog) ಮನುಷ್ಯನನ್ನು (Man) ಕಚ್ಚಿದರೆ ಸುದ್ದಿಯಲ್ಲ, ಅದೇ ಮನುಷ್ಯನೇ ನಾಯಿಯನ್ನು ಕಚ್ಚಿದರೆ ಸುದ್ದಿ ಎನ್ನುವುದು ಮಾಧ್ಯಮ ತರಗತಿಗಳಲ್ಲಿ (media classes) ಕಲಿಸುವ ಮೂಲಪಾಠ (basic lesson). ಇಲ್ಲಿ ಸ್ವಲ್ಪ ಬದಲಾಯಿಸಿ ಹೇಳಬೇಕು ಅಂದರೆ, ಇದು ಹಾವು (Snake) ಬಾಲಕನನ್ನು (Boy) ಕಚ್ಚಿದ ಸುದ್ದಿಯಲ್ಲ, ಬದಲಾಗಿ ಬಾಲಕನೇ ಹಾವಿಗೆ ಕಚ್ಚಿದ ಸುದ್ದಿ! ಇನ್ನೂ ಮುಂದುವರೆದು, ಬಾಲಕ ಬಚಾವಾಗಿ, ಆ ವಿಷಕಾರಿ ಹಾವು ಸತ್ತುಹೋದ ಸುದ್ದಿ! ಇದು ನೀವು ನಂಬೋದಕ್ಕೆ ಅಸಾಧ್ಯವಾದರೂ ಛತ್ತೀಸ್‌ಗಢ್‌ನಲ್ಲಿ (Chhattisgarh) ನಡೆದಿರುವ ನೈಜ ಘಟನೆ. ಇಲ್ಲಿ 8 ವರ್ಷದ ಬಾಲಕನಿಗೆ ವಿಷಕಾರಿ ನಾಗರ ಹಾವೊಂದು (Cobra) ಕಚ್ಚಿದೆ. ಈ ವೇಳೆ ಸ್ವಲ್ಪವೂ ವಿಚಲಿತನಾಗದ ಬಾಲಕ, ಅದನ್ನು ಹಿಡಿದು ತಿರುಗಿ ಕಚ್ಚಿದ್ದಾನೆ. ಈ ವೇಳೆ ಹಾವೇ ಸತ್ತುಹೋಗಿದ್ದರೆ, ಬಾಲಕ ಪವಾಡ ಸದೃಶ ರೀತಿಯಲ್ಲಿ ಬದುಕಿದ್ದಾನೆ!


ಆಟವಾಡುತ್ತಿದ್ದ 8 ವರ್ಷದ ಬಾಲಕನಿಗೆ ಕಚ್ಚಿದ ಹಾವು


ಛತ್ತೀಸ್‍ಗಢ ರಾಜ್ಯದ ಜಶ್‍ಪುರ ಎಂಬ ಜಿಲ್ಲೆಯ ಗ್ರಾಮವೊಂದರಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಇಲ್ಲಿನ 8 ವರ್ಷದ ಬಾಲಕ ದೀಪಕ್ ಎಂಬಾತ ಮನೆಯ ಬಳಿಯೇ ಆಟವಾಡುತ್ತಿದ್ದ. ಈ ವೇಳೆ ಇದ್ದಕ್ಕಿದ್ದಂತೆ ನಾಗರ ಹಾವೊಂದು ಆತನ ಎದುರು ಪ್ರತ್ಯಕ್ಷವಾಗಿದೆ. ಭಯಗೊಂಡ ಬಾಲಕ ಕಿರುಚಿಕೊಂಡಿದ್ದಾನೆ. ಆಗ ಗಾಬರಿಯಾದ ಹಾವು, ಆತನ ಆತನ ಕೈಗೆ ಸುತ್ತಿಕೊಂಡು ಎರಡು ಬಾರಿ ಕಚ್ಚಿದೆ.


ನಾಗರಹಾವಿಗೇ ತಿರುಗಿ ಕಚ್ಚಿದ ಬಾಲಕ!


ಆಗ ನೋವಿನಿಂದ ಕಿರುಚಾಡಿದ ಆ ಬಾಲಕ ತನ್ನ ಕಾಲಿನತ್ತ ಬಗ್ಗಿ ಆ ಹಾವನ್ನು ಎಳೆಯಲು ಹೋಗಿದ್ದಾನೆ. ಆಗ ಆ ಹಾವು ಆತನ ಕೈಗೆ ಸುತ್ತಿಕೊಂಡಿದೆ. ಇದರಿಂದ ಆತ ಹಾವಿಗೆ ವಾಪಾಸ್ ಕಚ್ಚಿದ್ದಾನೆ. ಆತ ಸಿಟ್ಟಿನಿಂದ ಜೋರಾಗಿ ಕಚ್ಚಿದ್ದರಿಂದ ಆ ನಾಗರಹಾವಿಗೆ ಗಾಯವಾಗಿ ಆ ವಿಷಪೂರಿತ ನಾಗರ ಹಾವು ಅಲ್ಲಿಯೇ ಸಾವನ್ನಪ್ಪಿದೆ ಎನ್ನಲಾಗಿದೆ!


ಇದನ್ನೂ ಓದಿ: Viral News: ಗೃಹಪ್ರವೇಶದ ದಿನ ಬಲಿ ಕೊಡಲು ಹೋದಾಗ ಜಸ್ಟ್ ಮಿಸ್; ಕೋಳಿ ಬದುಕಿತು, ಮನೆ ಮಾಲೀಕ ಸತ್ತ!


ಕೂಡಲೇ ಆಸ್ಪತ್ರೆಗೆ ದಾಖಲಿಸಿದ ಕುಟುಂಬಸ್ಥರು


ಹಾವಿಗೆ 2 ಬಾರಿ ಕಚ್ಚಿದ ಆ ಬಾಲಕನ ಕಿರುಚಾಟ ಕೇಳಿ ಮನೆಯವರು ಹೊರಗೆ ಓಡಿಬರುವಷ್ಟರಲ್ಲಿ ಆ ಹಾವು ನೆಲದ ಮೇಲೆ ಬಿದ್ದಿತ್ತು. ಬಾಲಕನ ಕುಟುಂಬದವರು ತಕ್ಷಣ ದೀಪಕ್‌ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ವೈದ್ಯರು ಕೂಡಲೇ ಬಾಲಕನಿಗೆ ಹಾವಿನ ವಿಷ ನಿಯಂತ್ರಿಸುವ ಔಷಧಿ ನೀಡಿದರು.


ಒಂದು ದಿನ ಬಾಲಕನ ಮೇಲೆ ನಿಗಾ ಇರಿಸಿದ ವೈದ್ಯರು


ವೈದ್ಯಕೀಯ ಸೌಲಭ್ಯದಿಂದ ಬಿಡುಗಡೆಗೊಳ್ಳುವ ಮೊದಲು ಅವನನ್ನು ಒಂದು ದಿನದವರೆಗೆ ವೀಕ್ಷಣೆಯಲ್ಲಿ ಇರಿಸಲಾಗಿತ್ತು ಎಂದು ವರದಿಯಾಗಿದೆ. "ಬಾಲಕನಿಗೆ ಶೀಘ್ರವಾಗಿ ಹಾವಿನ ವಿಷಕ್ಕೆ ವಿರೋಧಿ ಔಷಧಿಯನ್ನು ನೀಡಲಾಯಿತು ಮತ್ತು ಇಡೀ ದಿನ ವೀಕ್ಷಣೆಯಲ್ಲಿ ಇರಿಸಲಾಯಿತು. ಆತನ ಆರೋಗ್ಯ ಸುಧಾರಿಸದ ಬಳಿಕ ಬಿಡುಗಡೆ ಮಾಡಲಾಯಿತು" ಎಂದು ಬ್ಲಾಕ್ ವೈದ್ಯಕೀಯ ಅಧಿಕಾರಿ ಡಾ. ಜೆಮ್ಸ್ ಮಿಂಜ್ ಹೇಳಿದ್ದಾರೆ.


ಘಟನೆ ಬಗ್ಗೆ ಬಾಲಕ ಹೇಳಿದ್ದೇನು?


ಹಾವು ನನ್ನ ಕೈಗೆ ಸುತ್ತಿಕೊಂಡು ಕಚ್ಚಿತು. ಇದರಿಂದ ನನಗೆ ಬಹಳ ನೋವಾಯಿತು ಅಂತ ಬಾಲಕ ದೀಪಕ್ ಹೇಳಿದ್ದಾನೆ. ಹಾವಿನಿಂದ ಬಿಡಿಸಿಕೊಳ್ಳಲು ನಾನು ಸಾಕಷ್ಟು ಪ್ರಯತ್ನಿಸಿದೆ. ಆದರೆ ಅದು ನನ್ನನ್ನು ಬಿಡಲೇ ಇಲ್ಲ. ಕೊನೆಗೆ ಹಾವಿಗೆ 2 ಬಾರಿ ಕಚ್ಚಿದೆ ಎಂದು ಬಾಲಕ ದೀಪಕ್ ಮಾಧ್ಯಮಗಳಿಗೆ ತಿಳಿಸಿದ್ದಾನೆ.


ಇದನ್ನೂ ಓದಿ: Snake: ಒಂದು ವರ್ಷದಿಂದ ಬಾಟಲಿಯಲ್ಲೇ ಜೀವಂತವಾಗಿತ್ತು ಹಾವು! ಮುಚ್ಚಳ ತೆರೆದಾಗ ಆಗಿದ್ದು ದುರಂತ


ಉರಗ ತಜ್ಞರು ಹೇಳುವುದೇನು?


ಉರಗತಜ್ಞರು ಹೇಳುವಂತೆ 8 ವರ್ಷದ ಬಾಲಕ ಹಾವಿನ ಒಣ ಕಡಿತಕ್ಕೆ ಒಳಗಾಗಿದ್ದಾರೆ. ಸಾಮಾನ್ಯವಾಗಿ ವಿಷಪೂರಿತ ಹಾವು ಕಚ್ಚಿದಾಗ ವಿಷ ಬಿಡುಗಡೆಯಾಗದೇ ಇರುವುದನ್ನು ಡ್ರೈ ಬೈಟ್ ಎನ್ನುತ್ತಾರೆ. ಅಂತಹ ಸಂದರ್ಭಗಳಲ್ಲಿ ವ್ಯಕ್ತಿಗೆ ಹಾವು ಕಚ್ಚಿದ ಜಾಗದಲ್ಲಿ ಮಾತ್ರ ಕೆಲ ಸಾಮಾನ್ಯ ಲಕ್ಷಣಗಳು ಕಂಡು ಬರುತ್ತವೆ. ಡ್ರೈ ಬೈಟ್‌ನ ಕಾರಣಕ್ಕೆ ಈ ಬಾಲಕ ದೀಪಕ್‌ಗೆ ಹಾವು ಕಚ್ಚಿದ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ವಿಷಕಾರಿ ಹಾವು ದಾಳಿ ನಡೆಸಿದರೂ ವಿಷ ಬಿಡುಗಡೆ ಆಗಿಲ್ಲ ಎಂದು ಹೇಳಿದ್ದಾರೆ.

Published by:Annappa Achari
First published: