• Home
  • »
  • News
  • »
  • trend
  • »
  • Viral Video: ಲೆಹೆಂಗಾದಲ್ಲಿ ಬಂದ ಅಮೆರಿಕದ ವಧು, ಅದ್ಭುತವಾಗಿತ್ತು ಅಪ್ಪನ ಪ್ರತಿಕ್ರಿಯೆ

Viral Video: ಲೆಹೆಂಗಾದಲ್ಲಿ ಬಂದ ಅಮೆರಿಕದ ವಧು, ಅದ್ಭುತವಾಗಿತ್ತು ಅಪ್ಪನ ಪ್ರತಿಕ್ರಿಯೆ

ವೈರಲ್ ವಿಡಿಯೋ

ವೈರಲ್ ವಿಡಿಯೋ

American Woman Wears Lehenga: ಯಾವುದೇ ಮದುವೆಯಲ್ಲಿ ವಧು ಮತ್ತು ವರರು ಯಾವ ರೀತಿಯ ಬಟ್ಟೆ ಎಂದರೆ ಡಿಸೈನ್ ಇರುವ ಉಡುಪುಗಳನ್ನು ಧರಿಸುತ್ತಾರೆ ಅಂತ ಬಹುತೇಕರು ಕಾಯುತ್ತಿರುತ್ತಾರೆ ಅಂತ ಹೇಳಬಹುದು. ಅಂತಹ ಒಂದು ಕ್ಷಣವನ್ನು ಈ ಸುಂದರ ವೀಡಿಯೋದಲ್ಲಿ ಸೆರೆಹಿಡಿಯಲಾಗಿದೆ.

  • Share this:

ಬಹುಶಃ ಈ ಎರಡೂವರೆ ವರ್ಷ ಎಂದರೆ ಕೋವಿಡ್-19 (Covid) ಸಾಂಕ್ರಾಮಿಕ ರೋಗವು (Pandemic) ಶುರುವಾದಾಗಿಂದಲೂ ಅನೇಕ ನಿರ್ಭಂದನೆಗಳ ಮಧ್ಯೆ ಮದುವೆ ಸಮಾರಂಭಗಳು, ಸಣ್ಣಪುಟ್ಟ ಕಾರ್ಯಕ್ರಮಗಳು ತುಂಬಾನೇ ಸಿಂಪಲ್ ಆಗಿ ನಡೆದರೂ ಸಹ ಏನೋ ಒಂದು ವಿಭಿನ್ನತೆ ಮತ್ತು ವಿಶೇಷವಾದುದು ನೋಡುವುದಕ್ಕೆ ಸಿಗುತ್ತಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಹಿಂದೆ ಸಹ ನಾವು ಈ ಮದುವೆಗಳಲ್ಲಿ (Wedding) ನಡೆದಿರುವ ಅನೇಕ ರೀತಿಯ ವಿಭಿನ್ನ ಘಟನೆಗಳನ್ನು ತೋರಿಸುವ ಅನೇಕ ವೀಡಿಯೋಗಳನ್ನು (Video) ಸಾಮಾಜಿಕ ಮಾಧ್ಯಮಗಳಲ್ಲಿ (Media) ನೋಡಿದ್ದೇವೆ ಅಂತ ಹೇಳಬಹುದು.


ವಿಭಿನ್ನ ರೀತಿಯ ಘಟನೆಗಳಿಗೆ ಸಾಕ್ಷಿಯಾಗಿವೆ ಇತ್ತೀಚಿನ ಮದುವೆಗಳು


ಈಗಾಗಲೇ ನಾವು ಈ ಮದುವೆ ಸಮಾರಂಭಗಳಿಗೆ ವಧು ವಿಭಿನ್ನ ರೀತಿಯಲ್ಲಿ ಎಂದರೆ ಒಮ್ಮೆ ಬೈಕ್ ಓಡಿಸಿಕೊಂಡು ಮಂಟಪಕ್ಕೆ ಬಂದರೆ, ವರ ಪ್ರಾಣಿ ಹಿಂಸೆ ಮಾಡಬಾರದು ಅಂತ ಕುದುರೆಯನ್ನು ಬಿಟ್ಟು ನಡೆದುಕೊಂಡು ಮದುವೆ ಮಂಟಪಕ್ಕೆ ಬಂದಿದ್ದು, ವಧು ಮತ್ತು ವರರಿಬ್ಬರು ಆಕಾಶದಲ್ಲಿ ಹೀಲಿಯಂ ಬಲೋನ್ ಗಳೊಂದಿಗೆ ಕಟ್ಟಿರುವ ಉಯ್ಯಾಲೆಯಲ್ಲಿ ಕೂತು ಕೆಳಗೆ ಅವರಿಗಾಗಿ ಕಾಯುತ್ತಿರುವ ಅತಿಥಿಗಳತ್ತ ಕೈ ಬೀಸುತ್ತಾ ಮದುವೆ ಸಮಾರಂಭಕ್ಕೆ ಬಂದಿಳಿದಿದ್ದು ನಾವು ವೀಡಿಯೋಗಳಲ್ಲಿ ನೋಡಿದ್ದೆವು. ಹೀಗೆ ಒಂದೇ ಎರಡೇ ಮದುವೆಗಳು ತುಂಬಾನೇ ಮಜಾ ನೀಡುವ ಸಂಗತಿಗಳಿಗೆ ಸಾಕ್ಷಿಯಾದದ್ದನ್ನು ನಾವು ನೋಡಿದ್ದೇವೆ.


ಇದಷ್ಟೇ ಅಲ್ಲದೆ ವಧು ಮದುವೆಗೂ ಮುಂಚೆ ವರನಿಗೆ ಕೆಲವು ಷರತ್ತುಗಳನ್ನು ಹಾಕಿ ಒಂದು ದೊಡ್ಡ ಬೋರ್ಡ್ ನಲ್ಲಿ ಬರೆದು ಮದುವೆ ಮಂಟಪಕ್ಕೆ ಎಂಟ್ರಿ ಕೊಡುವ ಮೊದಲು ಅದನ್ನು ಇರಿಸಿ ಆ ವರನು ಆ ಎಲ್ಲಾ ಷರತ್ತುಗಳಿಗೆ ಒಪ್ಪಿಗೆ ಕೊಟ್ಟ ನಂತರವೇ ಅವರನ್ನು ಮಂಟಪಕ್ಕೆ ಹೋಗಲು ಬಿಟ್ಟದ್ದು ಮತ್ತು ಮೆರವಣಿಗೆಯಲ್ಲಿ ಕುದುರೆ ಮುಂದೆ ಪಟಾಕಿ ಹೊಡೆದಿದ್ದರಿಂದ ವರನನ್ನು ಕೂರಿಸಿಕೊಂಡ ಕುದುರೆ ಪಟಾಕಿ ಸದ್ದಿಗೆ ಹೆದರಿ ಮೆರವಣಿಗೆಯಿಂದ ಓಡಿಹೋಗಿದ್ದು, ಎಷ್ಟೆಲ್ಲಾ ಸಂತೋಷದ ಸಂಗತಿಗಳಿಗೆ ಮದುವೆಗಳು ಸಾಕ್ಷಿಯಾದವು ಅಂತ ನೆನಪಿಸಿಕೊಳ್ಳುವುದೇ ಒಂದು ಮಜಾ ನೀಡುವಂತದ್ದುಅಂತ ಹೇಳಿದರೆ ತಪ್ಪಾಗುವುದಿಲ್ಲ.


ಭಾರತೀಯ ಲೆಹಂಗಾ ಧರಿಸಿದ ಅಮೆರಿಕದ ವಧು


ಯಾವುದೇ ಮದುವೆಯಲ್ಲಿ ವಧು ಮತ್ತು ವರರು ಯಾವ ರೀತಿಯ ಬಟ್ಟೆ ಎಂದರೆ ಡಿಸೈನ್ ಇರುವ ಉಡುಪುಗಳನ್ನು ಧರಿಸುತ್ತಾರೆ ಅಂತ ಬಹುತೇಕರು ಕಾಯುತ್ತಿರುತ್ತಾರೆ ಅಂತ ಹೇಳಬಹುದು. ಅಂತಹ ಒಂದು ಕ್ಷಣವನ್ನು ಈ ಸುಂದರ ವೀಡಿಯೋದಲ್ಲಿ ಸೆರೆಹಿಡಿಯಲಾಗಿದೆ, ಅದು ಭಾರತೀಯ ವಧುವಿನ ವೇಷ ಧರಿಸಿದ ಅಮೇರಿಕನ್ ಮಹಿಳೆಯನ್ನು ತೋರಿಸುತ್ತದೆ. ಮೊದಲ ಬಾರಿಗೆ ಲೆಹೆಂಗಾದಲ್ಲಿ ಅವಳನ್ನು ನೋಡಿದ ಅವಳ ಇಡೀ ಕುಟುಂಬದ ಸದಸ್ಯರ ಪ್ರತಿಕ್ರಿಯೆಗಳನ್ನು ಈ ಕ್ಲಿಪ್ ಸೆರೆಹಿಡಿದಿದೆ.


ಇದನ್ನೂ ಓದಿ: 30 ವರ್ಷಗಳ ಹಿಂದೆ ಸಂರಕ್ಷಿಸಿದ ಭ್ರೂಣ, ಅವಳಿ ಮಕ್ಕಳನ್ನು ಪಡೆದ ದಂಪತಿ; ಅಚ್ಚರಿಯಾದರೂ ಇದು ಸತ್ಯ!


ಮೇಕಪ್ ಕಲಾವಿದೆ ಮತ್ತು ಹೇರ್ ಸ್ಟೈಲಿಸ್ಟ್ ಬಿಯಾಂಕಾ ಲೌಜಾಡೊ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಸಾಂಪ್ರದಾಯಿಕ ಕೆಂಪು ಬಣ್ಣದ ಲೆಹೆಂಗಾ ಧರಿಸಿ ವಧು ತನ್ನ ಹೋಟೆಲ್ ಕೋಣೆಯಿಂದ ಹೊರಗೆ ಬರುತ್ತಿರುವುದನ್ನು ಕ್ಲಿಪ್ ನ ಆರಂಭದಲ್ಲಿ ನಾವು ನೋಡಬಹುದು.


ಅವಳು ಹಾಗೆಯೇ ತನ್ನ ಲೆಹಂಗಾವನ್ನು ಎರಡು ಕೈಗಳಿಂದ ಸ್ವಲ್ಪ ಮೇಲಕ್ಕೆ ಎಂದರೆ ತನ್ನ ಕಾಲಿನಡಿಗೆ ಸಿಗದೇ ಎತ್ತಿಕೊಂಡು ಹೆಜ್ಜೆ ಹಾಕಿದ ಆ ಕ್ಷಣ ಆಕೆಯ ಕುಟುಂಬದ ಸದಸ್ಯರಿಗೆ ಒಂದು ಮುದ್ದಾದ ಸರ್‌ಪ್ರೈಸ್ ಆಗಿತ್ತು ಅಂತಾನೆ ಹೇಳಬಹುದು. ಆಕೆಯನ್ನು ನೋಡಿದ ಕುಟುಂಬ ಸದಸ್ಯರು ಆಕೆಯನ್ನು ಹುರಿದುಂಬಿಸಲು ಚಪ್ಪಾಳೆ ತಟ್ಟಲು ಪ್ರಾರಂಭಿಸುತ್ತಾರೆ. ಆ ಅದ್ಭುತ ವೀಡಿಯೋ ಅವರು ಗುಂಪು ಅಪ್ಪುಗೆಯೊಂದಿಗೆ ಕೊನೆಗೊಳ್ಳುತ್ತದೆ.


ಅಮೆರಿಕದ ವಧುವಿನ ಭಾರತೀಯ ವೇಷ ನೋಡಿ ನೆಟ್ಟಿಗರು ‘ವಾವ್’ ಎಂದಿದ್ದಾರೆ..


"ಎಂತಹ ಸುಂದರ ಕ್ಷಣ, ಹನ್ನಾ ರೋಜರ್ಸ್. ನಿಮ್ಮ ಕುಟುಂಬ ಮತ್ತು ನಿಮ್ಮ ನಡುವಿನ ಪ್ರೀತಿಯನ್ನು ತೋರಿಸುತ್ತದೆ" ಎಂದು ಮುದ್ದಾದ ವೀಡಿಯೋಗೆ ಶೀರ್ಷಿಕೆಯನ್ನು ಬರೆಯಲಾಗಿದೆ.
ಇದನ್ನೂ ಓದಿ: ನೆಟ್ಟಿಗರ ಮನ ಸೆಳೆದ ನವಿಲಿನ ಸುಂದರ ವಿಡಿಯೋ, ನೀವೂ ನೋಡಿ ಕಣ್ತುಂಬಿಕೊಳ್ಳಿ


ಪೋಸ್ಟ್ ಮಾಡಿದಾಗಿನಿಂದ, ವೀಡಿಯೋ ಇಲ್ಲಿಯವರೆಗೆ 6.7 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. "ಅಯ್ಯೋ ದೇವರೇ, ಅಪ್ಪನ ಪ್ರತಿಕ್ರಿಯೆ. ಅವನು ಖಂಡಿತವಾಗಿಯೂ ಅವಳನ್ನು 6 ವರ್ಷದ ಮಗುವಂತೆ ನೋಡಿರುತ್ತಾನೆ" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. "ವಾವ್ ಅಪ್ಪನ ಪ್ರತಿಕ್ರಿಯೆ ನೋಡಿ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಮೂರನೆಯವರು "ಈ ವೀಡಿಯೋವನ್ನು ಪ್ರೀತಿಸದೆ ಇರುವುದಕ್ಕೆ ಸಾಧ್ಯವೇ ಇಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ.

Published by:Sandhya M
First published: