Viral News: ಸತ್ತ ಗಂಡನ ಬೂದಿ ಹೊತ್ತು ತಿರುಗುತ್ತಿರುವ ಹೆಂಡತಿ.. ಅವನ ನೆನೆಪಾದ್ರೆ ಅದನ್ನೇ ತಿನ್ನುತ್ತಾಳಂತೆ!

26 ವರ್ಷದ ಕ್ಯಾಸಿ ಮದುವೆಯಾದ ಎರಡು ವರ್ಷ ಗಂಡನನ್ನು ಕಳೆದುಕೊಳ್ಳುತ್ತಾಳೆ. ಇಷ್ಟಪಟ್ಟ ಗಂಡ ಮದುವೆಯಾದ 2 ವರ್ಷದಲ್ಲೇ ದೂರವಾಗಿ ಇಹಲೋಕ ತ್ಯಜಿಸಿದ ಎಂಬ ನೆನಪಿಗಾಗಿ ಆಕೆ ಆತನ ಚಿತಾಭಸ್ಮವನ್ನು ಇಟ್ಟುಕೊಂಡು ಸುತ್ತಾಡುತ್ತಿದ್ದಾಳೆ.

ಕ್ಯಾಸಿ

ಕ್ಯಾಸಿ

  • Share this:
Viral News: ಯಾರೇ ಆಗಲಿ ವ್ಯಕ್ತಿ ಸತ್ತ ನಂತರ ಕೊಂಚ ಸಮಯ ಅವರ ನೆನಪುಗಳು ಕಾಡುತ್ತಿರುತ್ತದೆ(Miss the loved ones). ಅದರಲ್ಲೂ ಆತ್ಮೀಯರಾಗಿದ್ದರಂತೂ ಅವರೊಂದಿಗಿನ ಒಡನಾಟ, ಆಡಿದ ಮಾತು, ಸುತ್ತಾಡಿದ ಜಾಗ ಇವೆಲ್ಲವೂ ನೆನಪಾಗುತ್ತದೆ. ಕೆಲವೊಮ್ಮೆ ಕಳೆದುಕೊಂಡ ವ್ಯಕ್ತಿಯನ್ನು ನೆನಪಿಸಿಕೊಳ್ಳುತ್ತಾ ಕೊನೆಗೆ ಹುಚ್ಚರಾದ ಅದೆಷ್ಟೊ ಮಂದಿ ಇದ್ದಾರೆ. ಇನ್ನು ಕೆಲವರು ದಿನ ನಿತ್ಯ ಒಂದು ಬಾರಿಯಾದರು ಸತ್ತವ್ಯಕ್ತಿಯ ಬಗ್ಗೆ ಮಾತನಾಡದೆ ಇರಲಾರರು. ಆದರೆ ಇಲ್ಲೊಂದು ವಿಚಿತ್ರ ಸುದ್ದಿಯಿದೆ(Weird News) . ಅದೇನೆಂದರೆ ಮಹಿಳೆಯೊಬ್ಬಳು ಗಂಡ ಚಿತೆಯ ಭಸ್ಮವನ್ನು (Ashes of the dead) ತನ್ನೊಂದಿಗೆ ಸಾಗಿಸುತ್ತಾಳೆ. ಅಷ್ಟು ಮಾತ್ರವಲ್ಲ. ಅದನ್ನು ತಿನ್ನುತ್ತಾಳೆ ಕೂಡ. ಗಂಡನ ನೆನಪಿಗಾಗಿ ಮಹಿಳೆ ಹೀಗೆ ಮಾಡುತ್ತಿದ್ದಾರೆ. ಆದರೆ ಅನೇಕರು ಆಕೆಯನ್ನು ಕಂಡು ಹುಚ್ಚಿ (Mentally Retarded) ಎಂದು ಕರೆಯುತ್ತಿದ್ದಾರಂತೆ. ಅಂದಹಾಗಯೇ ಈ ಕಲಿಯುಗದಲ್ಲಿ ಸತ್ತ ಗಂಡನ ಚಿತಾಭಸ್ಮವನ್ನು ಇಟ್ಟುಕೊಂಡಿರುವ ಮತ್ತು ತಾನೆಲ್ಲಿ ಹೋಗುತ್ತೇನೋ ಅಲ್ಲಿಗೆ ಕೊಂಡೊಯ್ಯುವ ಮಹಿಳೆಯ ಬಗ್ಗೆ ಒಂದು ಬಾರಿ ತಿಳಿದುಕೊಳ್ಳಲೇ ಬೇಕು ಎಂದುಕೊಂಡಿದ್ದರೆ ಈ ಸ್ಟೋರಿ ಓದಿ…..

ಗಂಡ ಸತ್ತ ಎಂದರೆ ಹೆಂಡಿತಿಯರು ಬೇರೆ ಮದುವೆಯಾಗುವ ಕಾಲವಿದು. ಅಂತಹದರಲ್ಲಿ ಅಮೆರಿಕ ಮೂಲದ ಮಹಿಳೆಯೊಬ್ಬಳು ಸತ್ತ ಗಂಡನ ನೆನಪಿಗಾಗಿ ಚಿತೆಯ ಭಸ್ಮವನ್ನು ಇಂದಿಗೂ ಹೊತ್ತು ತಿರುಗಿದ್ದಾಖೆ ಎಂದರೆ ನಂಬಲಸಾಧ್ಯವಲ್ಲದೆ ಮತ್ತೇನು. ಗಂಡ ನನ್ನೊಂದಿಗೆ ಯಾವಾಗಲು ಇದ್ದಾನೆ ಮತ್ತು ನನ್ನೊಂದಿಗೆ ಸುತ್ತಾಡುತ್ತಾನೆ ಎಂಬ ನಂಬಿಕೆ ಮೇರೆ ಮಹಿಳೆ ಈ ರೀತಿ ಮಾಡುತ್ತಿದ್ದಾಳೆ.

ಟೆನ್ನಸ್ಸಿ ನಿವಾಸಿಯಾಗಿರುವ 26 ವರ್ಷದ ಕ್ಯಾಸಿ ಮದುವೆಯಾದ ಎರಡು ವರ್ಷ ಗಂಡನನ್ನು ಕಳೆದುಕೊಳ್ಳುತ್ತಾಳೆ. ಇಷ್ಟಪಟ್ಟ ಗಂಡ ಮದುವೆಯಾದ 2 ವರ್ಷದಲ್ಲೇ ದೂರವಾಗಿ ಇಹಲೋಕ ತ್ಯಜಿಸಿದ ಎಂಬ ನೆನಪಿಗಾಗಿ ಆಕೆ ಆತನ ಚಿತಾಭಸ್ಮವನ್ನು ಇಟ್ಟುಕೊಂಡು ಸುತ್ತಾಡುತ್ತಿದ್ದಾಳೆ.



Read Also: Man Swallows Phone: ಫೋನ್ ನುಂಗಿದ ಪುಣ್ಯಾತ್ಮ! 6 ತಿಂಗಳಿಂದ ಹೊಟ್ಟೆಯಲ್ಲಿತ್ತು..ಆಮೇಲೆ ಏನಾಯ್ತು ಗೊತ್ತಾ?

ಕ್ಯಾಸಿ 2009ರಲ್ಲಿ ವಿವಾಹವಾಗುತ್ತಾಳೆ. 2011ರಲ್ಲಿ ಪ್ರೀತಿಯ ಗಂಡ ಸಾವನ್ನಪ್ಪುತ್ತಾನೆ. ಅಸ್ತಮಾದಿಂದಾಗಿ ವಿವಾಹವಾದ 2 ವರ್ಷದಲ್ಲಿ ಗಂಡನನ್ನು ಕಳೆದುಕೊಳ್ಳುತ್ತಾಳೆ ಕ್ಯಾಸಿ. ಎರಡು ವರ್ಷ ನನ್ನೊಂದಿ ಕಳೆದ ಪತಿ ಸಾವನಪ್ಪುದ್ದು ಕ್ಯಾಸಿಗೆ ಅಘಾತ ಉಂಟುಮಾಡಿತು. ಕ್ರಮದಂತೆಯೇ ಸತ್ತ ಗಂಡನ ಅಂತ್ಯ ಸಂಸ್ಕಾರ ಮಾಡಿ ಕೊನೆಗೆ ಆತನ ನೆನಪಿಗಾಗಿ ಚಿತಾಭಸ್ಮವನ್ನು ತನ್ನೊಂದಿಗೆ ಇಟ್ಟುಕೊಂಳು.





ಕಳೆದ ಹಲವು ವರ್ಷಗಳಿಂದ ಗಂಡನ ಚಿತಾಭಸ್ಮವನ್ನು ತೆಗೆದುಕೊಂಡು ಹೋಗುತ್ತೇನೆ. ಗಂಡನ ನೆನಪಾದಾಗಲೆಲ್ಲಾ ಚಿತಾಭಸ್ಮವನ್ನು ಸೇವಿಸುತ್ತೇನೆ. ದಿನಸಿ ಸಾಮಾನು, ರೆಸ್ಟೋರೇಂಟ್​ ಆಹಾರ ಸವಿಯಲು ಹೋದಾಗಲೂ ಗಂಡನ ಚಿತಾಭಸ್ಮವನ್ನು ತೆಗೆದುಕೊಂಡು ಹೋಗುತ್ತೇನೆ ಎಂದು ಕ್ಯಾಸಿ ಹೇಳುತ್ತಾಳೆ.

Read Also: Phone Explodes: ಆನ್‌ಲೈನ್ ತರಗತಿಯ ಸಮಯದಲ್ಲಿ ಸ್ಮಾರ್ಟ್​ಫೋನ್ ಸ್ಫೋಟಗೊಂಡು ವಿದ್ಯಾರ್ಥಿ ಸಾವು

ಕ್ಯಾಸಿ ಹೇಳುವಂತೆ ಗಂಡನ ಚಿತಾಭಸ್ಮವನ್ನು ಒಟ್ಟಿಗೆ ಕೊಂಡೊಯ್ಯುವಾಗ ಅದು ಕೈ ಮೇಲೆ ಚೆಲ್ಲುತ್ತದೆ. ಆದರೆ ಅದನ್ನು ಗಾಳಿಗೆ ಧೂಳಿಪಟ ಮಾಡಲು ಇಷ್ಟವಿಲ್ಲ. ಹಾಗಾಗಿ ಅದನ್ನು ತಿನ್ನುತ್ತೇನೆ. ಅಂದಿನಿಂದ ನಾನು ಹೀಗೆ ಮಾಡುತ್ತಾ ಬಂದಿದ್ದೇನೆ. ದಿನಕ್ಕೆ ಮೂರು ಅಥವಾ 4 ಬಾರಿ ಮಾಡುತ್ತೇನೆ. ಇದನ್ನು ನಾನು ನಿಲ್ಲಿಸಬೇಕು ಎಂದು ಹಲವು ಬಾರಿ ಆಲೋಚಿಸಿದ್ದೆ. ಆದರೆ ನನ್ನಿಂದ ಸಾರ್ಧಯವಾಗುತ್ತಿಲ್ಲ. ಒಂದು ವೇಳೆ ಚಿತಾಭಸ್ಮ ಮುಗಿದಾಗ ಏನು ಮಾಡಬೇಕೋ ಎಂಬುದು ತಲೆಗೆ ಹೊಳಿಯುತ್ತಿಲ್ಲ ಎನ್ನುತ್ತಾಳೆ ಕ್ಯಾಸಿ
Published by:Harshith AS
First published: