• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Story: 43 ವರ್ಷಗಳ ಬಳಿಕ ಹಳೆಯ ಪ್ರಿಯಕರನನ್ನು ಮದುವೆಯಾದ ಅಮೆರಿಕ ವೃದ್ಧೆ! ನೋಡಿ ‘ವಾವ್’ ಅಂದ್ರು ನೆಟ್ಟಿಗರು

Viral Story: 43 ವರ್ಷಗಳ ಬಳಿಕ ಹಳೆಯ ಪ್ರಿಯಕರನನ್ನು ಮದುವೆಯಾದ ಅಮೆರಿಕ ವೃದ್ಧೆ! ನೋಡಿ ‘ವಾವ್’ ಅಂದ್ರು ನೆಟ್ಟಿಗರು

ಜೀನ್ ವಾಟ್ಸ್​ ಮತ್ತು ಸ್ಟೀಫನ್ ವಾಟ್ಸ್​

ಜೀನ್ ವಾಟ್ಸ್​ ಮತ್ತು ಸ್ಟೀಫನ್ ವಾಟ್ಸ್​

ಅನೇಕ ಪ್ರೀತಿ ಪ್ರೇಮಗಳು ಕಾಲೇಜಿನಲ್ಲಿಯೇ ಶುರುವಾಗಿ ಕಾಲೇಜಿನಲ್ಲಿಯೇ ಕೊನೆಗೊಳ್ಳುತ್ತವೆ, ಆದರೆ ಇಲ್ಲಿ ಒಂದು ಘಟನೆ ನಡೆದಿದ್ದು, ಅದನ್ನು ಕೇಳಿದರೆ ನಿಮಗೆ ಖುಷಿಯಾಗುವುದಂತೂ ಗ್ಯಾರಂಟಿ ಅಂತ ಹೇಳಬಹುದು. ಸುಮಾರು 43 ವರ್ಷಗಳ ನಂತರ ಇಬ್ಬರು ಹಳೆಯ ಲವರ್ ಗಳು ಭೇಟಿಯಾಗಿದ್ದು, ನಂತರ ಇಬ್ಬರು ಮದುವೆಯಾದ ಘಟನೆ ಯುಎಸ್ ನಲ್ಲಿ ನಡೆದಿದೆ.

ಮುಂದೆ ಓದಿ ...
  • Share this:

    ಎಷ್ಟೋ ಜನ ಹುಡುಗ ಮತ್ತು ಹುಡುಗಿಯರು (Boys Anf Girls) ಕಾಲೇಜಿನಲ್ಲಿ ಓದಬೇಕಾದರೆ ಒಬ್ಬರನ್ನೊಬ್ಬರು ನೋಡಿಕೊಂಡು ಇಷ್ಟ ಪಟ್ಟಿರುತ್ತಾರೆ. ನಂತರ ಈ ಇಷ್ಟವು ಸ್ನೇಹದಲ್ಲಿ ಬೆಳೆದು ನಂತರ ಕಾಲೇಜು (College) ಮುಗಿದ ನಂತರ ಅದು ಹಾಗೆಯೇ ಮುಂದುವರೆದಿದ್ದರೆ, ಅದು ಪ್ರೀತಿಯಾಗಿ ಬೆಳೆದಿರುತ್ತದೆ ಅಂತ ಹೇಳಬಹುದು. ನಂತರದಲ್ಲಿ ಕೆಲಸ ಸಿಕ್ಕ ಮೇಲೆ ಅವರವರ ಪೋಷಕರಿಗೆ ಮನವೊಲಿಸಿ ಪರಸ್ಪರ ಹುಡುಗ ಮತ್ತು ಹುಡುಗಿ ಮದುವೆಯಾಗಿ ವೈವಾಹಿಕ ಜೀವನಕ್ಕೆ (Married Life) ಕಾಲಿಡುತ್ತಾರೆ ಅಂತ ಹೇಳಬಹುದು. ಆದರೆ ಎಲ್ಲಾ ಪ್ರೇಮ ಕಥೆಗಳು ಹೀಗೆ ಒಳ್ಳೆಯ ಅಂತ್ಯವನ್ನು ನೋಡುತ್ತವೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ ಬಿಡಿ.


    ಅನೇಕ ಪ್ರೀತಿ ಪ್ರೇಮಗಳು ಕಾಲೇಜಿನಲ್ಲಿಯೇ ಶುರುವಾಗಿ ಕಾಲೇಜಿನಲ್ಲಿಯೇ ಕೊನೆಗೊಳ್ಳುತ್ತವೆ, ಅಂದರೆ ಹುಡುಗ ಹುಡುಗಿ ಇಬ್ಬರು ಇಷ್ಟಪಟ್ಟ ನಂತರ ಅವರು ಹೊರಗೆ ಜೊತೆಯಾಗಿ ಸುತ್ತಾಡುತ್ತಿರುವುದು ಪೋಷಕರ ಕಣ್ಣಿಗೆ ಬಿದ್ದು ಅವರಿಬ್ಬರನ್ನು ತರಾಟೆಗೆ ತೆಗೆದುಕೊಂಡು ಓದಿನ ಮೇಲೆ ಗಮನ ಹರಿಸಿ ಅಂತ ಹೇಳಿ ಅಲ್ಲಿಗೆ ಪೂರ್ಣವಿರಾಮ ಇಟ್ಟು ಬಿಡುತ್ತಾರೆ.


    ಕೆಲವು ಪ್ರೀತಿ ಪ್ರೇಮಗಳ ಕಥೆಗಳು ಕಾಲೇಜು ದಾಟಿಕೊಂಡು ಮುಂದೆ ಬಂದು ಇನ್ನೇನು ಮದುವೆ ಮಾತು ಅಂತ ಬಂದಾಗ ಹುಡುಗ ಮತ್ತು ಹುಡುಗಿಯ ಪೋಷಕರು ಮನೆಯಲ್ಲಿ ತೋರಿಸಿದವರನ್ನೆ ಮದುವೆಯಾಗಬೇಕು ಅಂತ ಹೇಳಿ ಒತ್ತಾಯದಿಂದ ಬೇರೆಯೊಬ್ಬರೊಂದಿಗೆ ಮದುವೆ ಮಾಡಿಸಿರುವಂತಹ ಅನೇಕ ಭಗ್ನ ಪ್ರೇಮ ಕಥೆಗಳ ಬಗ್ಗೆ ನಾವೆಲ್ಲಾ ಕೇಳಿರುತ್ತೇವೆ.




    43 ವರ್ಷಗಳ ಹಳೆಯ ಪ್ರೇಮಿಗಳು ಮದುವೆಯಾಗಿರುವ ಕಥೆ ಇದು


    ಇಲ್ಲಿ ಒಂದು ಘಟನೆ ನಡೆದಿದ್ದು, ಅದನ್ನು ಕೇಳಿದರೆ ನಿಮಗೆ ಖುಷಿಯಾಗುವುದಂತೂ ಗ್ಯಾರಂಟಿ ಅಂತ ಹೇಳಬಹುದು. ಸುಮಾರು 43 ವರ್ಷಗಳ ನಂತರ ಇಬ್ಬರು ಹಳೆಯ ಲವರ್ ಗಳು ಭೇಟಿಯಾಗಿದ್ದು, ನಂತರ ಇಬ್ಬರು ಮದುವೆಯಾದ ಘಟನೆ ಯುಎಸ್ ನಲ್ಲಿ ನಡೆದಿದೆ. ಯುಎಸ್ ಮೂಲದ ದಂಪತಿಗಳ ಈ ಕಥೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ನೆಟ್ಟಿಗರ ಹೃದಯಗಳನ್ನು ಗೆದ್ದಿದೆ ಅಂತ ಹೇಳಲಾಗುತ್ತಿದೆ.


    ಜೀನ್ ವ್ಯಾಟ್ಸ್ 1971 ರಲ್ಲಿ ತನ್ನ ಕಾಲೇಜು ದಿನಗಳಲ್ಲಿ ತನ್ನ ಮೊದಲ ಪ್ರೇಮಿ ಸ್ಟೀಫನ್ ವ್ಯಾಟ್ಸ್ ಅವರನ್ನು ಭೇಟಿಯಾದರಂತೆ. ಈಗ 69 ವರ್ಷದ ಮಹಿಳೆ ಆಗ ತನ್ನ ತಾಯಿಯ ಒತ್ತಡಕ್ಕೆ ಮಣಿದು ತನ್ನ ಪ್ರಿಯಕರನೊಂದಿಗೆ ಬೇರ್ಪಡಬೇಕಾಗಿ ಬಂದಿತ್ತು ಅಂತ ವಿಷಾದಿಸಿದರು. ಜೀನ್ ಅವರ ತಾಯಿ ಆಗ ಅಂತರ್ಜಾತೀಯ ಸಂಬಂಧಗಳನ್ನು ತೀವ್ರವಾಗಿ ವಿರೋಧಿಸಿದ್ದರಂತೆ ಮತ್ತು ಸ್ಟೀಫನ್ ಕಪ್ಪು ವರ್ಣೀಯನಾಗಿದ್ದರಿಂದ, ಅವಳು ಆ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದರಂತೆ.


    ದೀರ್ಘ ಕಾಲದ ಪ್ರಯಾಣ ಮತ್ತು ತಡ ರಾತ್ರಿ ಶಿಫ್ಟ್ ಗಳ ಅಗತ್ಯವಿರುವ ಕೆಲಸವನ್ನು ಕಂಡುಕೊಂಡ ನಂತರ ಜೀನ್ ಗೆ ಆ ಹಳೆಯ ಸಂಬಂಧವನ್ನು ಕಾಪಾಡಿಕೊಳ್ಳುವುದು ಸಹ ತುಂಬಾನೇ ಕಷ್ಟವಾಯಿತಂತೆ.


    ಜೀನ್ ಪ್ರೀತಿ ವಿಷಯ ಕೇಳಿ ತಾಯಿ ಏನಂತ ಹೇಳಿದ್ರು?


    ಜೀನ್ ಅವರು "ನನ್ನ ಪ್ರೀತಿ ವಿಷಯ ನನ್ನ ತಾಯಿಗೆ ತಿಳಿದು ಆಕೆ ತುಂಬಾನೇ ಕೋಪಗೊಂಡಿದ್ದಳು" ಎಂದು ಅವರು ಸಿಬಿಎಸ್ ಗೆ ತಿಳಿಸಿದರು. "ಆಗ ತಕ್ಷಣವೇ ಅವಳು ಏನು ಹೇಳಲಿಲ್ಲ? ಆದರೆ ನಂತರ ನನಗೆ ಆಕೆ ನಾನು ಕುಟುಂಬವನ್ನು ಹೇಗೆ ಅವಮಾನಿಸಬಲ್ಲೆ? ಇದು ಒಳ್ಳೆಯದಲ್ಲ ಎಂದು ಹೇಳಿದ್ದಳು” ಎಂದು ಹೇಳಿದರು.


    ಜೀನ್ ವಾಟ್ಸ್​ ಮತ್ತು ಸ್ಟೀಫನ್ ವಾಟ್ಸ್​


    ಅನೇಕ ವರ್ಷಗಳ ನಂತರ, 2021 ರಲ್ಲಿ, ವಿಚ್ಛೇದಿತ ನಿವೃತ್ತ ಜೀನ್ ಅವರು ಸ್ಟೀಫನ್ ಮೇಲೆ ಇರುವ ತನ್ನ ಹಳೆಯ ಭಾವನೆಗಳನ್ನು ಮತ್ತೆ ನೆನಪಿಸಿಕೊಂಡಳು.


    ನಂತರ ಅವರ ಸೋದರ ಸೊಸೆಯ ಮೂಲಕ ಅವರನ್ನು ತಲುಪಿದರು. ಮಕ್ಕಳಿಲ್ಲದೆ ವ್ಯಾಟ್ಸ್ ಆಗಾಗಲೇ ವಿಚ್ಛೇದನ ಪಡೆದಿದ್ದರು, ಆದರೆ ಅವರು ನಿರಾಶ್ರಿತರಾಗಿದ್ದರು ಮತ್ತು ಎರಡು ಪಾರ್ಶ್ವವಾಯುಗಳಿಂದ ಬಳಲುತ್ತಿದ್ದರು ಮತ್ತು ನರ್ಸಿಂಗ್ ಹೋಂನಲ್ಲಿ ವಾಸಿಸುತ್ತಿದ್ದರು ಎಂದು ಸಿಬಿಎಸ್ ವರದಿ ತಿಳಿಸಿದೆ.


    ಇದನ್ನೂ ಓದಿ: ಫೆಬ್ರವರಿಯಲ್ಲಿ ಮತ್ತೊಮ್ಮೆ ಭಾರತಕ್ಕೆ ಬರಲಿವೆ 12 ಚಿರತೆಗಳು! ಏನಿದು ಹೊಸ ಯೋಜನೆ?


    ಹಳೆಯ ಪ್ರೇಮಿಗಳು ಮತ್ತೆ ಒಂದಾದ ಕ್ಷಣ..


    52 ವರ್ಷಗಳ ನಂತರ ಜೀನ್ ಅವರು ವ್ಯಾಟ್ಸ್ ಅವರನ್ನು ಭೇಟಿಯಾದಾಗ, ಅವರು ಅವಳನ್ನು ಗುರುತಿಸಿದರು ಮತ್ತು ತುಂಬಾನೇ ಸಂತೋಷ ಪಟ್ಟರು. "ಅವನು ಇನ್ನೂ ನನ್ನನ್ನು ಪ್ರೀತಿಸುತ್ತಾನೆಂದು ನನಗೆ ತಿಳಿದಿತ್ತು" ಎಂದು ಅವರು ಮಾಧ್ಯಮಕ್ಕೆ ಹೇಳಿದರು. ನಂತರ, ಅವರು ಅವಳ ಮನೆಗೆ ತೆರಳಿದರು ಮತ್ತು ಅವರಿಬ್ಬರು ಕಳೆದ ವರ್ಷ ಅಕ್ಟೋಬರ್ ನಲ್ಲಿ ವಿವಾಹವಾದರು.


    ಸ್ಟೀಫನ್ ಅವರು "ಅವಳು ತುಂಬಾನೇ ಒಳ್ಳೆಯವಳು, ಅವಳು ನನ್ನ ಹೃದಯ ಮತ್ತು ಆತ್ಮ. ನಾನು ಯಾವಾಗಲೂ ಅವಳೊಂದಿಗೆ ವಾಸಿಸಲು ಬಯಸುತ್ತೇನೆ" ಎಂದು ಹೇಳಿದ್ದಾರೆ.

    Published by:Prajwal B
    First published: