• Home
  • »
  • News
  • »
  • trend
  • »
  • Viral Post: ಮಗನ ಶಾಲೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ರಗಡ್ ಉತ್ತರ ಕೊಟ್ಟ ತಾಯಿ, ಮಮ್ಮಿ ರಾಕ್ ಟೀಚರ್ಸ್ ಶಾಕ್!

Viral Post: ಮಗನ ಶಾಲೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ರಗಡ್ ಉತ್ತರ ಕೊಟ್ಟ ತಾಯಿ, ಮಮ್ಮಿ ರಾಕ್ ಟೀಚರ್ಸ್ ಶಾಕ್!

ತಾಯಿಯ ಉತ್ತರ

ತಾಯಿಯ ಉತ್ತರ

ಇಲ್ಲೊಬ್ಬ ಅಪರೂಪದ ತಾಯಿಯನ್ನು ನಾವು ನೋಡಬಹುದು. ಹೌದು..ಅಮೆರಿಕದ ತಾಯಿಯೊಬ್ಬಳು ಶಾಲೆಯು ತನಗೆ ತನ್ನ 4 ವರ್ಷ ವಯಸ್ಸಿನ ಮಗನ ಬಗ್ಗೆ ಬರೆಯಲು ಹೇಳಿ ಕೆಲವು ಪ್ರಶ್ನೆಗಳನ್ನು ನೀಡಿದರೆ, ಈ ತಾಯಿ ಮುಕ್ತವಾಗಿ ಮತ್ತು ನೇರವಾಗಿ ಯಾವುದೇ ರೀತಿಯ ಮುಚ್ಚು ಮರೆಯಿಲ್ಲದೆ ಪ್ರತಿಕ್ರಿಯಿಸಿದ್ದಾಳೆ.

ಮುಂದೆ ಓದಿ ...
  • Share this:

ಎಷ್ಟೋ ಸಾರಿ ಈ ಶಾಲೆಗಳು (School) ತಮ್ಮಲ್ಲಿ ದಾಖಲಾಗುವ ವಿದ್ಯಾರ್ಥಿಗಳ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳಲು ಪೋಷಕರಿಗೆ (Parents) ಅನೇಕ ಪ್ರಶ್ನಾವಳಿಗಳಿರುವ ಫಾರ್ಮ್ ಗಳನ್ನು ತುಂಬಲು ಕೊಡುವುದನ್ನು ನಾವು ನೋಡಿರುತ್ತೇವೆ. ಹೀಗೆ ತಮ್ಮ ಮಕ್ಕಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಅವರಿಗೆ ಒದಗಿಸಿದರೆ, ಆ ಮಕ್ಕಳನ್ನು ಶಿಕ್ಷಕರು (Teacher) ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು ಅಂತ ಅವರ ಉದ್ದೇಶವಾಗಿರುತ್ತದೆ. ಹೀಗೆ ಫಾರ್ಮ್ ಕೊಟ್ಟಾಗ ಹೆಚ್ಚಿನ ಪೋಷಕರು ಕಾಟಾಚಾರಕ್ಕೆ ಏನೋ ಒಂದನ್ನು ಬರೆದರೆ, ಇನ್ನೂ ಕೆಲವು ಪೋಷಕರು ಇದು ಒಂದು ಔಪಚಾರಿಕತೆ ಅಂತ ತಿಳಿದುಕೊಂಡು ಏನೋ ಒಂದನ್ನು ಅದರಲ್ಲಿ ಬರೆದು (Write) ಕೊಡುವುದನ್ನು ನಾವು ನೋಡಿರುತ್ತೇವೆ. ಕೆಲವೊಂದು ಸಮಯದಲ್ಲಿ ನಾವು ಸಹ ಈ ಎರಡರಲ್ಲಿ ಒಂದನ್ನು ಮಾಡಿರುತ್ತೇವೆ.


ಇಂತಹ ಪೋಷಕರ ನಡುವೆ ಇಲ್ಲೊಬ್ಬ ಅಪರೂಪದ ತಾಯಿಯನ್ನು ನಾವು ನೋಡಬಹುದು. ಹೌದು..ಅಮೆರಿಕದ ತಾಯಿಯೊಬ್ಬಳು ಶಾಲೆಯು ತನಗೆ ತನ್ನ 4 ವರ್ಷ ವಯಸ್ಸಿನ ಮಗನ ಬಗ್ಗೆ ಬರೆಯಲು ಹೇಳಿ ಕೆಲವು ಪ್ರಶ್ನೆಗಳನ್ನು ನೀಡಿದರೆ, ಈ ತಾಯಿ ಮುಕ್ತವಾಗಿ ಮತ್ತು ನೇರವಾಗಿ ಯಾವುದೇ ರೀತಿಯ ಮುಚ್ಚು ಮರೆಯಿಲ್ಲದೆ ಪ್ರತಿಕ್ರಿಯಿಸಿದ್ದಾಳೆ.


ಯಾರು ಈ ಎಮಿಲಿ ಗೌಲ್ಡ್?
ಇಂಟರ್ನೆಟ್ ಬಳಕೆದಾರರು ಮಹಿಳೆಯು ನೀಡಿದಂತಹ ಪ್ರಾಮಾಣಿಕ ಉತ್ತರಗಳನ್ನು ನೋಡಿ ತುಂಬಾನೇ ನಕ್ಕಿದ್ದಾರೆ. ನ್ಯೂಯಾರ್ಕ್ ಮ್ಯಾಗಜಿನ್ ನ ಲೇಖಕಿಯಾದ ಎಮಿಲಿ ಗೌಲ್ಡ್, ತನ್ನ 4 ವರ್ಷದ ಮಗ ಇಲ್ಯಾ ನ ಬಗ್ಗೆ ಶಾಲೆಯು ನೀಡಿದ ಫಾರ್ಮ್ ನಲ್ಲಿ ಕೇಳಿದ ಪ್ರಶ್ನೆಗಳಿಗೆ ಹೇಗೆ ಉತ್ತರಿಸಿದ್ದಾಳೆ ನೋಡಿ. ಈ ಫಾರ್ಮ್ ನ ಒಂದು ಫೋಟೋವನ್ನು ಈಗ ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್ ಓದಿದ ನಂತರ ನೀವು ನಿಸ್ಸಂದೇಹವಾಗಿ ಎಮಿಲಿಯ ಹಾಸ್ಯ ಪ್ರಜ್ಞೆಯನ್ನು ಹೊಗಳುತ್ತೀರಿ, ಏಕೆಂದರೆ ಅದು ತುಂಬಾ ಉಲ್ಲಾಸಕರವಾಗಿದೆ. ಶಾಲೆಯ ಫಾರ್ಮ್ ನಮೂನೆಯಲ್ಲಿ ಟೈಪ್ ಮಾಡಿದ ಉತ್ತರಗಳ ಫೋಟೋವೊಂದನ್ನು ಅವಳು ಟ್ವೀಟ್ ಮಾಡಿದ ಪೋಸ್ಟ್ ನಲ್ಲಿ ಸೇರಿಸಲಾಗಿದೆ.


ಶಾಲೆಯ ಫಾರ್ಮ್ ನಲ್ಲಿ ಕೇಳಿದ ಪ್ರಶ್ನೆಗಳು ಮತ್ತು ಎಮಿಲಿ ನೀಡಿದ ಉತ್ತರಗಳು ಇಲ್ಲಿವೆ ನೋಡಿ
1)
ಸಾಮಾಜಿಕವಾಗಿ, ನನ್ನ ಮಗು ಈ ವಿಷಯದಲ್ಲಿ ಇನ್ನೂ ಹೆಚ್ಚು ಕೆಲಸ ಮಾಡಬೇಕೆಂದು ನಾನು ಬಯಸುವ ಒಂದು ವಿಷಯವೆಂದರೆ ಅಂತ ಕೇಳಿದ ಪ್ರಶ್ನೆಗೆ ಎಮಿಲಿಯು "ಕೆಟ್ಟ ವ್ಯಕ್ತಿಯಾಗಬಾರದು" ಎಂದು ನೇರವಾಗಿ ಬರೆದಿದ್ದಾಳೆ.


ಇದನ್ನೂ ಓದಿ:  Teacher and Children: ಶಿಕ್ಷಕಿಯ ಚಿತ್ರ ಬಿಡಿಸಿದ ಪುಟಾಣಿಗಳು; ಮುಗ್ಧ ಮನಸ್ಸಿನ ಕ್ರಿಯಾತ್ಮಕತೆಗೆ ಭೇಷ್ ಎಂದ ನೆಟ್ಟಿಗರು


2) ಇನ್ನೊಂದು ಪ್ರಶ್ನೆ. ಶೈಕ್ಷಣಿಕವಾಗಿ, ನನ್ನ ಮಗು ಈ ವರ್ಷ ಕೆಲಸ ಮಾಡಬೇಕೆಂದು ನಾನು ಬಯಸುವ ಒಂದು ವಿಷಯವೆಂದರೆ ಅಂತ ಕೇಳಿದ್ದಕ್ಕೆ, "ಯಾರು ಅಷ್ಟೊಂದು ಕಾಳಜಿ ವಹಿಸುತ್ತಾರೆ, ಅವನಿಗೆ ಈಗ ಬರೀ 4 ವರ್ಷ ಅಷ್ಟೇ" ಎಂದು ಪ್ರತಿಕ್ರಿಯಿಸಿದ್ದಾರೆ.


3) ನನ್ನ ಮಗುವನ್ನು ವಿವರಿಸಲು ನಾನು ಕೇವಲ 3 ಪದಗಳನ್ನು ಮಾತ್ರ ಆಯ್ಕೆ ಮಾಡಬೇಕಿದ್ದರೆ, ನಾನು ಇದನ್ನು ಆಯ್ಕೆ ಮಾಡುತ್ತೇನೆ ಅಂತ ಕೇಳಿದ್ದಕ್ಕೆ ಎಮಿಲಿ “ಸದಾ ಚುರುಕಾಗಿ, ಸ್ವಾವಲಂಬಿಯಾಗಿ ಮತ್ತು ತುಂಬಾನೇ ಕೂಲ್ ಆಗಿರಬೇಕು” ಎಂಬ ಮೂರು ಪದಗಳನ್ನು ಆರಿಸಿಕೊಂಡಿದ್ದಾಳೆ.


4) ಫಾರ್ಮ್ ನಲ್ಲಿ ಕೊನೆಯ ಪ್ರಶ್ನೆಯೆಂದರೆ ನಿಮ್ಮ ಮಗುವಿನ ಬಗ್ಗೆ ನಾನು ತಿಳಿದುಕೊಳ್ಳಬೇಕೆಂದು ನೀವು ಬಯಸುವ ಬೇರೆ ಏನಾದರೂ ಇದೆಯೇ ಅಂತ ಕೇಳಿದ್ದಕ್ಕೆ, ಎಮಿಲಿ “ನೀವು ಇಲ್ಯಾ ಅನ್ನು ತುಂಬಾನೇ ಪ್ರೀತಿಸುತ್ತೀರಿ. ಅವನು ಎಷ್ಟು ಮಧುರ ವ್ಯಕ್ತಿ ಎಂದರೆ ಕೆಲವೊಮ್ಮೆ ಅವನು ಹುಟ್ಟಿನಿಂದಲೇ ಇಷ್ಟು ಬುದ್ದಿವಂತನನ್ನಾಗಿ ಹುಟ್ಟಿದ್ದಾನೆಯೇ ಅಂತ ನಾನು ಆಶ್ಚರ್ಯ ಪಡುತ್ತೇನೆ” ಎಂದು ಉತ್ತರಿಸಿದ್ದಾಳೆ.


ಇದನ್ನೂ ಓದಿ:  Viral Video: ನೀರಿನಾಳದಲ್ಲಿ ಮೂನ್ ವಾಕ್ ಮಾಡ್ತಾನೆ ಈತ! ಎಷ್ಟು ಚಂದ ಇದೆ ನೋಡಿ


ಅನೇಕ ಜನರು ಈ ಟ್ವೀಟ್ ಗೆ ಕಾಮೆಂಟ್ ಮಾಡಿದ್ದಾರೆ ಮತ್ತು ಎಮಿಲಿಯ ಹಾಸ್ಯಮಯ ಮತ್ತು ಕಟುವಾದ ಪ್ರತಿಕ್ರಿಯೆಗಳು ವಿನೋದಮಯವಾಗಿವೆ ಎಂದು ಕಂಡುಕೊಂಡರು. ಇತರ ಬಳಕೆದಾರರು ತಮ್ಮ ಸ್ವಂತ ವಿಷಯದಲ್ಲಿ ಎಮಿಲಿಯ ಹಾಸ್ಯಭರಿತ ಪ್ರತಿಕ್ರಿಯೆಗಳನ್ನು ಬಳಸಿಕೊಳ್ಳುವುದಾಗಿ ಹೇಳಿದರು.

Published by:Ashwini Prabhu
First published: