ಆಟದ ಮೈದಾನದಲ್ಲೇ ಪ್ರೇಮ ನಿವೇದನೆ ಮಾಡಿದ ಫುಟ್‍ಬಾಲ್ ಆಟಗಾರ..!

ಫುಟ್ಬಾಲ್ ಅಂಗಣದಲ್ಲಿ ಪ್ರಿಯತಮೆಗೆ ಪ್ರೇಮನಿವೇದನೆ ಮಾಡಿದ ಹಸಾನಿ

ಫುಟ್ಬಾಲ್ ಅಂಗಣದಲ್ಲಿ ಪ್ರಿಯತಮೆಗೆ ಪ್ರೇಮನಿವೇದನೆ ಮಾಡಿದ ಹಸಾನಿ

ಹಸಾನಿ ಡಾಟ್ಸನ್ ಸ್ಟೀಫನ್ಸನ್ ಒಂದು ಕಾಲಿನಲ್ಲಿ ಮಂಡಿಯೂರಿ ಕುಳಿತು ಎಲ್ಲರ ಮುಂದೆ ಉಂಗುರ ಹಿಡಿದು ಪ್ರೀತಿಸುವುದಾಗಿ ಹೇಳಿದ್ದಾರೆ. ಒಮ್ಮೆಲೇ ಖುಷಿಗೊಳಗಾದ ಆಕೆ ಹಸಾನಿ ಡಾಟ್ಸನ್ ಸ್ಟೀಫನ್ಸನ್ ಪ್ರೀತಿಗೆ ತಲೆಯಾಡಿಸುವ ಮೂಲಕ ಸಮ್ಮತಿ ಸೂಚಿಸಿದ್ದಾಳೆ.

  • Share this:

ಪ್ರಿಯತಮೆಗೆ ಮೈದಾನದಲ್ಲೇ ಪ್ರೇಮ ನಿವೇದನೆ ಮಾಡಿಕೊಂಡು ಒಪ್ಪಿಗೆಯ ಮೇರೆಗೆ ಕ್ರೀಡಾಪಟುಗಳು ಪ್ರೇಮ ಯಾನ ಮುಂದುವರೆಸಿದ ಅನೇಕ ಘಟನೆಗಳನ್ನ ನಾವು ನೋಡಿರುತ್ತೇವೆ. ಇತ್ತೀಚೆಗೆ ಅಮೆರಿಕಾದ ಫುಟ್‍ಬಾಲ್ ಆಟಗಾರ ಹಸಾನಿ ಡಾಟ್ಸನ್ ಸ್ಟೀಫನ್‍ಸನ್ ಅವರು ಆಟದ ಮೈದಾನದಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಮೇಜರ್ ಲೀಗ್ ಸಾಕರ್ (ಎಂಎಲ್‍ಎಸ್) ನಲ್ಲಿ ಭಾನುವಾರ ಸ್ಯಾನ್ ಜೋಸ್ ವಿರುದ್ಧ ತನ್ನ ಕ್ಲಬ್ ಮಿನ್ನೇಸೋಟಾ ಎಫ್‍ಸಿ 2-2ರ ಸಮಬಲ ಸಾಧಿಸಿದ ನಂತರ ತಮ್ಮ ಪ್ರೀತಿಯನ್ನು ಆಕೆಯ ಮುಂದೆ ಹೇಳಿಕೊಂಡಿದ್ದಾರೆ.


ಹಸಾನಿ ಡಾಟ್ಸನ್ ಸ್ಟೀಫನ್‍ಸನ್ ಒಂದು ಕಾಲಿನಲ್ಲಿ ಮಂಡಿಯೂರಿ ಕುಳಿತು ಎಲ್ಲರ ಮುಂದೆ ಉಂಗುರ ಹಿಡಿದು ಪ್ರೀತಿಸುವುದಾಗಿ ಹೇಳಿದ್ದಾರೆ. ಒಮ್ಮೆಲೇ ಖುಷಿಗೊಳಗಾದ ಆಕೆ ಹಸಾನಿ ಡಾಟ್ಸನ್ ಸ್ಟೀಫನ್‍ಸನ್ ಪ್ರೀತಿಗೆ ತಲೆಯಾಡಿಸುವ ಮೂಲಕ ಸಮ್ಮತಿ ಸೂಚಿಸಿದ್ದಾರೆ. ತದನಂತರ ಹಸಾನಿ ತನ್ನ ಪ್ರಿಯತಮೆಗೆ ಉಂಗುರ ತೊಡಿಸಿದ್ದಾರೆ. ನಂತರ ಬಿಳಿ ಶಾರ್ಟ್ ಡ್ರೆಸ್ ತೊಟ್ಟ ಆಕೆಯನ್ನು ಆತ ತಬ್ಬಿ ಮುದ್ದಾಡಿದ್ದಾರೆ. ಆತನ ಪ್ರೇಮವನ್ನು ಒಪ್ಪಿಕೊಂಡ ಆಕೆಯ ಮೊಗದಲ್ಲಿ ಸಂತಸ ಎದ್ದು ಕಾಣುತ್ತಿತ್ತು.


ಈ ವಿಡಿಯೋವನ್ನು ಖುದ್ದಾಗಿ ಅವರ ಇನ್‍ಸ್ಟಾಗ್ರಾಮ್‍ನಲ್ಲಿ ಅಪ್‍ಲೋಡ್ ಮಾಡಿದ ಆಟಗಾರ, ನನಗೆ ಇಷ್ಟವಾಯಿತು, ಹಾಗಾಗಿ ಉಂಗುರ ತೊಡಿಸಿದೆ ಎಂಬ ಅಡಿಬರಹದಡಿ ಶೇರ್ ಮಾಡಿದ್ದಾರೆ. ಇದನ್ನು ಒಂಬತ್ತು ಸಾವಿರಕ್ಕೂ ಹೆಚ್ಚು ಮಂದಿ ಲೈಕ್‌ ಮಾಡಿದ್ದಾರೆ.




ಹಸಾನಿ ಡಾಟ್ಸನ್ ಸ್ಟೀಫನ್‍ಸನ್ ಅವರ ಪ್ರಿಯತಮೆ ಪೆತ್ರಾ ವುಕೋನಿಕ್ ಕೂಡ ಆ ಸಂತಸದ ಹಾಗೂ ಜೀವನದ ಅಮೂಲ್ಯ ಸಮಯವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದಾರೆ.


ಇದನ್ನೂ ಓದಿ: ಗೋವಾ ಬೀಚ್​ನಲ್ಲಿ ಕಡಲೆ ಮಾರುತ್ತಿದ್ದ ಕನ್ನಡಿಗ ಹುಡುಗ ಬ್ರಿಟನ್ ಸೇನೆ ಸೇರಿದ ರೋಚಕ ಕಥೆ


ನನ್ನ ಹೃದಯ ಅನುಭವಿಸಿದ ಸಂತೋಷವನ್ನು ಯಾವುದೇ ಪದಗಳಲ್ಲಿ ಇಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ನಾನು ನಿನ್ನ ಪ್ರೀತಿಯ ಪಾಲುದಾರರಾಗಿರುವುದೇ ನನ್ನ ಅದೃಷ್ಟ. ನನಗೆ ಶುಭಾಶಯ ಕೋರಿದ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು. ಈ ಸುಂದರವಾದ ಶಾಶ್ವತ ನೆನಪನ್ನು ನನ್ನ ಜೀವನದಲ್ಲಿ ಇರಿಸಲು ಸಹಾಯ ಮಾಡುವಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಧನ್ಯವಾದಗಳು ಎಂದು ಬರೆದು ಫೋಟೋ ಹಾಕಿದ್ದಾರೆ.


ಸ್ಟೀಫನ್ಸನ್ ತನ್ನ ಸಾಮಾಜಿಕ ಮಾಧ್ಯಮ ಚಾನೆಲ್‍ಗಳಲ್ಲಿ ವುಕೊವಿಕ್ ಅವರೊಂದಿಗೆ ಹಲವಾರು ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಜೂನ್ 7 ರಂದು, ಅವರು ವುಕೊವಿಕ್‍ರೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡು, ನಿಜವಾಗಿಯೂ ಖುಷಿ ಇದೆ ಎಂದು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: ಆಹಾರ ಕೊಡುತ್ತಿದ್ದ ವೃದ್ಧೆಯ ಆರೋಗ್ಯ ವಿಚಾರಿಸಲು ಬಂದ ಲಂಗೂರ್​: ವಿಡಿಯೋ ವೈರಲ್​..!


ವೆಸ್ಟರ್ನ್ ಕಾನ್ಫರೆನ್ಸ್‌ನಲ್ಲಿ ಸ್ಟೀಫನ್ಸನ್‍ರ ಕ್ಲಬ್ ಮಿನ್ನೇಸೋಟಾ 11 ಪಂದ್ಯಗಳಿಂದ 15 ಪಾಯಿಂಟ್‍ಗಳೊಂದಿಗೆ ಆರನೇ ಸ್ಥಾನದಲ್ಲಿದೆ, ಟೇಬಲ್-ಟಾಪರ್ಸ್ ಸಿಯಾಟಲ್ (26 ಪಾಯಿಂಟ್) ಗಿಂತ 11 ಪಾಯಿಂಟ್‍ಗಳಿಗಿಂತ ಉತ್ತಮ ಸ್ಥಾನದಲ್ಲಿದೆ, ನಂತರದ ಸ್ಥಾನಗಳಲ್ಲಿ ಕಾನ್ಸಾಸ್ ಸಿಟಿ (23), ಎಲ್‍ಎ (21), ಕೊಲೊರಾಡೋ (17) ಮತ್ತು ಐಂಈಅ (15).


ಈಸ್ಟರ್ನ್ ಕಾನ್ಫರೆನ್ಸ್‌ನಲ್ಲಿ ನ್ಯೂ ಇಂಗ್ಲೆಂಡ್ 24 ಅಂಕಗಳೊಂದಿಗೆ ಮುನ್ನಡೆ ಸಾಧಿಸಿದ್ದು, ಒಲ್ರ್ಯಾಂಡೊ (21), ಫಿಲಡೆಲ್ಫಿಯಾ (19), ನ್ಯಾಶ್ವಿಲ್ಲೆ (18), ಮತ್ತು ನ್ಯೂಯಾರ್ಕ್ ಸಿಟಿ (17) ಮೊದಲ ಐದು ಸ್ಥಾನಗಳನ್ನು ಗಳಿಸಿವೆ.


(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)


- ವನಿತಾ ವೈ

First published: