Viral News: ಮದ್ವೆಗೆ ಆಗಮಿಸಿದ ಅತಿಥಿಗಳಿಗೆ ಊಟದ ಬಿಲ್ ಕೇಳಿದ ವಧು: ಪ್ರತಿ ಪ್ಲೇಟ್ ಹಣ ಕೇಳಿ ಗೆಸ್ಟ್ ಶಾಕ್

ಮದುವೆ ದಿನ ವೇದಿಕೆ ಮುಂಭಾಗ ಬಾಕ್ಸ್ ಅಳವಡಿಸಲಾಗಿತ್ತು. ಡಬ್ಬದ ಮೇಲೆ ಅತಿಥಿಗಳಿಗೆ ಹಣ ಹಾಕುವಂತೆ ಮನವಿ ಮಾಡಲಾಗಿತ್ತು. ಜೋಡಿಯ ಹನಿಮೂನ್ ಮತ್ತು ಒಳ್ಳೆಯ ಭವಿಷ್ಯ ಹಾಗೂ ಹೊಸ ಮನೆಗಾಗಿ ಹಣ ನೀಡಬೇಕೆಂದು ಡಬ್ಬದ ಮೇಲೆ ಬರೆಯಲಾಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮದುವೆ (Marriage) ಅಂದ್ರೆ ಆಪ್ತರು, ಪರಿಚಯಸ್ಥರು ಮತ್ತು ಸಂಬಂಧಿಕರನ್ನು ಕರೆಸಿ ಅವರ ಸಮ್ಮುಖದಲ್ಲಿ ಜೋಡಿ (Couple) ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ, ನಂತರ ಮದುವೆಗೆ ಆಗಮಿಸಿದ ಅತಿಥಿ (Guest)ಗಳೆಲ್ಲರಿಗೂ ವಿಶೇಷ ಭೋಜನಕೂಟವನ್ನು (Meal) ಅವರ ಶಕ್ತಿಗನುಸಾರವಾಗಿ ಏರ್ಪಡಿಸುತ್ತಾರೆ. ಈ ಪದ್ಧತಿ ಎಲ್ಲ ದೇಶಗಳಲ್ಲಿಯೂ ಇದೆ. ಮದುವೆ ನಡೆಯುವ ಸಂಪ್ರದಾಯ ಭಿನ್ನವಾಗಿರಬಹುದು. ಆದ್ರೆ ಆತಿಥ್ಯ ಮಾತ್ರ ಬೇರೆಯಾಗಿಲ್ಲ. ಇನ್ನು ಮದುವೆಗೆ ಆಗಮಿಸಿದ ಅತಿಥಿಗಳು ಸಹ ಕಾಣಿಕೆ (Gift) ನೀಡಿ ಶುಭ ಹಾರೈಸುತ್ತಾರೆ. ಆದ್ರೆ ವಿದೇಶದಲ್ಲಿ ವಿಚಿತ್ರ ಮದುವೆ ನಡೆದಿದ್ದು, ಆಗಮಿಸಿದ ಅತಿಥಿಗಳೆಲ್ಲರಿಗೂ ತಮ್ಮ ಊಟದ ಹಣ ಪಾವತಿಸುವಂತೆ ವಧು (Bride) ಕೇಳಿಕೊಂಡಿದ್ದಾಳೆ. ಊಟದ ಬಿಲ್ ಕಂಡು ಕೆಲ ಅತಿಥಿಗಳು ಶಾಕ್ ಆಗಿದ್ದಾರೆ,

ಈ ವಿಚಿತ್ರ ಮದುವೆಯಲ್ಲಿ ಭಾಗಿಯಾಗಿದ್ದ ಒಬ್ಬ ವ್ಯಕ್ತಿ ಈ ಬಗ್ಗೆ Reddit ನಲ್ಲಿ ಬರೆದುಕೊಂಡಿದ್ದಾನೆ. ಸದ್ಯ ವ್ಯಕ್ತಿಯ ಪೋಸ್ಟ್ ವೈರಲ್ (Viral Post)ಆಗಿದ್ದು, ಬಗೆ ಬಗೆಯ ವಾದಗಳು ಮುಂದೆ ಬಂದಿವೆ. ನಾನು ಕೆಲ ದಿನಗಳ ಹಿಂದೆ ನನ್ನ ಪರಿಚಯದ ಮದುವೆಗೆ ಹೋಗಿದ್ದೆ, ವಧು ನನ್ನ ಪರಿಚಯವಾಗಿದ್ದರಿಂದ ನನಗೆ ಆಹ್ವಾನ ನೀಡಲಾಗಿತ್ತು. ಆದ್ರೆ ಆರತಕ್ಷತೆ (Wedding Reception) ವೇಳೆ ವಧು ಆಗಮಿಸಿದ ಎಲ್ಲ ಅತಿಥಿಗಳಿಗೆ 7,300 ರೂಪಾಯಿ ಪಾವತಿಸಿ ಊಟ ಮಾಡುವಂತೆ ಹೇಳಿದಳು. ಕಾರಣ ವಧು ಮತ್ತು ವರ ಮದುವೆಗೆ ಹಣ ಖರ್ಚು ಮಾಡಲು ಶಕ್ತರಾಗಿರಲಿಲ್ಲ.

ಒಂದು ಊಟಕ್ಕೆ 7,300 ರೂಪಾಯಿ 

ಆಮಂತ್ರಣ ಪತ್ರಿಕೆಯಲ್ಲಿ ವಿಷಯ ಹೇಳಿದ್ದ ವಧು, ತಾನು ಊಟದ ವ್ಯವಸ್ಥೆ ಮಾಡಲು ಸಾಮರ್ಥ್ಯ ಇಲ್ಲ. ಹಾಗಾಗಿ ಮದುವೆಗೆ ಆಗಮಿಸುವ ಅತಿಥಿಗಳು ತಮ್ಮ ಊಟದ ಮೊತ್ತವನ್ನ ಪಾವತಿಸಬೇಕು ಎಂದು ಮನವಿ ಮಾಡಿಕಕೊಂಡಿದ್ದರು, ಮದುವೆಗೆ ಆಗಮಿಸುವ ಅತಿಥಿಗಳಿಗೆ 7,300 ರೂಪಾಯಿ ( 99 ಅಮೆರಿಕನ್ ಡಾಲರ್) ಕೇಳಿದ್ದರು.

ಇದನ್ನೂ ಓದಿ:  Womens: ಮದುವೆ ಆಗಿದ್ರೇನಂತೆ, ಇಷ್ಟವಾದವನ ಜೊತೆ ಹೋಗೋ ಸ್ವಾತಂತ್ರ್ಯ ಇಲ್ಲಿನ ಮಹಿಳೆಯರಿಗೆ ಇದೆ!

ಮದುವೆ ಸಹ ಅವರ ಮನೆಯಿಂದ ದೂರದಲ್ಲಿ ಆಯೋಜಿಸಲಾಗಿತ್ತು. ಸುಮಾರು ನಾಲ್ಕು ಗಂಟೆ ಡ್ರೈವ್ ಮಾಡಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿತ್ತು. ಹೆಚ್ಚು ಸಮಯದ ಜೊತೆ ಪೆಟ್ರೋಲ್ ಗೂ ಹಣ ವ್ಯಯ ಮಾಡಲಾಯ್ತು ಎಂದು ಬರೆದುಕೊಂಡಿದ್ದಾರೆ. ಆದ್ರೆ ಮದುವೆ ಯಾರದು? ಅವರ ಹೆಸರೇನು ಎಂದು ಸಹ ನೆಟ್ಟಿಗ ತಿಳಿಸಿಲ್ಲ.

ಮದುವೆ ಹೇಗಿತ್ತು?

ಮದುವೆ ದಿನ ವೇದಿಕೆ ಮುಂಭಾಗ ಬಾಕ್ಸ್ ಅಳವಡಿಸಲಾಗಿತ್ತು. ಡಬ್ಬದ ಮೇಲೆ ಅತಿಥಿಗಳಿಗೆ ಹಣ ಹಾಕುವಂತೆ ಮನವಿ ಮಾಡಲಾಗಿತ್ತು. ಜೋಡಿಯ ಹನಿಮೂನ್ ಮತ್ತು ಒಳ್ಳೆಯ ಭವಿಷ್ಯ ಹಾಗೂ ಹೊಸ ಮನೆಗಾಗಿ ಹಣ ನೀಡಬೇಕೆಂದು ಡಬ್ಬದ ಮೇಲೆ ಬರೆಯಲಾಗಿತ್ತು.

ಇದನ್ನೂ ಓದಿ:  Painful Punishment: ವಿವಾಹಿತ ಮುಸ್ಲಿಂ ಮಹಿಳೆಗೆ ಪರ ಪುರುಷನೊಂದಿಗೆ ಸಂಬಂಧ.. ಜನರ ಸಮ್ಮುಖದಲ್ಲೇ ಸಿಕ್ತು ಘನಘೋರ ಶಿಕ್ಷೆ!

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್

ಸದ್ಯ ಯುವಕನ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮದುವೆ ನಂತರ ಸಾಲದಲ್ಲಿ ಸಿಲುಕಿಕೊಳ್ಳುವುದಕ್ಕಿಂತ ಮೊದಲೇ ಈ ರೀತಿ ಪ್ಲಾನ್ ಮಾಡಿಕೊಳ್ಳುವುದು ಉತ್ತಮ. ಈ ನವಜೋಡಿಯ ಚಿಂತನೆ ವಿಭಿನ್ನವಾಗಿದ್ದು ಮತ್ತು ವಿಶೇಷವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ನಿಮ್ಮಿಂದ ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳಲು ಆಗದಿದ್ರೆ ಸರಳವಾಗಿ ಆಗಬಹುದಿತ್ತು. ಅದನ್ನು ಬಿಟ್ಟು ಅತಿಥಿಗಳನ್ನು ಇಕ್ಕಟ್ಟಿನಲ್ಲಿ ಸಿಲುಕಿಸೋದು ಎಷ್ಟು ಸರಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಇನ್ನು ಕೆಲವರು ನೀವು ಎಷ್ಟೇ ಹತ್ತಿರವಾಗಿದ್ರೂ ಮದುವೆಗೆ ಹೋಗಬೇಡಿ. ಮದುವೆಯಲ್ಲಿ ಈ ರೀತಿ ಹಣ ಕೇಳುವುದು ಟ್ರೆಂಡ್ ಆಗಿದೆ. ಒಂದು ವೇಳೆ ಹೋದ್ರೂ ಜೋಡಿಗೆ ಶುಭ ಹಾರೈಸಿ ಊಟ ಮಾಡದೇ ಬನ್ನಿ ಎಂದು ಹೆಚ್ಚಿನ ಜನರು ಬರೆದುಕೊಂಡಿದ್ದಾರೆ. ಒಂದಿಷ್ಟು ಜನ ನಿಜಕ್ಕೂ ಆ ಜೋಡಿಯ ಬಳಿ ಹಣ ಇಲ್ಲದಿರಬಹುದು ಅಲ್ಲವಾ ಅಂತಾನೂ ಹೇಳಿದ್ದಾರೆ.
Published by:Mahmadrafik K
First published: