HOME » NEWS » Trend » AMERICA NIAID FUND COVID RESEARCH IN CHINAS WUHAN DR FAUCI SAYS PREPOSTEROUS HG

ಕೊರೊನಾ ವೈರಸ್ ಹುಟ್ಟುಹಾಕಲು ಅಮೆರಿಕ ಫಂಡಿಂಗ್; ಜಗತ್ತಿಗೇ ಮೋಸ ಮಾಡಿತೆ ಡ್ರ್ಯಾಗನ್ ಚೀನಾ!

ವಿಜ್ಞಾನಿಗಳಾದ ಡಲ್ಗಲಿಶ್​ ಹಾಗೂ ಸೊರೇನ್​ಸೆನ್​ಗಳು ಮಾಹಿತಿ ಬಹಿಂರಂಗಪಡಿಸಿದ್ದಾರೆ​. ಅಂದಹಾಗೆಯೇ ಕೊರೊನಾ ವೈರಸ್​ ಚೀನಾದ ವಿಜ್ಞಾನಿಗಳು ವಿಹಾನ್​ ಲ್ಯಾಬ್​ನಲ್ಲಿ ಕೊರೊನಾ ವೈರಸ್​  ಹುಟ್ಟುಹಾಕಿದ್ದಾರೆ, ಇದು ನೈಸರ್ಗಿಕವಾಗಿ ಹುಟ್ಟಿದೆ ಎಂಬ ಸಂದೇಶವನ್ನು ಪಸರಿಸಲು ಮತ್ತು ಅನುಮಾನ ಬಾರದಂತೆ ತಿಳಿಸಲು ರಿವರ್ಸ್​ ಇಂಜಿನಿಯರಿಂಗ್​ ವರ್ಷನ್​ನಿಂದ ಟ್ರ್ಯಾಕ್​ ಮಾಡಿದ್ದಾರೆ.

news18-kannada
Updated:May 31, 2021, 10:07 AM IST
ಕೊರೊನಾ ವೈರಸ್ ಹುಟ್ಟುಹಾಕಲು ಅಮೆರಿಕ ಫಂಡಿಂಗ್; ಜಗತ್ತಿಗೇ ಮೋಸ ಮಾಡಿತೆ ಡ್ರ್ಯಾಗನ್ ಚೀನಾ!
ಸಾಂದರ್ಭಿಕ ಚಿತ್ರ.
  • Share this:
ಮಹಾಮಾರಿ ಕೊರೊನಾ ಅವಾಂತರಕ್ಕೆ ವಿಶ್ವವೇ ನಲುಗಿದೆ. ಭಾರತದಲ್ಲಿ ಎರಡನೇ ಅಲೆಯಿಂದಾಗಿ ಜನರು ಸಂಕಷ್ಟಕ್ಕೆ ಇಡಾಗಿದ್ದಾರೆ. ಅನೇಕ ಜನರು ಈ ಮಹಾಮಾರಿ ಕಾಟಕ್ಕೆ ಸಾವನ್ನಪ್ಪಿದ್ದಾರೆ. ಹೀಗಿರುವಾಗ ಭಯಾನಕ ವೈರಸ್​ ಹುಟ್ಟಿಕೊಂಡಿದ್ದು ಹೇಗೆ? ಮೊದಲು ಯಾವ ದೇಶದಲ್ಲಿ ಕಂಡು ಬಂತು? ಎಂಬ ಪ್ರಶ್ನೆಗಳು ಎಲ್ಲರನ್ನು ಕಾಡಿರುವಾಗ ಇಬ್ಬರು ವಿಜ್ಞಾನಿಗಳು ಈ ಕುರಿತಾಗಿ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.

ವಿಜ್ಞಾನಿಗಳಾದ ಡಲ್ಗಲಿಶ್​ ಹಾಗೂ ಸೊರೇನ್​ಸೆನ್​ಗಳು ಮಾಹಿತಿ ಬಹಿಂರಂಗಪಡಿಸಿದ್ದಾರೆ​. ಅಂದಹಾಗೆಯೇ ಕೊರೊನಾ ವೈರಸ್​ ಚೀನಾದ ವಿಜ್ಞಾನಿಗಳು ವಿಹಾನ್​ ಲ್ಯಾಬ್​ನಲ್ಲಿ ಕೊರೊನಾ ವೈರಸ್​  ಹುಟ್ಟುಹಾಕಿದ್ದಾರೆ, ಇದು ನೈಸರ್ಗಿಕವಾಗಿ ಹುಟ್ಟಿದೆ ಎಂಬ ಸಂದೇಶವನ್ನು ಪಸರಿಸಲು ಮತ್ತು ಅನುಮಾನ ಬಾರದಂತೆ ತಿಳಿಸಲು ರಿವರ್ಸ್​ ಇಂಜಿನಿಯರಿಂಗ್​ ವರ್ಷನ್​ನಿಂದ ಟ್ರ್ಯಾಕ್​ ಮಾಡಿದ್ದಾರೆ. ಮಾತ್ರವಲ್ಲದೆ ಇದರ ವಿಚಾರವಾಗಿ ವಿಭಿನ್ನ ಫಿಂಗರ್​ಪ್ರಿಂಟ್ಸ್​​ ಲಭ್ಯವಾಗಿದೆ.

ಚೀನಾ ವಿಜ್ಞಾನಿಗಳು ಕೊರೊನಾ ವೈರಸ್ ಅನ್ನು​​ ಲ್ಯಾಬ್​ನಲ್ಲೇ ತಯಾರಿಸಿದ್ದಾರೆ. ಈ ವಿಚಾರವನ್ನು ಪ್ರಪಂಚಕ್ಕೆ ತಿಳಿಸಲು ಮುಂದಾದರು. ಆದರೆ ಎಲ್ಲರೂ ಇದು ಬಾವಲಿಯಿಂದ ಹರಡಿದೆ ಎಂಬುದನ್ನು ಹೇಳಿ ಕಡೆಗಣಿಸಿದರು. ಆದರೀಗ ವಿಜ್ಞಾನಿಗಳಾದ ಡಲ್ಗಲಿಶ್​ ಹಾಗೂ ಸೊರೇನ್​ಸೆನ್​ ಬಹಿರಂಗ ಪಡಿಸಿದ ಈವಿಚಾರ

ಸಾರ್ಸ್​ ಕೊರೊನಾ ವೈರಸ್​​ 2 ಪ್ರಾಕೃತಿಕವಾಗಿ ಹುಟ್ಟಿದ್ದಲ್ಲ. ಪ್ರಯೋಗ ಶಾಲೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮಾತ್ರವಲ್ಲದೆ, ವೈರಸ್​​ ಡೇಟಾವನ್ನು ಬಚ್ಚಿಟ್ಟಿದ್ದಾರೆ. ಆದರೆ ಈ ಭಯಾನಕ ವೈರಸ್​​ ಹುಟ್ಟಿನ ಬಗ್ಗೆ ಬಾಯಿಬಿಚ್ಚಿಡಲು ಯತ್ನಿಸಿದ ಕೆಲವು ವಿಜ್ಞಾನಿಗಳು ನಾಪತ್ತೆಯಾಗಿದ್ದಾರೆ ಎಂದಿದ್ದಾರೆ.

ವಿಜ್ನಾನಿಗಳು ಯಾರು?

ಕೊರೊನಾ ವೈರಸ್​ ಪ್ರಾಕೃತಿವಾಗಿ ಹುಟ್ಟಿಕೊಂಡದಲ್ಲ. ಇದು ಮಾನವ ನಿರ್ಮಿತ ಎಂಬುದನ್ನು ಅನೇಕ ವಿಜ್ಞಾನಿಗಳು ಸಹ ಹೇಳಿಕೊಂಡಿದ್ದಾರೆ.  ಅದರಲ್ಲಿ ಒಬ್ಬರು ಪ್ರೊಫೆಸರ್​​ ಎಂಗುಸ್​​ ಡಲ್ಗಲಿಶ್ ಇವರು ಸೇಂಟ್​ ಜಾರ್ಜ್​ ಯುನಿವರ್ಸಿಟಿ ಲಂಡನ್​ನಲ್ಲಿಆಂಕಾಲಜಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಾರ್ವೆಜಿಯನ್​ ವಿಜ್ಞಾನಿ ಡಾ.ಬಿರ್ಗರ್​​​ ಸೊರೇನ್​ಸೆನ್​ ಇವರು ಫಾರ್ಮಾ​ ಕಂಪನಿಯಲ್ಲಿ ವೈರಾಲಜಿಸ್ಟ್​ ಆಗಿದ್ದಾರೆ. ಕೊರೊನಾ ಲಸಿಕೆ ಅಭಿವೃದ್ಧಿಪಡಿಸಿದ್ದಾರೆ.ವಿವಾದದ ನಡುವೆ ಬಂದ ದೊಡ್ಡಣ್ಣನ ಹೆಸರು!

ಕೋವಿಡ್​​-19 ವೈರಸ್​​ ಬಗ್ಗೆ ಸಂಶೋಧನೆ ನಡೆಯುತ್ತಿದೆ, ಗೈನ್​ ಆಫ್​ ಫಂಕ್ಷನ್​ ಸಂಶೋಧನೆಯಲ್ಲಿ ಸಾಂಕ್ರಾಮಿಕವಾಗಿಸಲು ತಿರುಚಲಾಗುತ್ತಿದೆ. ಪ್ರೋಗಾಲಯಲದಲಿ ಈ ವೈರಸ್​​ ಅನ್ನು ಮಾನವ ಜೀವಕೋಶಗಳಲ್ಲಿ ಪುನರಾವರ್ತಿಸುವಂತೆ ಮಾಡಲಾಗುತ್ತಿದೆ. ವಿಜ್ಞಾನಿಗಳಂತು ಹೆಚ್ಚಿನ ವಿಚಾರಗಳನ್ನು ಕಲೆಹಾಕಲು ನಿರರ್ಗಳವಾಗಿ ಅಧ್ಯಯನ ನಡೆಸುತ್ತಿದ್ದಾರೆ.

ಇನ್ನು ಬಾವಳಿಗಳಿಂದಲೂ ಕೊರೊನಾ ಹರಡುತ್ತಾ ಎಂಬ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಚೀನಾದ ಗುಹೆಯಲ್ಲಿ ಸಿಕ್ಕ ಬಾವಳಿಗಳನ್ನು ತಂದು ಕೊರೊನಾ ವೈಸರ್​ ಸಂಗ್ರಾಹಿಸಲಾಗಿದೆ. ನಂತರ ಲ್ಯಾಬ್​ಗಳಿಗೆ ತೆದುಕೊಂಡು ಹೋಗಿ ಮತ್ತು ಅಪಾಯುಕಾರಿಯಾಗಿ ಅಭೀವೃದ್ಧಿಪಡಿಸಾಳಗಿದೆ ಎಂಬುದು ವಿಜ್ಞಾನಿ ಡಲ್ಗಲಿಶ್​ ಹಾಗೂ ಸೊರೇನ್​ಸೆನ್​ ಹೇಳುತ್ತಿದ್ದಾರೆ.

ವಿವಾದ ಸುಳಿಯಲ್ಲಿ ಕೇಳಿಬಂತು ಅಮೆರಿಕಾ ಅರೋಗ್ಯ ಸಚಿವ ಹೆಸರು!

ಚೀನಾ ಲ್ಯಾಬ್​​​ನಲ್ಲಿ ತಯಾರಾದ ಈ ವೈರಸ್​​ ಸುಳಿಯಲ್ಲಿ ಅಮೆರಿಕದ ಕೆಲ ಸಚಿವರ ಹೆಸರು ಕೇಳಿಬಂದಿದೆ. ಮತ್ತೊಂದೆಡೆ ವುಹಾನ್​ ಲ್ಯಾಬ್​ಗೆ ಅಮೆರಿಕ ಆರೋಗ್ಯ ಅಧಿಕಾರಿ ಅನುದಾನ ನೀಡಿದ್ದು, ಅಪಾಯಕಾರಿ ವೈರಸ್​ ಬಗ್ಗೆ ಸಂಶೋಧನೆ ನಡೆಸಲು ಸಹಾಐ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ತನಿಖೆ ನಡೆಸಲು ಹೇಳಿದ ಬೈಡೆನ್​!

ಕೊರೊನಾ ವಿಚಾರವಾಗಿ ಅಮೆರಿಕದ ಅಧ್ಯಕ್ಷ ಬೈಡೆನ್​ ಆದೇಶಿಶಿದ್ದಾರೆ. ಮಾತ್ರವಲ್ಲದೆ ಈ ವಿಚಾರವಾಗಿ ಶ್ವೇತ ಭವನಕ್ಕೆ ಪತ್ರವೊಂದು ಬಂದಿದ್ದು, ಕೊರೊನಾ ವೈರಸ್​ ಲ್ಯಾಬ್​ನಲ್ಲಿ ತಯಾರಿಸಿದ ಮತ್ತು ಅಲ್ಲಿ ಸಂಶೋಧನೆ ನಡೆಸಿದವರು ಅನಾರೋಗ್ಯಕ್ಕೆ ತುತ್ತಾಗಿರುವ ವಿಚಾರವನ್ನು ಪತ್ರದಲ್ಲಿ ತಿಳಿಸಿದ್ದಾರಂತೆ.
Published by: Harshith AS
First published: May 31, 2021, 10:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories