• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Ambedkar Jayanti 2023: ಸಂವಿಧಾನದ ಶಿಲ್ಪಿಯಲ್ಲದೆ ಸಮಾಜ ಸುಧಾರಕರಾಗಿ ಅಂಬೇಡ್ಕರ್ ಮಾಡಿರುವ ಸಾಧನೆಗಳೇನು?

Ambedkar Jayanti 2023: ಸಂವಿಧಾನದ ಶಿಲ್ಪಿಯಲ್ಲದೆ ಸಮಾಜ ಸುಧಾರಕರಾಗಿ ಅಂಬೇಡ್ಕರ್ ಮಾಡಿರುವ ಸಾಧನೆಗಳೇನು?

ಅಂಬೇಡ್ಕರ್ ಜಯಂತಿ 2023

ಅಂಬೇಡ್ಕರ್ ಜಯಂತಿ 2023

ಅಂಬೇಡ್ಕರ್ ಒಬ್ಬ ವ್ಯಕ್ತಿ ಮಾತ್ರವಲ್ಲದೆ ಶಕ್ತಿಯಾಗಿದ್ದರು ಅಂತೆಯೇ ಒಬ್ಬ ಸಮಾಜ ಸುಧಾರಕರಾಗಿ ಭಾರತದ ಹಿಂದುಳಿದ ಜನಸಮೂಹದ ಪ್ರಗತಿಗೆ ಅವಿರತವಾಗಿ ಶ್ರಮಿಸಿದರು.

  • Share this:

ಭಾರತೀಯ ಸಂವಿಧಾನದ ಪಿತಾಮಹ  (Father of Indian Constitution) ಎಂದೇ ಕರೆಯಲಾದ ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ (Dr Bhimrao Ambedkar) ತಮ್ಮ ಬಹುಮುಖಿ ವ್ಯಕ್ತಿತ್ವದಿಂದ ಖ್ಯಾತರಾದವರು. ಅಂಬೇಡ್ಕರ್ ಸಮಾಜ ಸುಧಾರಕರಾಗಿದ್ದರು ಅಂತೆಯೇ ಅರ್ಥಶಾಸ್ತ್ರ, ಕಾನೂನು ಮತ್ತು ರಾಜಕೀಯದಲ್ಲಿ ಕೆಲಸ ಮಾಡಿದ ಚಾಣಾಕ್ಷ ವ್ಯಕ್ತಿಯಾಗಿದ್ದರು. ಅಂಬೇಡ್ಕರ್ ಒಬ್ಬ ವ್ಯಕ್ತಿ ಮಾತ್ರವಲ್ಲದೆ ಶಕ್ತಿಯಾಗಿದ್ದರು ಅಂತೆಯೇ ಒಬ್ಬ ಸಮಾಜ ಸುಧಾರಕರಾಗಿ ಭಾರತದ ಹಿಂದುಳಿದ ಜನಸಮೂಹದ ಪ್ರಗತಿಗೆ ಅವಿರತವಾಗಿ ಶ್ರಮಿಸಿದರು. ಅವರು ಮಹಿಳಾ ಹಕ್ಕುಗಳು ಮತ್ತು ಲಿಂಗ ಸಮಾನತೆಯ ಬಹಿರಂಗ ಬೆಂಬಲಿಗರಾಗಿದ್ದರು.


ಬಿ.ಆರ್. ಅಂಬೇಡ್ಕರ್ ಅವರ ಜೀವನ ಹೇಗಿತ್ತು?


ಏಪ್ರಿಲ್ 14, 1891 ರಂದು ಮಧ್ಯಪ್ರದೇಶದ ಮೋವ್‌ನಲ್ಲಿ ಜನಿಸಿದ ಬಿಆರ್ ಅಂಬೇಡ್ಕರ್, ಆ ಸಮಯದಲ್ಲಿ ದೇಶದ ಅತ್ಯಂತ ಕೆಳಮಟ್ಟದ ಅಥವಾ ಅಸ್ಪೃಶ್ಯ ಜಾತಿಗಳಲ್ಲಿ ಒಂದೆಂದು ಪರಿಗಣಿಸಲಾದ ಮಹಾರ್ ಕುಟುಂಬದಲ್ಲಿ ತಮ್ಮ ಬಾಲ್ಯವನ್ನು ಕಳೆದರು. ಎಳವೆಯಿಂದಲೂ ಅಂಬೇಡ್ಕರ್ ಸಾಕಷ್ಟು ಕಿರುಕುಳಕ್ಕೆ ಒಳಗಾದರು.


ಎಷ್ಟೇ ಕಿರುಕುಳಗಳನ್ನು ಅನುಭವಿಸಿದರೂ ಅಂಬೇಡ್ಕರ್ ಓದಿ ತಮ್ಮ ಕಾಲ ಮೇಲೆ ನಿಂತು ತಮ್ಮ ಪಂಗಡಕ್ಕೆ ಏನಾದರೂ ಒಳಿತನ್ನು ಮಾಡಬೇಕು ಹಾಗೂ ಅಸ್ಪಶ್ಯತೆಯನ್ನು ಬುಡಸಮೇತ ಕಿತ್ತುಹಾಕಬೇಕೆಂಬ ಶಪಥಕ್ಕೆ ಬದ್ಧರಾಗಿದ್ದರು.


ಬಾಂಬೆಯ ಪ್ರಸಿದ್ಧ ಎಲ್ಫಿನ್‌ಸ್ಟೋನ್ ಹೈಸ್ಕೂಲ್‌ಗೆ ದಾಖಲಾದ ಅಂಬೇಡ್ಕರ್ ಈ ಶಾಲೆಯಲ್ಲಿ ಓದಿದ ತಮ್ಮ ಜಾತಿಯ ಏಕೈಕ ಸದಸ್ಯರಾಗಿದ್ದರು. ಶಾಲಾ ದಿನಗಳಲ್ಲಿ ಕೂಡ ಅಂಬೇಡ್ಕರ್ ತಮ್ಮ ಮೇಲ್ಜಾತಿಯ ಬೋಧಕರು ಹಾಗೂ ಸಹಪಾಠಿಗಳಿಂದ ಕೂಡ ಕಿರುಕುಳಕ್ಕೆ ಒಳಗಾದರು.


ತಮ್ಮ ಮೇಲ್ಜಾತಿಯ ಸಹಪಾಠಿಗಳೊಂದಿಗೆ ತರಗತಿಗಳಲ್ಲಿ ಕುಳಿತುಕೊಳ್ಳುವ ಅವಕಾಶ ಅವರಿಗಿರಲಿಲ್ಲ ಅಂತೆಯೇ ಶಾಲೆಯಲ್ಲಿದ್ದ ಮಣ್ಣಿನ ಮಡಿಕೆಯಿಂದ ನೀರು ಕುಡಿಯಲೂ ಅವರಿಗೆ ಅನುಮತಿ ಇರಲಿಲ್ಲ.


ಇದನ್ನೂ ಓದಿ: ರಾಮೇಶ್ವರದಲ್ಲಿವೆ ತೇಲುವ ಕಲ್ಲುಗಳು!


ಎತ್ತರದಿಂದ ಸುರಿದ ನೀರನ್ನು ಕೈಯಲ್ಲಿ ಬೊಗಸೆ ಹಿಡಿದು ಆ ದಿನಗಳಲ್ಲಿ ಕುಡಿಯಬೇಕಿತ್ತು ಇನ್ನು ಶಾಲೆಯ ಪ್ಯೂನ್ ರಜೆಯಲ್ಲಿದ್ದಾಗ ಇವರಿಗೆ ಕುಡಿಯಲು ನೀರೇ ಇರಲಿಲ್ಲ.


ಇಷ್ಟೆಲ್ಲಾ ಹಿಂಸೆ ಹಾಗೂ ಕಷ್ಟಗಳನ್ನು ಸಹಿಸಿಕೊಂಡೇ ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ತಮ್ಮ ಸ್ನಾತಕೋತ್ತರ ಅಧ್ಯಯನವನ್ನು ಪೂರ್ಣಗೊಳಿಸಿದರು.


ಅವರು ಅಂತಿಮವಾಗಿ ತಮ್ಮ ಡಾಕ್ಟರೇಟ್ ಪ್ರಬಂಧವನ್ನು ಮುಂದುವರಿಸಲು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ಗೆ ಸೇರ್ಪಡೆಗೊಂಡರು ಮತ್ತು ಎರಡು ಡಾಕ್ಟರೇಟ್ ಗಳಿಸಿದರು.


ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಮಾಡಿರುವ ಇತರ ಸಾಧನೆಗಳೇನು?


ಬಿ.ಆರ್. ಅಂಬೇಡ್ಕರ್ ಅವರು ಸ್ವತಂತ್ರ ಭಾರತದ ಮೊದಲ ಕಾನೂನು ಮತ್ತು ನ್ಯಾಯ ಮಂತ್ರಿಯಾಗಿದ್ದರು ಮತ್ತು ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು.


ಸಂವಿಧಾನಕ್ಕೆ ಅವರ ಕೊಡುಗೆಯ ಹೊರತಾಗಿ, ಅವರು ರಾಷ್ಟ್ರದಾದ್ಯಂತ ದಲಿತ ಮತ್ತು ಬೌದ್ಧ ಸಂಘಟನೆಗಳನ್ನು ಪ್ರೇರೇಪಿಸಿದರು ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಪ್ರಚಾರ ಮಾಡಿದರು.


ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸಿದರು ಹಾಗೂ ಅವರ ಉನ್ನತಿಗಾಗಿ ಶ್ರಮಿಸಿದರು. ಕಾರ್ಮಿಕರು ಆರ್ಥಿಕತೆಯ ಪ್ರಮುಖ ಆಧಾರವಾಗಿರುವುದರಿಂದ ಅವರನ್ನು ಘನತೆ ಹಾಗೂ ಗೌರವದಿಂದ ಕಾಣಬೇಕೆಂಬ ತತ್ವಕ್ಕೆ ಅಂಬೇಡ್ಕರ್ ಬದ್ಧರಾಗಿದ್ದರು.


ಇದನ್ನೂ ಓದಿ: ಈತ ತನ್ನ ಮದ್ವೆಗೆ ಖರ್ಚು ಮಾಡಿದ್ದ 150 ಕೋಟಿ! ಯಾರಪ್ಪ ಆ ಶ್ರೀಮಂತ ಮದುಮಗ?


ಕನಿಷ್ಠ ವೇತನದ ನಿಯಮಗಳನ್ನು ಬೆಂಬಲಿಸಿದ ಅಂಬೇಡ್ಕರ್ ಇದುವೇ ಕಾರ್ಮಿಕರನ್ನು ಶೋಷಣೆಗೆ ಒಳಗಾದಂತೆ ಕಾಪಾಡುತ್ತದೆ ಎಂದು ವಿಶ್ವಾಸವಿರಿಸಿದ್ದರು.


ಮಹಿಳಾ ಹಕ್ಕು ಹಾಗೂ ಸಮಾನತೆಗಾಗಿ ಧ್ವನಿ ಎತ್ತಿದರು


ಅವರು ಮಹಿಳೆಯರ ಹಕ್ಕುಗಳು ಮತ್ತು ಲಿಂಗ ಸಮಾನತೆಗಾಗಿ ಹೋರಾಡಿದ ವಕೀಲರಾಗಿದ್ದರು ಅಂತೆಯೇ ಮಹಿಳೆಯರಿಗೆ ಪುರುಷರಂತೆ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡಬೇಕು ಮತ್ತು ಗೌರವ ಮತ್ತು ಘನತೆಯಿಂದ ಪರಿಗಣಿಸಬೇಕು ಎಂದು ನಂಬಿದ್ದರು ಹಾಗೂ ಇದಕ್ಕಾಗಿ ಹೋರಾಡಿದರು.


ಜನನ ನಿಯಂತ್ರಣ ಮತ್ತು ಕುಟುಂಬ ಯೋಜನೆ ಜನಸಂಖ್ಯೆಯ ಹೆಚ್ಚಳವನ್ನು ಕಡಿಮೆ ಮಾಡಲು ಮತ್ತು ಮಹಿಳೆಯರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಅತ್ಯಗತ್ಯ ಎಂಬುದು ಅವರ ವಾದವಾಗಿತ್ತು.
ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಲ್ಲಿ ಅಂಬೇಡ್ಕರ್ ನೇರವಾಗಿ ಭಾಗಿಯಾಗಿಲ್ಲದೇ ಇದ್ದರೂ ಅದರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. 1949 ರ ಬ್ಯಾಂಕಿಂಗ್ ಕಂಪನಿಗಳ ಕಾಯಿದೆಯ ರಚನೆಯಲ್ಲಿ ಅವರದ್ದು ಮಹತ್ತರ ಪಾತ್ರವಾಗಿದೆ. ಇದರಿಂದ ವಾಣಿಜ್ಯ ಮತ್ತು ಸಾರ್ವಜನಿಕ ಬ್ಯಾಂಕುಗಳ ಮೇಲೆ RBI ಗೆ ಹೆಚ್ಚಿನ ಅಧಿಕಾರವನ್ನು ಪಡೆಯುವಂತಾಯಿತು.

First published: