ಜಾಸ್ತಿ ತಿಂದರೆ ಶಾಕ್​ ನೀಡುತ್ತೆ ಈ ಬೆಲ್ಟ್​!; ಅಮೆಜಾನ್​ನಲ್ಲೊಂದು ಡಯೆಟ್​ ನಿಯಂತ್ರಿಸುವ ಯಂತ್ರ

ಪಾವ್ಲೋಕ್​ ಬ್ರೇಸ್​​ಲೆಟ್ ಬಳಕೆ ಮಾಡುವವರಿಗೆ ಆ್ಯಪ್​ ಕೂಡ ಲಭ್ಯವಿದೆ. ಈ ಆ್ಯಪ್​ ಬಳಿಸಿದಾಗ ತಾವು ಸೇವಿಸಿದ ಆಹಾರದ ಕ್ಯಾಲೊರಿಯನ್ನು ಪರಿಶೀಲಿಸಬಹುದಾಗಿದೆ. ಅಂತೆಯೇ, ಕ್ಯಾಲೊರಿ ಹೆಚ್ಚಾದಂತೆ ಬ್ರೇಸ್​​ಲೆಟ್​ ಎಚ್ಚರಿಕೆಯನ್ನು ನೀಡುತ್ತದೆ.

bracelet

bracelet

 • Share this:
  ನೀವು ತೂಕದ ಸಮಸ್ಯೆಯಿಂದ ಬಳಲುತ್ತಿದ್ದೀರಾ.? ತೂಕ ಇಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದೀರಾ? ಹಾಗಿದ್ದರೆ, ಇನ್ನು ಮುಂದೆ ಚಿಂತೆ ಮಾಡುವ ಅಗತ್ಯವಿಲ್ಲ. ಇ- ಕಾಮರ್ಸ್​ ಮಳಿಗೆಯಾದ ಅಮೆಜಾನ್​ ಬ್ರೇಸ್​ ಲೈಟ್​ವೊಂದನ್ನು ಮಾರಾಟ ಮಾಡುತ್ತಿದ್ದು, ತೂಕ ಇಳಿಸಿಕೊಳ್ಳಲು ಪರದಾಡುತ್ತಿರುವವರಿಗೆ ಪರಿಹಾರವನ್ನು ನೀಡಿದೆ.

  ತೂಕ ಇಳಿಸಿಕೊಳ್ಳಬೇಕು ಎಂದುಕೊಂಡರು ಹಸಿವು ತಾಳತಾರದೆ ಮಿತಿ ಮೀರಿ ಆಹಾರ ಸೇವನೆ ಮಾಡಿತ್ತೇವೆ.  ಆದರೆ ಅಮೆಜಾನ್​​​ನಲ್ಲಿ ಲಭ್ಯವಿರುವ ಪಾವ್ಲೋಕ್​ ಬೇಲ್ಟ್​ ನಿಮ್ಮ ಆಹಾರದ ಸೇವನೆಯನ್ನು ನಿಯಂತ್ರಿಸುತ್ತದೆ. ಮಿತಿಗಿಂತ ಹೆಚ್ಚು ಆಹಾರವನ್ನು ತಿಂದರೆ ವಿದ್ಯುತ್​ ಶಾಕ್​ ನೀಡುತ್ತದೆ. ಹಾಗಾಗೀ, ಬಳಕೆದಾರನ ಆಹಾರವನ್ನು ನಿಯಂತ್ರಿಸಲು ಈ ಬ್ರೇಸ್​​ಲೆಟ್​ 350 ವೋಲ್ಟ್​​ ವಿದ್ಯುತ್​​ ಶಾಕ್​ ಅನ್ನು ಅಳವಡಿಸಲಾಗಿದೆ.

  ಪಾವ್ಲೋಕ್​ ಬ್ರೇಸ್​​ಲೆಟ್​ ಬಳಕೆ ಮಾಡುವವರಿಗೆ ಆ್ಯಪ್​ ಕೂಡ ಲಭ್ಯವಿದೆ. ಈ ಆ್ಯಪ್​ ಬಳಿಸಿದಾಗ ತಾವು ಸೇವಿಸಿದ ಆಹಾರದ ಕ್ಯಾಲೊರಿಯನ್ನು ಪರಿಶೀಲಿಸಬಹುದಾಗಿದೆ. ಅಂತೆಯೇ, ಕ್ಯಾಲೊರಿ ಹೆಚ್ಚಾದಂತೆ ಬ್ರೇಸ್​​ಲೆಟ್​ ಎಚ್ಚರಿಕೆಯನ್ನು ನೀಡುತ್ತದೆ.

  ಅಮೆಜಾನ್​ನಲ್ಲಿ ಲಭ್ಯವಿರುವ ಈ ಬ್ರೇಸ್​​ಲೆಟ್​ನ ಬಳಕೆಯಿಂದ ಇಂಟರ್​ನೆಟ್​, ಟಿ.ವಿ ವೀಕ್ಷಣೆ, ವಿಡಿಯೋ ಗೇಮ್ಸ್​ ಮೇಲೆಯೂ ನಿಗಾ ವಹಿಸುತ್ತದೆ. ಅತಿಯಾದ ಟಿ.ವಿ ವೀಕ್ಷಣೆ, ಇಂಟರ್ ನೆಟ್​ ಬಳಕೆ ಮಾಡಿದರೆ ಎಚ್ಚರಿಸುತ್ತದೆ.​

  ಇನ್ನು ತೂಕ ಇಳಿಕೆ ಮಾಡಲು ಮತ್ತು ಡಯೆಟ್​ ಮಾಡುವವರಿಗೆ ಈ ಬೆಲ್ಟ್​ ಹೆಚ್ಚು ಉಪಯೋಗವಾಗಿದ್ದು, ದೈನಂದಿನ ಬಳಕೆಗೆ ಮತ್ತು ಆಹಾರದಲ್ಲಿನ ನಿಯಂತ್ರಣಕ್ಕೆ ಈ ಬೆಲ್ಟ್​ ಸಹಾಯಕ. ಅಮೆಜಾನ್​ನಲ್ಲಿ ಲಭ್ಯವಿರುವ ಪಾವ್ಲೋಕ್​  ಬ್ರೇಸ್​​ಲೆಟ್​ ಬೆಲೆ 20,499 ರೂ.ಗಳಾಗಿದೆ.
  Published by:HR Ramesh
  First published: