HOME » NEWS » Trend » AMAZON MAY BE TURNING FROM FRIEND TO FOE CLIMATE CHANGE STG HG

ಮನುಕುಲಕ್ಕೆ ಭೀಕರ ಸಂದೇಶ ರವಾನಿಸುತ್ತಿರುವ ಅಮೆಜಾನ್ ಕಾಡುಗಳು: ವಾತಾವರಣ ಬದಲಾವಣೆ ಇನ್ನು ನಿರ್ಲಕ್ಷಿಸುವಂತಿಲ್ಲ

ಅಮೆಜಾನ್‌ ಜಲಾನಯನ ಪ್ರದೇಶದಲ್ಲೂ ಸಾಕಷ್ಟು ಬದಲಾವಣೆಗಳನ್ನು ಗಮನಿಸಬಹುದಾಗಿದೆ. 2010 ರಿಂದ 2019 ರವರೆಗೆ, ಬ್ರೆಜಿಲ್‌ನ ಅಮೆಜಾನ್ ಜಲಾನಯನ ಪ್ರದೇಶವು 16.6 ಶತಕೋಟಿ ಟನ್ ಇಂಗಾಲವನ್ನು ಹೊರ ಹಾಕಿದೆ.

news18-kannada
Updated:May 1, 2021, 9:32 PM IST
ಮನುಕುಲಕ್ಕೆ ಭೀಕರ ಸಂದೇಶ ರವಾನಿಸುತ್ತಿರುವ ಅಮೆಜಾನ್ ಕಾಡುಗಳು: ವಾತಾವರಣ ಬದಲಾವಣೆ ಇನ್ನು ನಿರ್ಲಕ್ಷಿಸುವಂತಿಲ್ಲ
ಅಮೆಜಾನ್
  • Share this:
ಬ್ರೆಜಿಲ್‌ನ ಅಮೆಜಾನ್‌ನಲ್ಲಿ ಈಗಾಗಲೇ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಇದರ ನಡುವೆಯೇ ಮತ್ತೊಂದು ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ. ಅಮೆಜಾನ್ ಕಳೆದ ದಶಕದಲ್ಲಿ ವಾತಾವರಣಕ್ಕೆ ಸುಮಾರು 20 ಪ್ರತಿಶತದಷ್ಟು ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಮಾಡಿದೆ ಎನ್ನುವ ಬೆಚ್ಚಿ ಬೀಳಿಸುವ ವರದಿ ಬಂದಿದೆ. ಈ ವರದಿಯ ಪ್ರಕಾರ ಇನ್ನು ಮಾನವ ಜಗತ್ತು ಇಂಗಾಲದ ಮಾಲಿನ್ಯ ಹೀರಿಕೊಳ್ಳಲು ವಿಶ್ವದ ಅತಿ ದೊಡ್ಡ ಉಷ್ಣವಲಯ ಅರಣ್ಯವನ್ನು ಅವಲಂಭಿಸುವ ಅಗತ್ಯವಿಲ್ಲ ಎಂದಿದೆ.

ಅಮೆಜಾನ್‌ ಜಲಾನಯನ ಪ್ರದೇಶದಲ್ಲೂ ಸಾಕಷ್ಟು ಬದಲಾವಣೆಗಳನ್ನು ಗಮನಿಸಬಹುದಾಗಿದೆ. 2010 ರಿಂದ 2019 ರವರೆಗೆ, ಬ್ರೆಜಿಲ್‌ನ ಅಮೆಜಾನ್ ಜಲಾನಯನ ಪ್ರದೇಶವು 16.6 ಶತಕೋಟಿ ಟನ್ ಇಂಗಾಲವನ್ನು ಹೊರ ಹಾಕಿದೆ. ಆದರೆ 13.9 ಶತಕೋಟಿ ಟನ್‌ಗಳಷ್ಟು ಕಡಿಮೆ ಮಾಡಿದೆ ಎನ್ನುವ ಅಂಶವನ್ನು ಸಂಶೋಧಕರು ಗುರುವಾರ ನೇಚರ್ ಕ್ಲೈಮೇಟ್ ಚೇಂಜ್ ಪತ್ರಿಕೆಯಲ್ಲಿ ತಿಳಿಸಿದ್ದಾರೆ.

ಅರಣ್ಯದ ಅಭಿವೃದ್ಧಿಯಾಗುತ್ತಿದ್ದಂತೆ ಇಂಗಾಲದ ಡೈ ಆಕ್ಸೈಡ್‌ನಲ್ಲಿ ಹೀರಿಕೊಳ್ಳುವ ಮತ್ತು ಸಂಗ್ರಹಿಸುವ ಪ್ರಮಾಣವನ್ನು ಗಮನಿಸಿದಾಗ ಕೆಲವು ಸುಟ್ಟುಹೋಗಿವೆ ಅಥವಾ ನಾಶವಾಗಿರುವ ಅಂಶಗಳಿವೆ. 'ಈ ಬಗ್ಗೆ ಮೊದಲೇ ಅರ್ಧದಷ್ಟು ನಿರೀಕ್ಷೆ ಮಾಡಿದ್ದೆವು. ಈಗ ಅದರ ಅಂಕಿ ಅಂಶಗಳನ್ನು ಗಮನಿಸಲಾಗುತ್ತಿದೆ' ಎಂದು ಫ್ರಾನ್ಸ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಅಗ್ರಾನೊಮಿಕ್‌ನ ವಿಜ್ಞಾನಿ ಸಹ-ಲೇಖಕ ಜೀನ್-ಪಿಯರೆ ವಿಗ್ನೆರಾನ್ ಹೇಳಿದ್ದಾರೆ. ಯಾವ ಸಮಯದಲ್ಲಿ ಬದಲಾವಣೆ ಕಾಣಿಸುವುದೋ ನಮಗೆ ಗೊತ್ತಿಲ್ಲ ಎಂದು ಎಎಫ್‌ಪಿಗೆ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮರಗಳ ಹನನ ಮತ್ತು ಬೆಂಕಿಯಿಂದಾಗಿ ಅರಣ್ಯ ನಾಶ ಸಂಭವಿಸುತ್ತಿದ್ದು, ಇದು 2019 ರಲ್ಲಿ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಅಧ್ಯಯನವು ತಿಳಿಸಿದೆ. ನೆದರ್ಲ್ಯಾಂಡ್ಸ್ ಸುಮಾರು ಒಂದು ಮಿಲಿಯನ್ ಹೆಕ್ಟೇರ್ (2.5 ಮಿಲಿಯನ್ ಎಕರೆ) ನಿಂದ 3.9 ಮಿಲಿಯನ್ ಹೆಕ್ಟೇರ್‌ನಷ್ಟು ಹೆಚ್ಚಾಗಿದೆ.

2019 ರಲ್ಲಿ ಸರ್ಕಾರದ ಬದಲಾವಣೆಯ ನಂತರ ಪರಿಸರ ಸಂರಕ್ಷಣಾ ನೀತಿ ಬ್ರೆಜಿಲ್ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಐಎನ್ಆರ್‌ನಲ್ಲಿ ತಿಳಿಸಲಾಗಿದೆ. ಇನ್ನು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಜನವರಿ 1, 2019 ರಂದು ಪ್ರಮಾಣವಚನ ಸ್ವೀಕರಿಸಿದ ನಂತರ ಸಾಕಷ್ಟು ಬದಲಾವಣೆಗಳಾಗಿವೆ.

2019 ರಲ್ಲಿ 40 ಬಿಲಿಯನ್ ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆಯನ್ನು ತಡೆಯಲು ಇಡೀ ವಿಶ್ವವೇ ಕಷ್ಟಪಡುತ್ತಿದೆ. ಅರ್ಧ ಶತಮಾನದಲ್ಲಿ ಸಸ್ಯಗಳು ಮತ್ತು ಮಣ್ಣು 30 ಪ್ರತಿಶತ ಇಂಗಾಲದ ಹೊರಸೂಸುವಿಕೆ ಹಿಡಿದಿವೆ. ಸಾಗರಗಳು ಶೇ. 20 ರಷ್ಟು ನೆರವಾಗಿವೆ. ಈ ಸಮಯದಲ್ಲಿಯೇ 50 ಪ್ರತಿಶತದಷ್ಟು ಹೊರಸೂಸುವಿಕೆ ಅಧಿಕವಾಗಿದೆ.

ನೆನಪಿಡಲೇಬೇಕಾದ ಅಂಶಗಳಿವುಅಮೆಜಾನ್ ಜಲಾನಯನ ಪ್ರದೇಶವು ವಿಶ್ವದ ಅರ್ಧದಷ್ಟು ಉಷ್ಣವಲಯದ ಮಳೆಕಾಡುಗಳ ಆಗರವಾಗಿದೆ. ಇಲ್ಲಿರುವ ಅನೇಕ ಅಪರೂಪದ ಸಸ್ಯವರ್ಗಗಳು ಮನುಕುಲಕ್ಕೆ ಕುತೂಹಲವಾಗಿದ್ದರೆ, ಇಂಗಾಲವನ್ನು ಹೀರಿಕೊಳ್ಳಲು ಮತ್ತು ಸಂಗ್ರಹಿಸಲು ಹೆಚ್ಚು ಪರಿಣಾಮಕಾರಿಯಾಗಿದೆ. ಇಂಗಾಲದ ಹೀರುವಿಕೆಯ ಕೊರತೆ ಈಗ ಹವಮಾನದ ಬಿಕ್ಕಟ್ಟಿಗೆ ಸವಾಲಾಗಿದೆ.

ಒಕ್ಲಹೋಮ ವಿಶ್ವವಿದ್ಯಾನಿಲಯದಲ್ಲಿ ಅಭಿವೃದ್ಧಿಪಡಿಸಿದ ಉಪಗ್ರಹ ದತ್ತಾಂಶವನ್ನು ವಿಶ್ಲೇಷಿಸುವ ಹೊಸ ವಿಧಾನಗಳನ್ನು ಬಳಸಿಕೊಂಡು ಈಗ ಹೊಸ ಕಾರ್ಯಕ್ಕೆ ಮುಂದಾಗಬೇಕಿದೆ. ಅಂತಾರಾಷ್ಟ್ರೀಯ ಸಂಶೋಧಕರ ತಂಡವು ಮೊದಲ ಬಾರಿಗೆ ನಶಿಸಿ ಹೋದ ಕಾಡುಗಳು ನಮ್ಮ ಗ್ರಹದ ಉಷ್ಣತೆ ಹೆಚ್ಚಾಗಲು ಕಾರಣವಾಗಿದೆ. ಅಲ್ಲದೇ ಇಂಗಾಲ ಹೊರ ಸೂಸುವಿಕೆಯ ದೊಡ್ಡ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

10 ವರ್ಷಗಳ ಅವಧಿಯಲ್ಲಿ ಕಾಡಿನ ನಾಶ, ಮರಗಳ ವಿನಾಶ ಮತ್ತು ಕಾಡ್ಗಿಚ್ಚು ಉಂಟಾಗಿದ್ದು ಇವು ಮರಗಳನ್ನು ನಾಶ ಮಾಡಿಲ್ಲ. ಬದಲಿಗೆ ಇಂಗಾಲದ ಹೊರ ಸೂಸುವಿಕೆ ಮೂರು ಪಟ್ಟು ಹೆಚ್ಚಾಗಿದ್ದು ಕಾಡುಗಳ ನಾಶಕ್ಕೆ ಕಾರಣವಾಗಿದೆ. ದತ್ತಾಂಶವನ್ನು ಗಮನಿಸಿದಾಗ ಬ್ರೆಜಿಲ್ ಮಾತ್ರ ಗಮನಕ್ಕೆ ತೆಗೆದುಕೊಂಡಿದ್ದು, ಅಮೇಜೋನಿಯನ್ ಮಳೆಕಾಡಿನ 60 ಪ್ರತಿಶತವನ್ನು ಮಾತ್ರ ಹೊಂದಿದೆ. ಅಮೆಜಾನ್ ಜಲಾನಯನ ಪ್ರದೇಶವು ಉಳಿದ ಪ್ರದೇಶಗಳಿಗೆ ಹೋಲಿಸಿದಾಗ ತಟಸ್ಥ ಇಂಗಾಲದ ಸನ್ನಿವೇಶವನ್ನು ತೆರೆದಿಡುತ್ತದೆ ಎಂದು ವಿಗ್ನೆರಾನ್ ಹೇಳಿದರು. ಅಮೆಜಾನ್ ಕಾಡು ಹೊಂದಿರುವ ಇನ್ನಿತರ ದೇಶದಲ್ಲಿ ಅರಣ್ಯನಾಶ ಮತ್ತು ಬರ ಹೆಚ್ಚಾ ಕಂಡು ಬರುತ್ತಿದೆ.
ಹವಾಮಾನ ಬದಲಾವಣೆ ದೊಡ್ಡ ಆತಂಕವಾಗಿದೆ. ಜಾಗತಿಕ ತಾಪಮಾನ ಮಿತಿ ಮೀರಿ ಹೆಚ್ಚಾಗಿದೆ. ಸವನ್ನಾದಲ್ಲಿ ಕಾಡುಗಳು ಒಣಗುತ್ತಿವೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ.

ಇದು ಪ್ರಸ್ತುತ ವಿಶ್ವದ ಜೀವವೈವಿಧ್ಯತೆಯ ಗಮನಾರ್ಹ ಶೇಕಡಾವಾರು ಪ್ರದೇಶವನ್ನು ಹೊಂದಿರುವ ಪ್ರದೇಶಕ್ಕೆ ಮಾತ್ರವಲ್ಲದೇ ಇಡಿ ಜಗತ್ತಿಗೆ ಭೀಕರ ಪರಿಣಾಮವನ್ನು ಉಂಟು ಮಾಡುತ್ತದೆ. ಅಮೆಜಾನ್ ಮಳೆಕಾಡು ಹವಾಮಾನ ಬದಲಾವಣೆಯಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತವೆ.

ಗ್ರೀನ್‌ಲ್ಯಾಂಡ್ ಮತ್ತು ಪಶ್ಚಿಮ ಅಂಟಾರ್ಕ್ಟಿಕ್‌ನ ಮೇಲಿರುವ ಹಿಮ ಪದರಗಳು, ಇಂಗಾಲದ ಡೈ ಆಕ್ಸೈಡ್ ಮತ್ತು ಮೀಥೇನ್ ತುಂಬಿದ ಸೈಬೀರಿಯನ್ ಪರ್ಮಾಫ್ರಾಸ್ಟ್ ಘನ ಮಣ್ಣಿನ ಗುಹೆಗಳು, ದಕ್ಷಿಣ ಏಷ್ಯಾದಲ್ಲಿ ಮಾನ್ಸೂನ್ ಮಳೆ, ಹವಳದ ಬಂಡೆಯ ಪರಿಸರ ವ್ಯವಸ್ಥೆಗಳು, ಜೆಟ್ ವಾಯು ಪ್ರವಾಹ ಇವೆಲ್ಲವೂ ಬದಲಾವಣೆಗೆ ಒಳ ಪಡುತ್ತದೆ. ಆ ಮೂಲಕ ಈ ಜಗತ್ತು ಅಗಾಧವಾಗಿ ಬದಲಾವಣೆಗೆ ಒಳಪಡುತ್ತದೆ.
First published: May 1, 2021, 9:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories