Amazing Grandmas: ಚೆಂದದ ಫಾರ್ಮ್ ಸ್ಟೇಗೆ ಈ ಅಜ್ಜಿಯರೇ ಓನರ್, ಪ್ರಕೃತಿಯ ಮಡಿಲಲ್ಲಿ ಇವರ ಕೈ ರುಚಿ ಸವಿಯೋದೇ ಖುಷಿ

ಇವರಿಬ್ಬರು ವಯಸ್ಸಾಗಿದೆ ಎಂದು ಕುಳಿತುಕೊಂಡಿದ್ದರೆ ಇಂದು ತಮಿಳುನಾಡಿನಲ್ಲಿ ಪಿಕೋ ಎಂಬ ಅದ್ಭುತ ಫಾರ್ಮ್ ಸ್ಟೇ ಹುಟ್ಟಿಕೊಳ್ಳುತ್ತಿರಲಿಲ್ಲ. ಲಕ್ಷ್ಮಿ ಮತ್ತು ಕಸ್ತೂರಿ ಎಂಬ ಅಜ್ಜಿಯರೇ ಈ ಫಾರ್ಮ್ ಸ್ಟೇ ನಡೆಸುತ್ತಿದ್ದಾರೆ.

ಫಾರ್ಮ್​ ಸ್ಟೇ ಓನರ್​

ಫಾರ್ಮ್​ ಸ್ಟೇ ಓನರ್​

  • Share this:
ಸಾಧನೆ, (Achievement) ಕಲೆ, ಆಸಕ್ತಿ, ಜವಾಬ್ದಾರಿ, ಕಲಿಕೆಗೆ ವಯಸ್ಸು ಕೇವಲ ಸಂಖ್ಯೆಯಷ್ಟೇ. ಒಂದು ವಿಷಯದ ಬಗ್ಗೆ ಜ್ಞಾನ ಪಡೆಯಲು ಅದನ್ನು ನಿಭಾಯಿಸಲು ವಯಸ್ಸು ಅಡ್ಡಿ (Age Disruption) ಆಗುವುದಿಲ್ಲ. ಇನ್ನೂ ಇಳಿವಯಸ್ಸಿನವರನ್ನು ನೋಡಿ ಅವರ ಕೈಯಲ್ಲಿ ಏನಾಗುತ್ತೆ, ವಯಸ್ಸಾಗಿದೆ ಅನ್ನೋ ಕಾರಣಕ್ಕೆ ಕಡೆಗಣಿಸುವ ಮುನ್ನ ಈ ಇಬ್ಬರು ಅಜ್ಜಿಯರನ್ನು ನೋಡಿ ನಿಮ್ಮ ಅಭಿಪ್ರಾಯ (Opinion) ಬದಲಾಯಿಸಿಕೊಳ್ಳಿ. 89 ಮತ್ತು 71 ರ ಹರೆಯದ ಲಕ್ಷ್ಮಿ (Lakshmi) ಮತ್ತು ಕಸ್ತೂರಿ (Kasthuri) ಎಂಬ ಮಹಿಳೆಯರು ನಮ್ಮ ಕೈಯಲ್ಲಿ ಎನಾಗುತ್ತೆ ಅಂತಾ ಜೀವನದಲ್ಲಿ ವಿಶ್ವಾಸ ಕಳೆದುಕೊಂಡವರಿಗೆ ನಿಜಕ್ಕೂ ಸ್ಫೂರ್ತಿ ಆಗುತ್ತಾರೆ.

ಹೌದು, ಇವರಿಬ್ಬರು ವಯಸ್ಸಾಗಿದೆ ಅಂತಾ ಕುಳಿತುಕೊಂಡಿದ್ದರೆ ಇಂದು ತಮಿಳುನಾಡಿನಲ್ಲಿ ಪಿಕೋ ಎಂಬ ಅದ್ಭುತ ಫಾರ್ಮ್ ಸ್ಟೇ ಹುಟ್ಟಿಕೊಳ್ಳುತ್ತಿರಲಿಲ್ಲ. ಲಕ್ಷ್ಮಿ ಮತ್ತು ಕಸ್ತೂರಿ ಎಂಬ ಅಜ್ಜಿಯರೇ ಈ ಫಾರ್ಮ್ ಸ್ಟೇ ನಡೆಸುತ್ತಿದ್ದು, ಸಾವಯವ ಕೃಷಿ, ತಾಜಾ ತರಕಾರಿಗಳೊಂದಿಗೆ ವೈಫೈನಂತಹ ಆಧುನಿಕ ಸೌಕರ್ಯಗಳನ್ನು ಸಹ ಪ್ರವಾಸಿಗರಿಗೆ ಒದಗಿಸುತ್ತಿದ್ದಾರೆ.

89 ಮತ್ತು 71ರ ಇಳಿ ವಯಸ್ಸಲ್ಲೂಎಂಥಾ ಉತ್ಸುಕತೆ

ಲಕ್ಷ್ಮಿ ಅಮ್ಮಾಳ್ ಮತ್ತು ಕಸ್ತೂರಿ ಶಿವರಾಮನ್ ಇಬ್ಬರು ತಾಯಿ ಮಗಳಾಗಿದ್ದು, ಸಂಪ್ರದಾಯವಾದಿ ಕುಟುಂಬದಿಂದ ಬಂದವರು. ಅಲ್ಲಿ ಅವರಿಗೆ ಸ್ವತಂತ್ರ್ಯವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಆಗುತ್ತಿರಲಿಲ್ಲ ಮತ್ತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಹ ಕಷ್ಟವಾಗುತ್ತಿತ್ತು. ಇದಲ್ಲದೇ ಲಕ್ಷ್ಮಿ (89) 3ನೇ ತರಗತಿಯವರೆಗೆ ಮಾತ್ರ ಓದಿದ್ದರೆ, ಕಸ್ತೂರಿ (71) ತಮಿಳು ಮಾಧ್ಯಮ ಶಾಲೆಯಲ್ಲಿ 7 ನೇ ತರಗತಿಯನ್ನು ಪೂರ್ಣಗೊಳಿಸಿದ್ದರು. ಹಾಗೆ ಇಬ್ಬರು ಸಾಮಾನ್ಯ ಮಹಿಳೆಯರಂತೆ ಮನೆಗೆಲಸ ಮಾಡಿಕೊಂಡು, ಮಕ್ಕಳನ್ನು ನೋಡಿಕೊಂಡು ಇದ್ದರು.

ನಂತರ 2021ರಲ್ಲಿ ಮಗ ಕಿರುಬಾ ಶಂಕರ್ ಕುಟುಂಬದ ಫಾರ್ಮ್ ಸ್ಟೇ ಅನ್ನು ನಡೆಸುವಂತೆ ಸೂಚಿಸಿದಾಗ, ಮೊದಲು ಇಬ್ಬರೂ ಭಯಭೀತರಾದರೂ ಮತ್ತು ಕೆಲ ದಿನಗಳ ಬಳಿಕ ಕುಟುಂಬ ಬೆಂಬಲದಿಂದ ಅವರು ತಮ್ಮ ಭಯ ತೊರೆದು ಫಾರ್ಮ್ ಸ್ಟೇ ಜವಾಬ್ದಾರಿ ತೆಗೆದುಕೊಂಡರು.

2012ರಲ್ಲಿ ಪಿಕೊ ಫಾರ್ಮ್ ಸ್ಟೇ ನಿರ್ಮಾಣ

ತಮಿಳುನಾಡಿನ ರೆಟ್ಟನೈ ಗ್ರಾಮದಲ್ಲಿರುವ 2012ರಲ್ಲಿ ಪಿಕೊ ಫಾರ್ಮ್ ಸ್ಟೇ ನಿರ್ಮಿಸಲಾಯಿತು ಆದರೆ ಅದು ಸಂಬಂಧಿಕರು ಮತ್ತು ಸ್ನೇಹಿತರಿಗೆ ಮಾತ್ರ ತೆರೆದಿತ್ತು.

"ನಮಗಿರುವ ಏಕೈಕ ವಿಷಾದವೆಂದರೆ ನಾವು ಇದನ್ನು ಮೊದಲೇ ಏಕೆ ಪ್ರಾರಂಭಿಸಲಿಲ್ಲ" ಎಂದು ಕಸ್ತೂರಿ ಹೇಳುತ್ತಾರೆ. “ತಮಿಳಿನಲ್ಲಿ ಮಾತ್ರ ಮಾತನಾಡಲು ತಿಳಿದಿರುವ ಇಬ್ಬರು ವೃದ್ಧೆಯರು ನಮ್ಮ ಫಾರ್ಮ್ ಸ್ಟೇಗೆ ಯಾರು ಬರುತ್ತಾರೆ ಎಂದು ನಾನು ಯಾವಾಗಲೂ ಆಶ್ಚರ್ಯ ಪಡುತ್ತಿದ್ದೆ. ನಾವು ಅಪರಿಚಿತರೊಂದಿಗೆ ಸಂವಹನ ನಡೆಸಲು ಹೆದರುತ್ತಿದ್ದೆವು, ಆದರೆ ನಂತರದ ದಿನಗಳಲ್ಲಿ ನಾವು ಈ ಎಲ್ಲಾ ಭಯವನ್ನು ಮೆಟ್ಟಿ ನಿಂತೆವು. ಮತ್ತು ಒತ್ತಡದ ಜೀವನದಿಂದ ದೂರವಿರಲು ಬಯಸುವ ಜನರನ್ನು ಹೋಸ್ಟ್ ಮಾಡಿದ್ದೇವೆ. ಇದು ನಾವು ತೆಗೆದುಕೊಂಡ ಅತ್ಯುತ್ತಮ ನಿರ್ಧಾರವಾಗಿದೆ. ”ಎನ್ನುತ್ತಾರೆ ಕಸ್ತೂರಿ.

ಪಿಕೊ ಫಾರ್ಮ್ ಸ್ಟೇನಲ್ಲಿ ಇಲ್ಲಿಯವರೆಗೆ 200 ಅತಿಥಿಗಳನ್ನು ಆಯೋಜಿಸಿದೆ, ಪ್ರತಿ ತಿಂಗಳು ಸರಾಸರಿ 10 ಅತಿಥಿಗಳು ಬರುತ್ತಾರೆ ಎನ್ನುತ್ತಾರೆ ಮಹಿಳೆಯರು. ಆರಂಭಿಕ ದಿನಗಳು ಕಷ್ಟಕರವಾಗಿತ್ತು, “ಲಾಕ್‌ಡೌನ್‌ನಿಂದಾಗಿ, ಸುಮಾರು ಆರು ತಿಂಗಳವರೆಗೆ ನಮಗೆ ಯಾವುದೇ ಅತಿಥಿಗಳು ಸಿಗಲಿಲ್ಲ. ಒಂದು ಬಾರಿ ಯುಟ್ಯೂಬರ್‌ಗಳ ಗುಂಪೊಂದು ಭೇಟಿ ನೀಡಿದ್ದು, ಅವರು ಆನ್‌ಲೈನ್‌ನಲ್ಲಿ ನಮಗೆ ಧನಾತ್ಮಕ ವಿಮರ್ಶೆಗಳನ್ನು ನೀಡಿದರು ಮತ್ತು ವೀಡಿಯೊವನ್ನು ಸಹ ಮಾಡಿದ್ದಾರೆ. ಅದು ನಮಗೆ ಶೀಘ್ರವಾಗಿ ಜನಪ್ರಿಯವಾಗಲು ಸಹಾಯ ಮಾಡಿತು,”ಎಂದರು.

ಬಂಜರು ಭೂಮಿಯಾಗಿದ್ದ ಫಾರ್ಮ್ ಸ್ಟೇ

13 ಎಕರೆ ವಿಸ್ತೀರ್ಣದ ವಕ್ಸನಾ ಫಾರ್ಮ್ ಪೂರ್ವಿಕರ ತೋಟವಾಗಿದ್ದು, ಪ್ರತಿ ಪೀಳಿಗೆಯು ಬೆಳೆಗಳನ್ನು ಬೆಳೆದಿದೆ. 37 ವರ್ಷಗಳ ಹಿಂದೆ ಲಕ್ಷ್ಮಿ ಅವರ ಪತಿ ನಿಧನರಾದಾಗ, ಅವರ ಮಗ ಕೃಷಿ ಚಟುವಟಿಕೆಗಳನ್ನು ವಹಿಸಿಕೊಂಡರು ಮತ್ತು ಕಸ್ತೂರಿಯವರ ಮಗ ಕಿರುಬಾ ಅವರು ಡಿಜಿಟಲ್ ಮಾರ್ಕೆಟಿಂಗ್‌ನತ್ತ ತಮ್ಮ ಒಲವು ತೋರಿಸಿ, ವಿಭಿನ್ನ ವೃತ್ತಿಯನ್ನು ಆರಿಸಿಕೊಂಡರು. ಹೀಗಾಗಿ ಹಲವಾರು ವರ್ಷಗಳಿಂದ ಭೂಮಿ ಬಂಜರು ಮತ್ತು ಬಳಕೆಯಾಗದೆ ಉಳಿಯಿತು. ಆದರೆ, 2011ರಲ್ಲಿ ಕುಟುಂಬವು ಈ ಜಾಗವನ್ನು ಫಾರ್ಮ್ ಸ್ಟೇ ಆಗಿ ಅಭಿವೃದ್ಧಿಪಡಿಸುವ ಮೂಲಕ ಹಸಿರನ್ನು ಮರಳಿ ತಂದರು.

ಲಕ್ಷ್ಮಿ ಹೇಳುತ್ತಾರೆ, “ಇದು ಕೌಟುಂಬಿಕ ಚಟುವಟಿಕೆಯಾಗಿತ್ತು. ನನ್ನ ಮೊಮ್ಮಗಳು ಸೇರಿದಂತೆ ನಾವೆಲ್ಲರೂ ವಿವಿಧ ಮರಗಳನ್ನು ನೆಡಲು ಕೊಡುಗೆ ನೀಡಿದ್ದೇವೆ. ನಮ್ಮ ಜಮೀನು ಸಿದ್ಧವಾದ ನಂತರ ನಮ್ಮ ಅನೇಕ ಸಂಬಂಧಿಕರು ನಮ್ಮನ್ನು ಭೇಟಿ ಮಾಡಲು ಪ್ರಾರಂಭಿಸಿದರು. ಅಲ್ಲದೇ ಪ್ರವಾಸಿಗರು ತಮ್ಮ ನಗರ ಜೀವನದಿಂದ ಬ್ರೇಕ್ ತೆಗೆದುಕೊಳ್ಳಲು ಬಯಸಿದಾಗ ಇಲ್ಲಿಗೆ ಬರುತ್ತಾರೆ ಎಂದಿದ್ದಾರೆ.
Published by:Pavana HS
First published: