Fitness: ಜಿಮ್‌ಗೆ ಹೋಗದೆ ಫಿಟ್ನೆಸ್‌ನಲ್ಲಿ ವಿಶ್ವ ದಾಖಲೆ ಬರೆದ ಪಂಜಾಬ್ ಯುವಕ! ಸಾಧನೆ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ಸಿಂಗ್‌

ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಕುವಾರ್ ಅಮೃತಬೀರ್ ಸಿಂಗ್ ಯಾವುದೇ ಜಿಮ್‌ ಗೆ ಹೋಗದೇ, ಪ್ರೋಟೀನ್ ಪೂರಕಗಳನ್ನು ತೆಗೆದುಕೊಳ್ಳದೇ ಅಸಾಂಪ್ರದಾಯಿಕ ತರಬೇತಿ ವಿಧಾನಗಳನ್ನು ಅನುಸರಿಸುವ ಮೂಲಕ ಫಿಟ್‌ನೆಸ್‌ನಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. 20 ವರ್ಷದ ಕುವಾರ್ ಅಮೃತಬೀರ್ ಸಿಂಗ್ ಫಿಟ್‌ ನೆಸ್‌ ವಿಭಾಗದಲ್ಲಿ ಕೆಲವು ವಿಶ್ವ ದಾಖಲೆಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕುವಾರ್ ಅಮೃತಬೀರ್ ಸಿಂಗ್

ಕುವಾರ್ ಅಮೃತಬೀರ್ ಸಿಂಗ್

  • Share this:
ಸಿಕ್ಸ್‌ ಪ್ಯಾಕ್‌, ಬೈಸೆಪ್ಸ್‌, ಚಪ್ಪಟ್ಟೆ ಹೊಟ್ಟೆಯನ್ನು ತಮ್ಮದಾಗಿಸಿಕೊಳ್ಳಲು ಹಲವಾರು ಯುವಕರು ಜಿಮ್‌, ಫಿಟ್‌ ನೆಸ್‌ (Fitness) ಪರಿಣಿತರ ಸಲಹೆ ಅಂತಾ ಹಲವಾರು ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಆದರೆ ಇವರಿಗೆಲ್ಲಾ ವಿರುದ್ಧ ಎನ್ನುವಂತೆ ಪಂಜಾಬ್‌ ನ (Panjab) ಯುವಕನೊಬ್ಬ ಯಾವುದೇ ಜಿಮ್‌, ಪರಿಣಿತರ ಸಲಹೆ ಪಡೆಯದೇ ಫಿಟ್‌ ನೆಸ್‌ ನಲ್ಲಿ ಅಸಾಧಾರಣ ಸಾಧನೆ (achievement)  ಮಾಡಿದ್ದಾನೆ. ಹೌದು, ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಕುವಾರ್ ಅಮೃತಬೀರ್ ಸಿಂಗ್ (Kuwar Amritbir Singh) ಯಾವುದೇ ಜಿಮ್‌ ಗೆ ಹೋಗದೇ, ಪ್ರೋಟೀನ್ ಪೂರಕಗಳನ್ನು ತೆಗೆದುಕೊಳ್ಳದೇ ಅಸಾಂಪ್ರದಾಯಿಕ ತರಬೇತಿ ವಿಧಾನಗಳನ್ನು ಅನುಸರಿಸುವ ಮೂಲಕ ಫಿಟ್‌ನೆಸ್‌ನಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. 20 ವರ್ಷದ ಕುವಾರ್ ಅಮೃತಬೀರ್ ಸಿಂಗ್ ಫಿಟ್‌ ನೆಸ್‌ ವಿಭಾಗದಲ್ಲಿ ಕೆಲವು ವಿಶ್ವ ದಾಖಲೆಗಳನ್ನು (World record) ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಗಿನ್ನೆಸ್ ವಿಶ್ವ ದಾಖಲೆ ಬರೆದ ಕುವಾರ್ ಅಮೃತಬೀರ್ ಸಿಂಗ್
ಯಾವುದೇ ಜಿಮ್‌ ಗೆ ಹೋಗದ ಸಿಂಗ್‌ ಫಿಟ್‌ ನೆಸ್‌ ನಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ. ಒಂದು ನಿಮಿಷದಲ್ಲಿ ಕ್ಲ್ಯಾಪ್ಸ್ (ಫಿಂಗರ್ ಟಿಪ್ಸ್) ಮೂಲಕ ಹೆಚ್ಚಿನ ಪುಶ್-ಅಪ್ ಗಳನ್ನು ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ್ದಾರೆ. ಜುಲೈ 28 ರಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನಿಂದ ದೃಢೀಕರಣ ಇಮೇಲ್ ಅನ್ನು ಪಡೆದ ಸಿಂಗ್ ಖುಷಿ ವ್ಯಕ್ತಪಡಿಸಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಸಿಂಗ್‌, "ನನ್ನ ದಾಖಲೆಯನ್ನು ಗಿನ್ನೆಸ್ ವಿಶ್ವ ದಾಖಲೆಗಳು ಅಂಗೀಕರಿಸಿದೆ ಎಂದು ತಿಳಿದ ನಂತರ ನನ್ನ ಖುಷಿಗೆ ಎಲ್ಲೆ ಇಲ್ಲದಾಂತಾಗಿದೆ" ಎಂದು ಹೇಳಿದ್ದಾರೆ. ಸಿಂಗ್‌ ನವೆಂಬರ್ 2021 ರಲ್ಲಿಯೇ ಈ ರೀತಿಯ ಪ್ರಯತ್ನಕ್ಕೆ ಕೈಹಾಕಿ ವಿಫಲವಾಗಿದ್ದರು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅವರು ಬರ್ಪಿ ಕ್ರಮ ಮಾಡುವ ಇವರ ತಂತ್ರವು ಸರಿಯಲ್ಲ ಎಂದು ತೀರ್ಪು ನೀಡಿದ್ದರಿಂದ ಅದನ್ನು ತಿರಸ್ಕರಿಸಲಾಯಿತು.

ಇದನ್ನೂ ಓದಿ:  Ganesh Chaturthi: ಮಗಳ ಸ್ಕೂಲ್ ಫೀಸ್ ಪಾವತಿಸಲು ಖೈದಿಯಿಂದ ಗಣೇಶನ ಮೂರ್ತಿ ತಯಾರಿಸಿ ಮಾರಾಟ!

ಈ ಹಿಂದೆಯೇ ರೆಕಾರ್ಡ್ಸ್‌ ಬುಕ್‌ ನಲ್ಲಿ ಹೆಸರು ಮಾಡಿದ್ದ ಸಿಂಗ್
ಈ ಹಿಂದೆಯೂ ಸಹ ಸಿಂಗ್ ಅವರು ಫಿಟ್‌ನೆಸ್‌ನಲ್ಲಿ ಎರಡು ದಾಖಲೆಗಳನ್ನು ನಿರ್ಮಿಸಿದ್ದಾರೆ. 17 ವರ್ಷದವರಾಗಿದ್ದಾಗ ಕುವಾರ್ ಒಂದು ನಿಮಿಷದಲ್ಲಿ 118 ನಕಲ್ ಪುಶ್-ಅಪ್ ಗಳನ್ನು ಮಾಡಿ‌ದ್ದರು, ಈ ದಾಖಲೆಯನ್ನು ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾ ಗುರುತಿಸಿದೆ. ನಂತರ 2020ರಲ್ಲಿ, ಅವರು 30 ಸೆಕೆಂಡುಗಳಲ್ಲಿ ಅತಿ ಹೆಚ್ಚು ಸೂಪರ್‌ಮ್ಯಾನ್ ಪುಷ್ಅಪ್‌ಗಳನ್ನು ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರನ್ನು ದಾಖಲು ಮಾಡಿದ್ದಾರೆ.
ಮನೆಯಲ್ಲಿಯೇ ಹಿಂದಿನ ಶೈಲಿಯ ಜಿಮ್‌ ವ್ಯವಸ್ಥೆ
ಕುವಾರ್ ಅಮೃತಬೀರ್ ಸಿಂಗ್ ಮನೆಯಲ್ಲಿಯೇ ಕೆಲವು ವಸ್ತುಗಳನ್ನು ಬಳಸಿಕೊಂಡು ಜಿಮ್‌ ರೀತಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಟ್ಟಿಗೆಗಳು, ಮರಳು ತುಂಬಿದ ಗೋಣಿ ಚೀಲಗಳು ಮತ್ತು ಸಿಮೆಂಟ್ ಪ್ಲಾಸ್ಟಿಕ್ ಡಬ್ಬಗಳನ್ನು ಬಳಸಿ ಜಿಮ್‌ ರೀತಿ ಮಾಡಿಕೊಂಡಿದ್ದಾರೆ. ಇವುಗಳ ಸಹಾಯದಿಂದಲೇ ಪ್ರತಿನಿತ್ಯ ವರ್ಕೌಟ್‌ ಮಾಡುತ್ತಾನೆ ಈ ಯುವಕ.

ದೇಸಿ ತುಪ್ಪ, ಬೆಣ್ಣೆ, ಹಾಲು ಸೇವನೆ
ಇನ್ನೂ ಆಹಾರದ ವಿಚಾರವಾಗಿ ಸಿಂಗ್‌ ಮನೆಯಲ್ಲಿಯೇ ತಯಾರಿಸಿದ ನೈಸರ್ಗಿಕ ಆಹಾರಗಳನ್ನು ಸೇವಿಸುತ್ತಾರಂತೆ. "ಉತ್ತಮ ದೇಹಕ್ಕಾಗಿ ಮನೆಯಲ್ಲಿಯೇ ತಯಾರಿಸಿದ ದೇಸಿ ತುಪ್ಪ, ಬೆಣ್ಣೆ, ಹಾಲನ್ನು ಸೇವಿಸುತ್ತೇನೆ. ಇದರ ಹೊರತಾಗಿ ಯಾವುದೇ ವಿಶೇಷ ಆಹಾರ ಸೇವಿಸುವುದಿಲ್ಲ" ಎಂದು ಸಿಂಗ್‌ ಹೇಳಿದ್ದಾರೆ. ತಮ್ಮ ದಿನಚರಿ ಕುರಿತು ಮಾತನಾಡಿದ ಅವರು, ದಿನಕ್ಕೆ ನಾಲ್ಕೈದು ಗಂಟೆ ವರ್ಕೌಟ್‌ ಮಾಡುತ್ತೇನೆ ಎಂದು ಹಂಚಿಕೊಂಡಿದ್ದಾರೆ. ಬೆಳಿಗ್ಗೆ 5:30ಕ್ಕೆ ಎದ್ದು 1.5 ಗಂಟೆಗಳ ಕಾಲ ವ್ಯಾಯಾಮ ಮಾಡುವ ಸಿಂಗ್ ಯುವಕರಿಗೆ ನೈಸರ್ಗಿಕ ರೀತಿಯಲ್ಲಿ ಫಿಟ್‌ ನೆಸ್‌ ಕಾಪಾಡಿಕೊಳ್ಳಲು ಸಲಹೆ ನೀಡುತ್ತಾರೆ.

“ಭಾರತದಲ್ಲಿ ಪಂಜಾಬ್ ಎಂದರೆ ಡ್ರಗ್ಸ್‌ಗೆ ಸಂಬಂಧಿಸಿದ್ದು ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ. ಆದರೆ ಪಂಜಾಬ್‌ ಯುವಕರು ಸಹ ಯಾವುದೇ ರೀತಿಯ ಮಾರ್ಗಗಳಿಲ್ಲದೇ ನೈಸರ್ಗಿಕವಾಗಿ ಫಿಟ್‌ನೆಸ್‌ನಲ್ಲಿ ವಿಶ್ವ ದಾಖಲೆಗಳನ್ನು ಮಾಡಬಹುದು ಎಂದು ನಾನು ಅವರಿಗೆ ತೋರಿಸಲು ಬಯಸುತ್ತೇನೆ, ”ಎಂದು ಅವರು ಹೇಳಿದರು.

ಇದನ್ನೂ ಓದಿ: Azam Ansari: ರೈಲು ಹಳಿ ಮೇಲೆ ಶರ್ಟ್ ಬಿಚ್ಚಿ ರೀಲ್ಸ್ ಮಾಡಿದ್ದ Jr Salman ಖ್ಯಾತಿಯ ಯುವಕನ ವಿರುದ್ಧ ಎಫ್​ಐಆರ್

ಅಮೃತಸರದ ಖಾಲ್ಸಾ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಫಿಸಿಕಲ್ ಎಜುಕೇಶನ್ ವ್ಯಾಸಂಗ ಮಾಡುತ್ತಿರುವ ಅವರು ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಸಾಧನೆ ಮಾಡಲು ಮತ್ತು ರಾಜ್ಯಕ್ಕೆ ಹಿರಿಮೆ ತರಲು ಹೆಚ್ಚಿನ ವಿಶ್ವ ದಾಖಲೆಗಳನ್ನು ಮಾಡುವ ಗುರಿ ಹೊಂದಿದ್ದಾರೆ. 17ನೇ ವರ್ಷದಲ್ಲಿ ಫಿಟ್ನೆಸ್ ಪ್ರಯಾಣವನ್ನು ಪ್ರಾರಂಭಿಸಿದ ಕುವಾರ್ ಅಮೃತಬೀರ್ ಸಿಂಗ್ ಇಂದು ಅಮೋಘ ಸಾಧನೆ ಮಾಡಿದ್ದಾರೆ. ಇನ್‌ ಸ್ಟಾಗ್ರಾಮ್‌ ನಲ್ಲೂ 1.71 ಲಕ್ಷ ಅನುಯಾಯಿಗಳನ್ನು ಹೊಂದಿರುವ ಸಿಂಗ್‌ ಯೂಟ್ಯೂಬ್‌ ಚಾನಲ್‌ ನಲ್ಲಿ 10,000 ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ.
Published by:Ashwini Prabhu
First published: