• Home
  • »
  • News
  • »
  • trend
  • »
  • Urban Jungle: ಮನೆಯ ಮೇಲೆ ಬೆಟ್ಟ ಬೆಳೆಸಿದ ಹುಡುಗ! 500ಕ್ಕೂ ಹೆಚ್ಚು ಗಿಡ, 100ಕ್ಕೂ ಹೆಚ್ಚು ಪಕ್ಷಿಗಳಿಗೆ ಆಸರೆ ಈ ಕಾಡು

Urban Jungle: ಮನೆಯ ಮೇಲೆ ಬೆಟ್ಟ ಬೆಳೆಸಿದ ಹುಡುಗ! 500ಕ್ಕೂ ಹೆಚ್ಚು ಗಿಡ, 100ಕ್ಕೂ ಹೆಚ್ಚು ಪಕ್ಷಿಗಳಿಗೆ ಆಸರೆ ಈ ಕಾಡು

ಅಮನ್

ಅಮನ್

19 ವರ್ಷದ ಹುಡುಗ ಅಮನ್ ಶರ್ಮಾ ತನ್ನ ಮನೆಯ ಟೆರೇಸ್ ಮೇಲೆ ಒಂದು ಅರ್ಬನ್ ಜಂಗಲ್ ಅನ್ನು ಮಾಡಿದ್ದಾರೆ ನೋಡಿ. ಅಮನ್  ಶಾಲೆಯ ರಜಾದಿನಗಳಲ್ಲಿ ಅವನ ಪಾಲಕರು ಅವನನ್ನು ದೇಶಾದ್ಯಂತದ ಪಕ್ಷಿಧಾಮಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳಿಗೆ ಕರೆದೊಯ್ಯುತ್ತಿದ್ದರಂತೆ.

  • Trending Desk
  • 2-MIN READ
  • Last Updated :
  • Delhi, India
  • Share this:

ಸಾಮಾನ್ಯವಾಗಿ ಆಗ ತಾನೇ ಕಾಲೇಜಿನ (College) ಮೆಟ್ಟಿಲು ಹತ್ತಿದ 17 ಮತ್ತು 18 ವರ್ಷ ವಯಸ್ಸಿನ ಹುಡುಗ ಹುಡುಗಿಯರು ಆಗ ತಾನೇ ಶಾಲೆಯ ಜೀವನವನ್ನು (Life) ಮುಗಿಸಿ ಕಾಲೇಜಿನ ಹೊಸ ಜೀವನಕ್ಕೆ ಕಾಲಿಟ್ಟಿರುತ್ತಾರೆ. ಕಾಲೇಜಿಗೆ ಬಂದಾಗ ಹೊಸ ಹೊಸ ಸ್ನೇಹಿತರು, ಹೊಸ ಹೊಸ ಗುರಿಗಳು (Goal), ಹೊಸ ಹೊಸ (New) ಬಯಕೆಗಳು ಸಹಜವಾಗಿಯೇ ಹುಡುಗ ಮತ್ತು ಹುಡುಗಿಯರಲ್ಲಿ ಚಿಗುರೊಡೆಯುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. 


ಕಾಲೇಜಿಗೆ ಸೇರಿದ ಹೊಸತರಲ್ಲಿ ವಿದ್ಯಾರ್ಥಿಗಳಿಗೆ ರಜಾದಿನಗಳು ಸಿಕ್ಕರೆ ತಮ್ಮ ಹೊಸ ಸ್ನೇಹಿತರ ಜೊತೆಗೆ ಸೇರಿಕೊಂಡು ದೂರದ ಊರಿಗೆ ಪ್ರವಾಸಕ್ಕೆ ಹೋಗುವುದು, ಒಳ್ಳೆಯ ರೆಸ್ಟೋರೆಂಟ್ ಗೆ ಹೋಗಿ ಒಳ್ಳೆಯ ಊಟ ಮಾಡಿರುವುದಾಗಲಿ ಅಥವಾ ಅವರವರ ಹವ್ಯಾಸಕ್ಕೆ ತಕ್ಕಂತೆ ಎಂದರೆ ಫೋಟೋಗ್ರಾಫಿ, ವನ್ಯಜೀವಿಗಳನ್ನು ನೋಡಲು ಸಫಾರಿಗೆ ಹೋಗುವುದು, ಹಾಡುಗಳನ್ನು ಹಾಡುವುದು, ನಟನೆ ತರಬೇತಿ ಪಡೆಯುವುದು ಇಂತದೆಲ್ಲಾ ಮಾಡುತ್ತಿರುತ್ತಾರೆ.


ನಗರ ಪ್ರದೇಶದಲ್ಲಿ ಟೆರೇಸ್ ಮೇಲೆ ಗಾರ್ಡನ್


ಆದರೆ ಕೆಲವು ಹುಡುಗರು ತಮ್ಮ ರಜಾದಿನಗಳನ್ನು ಮನೆಯ ಮೇಲೆ ಎಂದರೆ ಟೆರೇಸ್ ಮೇಲೆ ವಿವಿಧ ಬಗೆಯ ಸಸ್ಯಗಳನ್ನು ಬೆಳೆಸುವುದು, ಪಕ್ಷಿಗಳನ್ನು ಸಾಕುವುದು, ಔಷಧಿ ಸಸ್ಯಗಳನ್ನು ಮತ್ತು ತರಕಾರಿಗಳನ್ನು ಬೆಳೆಸುವುದನ್ನು ಮಾಡುತ್ತಿರುತ್ತಾರೆ. ಅದರಲ್ಲೂ ಈಗ ನಗರ ಪ್ರದೇಶಗಳಲ್ಲಿರುವ ಮನೆಗಳ ಟೆರೇಸ್ ಮೇಲೆ ಬಹುತೇಕರು ಹೀಗೆ ಸಸ್ಯಗಳನ್ನು ಬೆಳೆಸಿ ಒಂದು ಚಿಕ್ಕ ಕಾಡು ಎಂದರೆ ಮಿನಿ ಜಂಗಲ್ ಮಾಡಿಕೊಂಡಿರುತ್ತಾರೆ.


19 ವರ್ಷದ ಹುಡುಗ ಅರ್ಬನ್ ಜಂಗಲ್‌ನ ಒಡೆಯ
ಇಲ್ಲಿಯೂ ಸಹ ಒಬ್ಬ 19 ವರ್ಷದ ಹುಡುಗ ಅಮನ್ ಶರ್ಮಾ ತನ್ನ ಮನೆಯ ಟೆರೇಸ್ ಮೇಲೆ ಒಂದು ಅರ್ಬನ್ ಜಂಗಲ್ ಅನ್ನು ಮಾಡಿದ್ದಾರೆ ನೋಡಿ. ಅಮನ್  ಶಾಲೆಯ ರಜಾದಿನಗಳಲ್ಲಿ ಅವನ ಪಾಲಕರು ಅವನನ್ನು ದೇಶಾದ್ಯಂತದ ಪಕ್ಷಿಧಾಮಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳಿಗೆ ಕರೆದೊಯ್ಯುತ್ತಿದ್ದರಂತೆ.


ಅಮನ್ ಶರ್ಮಾ ಅವರ ಬಾಲ್ಯ ಹೇಗಿತ್ತು ಗೊತ್ತೇ?


"ಬಾಲ್ಯದಲ್ಲಿ, ನನ್ನ ಪೋಷಕರು ನನ್ನನ್ನು ದೇಶ ಪೂರ್ತಿ ಸುತ್ತಿಸಿದರು ಮತ್ತು ನಮ್ಮ ನೈಸರ್ಗಿಕ ಪರಂಪರೆಯ ಬಗ್ಗೆ ನನಗೆ ಪರಿಚಯ ಮಾಡಿಕೊಟ್ಟರು. ಅಂದಿನಿಂದ ನಾನು ಪ್ರಾಣಿಗಳು ಮತ್ತು ಪಕ್ಷಿಗಳ ಬಗ್ಗೆ ವಿಶೇಷವಾದ ಒಲವನ್ನು ಬೆಳೆಸಿಕೊಂಡಿದ್ದೇನೆ" ಎಂದು ಯುವ ವನ್ಯಜೀವಿ ಸಂರಕ್ಷಕ ಅಮನ್ ಶರ್ಮಾ ಹೇಳುತ್ತಾರೆ.


ದೆಹಲಿಯಂತಹ ಮೆಟ್ರೋಪಾಲಿಟನ್ ನಗರದಲ್ಲಿ ವಾಸಿಸುತ್ತಿದ್ದ ಅವರು ಪಕ್ಷಿಗಳನ್ನು ಸಾಕುವುದು ಮತ್ತು ವನ್ಯಜೀವಿ ಛಾಯಾಗ್ರಹಣದಲ್ಲಿಯೂ ಸಹ ಆಸಕ್ತಿ ಹೊಂದಿದ್ದಾರೆ. ತನ್ನ ಮನೆಯ ಬಳಿ ಹೆಚ್ಚು ಪಕ್ಷಿಗಳು ಮತ್ತು ಚಿಟ್ಟೆಗಳನ್ನು ಆಕರ್ಷಿಸಲು, ಅವನು ಒಂದು ಅರ್ಬನ್ ಜಂಗಲ್ ಅನ್ನು ಮನೆಯ ಟೆರೇಸ್ ಮೇಲೆ ಸ್ಥಾಪಿಸಿದ್ದಾನೆ ಮತ್ತು ಅದರಲ್ಲಿ 500 ಕ್ಕೂ ಹೆಚ್ಚು ವಿವಿಧ ಬಗೆಯ ಸಸ್ಯಗಳು ಇವೆ. "ನಾನು ನನ್ನ ಟೆರೇಸ್ ನಲ್ಲಿ ಬರುವ 100 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳನ್ನು ಗುರುತಿಸಿದ್ದೇನೆ" ಎಂದು ಅಮನ್ ಹೇಳುತ್ತಾರೆ.


13ನೇ ವಯಸ್ಸಿನಲ್ಲಿ ಪಕ್ಷಿ ವೀಕ್ಷಣೆ ಶುರು ಮಾಡಿದ ಅಮನ್


ಅಮನ್ ತನ್ನ 13ನೇ ವಯಸ್ಸಿನಲ್ಲಿ ತನ್ನ ಮನೆಯ ಬಾಲ್ಕನಿಯಿಂದ ಪಕ್ಷಿ ವೀಕ್ಷಣೆಯನ್ನು ಪ್ರಾರಂಭಿಸಿದನು. "ನಾನು ಪ್ರತಿದಿನ ಬೇಗನೆ ಎದ್ದು ನನ್ನ ಬಾಲ್ಕನಿಯಲ್ಲಿ ನೆರೆಹೊರೆಯ ಪಕ್ಷಿಗಳನ್ನು ನೋಡುತ್ತಾ ಸ್ವಲ್ಪ ಸಮಯವನ್ನು ಕಳೆಯುತ್ತಿದ್ದೆ. ಇದು ನನ್ನ ಜೀವನವನ್ನು ಬದಲಾಯಿಸಿದ ಒಂದು ಅನುಭವವಾಯ್ತು" ಎಂದು ಪ್ರಸ್ತುತ ಯುಎಸ್ ನಲ್ಲಿ ಪರಿಸರ ಅಧ್ಯಯನವನ್ನು ನಡೆಸುತ್ತಿರುವ ಅಮನ್ ನೆನಪಿಸಿಕೊಳ್ಳುತ್ತಾರೆ.


ಪಕ್ಷಿಗಳ ಚಿತ್ರವನ್ನು ಸೆರೆ ಹಿಡಿದ ಬಾಲಕ


"ಒಮ್ಮೆ ಒಂದು ಬುಲ್ ಬುಲ್ ನನ್ನ ಬಾಲ್ಕನಿಯಲ್ಲಿ ಗೂಡು ಕಟ್ಟಿತು. ನಾನು ಎಷ್ಟು ಉತ್ಸುಕನಾಗಿದ್ದೆನೆಂದರೆ, ಆ ಗೂಡಿನ ದೃಶ್ಯವನ್ನು ಸೆರೆಹಿಡಿಯಲು ನಾನು  ತಾಯಿಯ ಕ್ಯಾಮೆರಾವನ್ನು ಪಡೆದಿದ್ದೆ. ನಾನು ನನ್ನ ಬಾಲ್ಕನಿಯಲ್ಲಿ ಕಳೆದ ಒಂದರಿಂದ ಎರಡು ಗಂಟೆಗಳಲ್ಲಿ, ಅಲ್ಲಿಗೆ ಭೇಟಿ ನೀಡುವ 25-30 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳನ್ನು  ಗುರುತಿಸಬಹುದು ಎಂದು  ಅರಿತುಕೊಂಡೆ. ಆದರೆ ನನ್ನ ಪೋಷಕರು ಮತ್ತು ಶಿಕ್ಷಕರು ಸೇರಿದಂತೆ ಎಲ್ಲರೂ  ಪ್ರತಿದಿನ ಇಷ್ಟೊಂದು ಜಾತಿಯ ಪಕ್ಷಿಗಳನ್ನು ನೋಡುತ್ತೇನೆ ಎಂದು ಹೇಳಿದಾಗ ಯಾರೂ ಅದನ್ನ ನಂಬಲಿಲ್ಲ. ಆದ್ದರಿಂದ, ಪುರಾವೆಗಾಗಿ ಲೆನ್ಸ್ ಗಳನ್ನು ಬಳಸಿ ಆ ಪಕ್ಷಿಗಳ ಫೋಟೋಗಳನ್ನು ಸೆರೆಹಿಡಿಯಲು ನಾನು ನಿರ್ಧರಿಸಿದೆ" ಎಂದು ಅಮನ್ ಹೇಳುತ್ತಾರೆ.


ಸಾಂದರ್ಭಿಕ ಚಿತ್ರ


ಯುವಕರಿಗಾಗಿ ಯುವಕರಿಂದ ಒಂದು ಪಕ್ಷಿ ಸಮುದಾಯ


ಈ ಒಂದು ಹವ್ಯಾಸ ಅಮನ್ ನ ಜೀವನದಲ್ಲಿ ಒಂದು ತಿರುವು ನೀಡಿತು ಅಂತಾನೆ ಹೇಳಬಹುದು. ಏಕೆಂದರೆ ಅವನು ನಗರದಲ್ಲಿ ಪಕ್ಷಿಗಳನ್ನು ಹುಡುಕಿಕೊಂಡು ಹೋಗಲು ಪ್ರಾರಂಭಿಸಿದನು. ಈ ರೀತಿಯಾಗಿ ಶುರುವಾದ ಹುಡುಕಾಟ ತನ್ನ ವಯಸ್ಸಿನ ಹುಡುಗ ಮತ್ತು ಹುಡುಗಿಯರು ನಗರ ವನ್ಯಜೀವಿಗಳನ್ನು ಅರ್ಥಮಾಡಿಕೊಳ್ಳುವ ಉತ್ತಮ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಅರಿತುಕೊಳ್ಳಲು ಕಾರಣವಾಯಿತು. ಇವರು ಒಂದು ಬರ್ಡಿಂಗ್​ ಕ್ಲಬ್​ ಸ್ಥಾಪಿಸಿದ್ದಾರೆ.


ಬರ್ಡಿಂಗ್ ಕ್ಲಬ್ ಆರಂಭ


"ಈ ಕ್ಲಬ್ ಬೇರೆ ಕ್ಲಬ್ ಗಳಿಗಿಂತಲೂ ಸ್ವಲ್ಪ ವಿಭಿನ್ನವಾಗಿರಬೇಕು ಎಂದು ನಾನು ಬಯಸಿದ್ದೆ. ಆದ್ದರಿಂದ, ವಯಸ್ಕರು ಬಂದು ಪಕ್ಷಿಗಳನ್ನು ನೋಡುವ ಬದಲು, ನಾವು ಮಕ್ಕಳಿಗಾಗಿ ಇದನ್ನು ಶುರು ಮಾಡಿದೆವು. ನಾವು ಮಕ್ಕಳನ್ನು ದೆಹಲಿಗೆ ಹತ್ತಿರವಿರುವ ರಾಷ್ಟ್ರೀಯ ಉದ್ಯಾನವನಗಳಿಗೆ ಕರೆದೊಯ್ಯುತ್ತಿದ್ದೆವು. ಶೀಘ್ರದಲ್ಲಿಯೇ ಯುವಕರಿಂದ ಯುವಕರಿಗಾಗಿ ಭಾರತದ ಅತಿದೊಡ್ಡ ಪಕ್ಷಿ ಸಮುದಾಯವಾಗಿ ಬೆಳೆಯಿತು" ಎಂದು ಅಮನ್ ಹೇಳಿದರು.


ನಿಕಾನ್​ನ ಕಿರಿಯ ರಾಯಭಾರಿಯೂ ಆಗಿರುವ ಅಮನ್


ವನ್ಯಜೀವಿ ಸಂರಕ್ಷಕನಲ್ಲದೆ, ಅವರು ಹವಾಮಾನ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಕೆಲಸ ಮಾಡುತ್ತಾರೆ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಅಭಿಯಾನಗಳು ಮತ್ತು ಉಪಕ್ರಮಗಳ ಭಾಗವಾಗಿದ್ದಾರೆ. "ನನ್ನ ಪ್ರಯಾಣದ ಬಗ್ಗೆ 75ನೇ ಯುಎನ್‌ಜಿಎ ಮತ್ತು ನೊಬೆಲ್ ಪೀಸ್ ಸೆಂಟರ್ ನಲ್ಲಿ ನಾನು ಮಾತನಾಡಿದ್ದೇನೆ" ಎಂದು ದೆಹಲಿಯ ನಗರ ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸಲು ನಿಕಾನ್ ನ ಕಿರಿಯ ರಾಯಭಾರಿಯೂ ಆಗಿರುವ ಅಮನ್ ಹೇಳುತ್ತಾರೆ.


ಮನೆಯ ಟೆರೇಸ್ ಮೇಲೆ ಅರ್ಬನ್ ಜಂಗಲ್ ಅನ್ನು ಸ್ಥಾಪಿಸುವುದು ಹೇಗೆ?


2020 ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಂದಾಗಿ ಸರ್ಕಾರವು ಲಾಕ್ಡೌನ್ ಘೋಷಿಸಿದ್ದಾಗ, ಅಮನ್ ತಮ್ಮ ನೆಚ್ಚಿನ ಕಾಡುಗಳು ಮತ್ತು ವನ್ಯಜೀವಿ ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳುತ್ತಾರೆ. ಆದ್ದರಿಂದ, ಅವನು ತನ್ನ 1,500 ಚದರ ಅಡಿಯ ಟೆರೇಸ್ ಅನ್ನು ಸಣ್ಣ ಕಾಡಾಗಿ ಬದಲಾಯಿಸಲು ನಿರ್ಧರಿಸಿದನು.


"ಟೆರೇಸ್ ಸಂಪೂರ್ಣವಾಗಿ ಬಂಜರು ಬಣ್ಣದ್ದಾಗಿತ್ತು ಮತ್ತು ಎಲ್ಲಾ ನಿರ್ಮಾಣ ಸಲಕರಣೆಗಳನ್ನು ಇಡಲು ಅದನ್ನು ಬಳಸಲಾಗುತ್ತಿತ್ತು. ಆದ್ದರಿಂದ, ಹೆಚ್ಚು ಸ್ಥಳೀಯ ಸಸ್ಯಗಳನ್ನು ನೆಡುವ ಮೂಲಕ ನಾನು ಅದನ್ನು ಹಸಿರು ತೇಪೆಯಾಗಿ ಪರಿವರ್ತಿಸಿದೆ" ಎಂದು ಅಮನ್ ಹೇಳುತ್ತಾರೆ.


"ನಾನು ಹೊರಗೆ ಹೋದಾಗಲೆಲ್ಲಾ, ಒಂದು ವಿಭಿನ್ನವಾದ ಸಸ್ಯವನ್ನು ಮನೆಗೆ ತರುವುದರ ಬಗ್ಗೆ ಯೋಚಿಸುತ್ತಿದೆ ಮತ್ತು ನಾನು ಇದಕ್ಕಾಗಿ ದೆಹಲಿಯಾದ್ಯಂತ ಪ್ರಯಾಣಿಸಿದ್ದೇನೆ. ಅನೇಕ ಬಗೆಯ ಸಸ್ಯಗಳನ್ನು ಸಂಗ್ರಹಿಸಲು ಅರಣ್ಯಗಳಿಗೆ ಭೇಟಿ ನೀಡಿದ್ದೇನೆ. ಪ್ರಸ್ತುತ, ನನ್ನ ಟೆರೇಸ್ ನಲ್ಲಿ 500 ಕ್ಕೂ ಹೆಚ್ಚು ಸಸ್ಯಗಳಿವೆ, ಅವು ನೂರಾರು ಪಕ್ಷಿಗಳು ಮತ್ತು ಚಿಟ್ಟೆಗಳನ್ನು ಆಕರ್ಷಿಸುತ್ತವೆ" ಎಂದು ಅವರು ಹೇಳುತ್ತಾರೆ.


ಅರ್ಬನ್ ಜಂಗಲ್ ಸ್ಥಾಪಿಸುವುದರ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ ಅಮನ್


  • ನಿಮ್ಮ ಮನೆಯ ಮೇಲೆ ಸಾಕಷ್ಟು ಸ್ಥಳಾವಕಾಶ ಮತ್ತು ಸಾಕಷ್ಟು ನೀರು ಇರಬೇಕು.

  • ನಿಮ್ಮ ಮನೆಯ ಟೆರೇಸ್ ಅಷ್ಟೊಂದು ಸಸ್ಯಗಳ ತೂಕವನ್ನು ತೆಗೆದುಕೊಳ್ಳುತ್ತದೆಯೇ ಎಂಬುದನ್ನು ನೋಡಿಕೊಳ್ಳಿ.

  • ಚಿಟ್ಟೆಗಳನ್ನು ನಿಮ್ಮ ತೋಟಕ್ಕೆ ಬರಲು, ಅಗತ್ಯವಾದ ಸಸ್ಯಗಳನ್ನು ಅಲ್ಲಿ ನೆಡಿ.

  • ನೀವು ಪೌಡರ್ ಪಫ್, ಮಿಲ್ಕ್ ವೀಡ್, ನಿಂಬೆ ಮರ ಮತ್ತು ಕರಿಬೇವಿನ ಎಲೆ ಸಸಿಗಳನ್ನು ಸಹ ಅಲ್ಲಿ ನೆಡಬಹುದು.

  • ಪಕ್ಷಿಗಳು ನಿಮ್ಮ ತೋಟಕ್ಕೆ ಬರುವಂತೆ ಮಾಡಲು ಪೇರಳೆ, ದಾಳಿಂಬೆ ಮುಂತಾದ ಹಣ್ಣಿನ ಮರಗಳನ್ನು ಸಹ ಬೆಳೆಸುವುದು ಮುಖ್ಯವಾಗುತ್ತದೆ.

  • ಚಿಟ್ಟೆಗಳ ಜೊತೆಗೆ ಜೇನುನೊಣಗಳು ಸಹ ಬರುವಂತೆ ಮಾಡಲು ಅನೇಕ ಹೂಬಿಡುವ ಸಸ್ಯಗಳು ಸಹ ಬೆಳೆಸಬೇಕು.


ತನ್ನ ವಯಸ್ಸಿನ ಯುವಕರಿಗೆ ಅಮನ್ ನೀಡುವ ಸಲಹೆ..


"ಯುವಕರು ಸ್ಪೂರ್ತಿ ಪಡೆಯಲು ತಮ್ಮ ಹೀರೋಗಳಿಗಾಗಿ ಕಾಯುವುದನ್ನು ನಿಲ್ಲಿಸಬೇಕು ಮತ್ತು ಸ್ವತಃ ನಿಜ ಜೀವನದ ಹೀರೋ ಆಗಬೇಕು. ಶೈಕ್ಷಣಿಕ ಮತ್ತು ಅಧ್ಯಯನಗಳನ್ನು ಮೀರಿ ವಾಸ್ತವವಾಗಿ ಸಮಾಜದ ಮೇಲೆ ಪರಿಣಾಮ ಬೀರುವ ಹವ್ಯಾಸಗಳನ್ನು ಬೆಳೆಸಿಕೊಳ್ಳ ಬೇಕು ಮತ್ತು ಆರೋಗ್ಯಕರ ವಾತಾವರಣವನ್ನು ನಿರ್ಮಿಸಲು ಆಲೋಚಿಸಬೇಕು" ಎಂದು ಅಮನ್ ಯುವಕರಿಗೆ ಸಲಹೆ ನೀಡಿದರು.

First published: