ವಾಹನ ಪ್ರಯಾಣದ ವೇಳೆ ಸೀಟ್​ ಬೆಲ್ಟ್​ ಹಾಕದೇ ಇದ್ರೆ ಏನಾಗುತ್ತೆ ಗೊತ್ತಾ? ವೀಡಿಯೋ ನೋಡಿ


Updated:April 22, 2018, 12:18 PM IST
ವಾಹನ ಪ್ರಯಾಣದ ವೇಳೆ ಸೀಟ್​ ಬೆಲ್ಟ್​ ಹಾಕದೇ ಇದ್ರೆ ಏನಾಗುತ್ತೆ ಗೊತ್ತಾ? ವೀಡಿಯೋ ನೋಡಿ

Updated: April 22, 2018, 12:18 PM IST
ಬೆಂಗಳೂರು:  ಬಸ್ ಅಥವಾ ಕಾರಿನಲ್ಲಿ ಪ್ರಯಾಣಿಸುವವರು ಸೀಟ್ ಬೆಲ್ಟ್ ಧರಿಸಬೇಕೆಂಬ ನಿಯಮವಿದ್ದರೂ, ಹಲವರು ಧರಿಸಲ್ಲ. ಭಾರತದಲ್ಲಿ ಸೀಟ್ ಬೆಲ್ಟ್ ಹಾಕದೇ ಇರುವುದರಿಂದ ಒಂದು ಗಂಟೆಗೆ ಸುಮಾರು 17 ಪ್ರಯಾಣಿಕರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಾಲೆಡ್ಜ್​ ಜಂಕ್ಷನ್ ಎಂಬ ಪೇಜೊಂದು ಸೀಟ್​ ಬೆಲ್ಟ್​ ಹಾಕದೇ ಪ್ರಯಾಣ ಮಾಡಿ ಅಪಘಾತಕ್ಕೀಡಾದ ವೀಡಿಯೋಗಳನ್ನು ಶೇರ್​ ಮಾಡಿಕೊಂಡಿದ್ದು ಇದೀಗ ಈ ವೀಡಿಯೋ ವೈರಲ್​ ಆಗಿದೆ.ಈ ಮೇಲಿನ ವೀಡಿಯೋಗಳು ವಾಹನ ಚಲಾವಣೆ ಸಂದರ್ಭದಲ್ಲಿ ನಡೆದ ಅಪಘಾತದ ಸಿಸಿಟಿವಿ ವಿಡಿಯೋಗಳು, ನೀವು ಗಮನಿಸಿದಂತೆ ಈ ಎಲ್ಲಾ ಘಟನೆಗಳಲ್ಲಿ ಹೆಚ್ಚು ಅಪಾಯ ತಂದುಕೊಂಡವರು ಸೀಟ್​ ಬೆಲ್ಟ್​ ಹಾಕಿಕೊಳ್ಳದೇ ಇರುವವರು. ಹೀಗಾಗಿ ನಿಮಗೂ ಸೀಟ್​ ಬೆಲ್ಟ್​ ಹಾಕದೇ ಪ್ರಯಾಣಿಸುವ ಅಭ್ಯಾಸ ಇದ್ದರೆ ಇಂದಿನಿಂದಲೇ ಬದಲಾಯಿಸಿಕೊಳ್ಳಿ.
First published:April 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...